Homeಮುಖಪುಟರಕ್ತ ಸಂಬಂಧಗಳಲ್ಲಿಯೇ ಮದುವೆ: ಕರ್ನಾಟಕಕ್ಕೆ ಎರಡನೇ ಸ್ಥಾನ

ರಕ್ತ ಸಂಬಂಧಗಳಲ್ಲಿಯೇ ಮದುವೆ: ಕರ್ನಾಟಕಕ್ಕೆ ಎರಡನೇ ಸ್ಥಾನ

ಈ ದಂಪತಿಗಳಿಗೆ ಹುಟ್ಟುವ ಮಕ್ಕಳು ಹಲವು ರೀತಿಯ ಅಸ್ವಸ್ಥತೆಗಳಿಗೆ ಹೀಡಾಗುವ ಅಪಾಯವಿರುತ್ತದೆ.

- Advertisement -
- Advertisement -

ರಕ್ತ ಸಂಬಂಧಗಳಲ್ಲಿ ಮತ್ತು ಹತ್ತಿರದ ಸಂಬಂಧಗಳಲ್ಲಿಯೇ ಮದುವೆಯಾಗುವ ಪ್ರಕರಣಗಳಲ್ಲಿ ಕರ್ನಾಟಕವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. 15 ರಿಂದ 49 ವರ್ಷದೊಳಗಿನ ಮಹಿಳೆಯರ ಮದುವೆಗಳ ಕುರಿತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಬಿಡುಗಡೆ ಗೊಳಿಸಿದ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.

ತಮಿಳುನಾಡಿನ ಶೇ.28 ರಷ್ಟು ಮಹಿಳೆಯರು ರಕ್ತ ಸಂಬಂಧಗಳಲ್ಲಿ ಮದುವೆಯಾದರೆ, ಕರ್ನಾಟಕದ ಶೇ.27 ರಷ್ಟು ಮಹಿಳೆಯರು ರಕ್ತ ಸಂಬಂಧಗಳಲ್ಲಿಯೇ ಮದುವೆಯಾಗುತ್ತಾರೆ ಎಂದು ವರದಿ ಹೇಳಿದೆ. ರಾಷ್ಟ್ರೀಯ ಸರಾಸರಿ ಶೇ. 11 ಇದ್ದರೆ ಈ ಎರಡೂ ರಾಜ್ಯಗಳು ಗಣನೀಯ ಪ್ರಮಾಣದಲ್ಲಿರುವುದು ಆತಂಕಕಾರಿ ವಿಷಯವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಈ ಪ್ರಮಾಣ ತೀರಾ ಕಡಿಮೆಯಿದ್ದು, ಕೇರಳ ಹೊರತುಪಡಿಸಿ ಉಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿದೆ.

Photo Courtesy: Deccan Herald

ಕರ್ನಾಟಕದ ಮಹಿಳೆಯರು 13.9% ರಷ್ಟು ತಾಯಿಯ ಕಡೆಯ ಸೋದರ ಮಾವಂದಿರನ್ನು, ಮಾವಂದಿರ ಮಕ್ಕಳನ್ನು ವರಿಸಿದರೆ, 9.6% ತಂದೆಯ ಕಡೆಯ ಸೋದರತ್ತೆ ಮಕ್ಕಳನ್ನು ವರಿಸಿದ್ದಾರೆ ಎಂದು ವರದಿ ಹೇಳಿದೆ.

ಈ ರೀತಿಯ ರಕ್ತ ಸಂಬಂಧಿ ಮದುವೆಗಳು ಆನುವಂಶಿಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ಅಧ್ಯಯನಗಳು ಹೇಳಿವೆ. ಈ ದಂಪತಿಗಳಿಗೆ ಹುಟ್ಟುವ ಮಕ್ಕಳು ಹಲವು ರೀತಿಯ ಅಸ್ವಸ್ಥತೆಗಳಿಗೆ ಹೀಡಾಗುವ ಅಪಾಯವಿರುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...