ರಾಜ್ಯ ಹಾಗೂ ದೇಶದಲ್ಲಿ ನಿತ್ಯವೂ ಘಟಿಸುತ್ತಿರುವ ಮತೀಯವಾದಿ ಸಂಗತಿಗಳನ್ನು ಖಂಡಿಸಿ, ದೇಶದ ಜಾತ್ಯತೀತತೆ, ಸಮಗ್ರತೆ, ವೈವಿಧ್ಯತೆ ಹಾಗೂ ಕೋಮು ಸಾಮರಸ್ಯವನ್ನು ಸಾರಲು ಉಡುಪಿಯಲ್ಲಿ ಮೇ 14ರಂದು ರಾಜ್ಯ ಮಟ್ಟದ ‘ಸಾಮರಸ್ಯ ನಡಿಗೆ ಸಹಬಾಳ್ವೆ ಸಮಾವೇಶ’ವನ್ನು ಆಯೋಜಿಸಲಾಗಿದೆ. ಇದರ ಭಾಗವಾಗಿ ಹಲವಾರು ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಮುನ್ನುಡಿ ಬರೆದ ಉಡುಪಿಯಿಂದ ಸಾಮರಸ್ಯ ಸಂದೇಶವನ್ನು ಸಾರಲು ಸಮಾವೇಶ ಆಯೋಜನೆಗೊಂಡಿದೆ. ಕಾರ್ಯಕ್ರಮಕ್ಕೆ ನಾಡಿನ ಜನರನ್ನು ಆಹ್ವಾನಿಸುವ ಹಾಗೂ ಸಾಮರಸ್ಯ, ಸಹಬಾಳ್ವೆಯ ಸೊಬಗನ್ನು ಉದ್ದೀಪಿಸುವ ನಿಟ್ಟಿನಲ್ಲಿ ಹಲವು ಚಿಂತಕರು, ಹಿರಿಯ, ಕಿರಿಯ ಬರಹಗಾರರು, ಹೋರಾಟಗಾರರು, ರಂಗಕರ್ಮಿಗಳು, ಚಿತ್ರಕರ್ಮಿಗಳು, ಪತ್ರಕರ್ತರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಸಾಮರಸ್ಯ ಸಮಾವೇಶದ ಮಹತ್ವವನ್ನು ಈ ಪೋಸ್ಟರ್‌ಗಳು ಸಾರುತ್ತಿವೆ. ಫೇಸ್‌ಬುಕ್, ವಾಟ್ಸ್‌ಅಪ್, ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಕೆಲವು ಪೋಸ್ಟರ್‌ಗಳನ್ನು ಮಾತ್ರ ಇಲ್ಲಿ ಪ್ರಕಟಿಸಲಾಗಿದೆ. (ನೀವು ಇವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಹಂಚಿಕೊಳ್ಳಬಹುದು.)






How to create this poster for mine