Homeದಲಿತ್ ಫೈಲ್ಸ್ಸಿದ್ದಾಪುರ: ಸಂವಿಧಾನಕ್ಕಿಂತ ವೇದಗಳೇ ಶ್ರೇಷ್ಠ ಎಂದ ಸ್ವಾಮೀಜಿಯನ್ನು ಟೀಕಿಸಿದ್ದಕ್ಕೆ ಎಫ್‌ಐಆರ್‌!

ಸಿದ್ದಾಪುರ: ಸಂವಿಧಾನಕ್ಕಿಂತ ವೇದಗಳೇ ಶ್ರೇಷ್ಠ ಎಂದ ಸ್ವಾಮೀಜಿಯನ್ನು ಟೀಕಿಸಿದ್ದಕ್ಕೆ ಎಫ್‌ಐಆರ್‌!

- Advertisement -
- Advertisement -

“ಸಂವಿಧಾನಕ್ಕಿಂತ ವೇದಗಳೇ ಹೆಚ್ಚು ಶ್ರೇಷ್ಠ. ಸಂವಿಧಾನವನ್ನು ತಿದ್ದುಪಡಿ ಮಾಡಬಹುದು. ಆದರೆ ವೇದಗಳನ್ನು ತಿದ್ದಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿಕೆ ನೀಡಿರುವ ಉಜಿರೆಯ ಶ್ರೀರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರು ನೀಡಿದ ಹೇಳಿಕೆಯನ್ನು ವಿರೋಧಿಸಿದ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಭಾರತ ಭಾಗ್ಯವಿಧಾತ ಅಂಬೇಡ್ಕರ್‌’ ಫೇಸ್‌‌ಬುಕ್‌ ಪೇಜ್‌ನ ಅಡ್ಮಿನ್‌ ಬಾಗಲಕೋಟೆ ಮೂಲದ ಶಿವರಾಜ್‌ ಎಂಬವರ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಶಿವರಾಜ್‌ ಅವರಿಗೆ ಜಾಮೀನು ದೊರೆತಿದೆ.

ಸ್ವಾಮೀಜಿಯವರನ್ನು ಶಿವರಾಜ್‌ ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ. ಸಿದ್ದಾಪುರ ತಾಲ್ಲೂಕಿನ ಹರಕನಹಳ್ಳಿಯಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದ್ದ ಸ್ವಾಮೀಜಿ, “ಸಂವಿಧಾನಕ್ಕಿಂತ ವೇದಗಳೇ ಶ್ರೇಷ್ಠ” ಎಂದು ಹೇಳಿರುವುದು ಪತ್ರಿಕೆಯೊಂದರಲ್ಲಿ ಮುದ್ರಣವಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗಿರುವ ಹೇಳಿಕೆಗೆ ಪ್ರತಿಯಾಗಿ ಮತ್ತೊಂದು ಕೌಂಟರ್‌ ಹೇಳಿಕೆಯನ್ನು ಎಡಿಟ್ ಮಾಡಿದ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಭಾರತ ಭಾಗ್ಯವಿಧಾತ ಫೇಸ್‌ಬುಕ್‌ ಪೇಜ್‌ನಲ್ಲಿ ಎಡಿಟ್‌‌ ಮಾಡಲಾದ ಫೋಟೋ ಬಳಸಲಾಗಿದ್ದು, “ಸ್ವಾಮೀಜಿ ಹೆಸರನ್ನು ಕೆಟ್ಟದ್ದಾಗಿ ಬರೆಯಲಾಗಿದೆ” ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೃಷ್ಣಪ್ಪ ನಾಯ್ಕರ್‌ ಎಂಬವರು ದೂರು ನೀಡಿದ್ದರು. ಅದನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಭಾರತ ಭಾಗ್ಯವಿಧಾತ ಫೇಸ್‌ಬುಕ್‌ ಪೇಜ್‌ನ ಅಡ್ಮಿನ್‌ ಶಿವರಾಜ್‌, ‘ಖಡ್ಗ’ ಎಂಬ ಫೇಸ್‌‌ಬುಕ್‌ ಖಾತೆಯಲ್ಲಿ ಈ ಫೋಟೋ ಸಿಕ್ಕಿತು. ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಪೇಜ್‌ನಲ್ಲಿ ಅಪ್‌ಲೋಡ್ ಮಾಡಿ, ನನ್ನದೇ ಆದ ಅಭಿಪ್ರಾಯವನ್ನು ಬರೆದಿದ್ದೆ. ಸಂವಿಧಾನಕ್ಕಿಂತ ವೇದವೇ ಶ್ರೇಷ್ಠ ಎಂದು ಹೇಳಿಕೆ ನೀಡಿರುವ ಸ್ವಾಮೀಜಿ ಕುರಿತ ವರದಿಯನ್ನು ಉಲ್ಲೇಖಿಸಲು ಈ ಫೋಟೋವನ್ನು ಬಳಸಿದ್ದೇನೆಯೇ ಹೊರತು, ‘ಅನ್ನಕ್ಕಿಂತ ಸಗಣಿಯೇ ಶ್ರೇಷ್ಠ’ ಎಂಬ ಶೀರ್ಷಿಕೆಯಲ್ಲಿರುವ ಹೇಳಿಕೆ ನನ್ನದ್ದಲ್ಲ” ಎಂದು ಸ್ಪಷ್ಟಪಡಿಸಿದರು.

“ಸ್ವಾಮಿ ನಿಮ್ಮ ವೇದ ಉಪನಿಷತ್‌‌ಗಳಿಂದ ಎಲ್ಲರನ್ನು ಒಂದೇ ರೀತಿ ನೋಡೋಕೆ ಹೇಳಿ. ಜಾತಿ ಜಾತಿ ಅಂತ ಸಾಯೋವರೆಗೆ ಎಲ್ಲರನ್ನು ಸಮನಾಗಿ ನೋಡೋಕೆ ಹೇಳಿ. ಮೊದಲು ನೀವು ಯಾವಾಗಲಾದ್ರೂ ಎಲ್ಲರನ್ನು ಸಮಾನರಾಗಿ ನೋಡಿದ್ದೀರಾ? ಅದು ನಿಮ್ಮಿಂದ ಸಾಧ್ಯ ಇಲ್ಲ. ಎಲ್ಲಾ ಗ್ರಂಥಗಳಿಗೆ ಶ್ರೇಷ್ಠ ವಾದದ್ದು ನಮ್ಮ ಸಂವಿಧಾನ, ಸಂವಿಧಾನದ ಬಗ್ಗೆ ಮಾತೋಡೋಕೆ ಒಂದು ಯೋಗ್ಯತೆ ಬೇಕು ಅದು ತಿಳಿದವರಿಗೆ ಮಾತ್ರ ಗೊತ್ತು” ಎಂಬ ಅಭಿಪ್ರಾಯವನ್ನು ಶಿವರಾಜ್‌ ‘#ಭಾರತ_ಭಾಗ್ಯವಿದಾತ_ಅಂಬೇಡ್ಕರ್’ ಹ್ಯಾಷ್‌ಟ್ಯಾಗ್‌ನಲ್ಲಿ ಬರೆದಿದ್ದಾರೆ.

“ಪೊಲೀಸ್‌ನವರು ನನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ. ‘ಖಡ್ಗ’ ಎಂಬ ನಕಲಿ ಖಾತೆಯನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಎಂ.ಜೆ. ಎಂಬ ಲೋಗೋ ಅಡಿಯಲ್ಲಿ ಹಲವಾರು ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ನಾನು ಬಳಸಿರುವ ಫೋಟೋದಲ್ಲಿಯೂ ಕೂಡ ಎಂ.ಜೆ. ಲೋಗೋ ಇರುವುದನ್ನು ಗಮನಿಸಬಹುದು” ಎನ್ನುತ್ತಾರೆ ಶಿವರಾಜ್‌‌

ಪೋಸ್ಟ್‌ ಗಮನಿಸಿದ ಕೆಲವು ಮುಖಂಡರು ಕೃಷ್ಣಪ್ಪ ನಾಯ್ಕರ್‌ ಎಂಬವರಿಂದ ಸಿದ್ದಾಪುರದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐಟಿ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಗೆ ಹಾಜರಾಗಿ ಸ್ಪಷ್ಟನೆಯನ್ನು ನೀಡಿರುವ ಶಿವರಾಜ್‌ ಅವರಿಗೆ ಈಗ ಜಾಮೀನು ಕೂಡ ದೊರೆತಿದೆ. ಏಪ್ರಿಲ್‌ 29ರಂದು ಮಾಡಲಾಗಿದ್ದ ಪೋಸ್ಟ್‌ಗೆ ಏಪ್ರಿಲ್‌ 30ರಂದು ಪ್ರಕರಣ ದಾಖಲಿಸಲಾಗಿತ್ತು. ದಲಿತ ಸಂಘಟನೆಗಳು ಹಾಜರಿದ್ದು ಶಿವರಾಜ್‌ ಅವರಿಗೆ ಧೈರ್ಯ ತುಂಬಿವೆ.

ಸಂವಿಧಾನದ ಕುರಿತು ಆಗಾಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡುತ್ತಿರುವ ಪ್ರಕರಣಗಳು ಆಗಾಗ್ಗೆ ಘಟಿಸುತ್ತಿವೆ. ಸಂವಿಧಾನ ಬದಲಿಸಲೆಂದೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್‌ ಹೆಗಡೆ ಹೇಳಿಕೆ ನೀಡಿದ್ದರು. ಸಂವಿಧಾನದ ಅವಧಿ ಮುಗಿದಿದೆಯೇ ಎಂಬ ಚರ್ಚಾ ಸ್ಪರ್ಧೆಯನ್ನು ಬೆಂಗಳೂರಿನ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈಗ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ ನೀಡಿರುವುದು ವರದಿಯಾಗಿದೆ. (ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ವರದಿಯ ಪ್ರತಿ ಯಾವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ‘ನಾನುಗೌರಿ.ಕಾಂ’ ಸ್ವತಂತ್ರವಾಗಿ ಪರಿಶೀಲಿಸಿಲ್ಲ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಗನ್ ಮೋಹನ್ ರೆಡ್ಡಿಯನ್ನು ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ ಚಂದ್ರಬಾಬು ನಾಯ್ಡು

0
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಹಿಂದಿನ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ ವಿರುದ್ಧ ಇಂದು ರಾಜ್ಯ ವಿಧಾನಸಭೆಯಲ್ಲಿ ಸೇಡು ತೀರಿಸಿಕೊಂಡಿದ್ದು, ಅವರನ್ನು ಕೊಲಂಬಿಯಾದ ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ್ದಾರೆ. ಇಂಡಿಯಾ...