Homeರಾಷ್ಟ್ರೀಯಸುಪ್ರೀಂಕೋರ್ಟ್‌ನಲ್ಲಿ ‘ದೇಶದ್ರೋಹ’ ಕಾನೂನನ್ನು ಸಮರ್ಥಿಸಿಕೊಂಡ ಮೋದಿ ನೇತೃತ್ವದ ಬಿಜೆಪಿ ಸರ್ಕಾರ

ಸುಪ್ರೀಂಕೋರ್ಟ್‌ನಲ್ಲಿ ‘ದೇಶದ್ರೋಹ’ ಕಾನೂನನ್ನು ಸಮರ್ಥಿಸಿಕೊಂಡ ಮೋದಿ ನೇತೃತ್ವದ ಬಿಜೆಪಿ ಸರ್ಕಾರ

- Advertisement -
- Advertisement -

ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ‘ದೇಶದ್ರೋಹ’ ಕಾನೂನು(ಸೆಕ್ಷನ್ 124 ಎ)ನ್ನು ಶನಿವಾರದಂದು ಸಮರ್ಥಿಸಿಕೊಂಡಿದ್ದು, ಅದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ. ಬ್ರಿಟೀಷ್‌‌ ವಸಾಹತುಶಾಹಿ ಯುಗದ ಕಾನೂನಾಗಿರುವ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.

ಒಕ್ಕೂಟ ಸರ್ಕಾರವು ದೇಶದ್ರೋಹ ಕಾನೂನನ್ನು ಸಮರ್ಥಿಸಿ ಸುಪ್ರೀಂಕೋರ್ಟ್‌  ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ, ‘‘ದೇಶದ್ರೋಹ ಕಾನೂನನ್ನು ಎತ್ತಿಹಿಡಿಯುವ ‘ಕೇದಾರನಾಥ ಸಿಂಗ್ v/s ಬಿಹಾರ ರಾಜ್ಯ’ ಪ್ರಕರಣದಲ್ಲಿ ನೀಡಲಾದ ತೀರ್ಪು ಸರಿಯಾಗಿದೆ. ತ್ರಿಸದಸ್ಯ ಪೀಠವು ಕಾನೂನಿನ ಸಿಂಧುತ್ವವನ್ನು ಪರಿಶೀಲಿಸಲು ಸಾಧ್ಯವಿಲ್ಲ’’ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಸಾಂವಿಧಾನಿಕ ಪೀಠವು ಈಗಾಗಲೇ ಸಮಾನತೆಯ ಹಕ್ಕು ಮತ್ತು ಬದುಕುವ ಹಕ್ಕಿನಂತಹ ಮೂಲಭೂತ ಹಕ್ಕುಗಳ ಸಂದರ್ಭದಲ್ಲಿ ದೇಶದ್ರೋಹ ಕಾನೂನಿನ (ಸೆಕ್ಷನ್ 124 ಎ) ಎಲ್ಲಾ ಅಂಶಗಳನ್ನು ಪರಿಶೀಲಿಸಿದೆ” ಎಂದು ಬಿಜೆಪಿ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ.

ಇದನ್ನೂ ಓದಿ: ‘ದೇಶದ್ರೋಹ’ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಲಿರುವ ಸುಪ್ರೀಂಕೋರ್ಟ್

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ,  ನಿವೃತ್ತ ಸೇನಾ ಜನರಲ್ ಎಸ್.ಜಿ.ಒಂಬತ್ಕೆರೆ, ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಐದು ಅರ್ಜಿಗಳು ದೇಶದ್ರೋಹ ಕಾನೂನನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿವೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರ ತ್ರಿಸದಸ್ಯ ವಿಶೇಷ ಪೀಠವು ಮಂಗಳವಾರ ದೇಶದ್ರೋಹದ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ಆಲಿಸಲಿದೆ.

ಕಳೆದ ವರ್ಷ ಜುಲೈನಲ್ಲಿ ದೇಶದ್ರೋಹ ಕಾನೂನಿನ ಭಾರಿ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿತ್ತು. “ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಬೇಕಾಗಿ ಮತ್ತು ಮಹಾತ್ಮಾ ಗಾಂಧಿಯಂತಹ ಜನರನ್ನು ಮೌನಗೊಳಿಸಲು ಬೇಕಾಗಿ ಬ್ರಿಟಿಷರು ಬಳಸಿದ ಕಾನೂನನ್ನು ಇನ್ನೂ ಯಾಕೆ ರದ್ದುಗೊಳಿಸುತ್ತಿಲ್ಲ” ಎಂದು ಕೋರ್ಟ್‌ ಒಕ್ಕೂಟ ಸರ್ಕಾರವನ್ನು ಕೇಳಿತ್ತು.

ಇದನ್ನೂ ಓದಿ: ಮಣಿಪುರ: ಹಿಂದಿ ಹೇರಿಕೆ ಖಂಡಿಸಿ ಶಾರನ್ನು ಟೀಕಿಸಿದ್ದಕ್ಕೆ ಕಾಂಗ್ರೆಸ್‌ ವಕ್ತಾರನ ಮೇಲೆ ದೇಶದ್ರೋಹ ಪ್ರಕರಣ ದಾಖಲು

“ದೇಶದ್ರೋಹ ಕಾನೂನು ವಸಾಹತುಶಾಹಿ ಕಾನೂನು. ಇದು ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. ಇದನ್ನು ಮಹಾತ್ಮ ಗಾಂಧಿ, ತಿಲಕ್ ವಿರುದ್ಧ ಬಳಸಲಾಗಿದೆ … ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಈ ಕಾನೂನು ಅಗತ್ಯವಿದೆಯೇ?” ಎಂದು ಮುಖ್ಯ ನ್ಯಾಯಮೂರ್ತಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ಮೌಖಿಕವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮತ್ತು ಒಕ್ಕೂಟ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರೊಂದಿಗೆ ಮೌಖಿಕವಾಗಿ ಹೇಳಿತ್ತು.

ದೇಶದ್ರೋಹ ಅಥವಾ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಅನ್ನು ಸರ್ಕಾರವು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದರು. “ದೇಶದ್ರೋಹದ ಬಳಕೆಯು ಬಡಗಿಗೆ ಮರದ ತುಂಡನ್ನು ಕತ್ತರಿಸಲು ಗರಗಸವನ್ನು ನೀಡಿದಂತೆ ಮತ್ತು ಅವನು ಅದನ್ನು ಇಡೀ ಕಾಡನ್ನೇ ಕತ್ತರಿಸಲು ಬಳಸುತ್ತಾನೆ” ಎಂದು ಮುಖ್ಯ ನ್ಯಾಯಮೂರ್ತಿ ರಮಣ ವಾಗ್ದಾಳಿ ನಡೆಸಿದ್ದರು.

“ನೀವು ಐಪಿಸಿಯ ಈ ಸೆಕ್ಷನ್ 124 ಎ ಬಳಕೆಯ ಇತಿಹಾಸವನ್ನು ನೋಡಿದರೆ, ಇದರಲ್ಲಿ ಶಿಕ್ಷೆಗೆ ಒಳಗಾಗಿರುವವರ ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂದು ನೀವು ಕಂಡುಕೊಳ್ಳುತ್ತೀರಿ. ಆಡಳಿತಗಾರರು ಈ ಅಧಿಕಾರದ ದುರುಪಯೋಗದ ಸಾಧ್ಯತೆಯಿದೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದರು.

ಇದನ್ನೂ ಓದಿ: ಬಜರಂಗದಳವನ್ನು ‘ದೇಶದ್ರೋಹಿ ಸಂಘಟನೆ’ ಅನ್ನದೆ ಮತ್ತೇನು ಹೇಳಬೇಕು?: ಕುಮಾರಸ್ವಾಮಿ

ದೇಶದ್ರೋಹ ಕಾನೂನಿನ ಸಾಂವಿಧಾನಿಕ ಮಾನ್ಯತೆ ಬಗ್ಗೆ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಶೀಲಿಸಲು ಸಮ್ಮತಿಸಿರುವ ನ್ಯಾಯಾಲಯವು, ದೇಶದ್ರೋಹ ಕಾನೂನಿನ ದುರುಪಯೋಗದಿಂದ ಪ್ರಕರಣಗಳು ಹೆಚ್ಚುತ್ತಿವೆ, ಇದು ತನ್ನ ಮುಖ್ಯ ಕಾಳಜಿಯಾಗಿದೆ ಎಂದು ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...