Homeಮುಖಪುಟತಾಜ್‌ಮಹಲ್‌ನ 22 ಬಾಗಿಲುಗಳನ್ನು ತೆರೆಯಬೇಕೆಂಬ ಬಿಜೆಪಿ ಮುಖಂಡನ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ತಾಜ್‌ಮಹಲ್‌ನ 22 ಬಾಗಿಲುಗಳನ್ನು ತೆರೆಯಬೇಕೆಂಬ ಬಿಜೆಪಿ ಮುಖಂಡನ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ನಾಳೆ ನೀವು ಬಂದು ನ್ಯಾಯಾಧೀಶರ ಚೇಂಬರ್‌ಗಳಿಗೂ ಪ್ರವೇಶ ಕೇಳುತ್ತೀರಿ. ಶಹಜಹಾನ್ ತಾಜ್‌ಮಹಲ್ ಕಟ್ಟಿಲ್ಲ ಎಂಬ ನಿಮ್ಮ ನಂಬಿಕೆಯನ್ನು ನಮ್ಮ ಮೇಲೆ ಹೇರಬೇಡಿ.

- Advertisement -
- Advertisement -

ತಾಜ್ ಮಹಲ್ ಕಟ್ಟಿಸಿದ್ದು ಯಾರು ಎಂದು ತಿಳಿಸಬೇಕು ಮತ್ತು ತಾಜ್‌ಮಹಲ್‌ನಲ್ಲಿ ಮುಚ್ಚಿರುವ 22 ಕೊಠಡಿಗಳ ಬಾಗಿಲುಗಳನ್ನು ತೆರೆಯಬೇಕೆಂಬ ಬಿಜೆಪಿ ಮುಖಂಡನ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.

ಅಯೋಧ್ಯೆಯ ಬಿಜೆಪಿ ಘಟಕದ ಮಾಧ್ಯಮ ಉಸ್ತುವಾರಿಯಾಗಿರುವ ರಜನೀಶ್ ಸಿಂಗ್ ಎಂಬುವವರು ತಾಜ್‌ಮಹಲ್ ಕಟ್ಟಿಸಿದವರು ಯಾರು ಎಂಬುದನ್ನು ಕೋರ್ಟ್ ಇತ್ಯರ್ಥಪಡಿಸಬೇಕು. ಅಲ್ಲದೆ ಅಲ್ಲಿ ದೇವಸ್ಥಾನದ ಕುರುಹುಗಳಿವೆಯೇ ಎಂದು ಪತ್ತೆ ಹಚ್ಚಲು ಮುಚ್ಚಿರುವ 22 ಕೊಠಡಿಗಳ ಬಾಗಿಲು ತೆರೆಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಸತ್ಯವನ್ನು ತಿಳಿಯುವುದಕ್ಕಾಗಿ ಈ ಅರ್ಜಿ ಸಲ್ಲಿಸಿದ್ದೇನೆ ಎಂದು ವಾದಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ ಉಪಾಧ್ಯಾಯ ಮತ್ತು ಸುಭಾಶ್ ವಿದ್ಯಾರ್ಥಿ, “ನಾವು ಇಲ್ಲಿ ಕುಳಿತಿರುವುದು ಇತಿಹಾಸ ಶೋಧನೆ ಮಾಡುವುದಕ್ಕಲ್ಲ. ಪುರಾತತ್ವ ಇಲಾಖೆ ಭದ್ರತಾ ಕಾರಣಗಳಿಗಾಗಿ ಮುಚ್ಚಿರುವ ಕೊಠಡಿ ಬಾಗಿಲುಗಳನ್ನು ತೆರೆಯಲು ಸಾಧ್ಯವಿಲ್ಲ. ನಾಳೆ ನೀವು ಬಂದು ನ್ಯಾಯಾಧೀಶರ ಚೇಂಬರ್‌ಗಳಿಗೂ ಪ್ರವೇಶ ಕೇಳುತ್ತೀರಿ. ಶಹಜಹಾನ್ ತಾಜ್‌ಮಹಲ್ ಕಟ್ಟಿಲ್ಲ ಎಂಬ ನಿಮ್ಮ ನಂಬಿಕೆಯನ್ನು ನಮ್ಮ ಮೇಲೆ ಹೇರಬೇಡಿ. ಇಂತಹ ಚರ್ಚೆಗಳು ಡ್ರಾಯಿಂಗ್‌ ರೂಂನಲ್ಲಿ ನಡೆಯಬೇಕೆ ಹೊರತು ನ್ಯಾಯಾಲಯಗಳಲ್ಲ” ಎಂದು ಕಿಡಿಕಾರಿದ್ದಾರೆ.

ನ್ಯಾಯಮೂರ್ತಿಗಳು ಅರ್ಜಿ ತಿರಸ್ಕರಿಸಿ, ಇಂತಹದೆ ಅರ್ಜಿಯನ್ನು ಸಂಬಂಧಿತ ಪ್ರಾಧಿಕಾರಗಳು ತಿರಸ್ಕರಿಸಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಾಜ್‌ಮಹಲ್ ಆವರಣದಲ್ಲಿ ಶಿವಪೂಜೆ: ಹಿಂದೂ ಮಹಾಸಭಾ ಕಾರ್ಯಕರ್ತರ ಬಂಧನ

ಮೊಘಲ್ ಸಾಮ್ರಾಜ್ಯ ಕಾಲದಲ್ಲಿ ನಿರ್ಮಾಣವಾದ ಬಹು ಆಕರ್ಷಣೀಯ ಪ್ರೇಕ್ಷಣೀಯ ಸ್ಥಳವಾದ ತಾಜ್‌ಮಹಲ್ ಅನ್ನು ಭಾರತೀಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...