Homeಕರ್ನಾಟಕಹಿಂದಿ ರಾಷ್ಟ್ರೀಯ ಭಾಷೆಯಲ್ಲ: ಸುದೀಪ್‌ ಹೇಳಿಕೆಗೆ ಅಜಯ್‌ ದೇವಗನ್‌ ಆಕ್ಷೇಪ- ಜನರ ತರಾಟೆ

ಹಿಂದಿ ರಾಷ್ಟ್ರೀಯ ಭಾಷೆಯಲ್ಲ: ಸುದೀಪ್‌ ಹೇಳಿಕೆಗೆ ಅಜಯ್‌ ದೇವಗನ್‌ ಆಕ್ಷೇಪ- ಜನರ ತರಾಟೆ

- Advertisement -
- Advertisement -

“ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ” ಎಂದು ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್‌ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಾಲಿವುಡ್ ನಟ ಅಜಯ್‌ ದೇವಗನ್‌ “ಹಿಂದಿ ರಾಷ್ಟ್ರೀಯ ಭಾಷೆ” ಎಂದು ತಿಳಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅಜಯ್ ದೇವಗನ್‌, “ಸಹೋದರ ಕಿಚ್ಚ ಸುದೀಪ್‌, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರಭಾಷೆ ಆಗಿದೆ. ಇಂದು ಮತ್ತು ಎಂದೆಂದೂ ಆಗಿರುತ್ತದೆ” ಎಂದಿದ್ದಾರೆ.

ರಾಮ್‌ಗೋಪಾಲ್ ವರ್ಮಾ ಹಾಗೂ ಉಪೇಂದ್ರ ಅವರ ‘ಐಯಾಮ್‌ ಆರ್‌’ ಸಿನಿಮಾದ ಟೈಟಲ್‌ ಲಾಂಚ್‌ನಲ್ಲಿ ಮಾತನಾಡಿದ್ದ ನಟ ಕಿಚ್ಚ ಸುದೀಪ್‌, ನಿರೂಪಕಿಯ ಮಾತಿಗೆ ಪ್ರತಿಕ್ರಿಯೆ ನೀಡುತ್ತಾ,  “ಪ್ಯಾನ್‌ ಇಂಡಿಯಾ ಸಿನಿಮಾವನ್ನು ಕನ್ನಡದಲ್ಲಿ ಮಾಡಲಾಗಿದೆ ಎಂದು ಹೇಳಿದ್ದೀರಿ. ಒಂದು ಸಣ್ಣ ಕರೆಕ್ಷನ್. ಹಿಂದಿ ಈಗ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ. ಬಾಲಿವುಡ್‌ ಮಂದಿ ಈಗ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿ ಅದನ್ನು ಎಲ್ಲಾ ಕಡೆ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ಚಿತ್ರ ಈಗ ಎಲ್ಲಾ ಭಾಷೆಗಳಿಗೂ ಹೋಗುತ್ತಿದೆ” ಎಂದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಾದಕ್ಕೆ ಸುದೀಪ್‌ ಪೆಟ್ಟು ನೀಡಿದ್ದನ್ನು ಆಕ್ಷೇಪ ವ್ಯಕ್ತಪಡಿಸಿ ಅಜಯ್ ದೇವಗನ್‌ ಟ್ವೀಟ್ ಮಾಡಿದ್ದು, ಅದಕ್ಕೂ ಸುದೀಪ್‌ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. “ನೀವು ಹಿಂದಿಯಲ್ಲಿ ಕಳುಹಿಸಿದ ಟೆಕ್ಸ್ಟ್‌‌ ನನಗೆ ಅರ್ಥವಾಯಿತು. ನಾವೆಲ್ಲರೂ ಗೌರವಿಸಿದ್ದೇವೆ, ಪ್ರೀತಿಸುತ್ತೇವೆ ಮತ್ತು ಹಿಂದಿಯನ್ನು ಕಲಿತಿದ್ದೇವೆ. ತಪ್ಪಿಲ್ಲ ಸರ್, ಆದರೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದರೆ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯವಾಗುತ್ತಿದೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್” ಎಂದು ಕೇಳಿದ್ದಾರೆ.

“ಸರ್‌, ನಾನು ಯಾಕೆ ಇದನ್ನು ಹೇಳಿದೆ ಎಂಬುದು ನಿಮಗೆ ಅರ್ಥವಾಗಿಲ್ಲ. ನಿಮ್ಮನ್ನು ನೇರವಾಗಿ ಭೇಟಿಯಾದಾಗ ತಿಳಿಸುವೆ. ನೋವು ನೀಡುವುದಕ್ಕಾಗಲೀ ನೀಡಲಾಗಲೀ, ಪ್ರಚೋದನೆಗಾಗಲೀ, ಯಾವುದೇ ಚರ್ಚೆ ಹುಟ್ಟುಹಾಕುವುದಕ್ಕಾಗಿ ಈ ಮಾತು ಹೇಳಿಲ್ಲ. ನಾನು ಎಲ್ಲ ಭಾಷೆಗಳನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ದೇವಗನ್‌ ಹೇಳಿಕೆಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂಬುದನ್ನು ಮತ್ತೆ ನೆನಪಿಸಿದ್ದಾರೆ.

“ಮಿಸ್ಟರ್‌ ದೇವಗನ್‌, ದಕ್ಷಿಣ ಭಾರತದಲ್ಲಿ ನಾವು ಯಾವುದೇ ಸಮಯದಲ್ಲಿ ಹಿಂದಿಯನ್ನು ನಮ್ಮ ರಾಷ್ಟ್ರೀಯ ಭಾಷೆಯನ್ನಾಗಿ ಸ್ವೀಕರಿಸುವುದಿಲ್ಲ. ಹಿಂದಿ ಅಧಿಕೃತ ಭಾಷೆಯಾಗಿ ಇಂಗ್ಲಿಷ್‌ಗೆ ಪರ್ಯಾಯವಾಗಿದೆ. ಹಿಂದಿಯೇತರ ರಾಜ್ಯಗಳು ರಾಷ್ಟ್ರಕ್ಕೆ ಹೆಚ್ಚು ಆದಾಯ ಮತ್ತು ಜಿಎಸ್‌ಟಿ ನೀಡುತ್ತಿವೆಯೇ ಹೊರತು ಹಿಂದಿ ರಾಜ್ಯಗಳಲ್ಲ” ಎಂದು ವಿಕ್ಕಿ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ.

“ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ. ಹಿಂದಿ ನನ್ನ ಮಾತೃಭಾಷೆಯಲ್ಲ. ಇದು ಕೇವಲ 23 ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. 2021 ರಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳು ₹2,400 ಕೋಟಿ ಮತ್ತು ಬಾಲಿವುಡ್ ಕೇವಲ ₹800 ಕೋಟಿ ಗಳಿಸಿವೆ. ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಿ” ಎಂದು ಕತ್ಯುಶಾ ಎಂಬವರು ಆಗ್ರಹಿಸಿದ್ದಾರೆ.

ಎರಡು ವಿಷಯಗಳನ್ನು ಕನ್ನಡಿಗ ಸಜಿತ್‌ ಪ್ರಸ್ತಾಪಿಸಿದ್ದಾರೆ. “1) ಗುಟ್ಕಾ ಜಾಹೀರಾತು ನಿಲ್ಲಿಸಿ. 2) ಸಂವಿಧಾನವನ್ನು ಓದಿ. ಭಾರತಕ್ಕೆ  ರಾಷ್ಟ್ರೀಯ ಭಾಷೆ ಇಲ್ಲ ಎಂದು ನೀವೇ ತಿಳಿದುಕೊಳ್ಳಿ. ಹಿಂದಿ “ಕೇಂದ್ರ ಸರ್ಕಾರದ” ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ” ಎಂದು ತಿಳಿಸಿದ್ದಾರೆ.

ಹೀಗೆ ಅನೇಕರು ದೇವಗನ್‌ ಅವರ ವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...