Homeಮುಖಪುಟಒಡೆದ ಮನಸ್ಸುಗಳ, ಕಂಡ ಕನುಸಗಳ ಕಟ್ಟೆ ಕಟ್ಟುತ್ತೇವ..: ಈ ತಿಂಗಳ ಸೌಹಾರ್ದ-ಸಹಬಾಳ್ವೆ ಸಮಾವೇಶಗಳು

ಒಡೆದ ಮನಸ್ಸುಗಳ, ಕಂಡ ಕನುಸಗಳ ಕಟ್ಟೆ ಕಟ್ಟುತ್ತೇವ..: ಈ ತಿಂಗಳ ಸೌಹಾರ್ದ-ಸಹಬಾಳ್ವೆ ಸಮಾವೇಶಗಳು

ಶ್ರೀರಂಗ ಪಟ್ಟಣ, ಬೆಂಗಳೂರು, ಸಿಂಧನೂರು, ಉಡುಪಿ ಮತ್ತು ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಕೂಡಿ ಬಾಳುವ ಸಂದೇಶ ಸಾರಲಾಗುತ್ತಿದೆ.

- Advertisement -
- Advertisement -

ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಕಾಣಬೇಕೆಂದು ಕನಸು ಕಂಡವರು ಮಹಾಕವಿ ಕುವೆಂಪು. ಆದರೆ ಕಳೆದ ಆರು ತಿಂಗಳಿನಲ್ಲಿ ಧರ್ಮಾಂಧರ ದ್ವೇಷ ರಾಜಕಾರಣಕ್ಕೆ ಬೆಂದು ಹೋಯಿತು ಕರ್ನಾಟಕ. ಮತೀಯ ಗೂಂಡಾಗಿರಿಗೆ ಸಿಎಂ ಬೊಮ್ಮಾಯಿಯವರೆ ಸಮರ್ಥನೆ ಕೊಟ್ಟಿದ್ದು, ಮತಾಂತರ ನಿಷೇಧ ಮಸೂದೆ ಜಾರಿ ಚರ್ಚೆ, ಹಿಜಾಬ್-ಕೇಸರಿ ಶಾಲು ವಿವಾದ, ಹರ್ಷ ಕೊಲೆ ಪ್ರಕರಣ, ಹಲಾಲ್-ಜಟ್ಕಾ ಕಟ್ ವಿವಾದ, ಮುಸ್ಲಿಂ ವ್ಯಾಪಾರಿಗಳಿಗೆ ಬಾಯ್ಕಾಟ್… ಹೀಗೆ ಸಾಲು ಸಾಲು ವಿವಾದಗಳನ್ನು ಹುಟ್ಟಿಹಾಕಲಾಯ್ತು. ಮಾಧ್ಯಮಗಳು ಅವುಗಳಿಗೆ ಮತ್ತಷ್ಟು ತುಪ್ಪ ಸುರಿದು ಶಾಂತಿ ಕದಡಿದವು. ಎಲ್ಲಾ ಧರ್ಮಗಳ ಬಹುತೇಕರಿಗೆ ಇದು ಅತಿಯಾಯಿತು ಅನ್ನಿಸುವಷ್ಟರ ಮಟ್ಟಿಗೆ ಮಿತಿ ಮೀರಿದವು.

ಇಷ್ಟೆಲ್ಲ ನಡೆಯುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿಗಳು ಕೈಕಟ್ಟಿ ಬಾಯ್ಮುಚ್ಚಿ ತಮ್ಮ ಖುರ್ಚಿ ಉಳಿಸಿಕೊಳ್ಳುವುದಕ್ಕೆ ಹೆಣಗಾಡುತ್ತಿದ್ದರು. ಆದರೆ ರಾಜ್ಯದ ಪ್ರಜ್ಞಾವಂತರು ಮಾತ್ರ ನಮ್ಮ ಕರ್ನಾಟಕ ಹೀಗಾಗಬಾರದು ಎಂದು ಪಣತೊಟ್ಟು ಕೆಲಸ ಮಾಡಿದರು. ಪ್ರತಿ ಸಂದರ್ಭದಲ್ಲಿಯೂ ಶೋಷಿತರ – ನೊಂದ ಜನರ ಜೊತೆಗೆ ನಿಂತರು. ತಮ್ಮ ಕೈಲಾದ ಮಟ್ಟಿಗೆ ಅದನ್ನು ತಡೆಯುವ ಪ್ರಯತ್ನ ಮಾಡಿದರು. ಮತಾಂಧರಿಗೆ ಸರ್ಕಾರದ ಸಂಪೂರ್ಣ ಕೃಪಕಟಾಕ್ಷವಿದ್ದುದರಿಂದ ಅವರ ಕೈ ಮೇಲಾಯಿತು. ಆದರೆ ಏಪ್ರಿಲ್ ತಿಂಗಳಿನಿಂದ ಅದನ್ನು ತಡೆಯುವ ಮತ್ತು ಸೌಹಾರ್ದತೆ-ಸಹಬಾಳ್ವೆ ಸಾರುವ ಕಾರ್ಯಕ್ರಮಗಳು ರಾಜ್ಯದ್ಯಂತ ಜರುಗಿದವು. ಆ ಮೂಲಕ ನಮ್ಮ ಕರ್ನಾಟಕವನ್ನು ಉಳಿಸಿಕೊಳ್ಳುತ್ತೇವೆ ಎಂಬ ಸಂದೇಶ ಸಾರಲಾಯಿತು.

ಧಾರವಾಡ ಹನುಮಂತ ದೇವಾಲಯದ ಎದರು ಕಲ್ಲಂಗಡಿ ನಡೆಸುತ್ತಿದ್ದ ನಬಿ ಸಾಬ್‌ರವರ ಮೇಲೆ ದೌರ್ಜನ್ಯವೆಸಗಿದ್ದು ಬಹಳಷ್ಟು ಜನರಿಗೆ ನೋವು ತರಿಸಿತು. ಅಲ್ಲಿಂದ ಎಲ್ಲಾ ಧರ್ಮೀಯರು ಒಟ್ಟು ಸೇರಿ ನಾವೆಲ್ಲ ಒಂದೆ ಎಂದರು. ಬಹಳಷ್ಟು ಹಿಂದೂ ಕುಟುಂಬಗಳು ರಂಜಾನ್ ಮಾಸದಲ್ಲಿ ಮುಸ್ಲಿಮರಿಗೆ ಇಫ್ತಾರ್ ಆಯೋಜಿಸಿದರು. ಅದೇ ರೀತಿಯಾಗಿ ಮುಸ್ಲಿಮರು ರಾಮನವಮಿ, ಹನುಮ ಜಯಂತಿ ಮೆರವಣಿಗೆಯಲ್ಲಿ ಬಂದವರಿಗೆ ಪಾನಕ, ಜ್ಯೂಸ್ ನೀಡಿ ಸತ್ಕರಿಸಿದರು. ಯುಗಾದಿಯಂದು ಹಿರಿಯ ಸಾಹಿತಿ ದೇವನೂರು ಮಹಾದೇವರವರ ನೇತೃತ್ವದಲ್ಲಿ ಮುಸ್ಲಿಂ ಅಂಗಡಿಗಳಲ್ಲಿ ಮಾಂಸ ಖರೀದಿಸಿ ಸೌಹಾರ್ದತೆ ಮೆರಯಲಾಯಿತು. ಈಗ ಮೇ ತಿಂಗಳಿನಲ್ಲಿ ರಾಜ್ಯಾದ್ಯಂತ ಸಾಲು ಸಾಲು ಸೌಹಾರ್ದ-ಸಹಬಾಳ್ವೆಯ ಸಮಾವೇಶಗಳನ್ನು ಆಯೋಜಿಸಲಾಗಿದೆ. ಅವುಗಳ ಮಾಹಿತಿ ಇಲ್ಲಿದೆ.

ಬಹುಸಂಸ್ಕೃತಿ ಸಾಮರಸ್ಯ ಮೇಳ: ಮೇ 04, ಶ್ರೀರಂಗಪಟ್ಟಣ

ಸ್ವಾತಂತ್ರ್ಯವೀರ ಟಿಪ್ಪು ಸುಲ್ತಾನ್ ಹುತಾತ್ಮ ದಿನದ ನೆನಪಿನಲ್ಲಿ ಮಂಡ್ಯ ಜಿಲ್ಲೆಯ ರೈತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಕಾರ್ಮಿಕ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳು ಬಹುಸಂಸ್ಕೃತಿ ಸಾಮರಸ್ಯ ಮೇಳವನ್ನು ಮೇ 04 ರಂದು ಶ್ರೀರಂಗಪಟ್ಟಣದಲ್ಲಿ ಹಮ್ಮಿಕೊಂಡಿವೆ. ಅಂದು ಸಾಮರಸ್ಯ ನಡಿಗೆ, ರಕ್ತದಾನ ಶಿಬಿರ ಮತ್ತು ಹಿರಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.

ಸೌಹಾರ್ದ ಸಂಸ್ಕೃತಿ ಸಮಾವೇಶ: ಮೇ 05, ಬೆಂಗಳೂರು

ನಾವೆಲ್ಲ ಒಂದೇ ಜಾತಿ ಕುಲ, ನಾವೆಲ್ಲವೂ ಮನುಜರು ಎಂಬ ಸಂದೇಶ ಸಾರುವುದಕ್ಕಾಗಿ ಮೇ 05 ರಂದು ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಸೌಹಾರ್ದ ಸಂಸ್ಕೃತಿ ಸಮಾವೇಶ ಜರುಗಲಿದೆ. ಹಿರಿಯ ಸಾಹಿತ, ಹೋರಾಟಗಾರ ಬರಗೂರು ರಾಮಚಂದ್ರಪ್ಪ, ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಗೋಪಾಲಗೌಡ, ಜಸ್ಟೀಸ್ ನಾಗಮೋಹನ್ ದಾಸ್, ಎನ್ ಸಂತೋಷ್ ಹೆಗ್ಡೆಯವರು ಜೊತೆ ವಿವಿಧ ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೌಹಾರ್ದ ಕರ್ನಾಟಕ ಎಂಬ ಸಂಯುಕ್ತಾಶ್ರಯದಲ್ಲಿ ವಿವಿಧ ಸಂಘಟನೆಗಳು ಈ ಕಾರ್ಯಕ್ರಮವನ್ನು ಸಂಘಟಿಸುತ್ತಿವೆ.

ಬಹುತ್ವ ಭಾರತೀಯರ ಸಮಾವೇಶ: ಮೇ 08, ಸಿಂಧನೂರು

ಸೌಹಾರ್ದ ಸಾಮರಸ್ಯ ಭಾರತಕ್ಕಾಗಿ ಬಹುತ್ವ ಭಾರತೀಯರ ಸಮಾವೇಶ ಮೇ 08 ರಂದು ಸಿಂಧನೂರಿನ ಎಪಿಎಂಸಿ ಮೈದಾನದಲ್ಲಿ ಜರುಗಲಿದೆ. ಬೆಳಿಗ್ಗೆ 11 ರಿಂದ ಸಂಜೆ 05ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಬಸವಪ್ರಭು, ಉಪನ್ಯಾಸಕರು, ಬೀದರ್, ಶಿವಸುಂದರ್, ಚಿಂತಕರು, ಹೋರಾಟಗಾರರಾದ ಆರ್ ಮಾನಸಯ್ಯ, ಸಾಮಾಜಿಕ ಕಾರ್ಯಕರ್ತರಾದ ಲಬೀದ್ ಶಫಿ, ಸಾವಿತ್ರಿ ಮುಜುಂದಾರ್, ನ್ಯಾಯವಾದಿಗಳು, ಕೊಪ್ಪಳ, ಬರಹಗಾರರಾದ ಕೆ.‍‍ಷರೀಪ, ದಲಿತ ನಾಯಕರಾದ ಮಾರಸಂದ್ರ ಮುನಿಯಪ್ಪ, ಬಾಲಸ್ವಾಮಿ, ಕೊಡ್ಲಿ ಮತ್ತು ಹೋರಾಟಗಾರರಾದ ಡಿ.ಎಚ್ ಪೂಜಾರ್ ಭಾಗವಹಿಸಲಿದ್ದಾರೆ. ಭಾಗವಹಿಸಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗೆ 9880152070 ಈ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಬಹುದು.

ರಾಜ್ಯ ಮಟ್ಟದ ಸಾಮರಸ್ಯ ನಡಿಗೆ- ಸಹಬಾಳ್ವೆ ಸಮಾವೇಶ: ಮೇ 14, ಉಡುಪಿ

ಯಾವ ಉಡುಪಿಯಲ್ಲಿ ಹಿಜಾಬ್ ಅನ್ನು ವಿವಾದದ ವಸ್ತುವನ್ನಾಗಿ ಮಾಡಲಾಯಿತೊ, ಎಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿ ಬ್ಯಾನರ್ ಹಾಕಲಾಯಿತೊ ಅದೇ ಉಡುಪಿಯಲ್ಲಿ ಮೇ 14 ರಂದು ರಾಜ್ಯದ ನೂರಾರು ಸಂಘಟನೆಗಳು ಸೇರಿ ರಾಜ್ಯ ಮಟ್ಟದ ಸಾಮರಸ್ಯ ನಡಿಗೆ- ಸಹಬಾಳ್ವೆ ಸಮಾವೇಶವನ್ನು ಹಮ್ಮಿಕೊಂಡಿವೆ.

ರಾಜ್ಯ ಹಾಗೂ ದೇಶದಲ್ಲಿ ನಿತ್ಯವೂ ಘಟಿಸುತ್ತಿರುವ ಮತೀಯವಾದಿ ಸಂಗತಿಗಳನ್ನು ಖಂಡಿಸಿ, ದೇಶದ ಜಾತ್ಯತೀತತೆ, ಸಮಗ್ರತೆ, ವೈವಿಧ್ಯತೆ ಹಾಗೂ ಕೋಮು ಸಾಮರಸ್ಯವನ್ನು ಸಾರಲು ಈ ಸಮಾವೇಶ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ನಾಡಿನ ಜನರನ್ನು ಆಹ್ವಾನಿಸುವ ಹಾಗೂ ಸಾಮರಸ್ಯ, ಸಹಬಾಳ್ವೆಯ ಸೊಬಗನ್ನು ಉದ್ದೀಪಿಸುವ ನಿಟ್ಟಿನಲ್ಲಿ ಹಲವು ಚಿಂತಕರು, ಹಿರಿಯ, ಕಿರಿಯ ಬರಹಗಾರರು, ಹೋರಾಟಗಾರರು, ರಂಗಕರ್ಮಿಗಳು, ಚಿತ್ರಕರ್ಮಿಗಳು, ಪತ್ರಕರ್ತರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಯೋಗೇಂದ್ರ ಯಾದವ್, ಸಸಿಕಾಂತ್ ಸೆಂಥಿಲ್ ಸೇರಿ ವಿವಿಧ ಧರ್ಮದ ಧರ್ಮಗುರುಗಳು, ಹೋರಾಟಗಾರರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಸಾಮರಸ್ಯ ಸಂದೇಶ ಅಭಿಯಾನ: ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌‌ಗಳು ವೈರಲ್‌

ಮೇ ಸಾಹಿತ್ಯ ಮೇಳ: ಮೇ 27 ಮತ್ತು 28, ದಾವಣಗೆರೆ

ಸಂವಿಧಾನ ನಮ್ಮೆಲ್ಲರ ಆಶಯ, ಸತ್ಯದ ಹುಡುಕಾಟಕ್ಕೆ ಸಾಕ್ಷಿಯಾಗೋಣ ಎಂಬ ಉದ್ದೇಶದಿಂದ ಮೇ 27 ಮತ್ತು 28ರಂದು ದಾವಣಗೆರೆಯಲ್ಲಿ ಲಡಾಯಿ ಪ್ರಕಾಶನದ ವತಿಯಿಂದ ಮೇ ಸಾಹಿತ್ಯ ಮೇಳ ನಡೆಯಲಿದೆ. ತಾಜ್ ಪ್ಯಾಲೇಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂರಾರು ಸಾಹಿತ್ಯ ಆಸಕ್ತರು, ಹೋರಾಟಗಾರರು ಭಾಗವಹಿಸಲಿದ್ದಾರೆ.

ಇದಲ್ಲದೆ ಕೊಪ್ಪಳ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಲವಾರು ಸೌಹಾರ್ದ ಕಾರ್ಯಕ್ರಮಗಳು ಮೇ ತಿಂಗಳಿನಲ್ಲಿ ಜರುಗಲಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...