ಇಂಡಿಗೋ ಏರ್‌ಲೈನ್ಸ್‌ನ ಸಿಬ್ಬಂದಿ ವಿಶೇಷ ಚೇತನ ಮಗು ಮತ್ತು ಆ ಮಗುವಿನ ಪೋಷಕರನ್ನು ರಾಂಚಿ ವಿಮಾನ ನಿಲ್ದಾಣದಲ್ಲಿ ಶನಿವಾರ ತಡೆದಿದ್ದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿದೆ. ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ಹೀಗೇಕೆ ವರ್ತಿಸಿದರೆಂದು ಸ್ಪಷ್ಟಪಡಿಸಬೇಕೆಂದು ಏರ್‌ಲೈನ್‌ಗೆ ಒತ್ತಾಯಿಸಲಾಗಿದೆ. ಈ ಘಟನೆಯನ್ನು ಕಣ್ಣಾರೆ ಕಂಡ ಮನೀಶಾ ಗುಪ್ತಾ ಅವರು ಹಲವು ಸಂಗತಿಗಳನ್ನು ಶೇರ್ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಇಂಡಿಗೋ ಸಿಬ್ಬಂದಿ ವಿಕಲಾಂಗ ಮಗು ವಿಮಾನ ಹತ್ತಲು ಅನುಮತಿ ನೀಡಲಿಲ್ಲ. ಈ ಮಗು ಇತರ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಲಿದೆ. ಪ್ರಯಾಣ ಮಾಡಬೇಕಾದರೆ ಮಗು ಸಾಮಾನ್ಯ ಸ್ಥಿತಿಗೆ ಮರಳಬೇಕು” ಎಂದು ಸಿಬ್ಬಂದಿ ಹೇಳಿದ್ದಾಗಿ ಆರೋಪಿಸಲಾಗಿದೆ.
“ಈ ಸ್ಥಿತಿಯಲ್ಲಿರುವ ಮಕ್ಕಳು ಹಾಗೂ ಕುಡುಕರು ಪ್ರಯಾಣಿಸಲು ಸಾಧ್ಯವಿಲ್ಲ” ಎಂದು ಇಂಡಿಗೋ ಸಿಬ್ಬಂದಿ ಹೇಳಿದ್ದಾಗಿ ದೂರಲಾಗಿದೆ.
#indigo airline gave reason that a disable kid is threat to others and create ruckus while boarding , this is #accessibleindia and it happens everywhere , people treats disable people like liability and it’s bitter truth of our society pic.twitter.com/UjIgy2jk55
— Nilotpal (@nilotpalm3) May 9, 2022
“ಮಗು ಮತ್ತು ಪೋಷಕರ ಪ್ರಯಾಣದಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಇತರ ಪ್ರಯಾಣಿಕರು ಹೇಳಿದರು. ಪ್ರಯಾಣಿಕರಲ್ಲಿ ವೈದ್ಯರೂ ಕೂಡ ಇದ್ದರು. ಅವರು ಸಿಬ್ಬಂದಿಯನ್ನು ಪ್ರಶ್ನಿಸಿದರು” ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಪ್ರಯಾಣಿಕರ ಗುಂಪಿನಿಂದ ಹೊರಬಂದ ಸರ್ಕಾರಿ ಅಧಿಕಾರಿಯೊಬ್ಬರು ಮಗುವಿಗೆ ಪ್ರಯಾಣಿಸುವ ಹಕ್ಕಿದೆ ಎಂದು ತಿಳಿಸಿದರು. ಕೊನೆಗೂ ಮೂವರಿಗೆ ಪ್ರಯಾಣಿಸಲು ಅವಕಾಶ ನೀಡಲಾಗಲಿಲ್ಲ. ಸ್ವಲ್ಪ ಸಮಯದವರೆಗೆ ಗೊಂದಲ ಮುಂದುವರೆಯಿತು ಎಂದು ವರದಿಯಾಗಿದೆ.
ಏರ್‌ಲೈನ್ಸ್ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಮಗು ಭಯದಲ್ಲಿತ್ತು. ಮಗು ಸಾಮಾನ್ಯ ಸ್ಥಿತಿಗೆ ಮರಳಿ ಶಾಂತವಾಗಬಹುದೆಂದು ಸಿಬ್ಬಂದಿ ಬಯಸಿದರು. ಆದರೆ ಕೊನೆಯ ಕ್ಷಣದವರೆಗೂ ಭಯದಿಂದ ಹೊರಬರಲಿಲ್ಲ. ಇಂಡಿಗೊ ಏರ್‌ಲೈನ್ಸ್ ಸಂಸ್ಥೆಯು ಈ ಕುಟುಂಬಕ್ಕೆ ಹೋಟೆಲ್ ವಾಸ್ತವ್ಯವನ್ನು ಒದಗಿಸುವ ಮೂಲಕ ಸ್ಥಿತಿಯನ್ನು ಸುಧಾರಿಸಿತು. ಕುಟುಂಬವು ಮರುದಿನ ಬೆಳಿಗ್ಗೆ ತಮ್ಮ ಪ್ರಯಾಣವನ್ನು ಬೆಳೆಸಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ” ಎಂದು ತಿಳಿಸಲಾಗಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯವು ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ ಮತ್ತು ವರದಿಯನ್ನು ಸಲ್ಲಿಸಲು ವಿಮಾನಯಾನ ಸಂಸ್ಥೆಗೆ ತಿಳಿಸಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನೂ ಓದಿರಿ: ವೈರಲ್ ವಿಡಿಯೊ: ಯುಕೆ ಕಾರ್ಯದರ್ಶಿ ಪ್ರೀತಿ ಪಟೇಲ್ ಜನಾಂಗೀಯ ನೀತಿ ಖಂಡಿಸಿ ಪ್ರಜೆಗಳು ಪ್ರತಿಭಟಿಸಿದ್ದು ಹೀಗೆ
ವಿಷಯ ಉಲ್ಬಣಗೊಳ್ಳುತ್ತಿದ್ದಂತೆ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಪ್ರತಿಕ್ರಿಯೆ ನೀಡಿದ್ದು, “ಇಂತಹ ನಡವಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು. “ಯಾವುದೇ ಮನುಷ್ಯ ಈ ರೀತಿ ನಡೆದುಕೊಳ್ಳಬಾರದು” ಎಂದು ತಿಳಿಸಿದ್ದಾರೆ.
There is zero tolerance towards such behaviour. No human being should have to go through this! Investigating the matter by myself, post which appropriate action will be taken. https://t.co/GJkeQcQ9iW
— Jyotiraditya M. Scindia (@JM_Scindia) May 9, 2022


