Homeಅಂಕಣಗಳುಕಮ್ಯುನಿಷ್ಟ್ ಪಕ್ಷದ ಬದಲು ‘ಡೆಮಾಕ್ರೆಟಿಕ್ ಸೋಷಿಯಲಿಸ್ಟ್’ ಪಕ್ಷ ಎಂದು ಹೆಸರು ಬದಲಾಯಿಸಿಕೊಳ್ಳಬೇಕು- ಗುಹಾ ಸಲಹೆ

ಕಮ್ಯುನಿಷ್ಟ್ ಪಕ್ಷದ ಬದಲು ‘ಡೆಮಾಕ್ರೆಟಿಕ್ ಸೋಷಿಯಲಿಸ್ಟ್’ ಪಕ್ಷ ಎಂದು ಹೆಸರು ಬದಲಾಯಿಸಿಕೊಳ್ಳಬೇಕು- ಗುಹಾ ಸಲಹೆ

- Advertisement -
- Advertisement -
ರಾಮಚಂದ್ರ ಗುಹಾ

ರಾಮಚಂದ್ರ ಗುಹಾ, ಹಿರಿಯ ಪತ್ರಕರ್ತರು

ಅನುವಾದ: ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಮೇ ಮೂರನೆ ವಾರದಲ್ಲಿ ನಾನು ಕೇರಳದಲ್ಲಿ ಇದ್ದೆ. ಇನ್ನು ಸ್ವಲ್ಪದಿನಗಳಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿರುವ ಸಮಯವದು. ಸ್ವಾತಂತ್ರ್ಯ ಬಂದ ನಂತರ ಪ್ರಪ್ರಥಮವಾಗಿ ಕೆಳಮನೆಯಲ್ಲಿ ಕಮ್ಯುನಿಷ್ಟರ ಸಂಖ್ಯಾಬಲ ಒಂದು ಅಂಕೆಗೆ ಪರಿಮಿತವಾಗಲಿದೆಯೆನ್ನುವ ವಿಷಯ ಸ್ಪಷ್ಟವಾಗಿ ಕಾಣಿಸಿತು. ಒಂದು ರಾಷ್ಟ್ರೀಯ ಶಕ್ತಿಯಾಗಿ ಕಮ್ಯುನಿಷ್ಟರಿಗೆ ಗ್ರಹಣವಿಡಿಯಲಿರುವ ಸಮಯದಲ್ಲಿ ಎಡಪಕ್ಷಗಳ ಆಳ್ವಿಕೆಯಲ್ಲಿರುವ ರಾಜ್ಯದಲ್ಲಿ ಉಳಿಯುವುದು ಸಂಭವಿಸಿತು.

ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ (ಕೆ.ಎಸ್.ಎಸ್.ಪಿ) ವಾರ್ಷಿಕ ಸಮಾವೇಶದಲ್ಲಿ ಭಾಷಣ ಮಾಡುವುದಕ್ಕಾಗಿ ನಾನು ಕೇರಳಕ್ಕೆ ಹೋಗಿದ್ದೆ. 1960ರ ದಶಕದ ಆರಂಭಿಕ ದಿನಗಳಲ್ಲಿ ಶಿಕ್ಷಕರು, ಸಾಮಾಜಿಕ ಕ್ರಿಯಾಶೀಲರ ಬೃಂದವೊಂದು ಕೆ.ಎಸ್.ಎಸ್.ಪಿಯನ್ನು ಸ್ಥಾಪಿಸಿತು. ‘ಸಾಮಾಜಿಕ ಕ್ರಾಂತಿಗಾಗಿ ವಿಜ್ಞಾನ’ ಅನ್ನುವುದು ಆ ಸಂಸ್ಥೆಯ ನಿನಾದ. ವೈಜ್ಞಾನಿಕ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ, ಸಾಮಾಜಿಕ ಸಮಸ್ಯೆಗಳ ಪರಿಷ್ಕಾರದಲ್ಲಿ ವೈಚಾರಿಕ ದೃಷ್ಟಿಕೋನವನ್ನು ಅನುಸರಿಸುವ ರೀತಿಯಲ್ಲಿ ಜನರನ್ನು ಹುರಿಗೊಳಿಸುವುದರಲ್ಲಿ ಕೆ.ಎಸ್.ಎಸ್.ಪಿ ಪರಿಣಾಮಕಾರಿಯಾದ ಕೃಷಿ ಮಾಡಿದೆ. ಒಳ್ಳೆಯ ಫಲಿತಾಂಶಗಳನ್ನು ಸಾಧಿಸಿದೆ. ನೂರಾರು ಪುಸ್ತಕಗಳು, ಕರಪತ್ರಗಳು ಅದು ಪ್ರಕಟಿಸಿದೆ. ಪರಿಸರ ರಕ್ಷಣೆ, ಆರೋಗ್ಯ ರಕ್ಷಣೆಯ ಚಳುವಳಿಗಳಲ್ಲಿ ಚುರುಕಾಗಿ ಭಾಗವಹಿಸಿದೆ.

ಬೆಂಗಳೂರಿನಿಂದ ವಿಮಾನದಲ್ಲಿ ತಿರುವನಂತಪುರಕ್ಕೆ ಹೋದೆ. ಮೂರು ಜನ ಕೆ.ಎಸ್.ಎಸ್.ಪಿ ಕಾರ್ಯಕರ್ತರು ನನಗೆ ಸ್ವಾಗತಕೋರಿದರು. ಅವರಲ್ಲಿ ಇಬ್ಬರು ವಿಶ್ವವಿದ್ಯಾಲಯದ ಅಧ್ಯಾಪಕರಾಗಿದ್ದು, ಮತ್ತೊಬ್ಬರು ಕೇರಳ ವಿದ್ಯುತ್ ಮಂಡಳಿ ಉದ್ಯೋಗಿ. ಆ ಮೂರು ಜನರೂ ಸಹ ಸಾರ್ವಜನಿಕ ವ್ಯವಹಾರಗಳಲ್ಲಿ ವಿಶೇಷ ಶ್ರಾಧ್ಧಾಸಕ್ತರು. ಸಾಮಾಜಿಕ ನ್ಯಾಯಕ್ಕಾಗಿ ಬದ್ದತೆ ಇರುವ ಪದವೀಧರರು. ಕೇರಳದಲ್ಲಿ ಶಿಕ್ಷಕರು , ಸರ್ಕಾರಿ ನೌಕರರಿಗೆ ಇಂತಹ ಜನಹಿತ ಚೈತನ್ಯವಿರುವುದು ಸಾಧಾರಣ ವಿಷಯವೇ ಆದರೂ ಉಳಿದ ರಾಜ್ಯಗಳಲ್ಲಿ ತೀರ ವಿರಳ. ಆ ಮೂರು ಜನ ಒಂದು ಕಾರಿನಲ್ಲಿ ಕೆ.ಎಸ್.ಎಸ್.ಪಿ ಸಮಾವೇಶ ನಡೆಯಲಿರುವ ಪಥನಂತಿಟ್ಟ ಎನ್ನುವ ಪಟ್ಟಣಕ್ಕೆ ಕರೆದುಕೊಂಡು ಹೋದರು.

ಕೆ.ಎಸ್.ಎಸ್.ಪಿ ವಾರ್ಷಿಕ ಸಮಾವೇಶಗಳು ಕೇರಳದ 14 ಜಿಲ್ಲೆಗಳ ಪ್ರತಿ ಜಿಲ್ಲೆಯಲ್ಲೂ, ಪ್ರತಿ ವರ್ಷ ಒಂದು ಕಡೆ ವಾಡಿಕೆಯಂತೆ ನಡೆಸುತ್ತಿರುತ್ತಾರೆ. ಪ್ರಸ್ತುತ ಸಮಾವೇಶವನ್ನು ಪಥನಂತಿಟ್ಟ ಜಿಲ್ಲಾ ಘಟಕ ನಿರ್ವವಹಿಸಿತು. ನೇತಾಜಿ ಸುಭಾಷ್ ಚಂದ್ರ ಭೋಸ್ ಹೆಸರಿನಲ್ಲಿರುವ ಒಂದು ಪ್ರೌಢಶಾಲೆಯಲ್ಲಿ ನಡೆಯಿತು. ಕೇರಳದ ಎಲ್ಲಾ ಭಾಗಗಳಿಂದ ಸಾವಿರ ಜನ ಪ್ರತಿನಿಧಿಗಳು ಭಾಗವಹಿಸಿದರು. ನಾವೆಲ್ಲ ಒಂದು ಸಾಧಾರಣ ಡೈನಿಂಗ್ ಹಾಲ್‍ನಲ್ಲಿ ಊಟ ಮಾಡಿದೆವು. ತದನಂತರ ನಮ್ಮ ತಟ್ಟೆಯನ್ನು ನಾವೇ ತೊಳೆದು ಇಟ್ಟೆವು. ಕೆ.ಎಸ್.ಎಸ್.ಪಿ ಒಂದು ಪಕ್ಷದ ಸಂಸ್ಥೆಯಲ್ಲ. ಸಿ.ಪಿ.ಎಂ ಕೇರಳ ರಾಜ್ಯ ಘಟಕದ ಜೊತೆ ಹಲವು ಬಾರಿ ಘರ್ಷಣೆಗೆ ಬಿದ್ದಿದೆ. ಮುಖ್ಯವಾಗಿ 1980ರಲ್ಲಿ ಸೈಲೆಂಟ್ ವ್ಯಾಲಿ ವಿವಾದದ ವಿಷಯದಲ್ಲಿ ಸಿ.ಪಿ.ಎಂ ವೈಖರಿಯನ್ನು ತೀವ್ರವಾಗಿ ವಿರೋಧಿಸಿತು.

ಈ ಸಂಸ್ಥೆಯ ಸದಸ್ಯರು ಬಹುತೇಕ ಎಲ್ಲರೂ ಈ ಬಾರಿ ಕಾಂಗ್ರೇಸ್‍ಗೆ ಮತ ಹಾಕಿದ್ದಾರೆ ( ಅತಿ ಕಡಿಮೆ ಸಂಖ್ಯೆಯಲ್ಲಿ, ಅದು ಯಾರದರೂ ಇದ್ದರೆ , ಬಿಜೆಪಿಗೆ ಹಾಕಿರುತ್ತಾರೆ). ಆದರೂ ಸಹ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಎಡಪಕ್ಷಗಳ ಚಳುವಳಿಗಳಿಂದ ಆಳವಾಗಿ ಪ್ರಭಾವಿತವಾದ ಸಂಸ್ಥೆ ಕೆ.ಎಸ್.ಎಸ್.ಪಿ. ಇದರ ಸದಸ್ಯರೆಲ್ಲರಲ್ಲೂ ಮಾಕ್ರ್ಸಿಸಂ ಸ್ಫೂರ್ತಿ ಸ್ಪಷ್ಟವಾಗಿ ಕಾಣಿಸುತ್ತದೆ. ಕೆ.ಎಸ್.ಎಸ್.ಪಿಯಂತಹ ಸಂಸ್ಥೆ ಭಾರತದಲ್ಲಿನ ಬೇರೆ ಯಾವ ಇತರೆ ರಾಜ್ಯದಲ್ಲಿಯೂ ಸಹ ಇಲ್ಲ. ಕೊನೆಗೆ, ಕಮ್ಯುನಿಸ್ಟರು ದಶಕಗಳ ಕಾಲ ಅಧಿಕಾರದಲ್ಲಿದ್ದ ಬಂಗಾಳದಲ್ಲಿಯೂ ಸಹ ಇಲ್ಲ. ಬಂಗಾಳದ ಮಾಕ್ರ್ಸಿಸಂ ಸ್ವತಹ ಸಾಹಿತ್ಯ, ಭೌಧ್ದಿಕಪರವಾದದ್ದು. ಅದಕ್ಕೆ ಭಿನ್ನವಾಗಿ ಮಾಲಯಾಳಿ ಮಾಕ್ರ್ಸಿಸಂ ಸಂಪೂರ್ಣವಾಗಿ ಆಚರಣಾತ್ಮಕವಾದದ್ದು.

ಚುನಾವಣೆಯಲ್ಲಿ ಜಯಾಪಜಯಗಳ ಪರಿಭಾಷೆಯಲ್ಲಿ ಕಮ್ಯೂನಿಸ್ಟ್ ಚಳುವಳಿ ಅಧೋಗತಿ 2019. ಅತ್ಯುನ್ನತ ವೈಭವಕ್ಕೆ 2004ರ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶ ತುಂಬು ಶಿಖರಗಳು . 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಎಡಪಕ್ಷಗಳು 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. 1996ರಲ್ಲಿ ಜ್ಯೋತಿಬಸುಗೆ ಪ್ರಧಾನಮಂತ್ರಿ ಆಗುವ ಅವಕಾಶ ತಪ್ಪಿಹೋಗಿದ್ದಕ್ಕೆ ಬಂಗಾಳಿಗಳು ಈಗಲೂ ಸಹ ಹೆಚ್ಚು ತಳಮಳಗೊಳ್ಳುತ್ತಿರುತ್ತಾರೆ. ಒಂದು ಸಾರಿ ಇತಿಹಾಸವನ್ನು ಸರಿಯಾಗಿ ಅವಲೋಕಿಸಿದರೆ 2004ರಲ್ಲಿ ಕಮ್ಯೂನಿಸ್ಟರು ಒಂದು ಮಹಾಪರಾಧಕ್ಕೆ ಅವಕಾಶ ಮಾಡಿಕೊಂಡದ್ದು ಅರ್ಥವಾಗುತ್ತದೆ. ಡಾಕ್ಟರ್ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಯು.ಪಿ.ಎ ಸರ್ಕಾರದಲ್ಲಿ ಸಿ.ಪಿ.ಐ(ಎಂ), ಸಿ.ಪಿ.ಎಂ ಸೇರಲಿಲ್ಲ. 1996- 98ರ ಯುನೈಟೆಡ್ ಫ್ರಂಟ್ ಸರ್ಕಾರ ಒಂದು ಅಲ್ಪಸಂಖ್ಯಾತ ಸರ್ಕಾರ; ಜ್ಯೋತಿ ಬಸು ಪ್ರಧಾನ ಮಂತ್ರಿ ಆದಾರೂ ಕೂಡ ಆ ಸರ್ಕಾರ ಒಂದು- ಎರಡು ವರ್ಷಕ್ಕೂ ಮಿಕ್ಕು ಇರುತ್ತಿರಲಿಲ್ಲ.

ಯು.ಪಿ.ಎ ಸರ್ಕಾರ ಹಾಗೆ ಅಲ್ಲದೇ ಸತತವಾಗಿ ಎರಡು ಅವಧಿಗಳವರೆಗೂ ಪೂರ್ತಿಯಾಗಿ ಅಧಿಕಾರದಲ್ಲಿ ಇತ್ತು. ಕಮ್ಯೂನಿಸ್ಟರು ಈ ಸರ್ಕಾರದಲ್ಲಿ ಸೇರಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ದಿ ಮೊದಲಾದ ಪ್ರಧಾನ ಇಲಾಖೆಗಳ ಸಚಿವಸ್ಥಾನಗಳನ್ನು ತೆಗುದುಕೊಂಡಿದ್ದೇ ಆಗಿದ್ದಿದ್ದರೆ ಜನರ ಸ್ಥಿತಿಗತಿಗಳನ್ನು ಗಣನೀಯವಾಗಿ ಉತ್ತಮಗೊಳಿಸುತ್ತಿದ್ದರು. ಮತ್ತೆ ಮುಖ್ಯವಾಗಿ ತಮ್ಮ ಅಸ್ತಿತ್ವವನ್ನು ಇನ್ನಷ್ಟು ಸ್ಥಿರಪಡಿಸಿಕೊಳ್ಳುತ್ತಿದ್ದರು. ದುರದೃಷ್ಟವಶಾತ್ತ್ ‘ಒಂದು ಬೂಜ್ರ್ವಾ ಸರ್ಕಾರದಲ್ಲಿ ಸಹಾಯಕ ಪಾತ್ರ ನಿರ್ವಹಿಸಕೂಡದೆಂಬ’, ಬೆಂಬಲಕೊಡುವ ಪಾತ್ರ ನಿರ್ವಹಿಸಕೂಡದೆಂಬ ಲೆನೆನಿನ ನಿರ್ಧಿಷ್ಟ ಅಭಿಪ್ರಾಯಕ್ಕೆ ಕಟ್ಟುಬಿದ್ದುಬಿಟ್ಟಿತು.

ರಾಷ್ಟ್ರೀಯ ಮಟ್ಟದಲ್ಲಿ ಸಂಸದೀಯ ಕಮ್ಯೂನಿಸ್ಟರು 2004ಕ್ಕೆ ಅತ್ಯುನ್ನತ ಸ್ಥಾಯಿಯಿಂದ 2019ಕ್ಕೆ ಅಧೋಸ್ಥಾಯಿಗೆ ಪತನವಾಗಿ ಹೋದರು. ತ್ರಿಪುರ, ಬಂಗಾಳ ರಾಜ್ಯಗಳಲ್ಲಿ ಕಮ್ಯೂನಿಸ್ಟರು ಮತ್ತೆ ಅಧಿಕಾರಕ್ಕೆ ಬರುವ ಸೂಚನೆಗಳು ಕಾಣಿಸುತ್ತಿಲ್ಲ. ಕೇರಳದಲ್ಲಿ ಕಮ್ಯೂನಿಸ್ಟರು ಮತ್ತು ಕಾಂಗ್ರೆಸ್ ಪಕ್ಷ ಒಬ್ಬರ ನಂತರ ಮತ್ತೊಬ್ಬರು ಅಧಿಕಾರಕ್ಕೆ ಬರುವುದು ವಾಡಿಕೆಯಾಗಿದೆ. ಈ ದೃಷ್ಟಿಯಲ್ಲಿ ಬರುವ ವಿಧಾನಸಭಾ ಚುನಾವಣೆಯ ನಂತರ ಎಡಪಕ್ಷಗಳು ವಿರೋಧಪಕ್ಷಗಳಾಗಿ ಇರುವ ಅವಕಾಶ ಇದೆಯೆಂದು ಖಚಿತವಾಗಿ ಹೇಳಬಹುದು. ಸಮಕಾಲೀನ ಭಾರತ ದೇಶದಲ್ಲಿ ಅನೇಕ ಪ್ರಮುಖ ಸಾಹಿತಿಗಳು, ಬುದ್ದಿಜೀವಿಗಳು, ಕಲಾವಿದರು ಎಡಪಕ್ಷಗಳ ಹಿತೈಷಿಗಳು, ಬೆಂಬಲಿಗರು ಇದ್ದಾರೆ. ಆದರೆ ರಾಜಕೀಯ, ಸಾರ್ವಜನಿಕ ಜೀವನದಲ್ಲಿ ಎಡಪಕ್ಷಗಳ ಪ್ರಭಾವ ಹೀಗಿರುವಷ್ಟು ಕಡಿಮೆ ಮತ್ತೆಂದೂ ಇಲ್ಲ. ಈ ಪರಿಸ್ಥಿತಿ ಬದಲಾಗುತ್ತಾ? ಇಲ್ಲ ಎಡಪಕ್ಷಗಳ ಈ ರಾಜಕೀಯ ಪತನ ಬದಲಾಯಿಸಲಾದದ್ದಾ?

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾನು ಈ ಅಂಕಣವನ್ನು ಬರೆದೆ. ಲೋಕಸಭೆಯಲ್ಲಿ ಕೇವಲ ಮೂರು ಸ್ಥಾನಗಳಿಗೆ ಸೀಮಿತವಾದ ಎಡಪಕ್ಷಗಳು, ಒಂದು ಕಾಲದ ತಮ್ಮ ಪ್ರಾಧಾನ್ಯತೆಯನ್ನು ಪುನರ್ ಸ್ಥಾಪಿಸಿಕೊಳ್ಳುತ್ತಾರ? ಅವು ತಮ್ಮ ಪೂರ್ವ ಪ್ರತೀತಿಯನ್ನು ಮತ್ತೆ ಮರಳಿಪಡೆಯುತ್ತವೆಂದು ಭಾವಿಸಲಾಗುವುದಿಲ್ಲ. ಆದರೆ ಚರಿತ್ರೆ ವಿಚಿತ್ರ, ಅನಿರಿಕ್ಷಿತ ರೀತಿಯಲ್ಲಿ ನಿರ್ಮಾಣವಾಗುತ್ತದೆ ಅಲ್ಲವೇ, ಬಂಡವಾಳಶಾಹಿ ದೇಶವಾದ ಅಮೆರಿಕಾದಲ್ಲಿ ಸಮಾಜವಾದ ಪುನಜ್ರ್ಜೀವನ ಹೊಂದಬಹುದೆಂದು ಯಾರಾದರೂ ಊಹಿಸಿದ್ದರಾ? ಭಾರತ ಅನೇಕ ಸಾಮಾಜಿಕ ಅಸಮಾನತೆಗಳ ಜಾಗ. ಆಚರಣೆಯಲ್ಲಿ ಅಲ್ಲದೇ ಬರಿ ಸೈದ್ದಾಂತಿಕವಾಗಿ ಆದರೆ ಭಾರತದೇಶ ಎಡಪಕ್ಷಗಳ ಉಳಿವು ಮತ್ತು ಪ್ರಗತಿಗೆ ಬಹಳ ಅನೂಕೂಲಕರವಾದ ದೇಶ.

ಭಾರತ ದೇಶದಲ್ಲಿ ಎಡಪಕ್ಷಗಳು ಪುನರುತ್ಥಾನ ಆಗಬೇಕಾದರೆ ಅವು ಮಾಡಬೇಕಾದ ಮೊಟ್ಟ ಮೊದಲ ಕೆಲಸ ಮತ್ತಷ್ಟು ಭಾರತೀಯಕರಣವಾಗುವುದೆ ಎಂದು ಹೇಳಿದರೆ ತಪ್ಪಾಗದು. 1920 ರಲ್ಲಿ ಬಾಂಬೆ ಮಾರ್ಕ್ಸಿಸ್ಟ್ ಎನ್.ಎ.ಡಾಂಗೆ, ಗಾಂಧಿಗಿಂತ ಲೆನಿನ್‍ನನ್ನು ಬಹಳಷ್ಟು ಪ್ರಶಂಸಿಸಿ ಒಂದು ಕರಪತ್ರವನ್ನು ಬರೆದರು. ತದನಂತರ ಭಾರತೀಯ ಕಮ್ಯೂನಿಷ್ಟರು ತಮ್ಮ ಹೀರೋಗಳನ್ನು ಭಾರತದಲ್ಲಿ ಅಲ್ಲದೆ ಇತರೆ ದೇಶಗಳಲ್ಲಿ ಮಾತ್ರವೇ ಕಂಡುಕೊಂಡರು! ಮಾಕ್ರ್ಸ್, ಏಂಗೆಲ್ಸ್ (ಜರ್ಮನಿಗರು),ಲೆನಿನ್, ಸ್ಟಾಲಿನ್ (ರಷ್ಯಾನ್ನರು), ಇನ್ನು ಮಾವೋ(ಚೈನಾ), ಹೋ ಚೋಮಿನ್ (ವಿಯೆಟ್ನಾಮ್), ಕಾಸ್ಟ್ರೋ(ಕ್ಯೂಬಾ), ಛಾವೇಜ್ (ವೆನಿಜುವೆಲ್ಲಾ)ರು ಭಾರತೀಯ ಕಮ್ಯೂನಿಸ್ಟರಿಗೆ ಆದರ್ಶಪ್ರಾಯರು. ಈ ವಿದೇಶಿಯರೊಂದಿಗೆ ಸಮಸ್ಯೆಯೇನೆಂದರೆ ಅವರು ಕೇವಲ ವಿದೇಶಿಯರೇ ಅಲ್ಲಾ ನಿರಂಕುಶವಾದಿಗಳು ಕೂಡ. ಒಂದು ಪಕ್ಷದ ಆಳ್ವಿಕೆಯಲ್ಲಿ ಸಂಪೂರ್ಣ ವಿಶ್ವಾಸವಿರುವವರು. ಲೆನಿನ್, ಮಾವೋನಂತವರಿಗೆ ಭಾರತದ ಬಗ್ಗೆ, ಭಾರತೀಯ ಸಮಾಜದ ಬಗ್ಗೆ ಅರಿವಿಲ್ಲ; ಬಹು ಪಕ್ಷ ಸುಗುಣಗಳನ್ನು ಅವರು ಗುರ್ತಿಸಿಲ್ಲ, ಗೌರವಿಸಲಿಲ್ಲ. ಅಂಬೇಡ್ಕರ್ ರಂತಹ ಚಿಂತಕರನ್ನು ಉಪೇಕ್ಷಿಸಿ , ಆ ವಿದೇಶಿಯರನ್ನು ಆಧರಿಸುವ ಮೂಲಕ ಕಮ್ಯೂನಿಷ್ಟರು ಭಾರತೀಯ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳದವರಾದರು.

1920ರ ದಶಕದಲ್ಲಿ ಕಮ್ಯೂನಿಸ್ಟ್ ಚಳುವಳಿಗಳ ಜೊತೆ ದೇಶೀಯವಾದ ಸಮಾಜವಾದಿ ಸಂಪ್ರದಾಯವು ಸಹ ನಮ್ಮ ದೇಶದಲ್ಲಿ ರೂಪಿತವಾಯಿತು ಎಂಬ ವಿಷಯ ಇಂದಿನ ಪೀಳೀಗೆಯವರಿಗೆ ಹೆಚ್ಚಿನದಾಗಿ ತಿಳಿಯದೇ ಹೋಗಿರಬಹದು. ಆ ಮಹತ್ತರವಾದ ದೇಶೀಯ ಸಮಾಜವಾದ ಸಂಪ್ರಾದಾಯಕ್ಕೆ ಕಮಲಾದೇವಿ ಚಟೋಪಾಧ್ಯಾಯ, ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮತ್ತಿತರರು ಪ್ರತಿನಿಧಿಗಳು. ತಮ್ಮ ಸಮಕಾಲೀನ ಕಮ್ಯೂನಿಸ್ಟರಿಗಿಂತ ಅವರಿಗೆ ಭಾರತೀಯ ಸಮಾಜದ ಬಗ್ಗೆ ಮೌಲಿಕವಾದ ಅರಿವು ಇದೆ. ಲಿಂಗ ತಾರತಮ್ಯ ಸಮಸ್ಯೆಗಳ ಬಗ್ಗೆ ಕಮಲಾ ದೇವಿ, ವರ್ಗದ ಮೇಲೆ ಲೋಹಿಯಾ, ರಾಜಕೀಯ ವಿಕೇಂದ್ರಿಕರಣದ ಬಗ್ಗೆ ಜೆಪಿ ಚಿಂತನೆ, ಆ ಅಂಶಗಳ ಮೇಲೆ ಡಾಂಗೆ, ನಂಬೂದ್ರಿಪಾಡ್‍ರ ಆಲೋಚನೆಗಳಿಗಿಂತ ಹರಿತವಾದದ್ದು.

ಭಾರತೀಯ ಸಮಾಜ ವಾಸ್ತವಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದರಿಂದಲೇ ಸಮಾಜವಾದಿಗಳಿಗೆ ಆ ಮೌಲಿಕವಾದ ಚಿಂತನೆ ಸಾಧ್ಯವಾಯಿತು. ಕಮ್ಯೂನಿಷ್ಟರು ಲೆನಿನ್ , ಸ್ಟಾಲಿನ್ ದಾರಿಯನ್ನು ಯಾಂತ್ರಿಕವಾಗಿ ಅನುಕರಿಸಿದರು. ಭಾರತೀಯ ಮಹೊನ್ನತ ಭೌಧ್ಧಿಕ ಪರಂಪರೆಯಿಂದ ಭಾರತೀಯ ಕಮ್ಯೂನಿಷ್ಟರು ಕಲಿಯಬೇಕಿದೆ. ಸಮಾಜವಾದಿಗಳ ರೀತಿಯಲ್ಲಿಯೇ ಕಮ್ಯೂನಿಷ್ಟರು ಭಾರತೀಯಕರಣವಾಗಲು ಪ್ರಯತ್ನಿಸಬೇಕು.’ಸಮಾಜವಾದ’ ಎಂದ ಪದಬಂಧವನ್ನು ಕೂಡ ಸ್ವೀಕರಿಸಿದರೆ ಒಳ್ಳೆಯದು. 21ನೇ ಶತಮಾನದ ಚಿಂತಕರಿಗೆ ‘ಕಮ್ಯೂನಿಷ್ಟ್’ ಅನ್ನ ಪದ ದಾರುಣವಾದ ಕ್ರೂರ ದಬ್ಬಾಳಿಕೆ, ನಿರಂಕುಶ ಆಳ್ವಿಕೆಯ ಜೊತೆ ಕಟ್ಟುಬಿದ್ದಿದೆ. ಸಮಾಜವಾದಿ ಅನ್ನೋ ಪದ ಹಾಗೆ ಅಲ್ಲದೇ ಹೆಚ್ಚು ದಯಾಪೂರ್ಣವಾದ, ಶುಭಪ್ರದವಾದದ್ದೂ ಕೂಡ.

ಲೋಕಸಭಾ ಚುನಾವಣೆಯ ನೇಪಥ್ಯದಲ್ಲಿ ವಿವಿಧ ಕಮ್ಯೂನಿಸ್ಟ್ ಪಕ್ಷಗಳು ಒಂದಾಗುವ ಅವಶ್ಯಕತೆ ಎಷ್ಟಾದರೂ ಇದೆಯೆನ್ನುವ ಮಾತು ವಿಸ್ತೃತವಾಗಿ ಕೇಳಿಸಿದೆ. ಆ ಏಕಿಕರಣವೇನಾದರೂ ಸುಸಾಧ್ಯವಾದರೆ ಹೊಸ ಒಕ್ಕೂಟ ಪಕ್ಷಕ್ಕೆ ಒಂದು ಹೊಸ ಹೆಸರು ಎಷ್ಟಾದರೂ ಅವಶ್ಯ. ಕಮ್ಯೂನಿಸ್ಟ್ ಎಂಬ ಪದವನ್ನು ತ್ಯಜಿಸಿ ‘ಡೆಮಾಕ್ರೆಟಿಕ್ ಸೋಷಿಯಲಿಸ್ಟ್’ ಎಂದು ಆ ಹೊಸ ಪಕ್ಷಕ್ಕೆ ಕರೆದುಕೊಳ್ಳುವುದು ಬಹಳ ಒಳ್ಳೆಯದು. ಎಡಪಕ್ಷಗಳ ಪುನರುತ್ಥಾನಕ್ಕೆ ಇದೊಂದು ಪುಟ್ಟ ಹೆಜ್ಜೆ ಮಾತ್ರವೇ. ಪ್ರಸ್ತುತ ಗತಕಾಲ ಮಾತ್ರವೇ ಇರುವ ಎಡಪಕ್ಷಗಳಿಗೆ, ಅದು ಭಾರತೀಯ ರಾಜಕೀಯದಲ್ಲಿ ಉಜ್ವಲ ಭವಿಷ್ಯತ್ತನ್ನು ರೂಪಿಸಲಿದೆ

ಕೃಪೆ: (ಆಂಧ್ರ ಜ್ಯೋತಿ ತೆಲುಗು ಪತ್ರಿಕೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...