Homeಮುಖಪುಟಪ್ರಧಾನ ಮಂತ್ರಿಗಳಿಗೆ ಮೂರು ಪತ್ರ ಬರೆದ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ

ಪ್ರಧಾನ ಮಂತ್ರಿಗಳಿಗೆ ಮೂರು ಪತ್ರ ಬರೆದ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ

ಸುಪ್ರೀಂ ಕೋರ್ಟ್‍ನಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕಾತಿಗೆ ಮತ್ತು ಹೈಕೋರ್ಟ್ ನ್ಯಾಯಾಧೀಶರ ವಯೋಮಿತಿ ಏರಿಕೆಗೆ ರಂಜನ್ ಗಗೋಯಿ ಒತ್ತಾಯ

- Advertisement -
- Advertisement -

ಮುಖ್ಯಾಂಶಗಳು

1. ಸುಪ್ರೀಂ ಕೋರ್ಟ್‍ನಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕಾತಿಗೆ ಮತ್ತು ಹೈಕೋರ್ಟ್ ನ್ಯಾಯಾಧೀಶರ ವಯೋಮಿತಿ ಏರಿಕೆಗೆ ರಂಜನ್ ಗಗೋಯಿ ಒತ್ತಾಯ

2. 24 ಹೈಕೋರ್ಟ್‍ಗಳಲ್ಲಿ 43 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ.

3. ಹೈಕೋರ್ಟ್ ನ್ಯಾಯಾಧೀಶರ ವಯೋಮಿತಿಯನ್ನು 62 ವರ್ಷದಿಂದ 65 ವರ್ಷಗಳಿಗೆ ಏರಿಸಬೇಕೆಂದು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ ಒತ್ತಾಯಿಸಿದ್ದಾರೆ

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‍ಗಳಲ್ಲಿ 43 ಲಕ್ಷ ಪ್ರಕರಣಗಳು ಇನ್ನು ಇತ್ಯರ್ಥವಾಗದೇ ಉಳಿದಿರುವುದರಿಂದ ಹೈಕೋರ್ಟ್ ನ್ಯಾಯಾಧೀಶರ ವಯೋಮಿತಿಯನ್ನು 62 ವರ್ಷದಿಂದ 65 ವರ್ಷಗಳಿಗೆ ಏರಿಸಬೇಕೆಂದು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ ಒತ್ತಾಯಿಸಿದ್ದಾರೆ. ಹಾಗೆಯೇ ಸುಪ್ರೀಂ ಕೋರ್ಟ್‍ನಲ್ಲಿ ಈಗ ಸದ್ಯಕ್ಕೆ ಕೇವಲ 31 ನ್ಯಾಯಾಧೀಶರಿದ್ದು ಇವರ ಸಂಖ್ಯೆಯನ್ನು ಹೆಚ್ಚಿಸುವಂತೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಸದ್ಯಕ್ಕೆ ಸುಪ್ರೀಂ ಕೋರ್ಟ್‍ನಲ್ಲಿ 58,669 ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. 26 ಪ್ರಕರಣಗಳು 25 ವರ್ಷ ಹಳೆಯವಾದರೆ 100 ಪ್ರಕರಣಗಳು 20 ವರ್ಷ ಹಳೆಯವು. 593 ಪ್ರಕರಣಗೂ 15 ವರ್ಷದ ಹಿಂದಿನವಾದರೆ 4,977 ಪ್ರಕರಣಗಳು 10 ವರ್ಷಗಳಿಗೂ ಹಿಂದಿನವದ್ದಾಗಿದ್ದು ಈಗಲೂ ಪ್ರತಿನಿತ್ಯ ಪ್ರಕರಣ ದಾಖಲಾಗುತ್ತಲೇ ಇವೆ ಎಂದಿದ್ದಾರೆ.

ಪ್ರಧಾನಿಗಳಿಗೆ ಈ ಕುರಿತು ಮೂರು ಪತ್ರಗಳನ್ನು ಬರೆದಿರುವ ಮುಖ್ಯ ನ್ಯಾಯಮುರ್ತಿಗಳು, ಆದ್ಯತೆಯ ಮೇರೆಗೆ ಈ ವಿಷಯಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ. ಆಗ ಮಾತ್ರ ದಕ್ಷತೆಯಿಂದ ಕೆಲಸ ನಿರ್ವಹಿಸುವುದಲ್ಲದೇ ತ್ವರಿತ ರೀತಯಲ್ಲಿ ನ್ಯಾಯ ಒದಗಿಸಲು ಸಾಧ್ಯ ಎಂದಿದ್ದಾರೆ.

ಎರಡನೇ ಪತ್ರದಲ್ಲಿ ಹೈ ಕೋರ್ಟ್ ನ್ಯಾಯಾಧೀಶರ ವಯೋಮಿತಿ ಏರಿಕೆಗೆ ಮನವಿ ಮಾಡಿದ್ದಾರೆ. 24 ಹೈಕೋರ್ಟ್‍ಗಳಲ್ಲಿ 43 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಇದಕ್ಕೆ ಹೈ ಕೋರ್ಟ್ ನ್ಯಾಯಾಧೀಶರ ಕೊರತೆಯೇ ಪ್ರಮುಖ ಕಾರಣವಾಗಿದೆ. ಈಗ ಪ್ರಸ್ತುತ 37% ಅಂದರೆ 399 ನ್ಯಾಯಾಧೀಶರ ಹುದ್ದೆಗಳು ತುಂಬದೇ ಖಾಲಿ ಬಿದ್ದಿವೆ ಎಂದು ಅವರು ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...