ಜಾನುವಾರುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಕಳೆದ ವಾರ ಉತ್ತರ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಆದರೆ ಇಬ್ಬರು ಆರೋಪಿಗಳನ್ನು ತನಿಖೆಯಾಗಿ ಅಸ್ಸಾಂಗೆ ಕರೆದೊಯ್ಯುತ್ತಿದ್ದಾಗ ಅಪರಿಚಿತರು ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಜಾನುವಾರು ಸಾಗಾಣಿಕೆ ಮಾಡುತ್ತಿದ್ದ ಮಾರ್ಗಗಳನ್ನು ಪತ್ತೆಹಚ್ಚಲು ಮಂಗಳವಾರದಂದು ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಕರೆದೊಯ್ಯುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ಪೊಲೀಸ್ ವಾಹನಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಂಕೋಶ್ ನದಿಯುದ್ದಕ್ಕೂ ಸಾಗಾಣಿಕೆ ಮಾರ್ಗಗಳನ್ನು ಗುರುತಿಸಲು ಆರೋಪಿಗಳನ್ನು ಕೊಕ್ರಜಾರ್ ಜಿಲ್ಲೆಯ ಜಮ್ದುವಾರ್ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದಾಗ ಮಧ್ಯರಾತ್ರಿ 1:15 ರ ಸುಮಾರಿಗೆ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಇಬ್ಬರನ್ನು ಕರೆದೊಯ್ಯತ್ತಿದ್ದ ವಾಹನವು ಜಮ್ದುವಾರ್ ಬಳಿ ‘ಉಗ್ರರ ಹೊಂಚುದಾಳಿಗೆ ಒಳಗಾಯಿತು’. ಹೀಗಾಗಿ ಪೊಲೀಸ್ ಸಿಬ್ಬಂದಿ ‘ಉಗ್ರರ’ ಮೇಲೆ ಪ್ರತಿದಾಳಿ ನಡೆಸಲು ಸುರಕ್ಷಿತ ಸ್ಥಳಕ್ಕಾಗಿ ಕಾರಿನಿಂದ ಜಿಗಿದಿದ್ದಾರೆ. ಆದರೆ, ಬಂಧಿತ ಆರೋಪಿಗಳು ಕಾರಿನಿಂದ ಹೊರಬರಲು ವಿಫಲರಾಗಿದ್ದು, ಅವರ ಮೇಲೆ ಗುಂಡಿನ ದಾಳಿಯಾಗಿದೆ” ಎಂದು ಪೋಲೀಸರು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಮರಗಳನ್ನು ಕಡಿದು ರಸ್ತೆ ತಡೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣೆ ಪಡೆದ ನಂತರ, ಪೊಲೀಸ್ ಸಿಬ್ಬಂದಿ ಪ್ರತಿದಾಳಿ ನಡೆಸಿದರು ಮತ್ತು ಎರಡು ಕಡೆಯವರ ನಡುವೆ 10-12 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆಯಿತು ಎಂದು ಅವರು ಹೇಳಿದ್ದಾರೆ.
ಮೃತರಾದ ಅಕ್ಬರ್ ಬಂಜಾರಾ ಮತ್ತು ಸಲ್ಮಾನ್ ಅವರನ್ನು ಮೀರತ್ ಪೊಲೀಸರು ಏಪ್ರಿಲ್ 13 ರಂದು ಬಂಧಿಸಿ ಅಸ್ಸಾಂ ಪೊಲೀಸರಿಗೆ ಹಸ್ತಾಂತರಿಸಿದ್ದರು. ಆರೋಪಿಗಳಿಬ್ಬರು ಮೀರತ್‌ನ ಫಲವಾಡ ಪ್ರದೇಶದ ನಿವಾಸಿಗಳಾಗಿದ್ದು, ಅವರ ವಿರುದ್ದ ಮೀರತ್ ಮತ್ತು ಕೊಕ್ರಜಾರ್ ಜಿಲ್ಲೆಗಳಲ್ಲಿ ಜಾನುವಾರು ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಾಗಿತ್ತು. ಅಸ್ಸಾಂ ಪೊಲೀಸರ ತುಕಡಿ ಮೀರತ್‌ಗೆ ಬಂದು ವಾರಂಟ್ ಸಲ್ಲಿಸಿದ ನಂತರ ಅವರನ್ನು ಕಸ್ಟಡಿಗೆ ತೆಗೆದುಕೊಂಡಿತ್ತು.
ಇದನ್ನೂ ಓದಿ: ಯುಪಿ: ಮುಸ್ಲಿಂ ಹೆಂಗಸರನ್ನು ರೇಪ್ ಮಾಡಿ ಎಂದ ಸ್ವಾಮೀಜಿ; ‘ಜೈ ಶ್ರೀರಾಮ್’ ಕೂಗಿದ ಪುಂಡರು
ಅಕ್ಬರ್ ಬಂಧನಕ್ಕೆ ಅಸ್ಸಾಂ ಪೊಲೀಸರು 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಬಹುಮಾನದ ಹಣವನ್ನು ಮೀರತ್ ಪೊಲೀಸರಿಗೆ ಅವರ ಅಸ್ಸಾಂ ಸಹವರ್ತಿಗಳಿಂದ ಹಸ್ತಾಂತರಿಸಲಾಗಿದೆ ಎಂದು ಯುಪಿ ಪೊಲೀಸರು ಏಪ್ರಿಲ್ 15 ರಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
“ಕೊಕ್ರಜಾರ್ ಜಿಲ್ಲೆಯ ಗೊಸ್ಸೈಗಾಂವ್ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಜಾನುವಾರು ಕಳ್ಳಸಾಗಣೆದಾರರು ಸಾವನ್ನಪ್ಪಿದ್ದಾರೆ. ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ನಾವು ಸ್ಥಳದಿಂದ ಒಂದು ಎಕೆ ಸಿರೀಸ್ ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದೇವೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಕೊಕ್ರಜಾರ್ ಎಸ್ಪಿ ತುಬೆ ಪ್ರತೀಕ್ ವಿಜಯ್ಕುಮಾರ್ ತಿಳಿಸಿದ್ದಾರೆ.
“ಯಾವುದೇ ಅಪಾಯವಿಲ್ಲ ಎಂದು ಗ್ರಹಿಸಿದ ನಂತರ, ಪೊಲೀಸರು ಗಾಯಗೊಂಡ ಆರೋಪಿಗಳನ್ನು ವಾಹನದಿಂದ ಹೊರತೆಗೆದು ಮತ್ತೊಂದು ವಾಹನದಲ್ಲಿ ಸರೈಬಿಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳು ಸಾವಿಗೀಡಾಗಿದ್ದಾರೆ ಎಂದು ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಘೋಷಿಸಿದ್ದಾರೆ.
ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ಗಳ ಪ್ರಯಾಣಕ್ಕೆ ಆಂಬುಲೆನ್ಸ್ ಬಳಕೆ: ಯುಪಿ ಬಿಜೆಪಿ ನಾಯಕಿಯ ಬಂಧನ
ಸ್ಥಳದಿಂದ ಒಂದು ಎಕೆ-47 ರೈಫಲ್, ಎರಡು ಮ್ಯಾಗಜೀನ್‌ಗಳು, 35 ಸುತ್ತಿನ ಜೀವಂತ ಮದ್ದುಗುಂಡುಗಳು ಮತ್ತು 28 ಸುತ್ತುಗಳ ಖಾಲಿ ಬುಲೆಟ್ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.



Kill & frame the story as usual but end result killer will have curse of victims family
Yes. It looks like a fake encounter and framed a story. Any unrighteous act will not go unpunished. For that need to observe that person or his family for some time, you can see how they are punished by God. Most of the people do not observe this truth. 🙄