ಪತ್ರಿಕೋದ್ಯಮ, ಪುಸ್ತಕ, ನಾಟಕ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ 2022ರ ಪುಲಿಟ್ಝರ್ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಖ್ಯಾತ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದಿಕಿ ಅವರಿಗೆ ಮರಣೋತ್ತರ ಪುಲಿಟ್ಝರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಭಾರತದ ಪರಿಸ್ಥಿತಿಯನ್ನು ತೆರೆದಿಟ್ಟ ಫೋಟೋ ಜರ್ನಲಿಸಂಗಾಗಿ ಭಾರತೀಯರಾದ ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ, ಅಮಿತ್ ದೇವ್ ಮತ್ತು ತಾಲಿಬಾನ್‌ನ ಸಂಘರ್ಷದ ವೇಳೆ ಕೊಲ್ಲಲ್ಪಟ್ಟ ರಾಯಿಟರ್ಸ್ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದಿಕಿ ಅವರಿಗೆ ಪುಲಿಡ್ಜರ್ ಪ್ರಶಸ್ತಿ ನೀಡಲಾಗುತ್ತಿದೆ.
ಅಬಿದಿ ಅವರಿಗೆ ಮೂರನೇ ಬಾರಿಗೆ ಪುಲಿಡ್ಝರ್ ಸಂದಿದ್ದರೆ, ಈ ಹಿಂದೆ 2018ರಲ್ಲಿ ಸಿದ್ದಿಕಿ ಕೂಡ ಪ್ರಶಸ್ತಿ ಪಡೆದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
The Pulitzer Prize for feature photography is awarded to Adnan Abidi, Sanna Irshad Mattoo, Amit Dave and the late Danish Siddiqui of Reuters for the coverage of COVID in India https://t.co/ukVBIkTskW pic.twitter.com/A3e7b3RpGh
— Reuters Pictures (@reuterspictures) May 9, 2022
ಉಕ್ರೇನ್‌ನ ಪತ್ರಕರ್ತರನ್ನು 2022ರ ಪುಲಿಟ್ಜರ್ ಪ್ರಶಸ್ತಿಯಲ್ಲಿ ವಿಶೇಷವಾಗಿ ಗುರುತಿಸಲಾಗಿದೆ. ಜನವರಿ 6ರಂದು ಅಮೆರಿಕ ಸಂಸತ್ ಮೇಲೆ ಆದ ದಾಳಿ, ಅಫಫಾನಿಸ್ತಾನದ ಬಿಕ್ಕಟ್ಟು ಮತ್ತು ಫ್ಲೋರಿಡಾದಲ್ಲಿ ಸರ್ಫ್‌ಸೈಡ್ ಕಾಂಡೋಮಿನಿಯಂ ಕುಸಿತದ ಕುರಿತ ವರದಿಗಳನ್ನು ತೀರ್ಪುಗಾರರು ಗುರುತಿಸಿದ್ದಾರೆ.
ಪತ್ರಿಕೋದ್ಯಮದಲ್ಲಿ ವಿಭಾಗದಲ್ಲಿ ಪ್ರಶಸ್ತಿ ಪಡೆದವರು
ಸಾರ್ವಜನಿಕ ಸೇವೆ: ಜನವರಿ 6, 2021ರಂದು ವಾಷಿಂಗ್ಟನ್ ಮೇಲಿನ ದಾಳಿಯ ಕುರಿತ ವರದಿಗಾಗಿ ವಾಷಿಂಗ್ಟನ್ ಪೋಸ್ಟ್‌ಗೆ ಪ್ರಶಸ್ತಿ.
ಬ್ರೇಕಿಂಗ್ ನ್ಯೂಸ್ ವರದಿ: ಫ್ಲೋರಿಡಾದಲ್ಲಿ ಸೀಸೈಡ್ ಅಪಾರ್ಟ್‌ಮೆಂಟ್ ಟವರ್‌ಗಳ ಕುಸಿತದ ವರದಿಗಾಗಿ ಮಿಯಾಮಿ ಹೆರಾಲ್ಡ್‌ನ ಸಿಬ್ಬಂದಿಗೆ ಪ್ರಶಸ್ತಿ.
ತನಿಖಾ ವರದಿ: ಟ್ಯಾಂಪಾ ಬೇ ಟೈಮ್ಸ್‌ನ ಕೋರಿ ಜಿ. ಜಾನ್ಸನ್, ರೆಬೆಕಾ ವೂಲಿಂಗ್‌ಟನ್ ಮತ್ತು ಎಲಿ ಮುರ್ರೆ ಅವರು ಫ್ಲೋರಿಡಾದ ಏಕೈಕ ಬ್ಯಾಟರಿ ಮರುಬಳಕೆ ಘಟಕದೊಳಗಿನ ವಿಷಕಾರಿ ಅಪಾಯಗಳನ್ನು ಬಹಿರಂಗಪಡಿಸಿದರು. ಈ ವರದಿಯು ಕಾರ್ಮಿಕರು ಮತ್ತು ಸುತ್ತಲಿನ ನಿವಾಸಿಗಳಿಗೆ ರಕ್ಷಣೆ ನೀಡಲು ಒತ್ತಾಯಿಸಿತು.
ವಿವರಣಾತ್ಮಕ ವರದಿ: ವೆಬ್ ಸ್ಪೇಸ್ ಟೆಲಿಸ್ಕೋಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ವರದಿ ಮಾಡಿದ್ದಕ್ಕಾಗಿ ಕ್ವಾಂಟಾ ಮ್ಯಾಗಜೀನ್‌ನ ಸಿಬ್ಬಂದಿಗೆ ಪ್ರಶಸ್ತಿ ನೀಡಲಾಗಿದೆ. ನಟಾಲಿ ವೋಲ್ಚೋವರ್ ಅವರನ್ನು ವಿಶೇಷವಾಗಿ ಗುರುತಿಸಲಾಗಿದೆ.
ಸ್ಥಳೀಯ ವರದಿ: ಬೆಟರ್ ಗವರ್ನಮೆಂಟ್ ಅಸೋಸಿಯೇಷನ್‌ನ ಮ್ಯಾಡಿಸನ್ ಹಾಪ್ಕಿನ್ಸ್ ಮತ್ತು ಚಿಕಾಗೋ ಟ್ರಿಬ್ಯೂನ್‌ನ ಸಿಸಿಲಿಯಾ ರೆಯೆಸ್ ಅವರು ಅಗ್ನಿಶಾಮಕ ಸುರಕ್ಷತೆಯ ಕುರಿತು ವರದಿ ಮಾಡಿದ್ದರು.
ರಾಷ್ಟ್ರೀಯ ವರದಿ: ಟ್ರಾಫಿಕ್ ಸ್ಟಾಪ್‌ಗಳ ಗೊಂದಲದ ಮಾದರಿಯ ಕುರಿತ ವರದಿಗಾಗಿ ದಿ ನ್ಯೂಯಾರ್ಕ್ ಟೈಮ್ಸ್‌ನ ಸಿಬ್ಬಂದಿಗೆ ಪ್ರಶಸ್ತಿ.
ಇದನ್ನೂ ಓದಿರಿ: ತೀವ್ರವಾದ ಪ್ರತಿಭಟನೆ: ಶ್ರೀಲಂಕಾ ಪ್ರಧಾನಿ ರಾಜೀನಾಮೆ
ಅಂತರಾಷ್ಟ್ರೀಯ ವರದಿ: ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ತಾನದಲ್ಲಿ ಅಮೇರಿಕನ್ ಮಿಲಿಟರಿ ತೊಡಗಿಸಿಕೊಂಡಿರುವ ವೈಮಾನಿಕ ದಾಳಿಗಳ ಕುರಿತ ವರದಿಗಾಗಿ ನ್ಯೂಯಾರ್ಕ್ ಟೈಮ್ಸ್ ಸಿಬ್ಬಂದಿಗೆ ಪ್ರಶಸ್ತಿ.
ಫೀಚರ್ ಬರವಣಿಗೆ: ಕುಟುಂಬಗಳ ನಷ್ಟದ ಲೆಕ್ಕಾಚಾರದ ಚಿತ್ರಣಕ್ಕಾಗಿ ದಿ ಅಟ್ಲಾಂಟಿಕ್‌ನ ಜೆನ್ನಿಫರ್ ಸೀನಿಯರ್‌ಗೆ ಪ್ರಶಸ್ತಿ.
ಕಾಮೆಂಟರಿ ವಿಭಾಗದಲ್ಲಿ ಕಾನ್ಸಾಸ್ ಸಿಟಿ ಸ್ಟಾರ್‌ನ ಮೆಲಿಂಡಾ ಹೆನ್ನೆಬರ್ಗರ್, ವಿಮರ್ಶೆಯ ವಿಭಾಗದಲ್ಲಿ ನ್ಯೂಯಾರ್ಕ್ ಟೈಮ್ಸ್‌ನ ಸಲಾಮಿಶಾ ಟಿಲೆಟ್, ಸಂಪಾದಕೀಯ ಬರವಣಿಗೆ ವಿಭಾಗದಲ್ಲಿ ಹೂಸ್ಟನ್ ಕ್ರಾನಿಕಲ್‌ನ ಲಿಸಾ ಫಾಲ್ಕೆನ್‌ಬರ್ಗ್, ಮೈಕೆಲ್ ಲಿಂಡೆನ್‌ಬರ್ಗರ್, ಜೋ ಹೋಲಿ ಮತ್ತು ಲೂಯಿಸ್ ಕರಾಸ್ಕೊಗೆ ನೀಡಲಾಗುತ್ತಿದೆ. ಜೊತೆಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಲಾಗಿದೆ.


