Homeಅಂಕಣಗಳುಕವನ; ಕೋಗಿಲೆಗೆ ಸುಖವಿಲ್ಲ!

ಕವನ; ಕೋಗಿಲೆಗೆ ಸುಖವಿಲ್ಲ!

- Advertisement -
- Advertisement -

ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ
ಮೊಬೈಲ್ ಕರೆಂಟ್ ಬೆಲೆ ಹೆಚ್ಚಳ
ಆಸ್ಪತ್ರೆ ಔಷಧಿ ಬೆಲೆ ಹೆಚ್ಚಳ

ಪಂಚೆ ಸೀರೆ ಬೆಲೆ ಹೆಚ್ಚಳ
ಗೊಬ್ಬರದ ಬೆಲೆಯೂ ಹೆಚ್ಚಳ
ಉಸ್ಸಪ್ಪಾ ಅಂತ ನಾನು
ಸುಸ್ತಾಗಿ ಬೇವಿನಮರದ
ಕೆಳಗೆ ನಿಟ್ಟುಸಿರುಬಿಟ್ಟೆ!

ಮೌನವಾಗಿ ಕುಳಿತಿದ್ದ
ಕೋಗಿಲೆಯೂ ಸಹ ಬೆಚ್ಚಬಿದ್ದು
ಅರೆ ಯಾರಯ್ಯಾ ಏನಾಯ್ತೆಂದು
ಗಾಬರಿಯಾಯ್ತು!

ಅರೇ ನೀನಾದರೂ ಹಾಡಯ್ಯಾ.
ಕೊಂಚ ತಣಿವೆನೆಂದು ಹೇಳಿ
ಕೋಗಿಲೆಗೆ ಭಿನ್ನವಿಸಿದೆ.
ಏನೆಂದು ಹಾಡಲಯ್ಯಾ॒
ನನ್ನ ಹಾಡ?!
ನೀನೋಬೆಲೆ ಹೆಚ್ಚಳವೆಂದು
ಕುತ್ತುಸಿರು ಬಿಡುತ್ತಿರುವೆ!
ಕಾಲೇಜಿನ ಹುಡುಗರೋ
ಹಿಜಾಬು-ಶಾಲು ಅಂತ
ಕಾದು ಹಾಡುತ್ತಿದ್ದಾರೆ!
ಈ ಅಬ್ಬರ ಅಪಸವ್ಯದ ನಡುವೆ
ನನ್ನ ಹಾಡು ಕೇಳುವವರಿಲ್ಲದೆ
ನಾನೂ ಸಹ ಹಾಡುವುದನ್ನೇ
ಬಿಟ್ಟುಬಿಟ್ಟೆ; ನನ್ನ ಗಂಟಲೂ
ಕಟ್ಟಿಹೋಗಿ, ನನಗೂ
ಸುಖವಿಲ್ಲದಂತಾಗಿದೆ ಮಾರಾಯ
ನನಗೂ ಸುಖವಿಲ್ಲದಂತಾಗಿದೆ!

ಹುರುಕಡ್ಲಿ ಶಿವಕುಮಾರ,
ಬಾಚಿಗೊಂಡನಹಳ್ಳಿ


ಇದನ್ನೂ ಓದಿ: ರಸೋ ವೈ ಸಃ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...