ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ ಬಂಧಿಸಿರುವ ಜಾರ್ಖಂಡ್ ಕೇಡರ್ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿರುವ ಫೋಟೋವನ್ನು ಹಂಚಿಕೊಂಡ ಆರೋಪದ ಮೇಲೆ ಅಹಮದಾಬಾದ್ ಅಪರಾಧ ವಿಭಾಗದ (ಡಿಸಿಬಿ) ಘಟಕವು ಚಲನಚಿತ್ರ ನಿರ್ದೇಶಕ ಅವಿನಾಶ್ ದಾಸ್ ವಿರುದ್ಧ ಪ್ರಕರಣ ದಾಖಲಿಸಿದೆ.
2017ರಲ್ಲಿ ರಾಂಚಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಮಿತ್ ಶಾ ಮತ್ತು ಸಿಂಘಾಲ್ ಪರಸ್ಪರ ಮಾತನಾಡುತ್ತಿರುವ ಫೋಟೋವನ್ನು ಅವಿನಾಶ್ ದಾಸ್ ಹಂಚಿಕೊಂಡಿದ್ದು ಜನರನ್ನು ದಾರಿತಪ್ಪಿಸಲು ಮತ್ತು ಅಮಿತ್ ಶಾ ಅವರ ಪ್ರತಿಷ್ಠೆಗೆ ಕುಂದುತರಲು ಯತ್ನಿಸಿದ್ದಾರೆಂದು ಪೊಲೀಸರು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ತ್ರಿವರ್ಣ ಧ್ವಜವನ್ನು ಧರಿಸಿರುವ ಮಹಿಳೆಯ ಚಿತ್ರವನ್ನು ಶೇರ್ ಮಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆಯೂ ‘ಅನಾರ್ಕಲಿ ಆಫ್ ಆರಾಹ್’ ಚಿತ್ರದ ನಿರ್ದೇಶಕ ದಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2009-10ರ ಅವಧಿಯಲ್ಲಿ ರಾಜ್ಯದ ಖುಂಟಿ ಜಿಲ್ಲೆಯಲ್ಲಿ ಡೆಪ್ಯುಟಿ ಕಮಿಷನರ್ ಆಗಿದ್ದ ಅವಧಿಯಲ್ಲಿ ನರೇಗ ನಿಧಿಯನ್ನು ಬೇರೆಡೆಗೆ ತಿರುಗಿಸಿದ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಗಣಿ ಕಾರ್ಯದರ್ಶಿ ಸಿಂಘಾಲ್ ಅವರನ್ನು ಇ.ಡಿ. ಬುಧವಾರ ಬಂಧಿಸಿತ್ತು. ಜಾರ್ಖಂಡ್‌ನಲ್ಲಿ ಸಿಂಘಾಲ್‌ಗೆ ಸಂಬಂಧವಿದೆ ಎನ್ನಲಾದ ಚಾರ್ಟರ್ಡ್ ಅಕೌಂಟೆಂಟ್‌ನ ಮನೆಯಿಂದ 18 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿರಿ: ಪೊನ್ನಂಪೇಟೆಯಲ್ಲಿ ಕೊಟ್ಟಿದ್ದು ಏರ್‌ಗನ್ ತರಬೇತಿ- ಸಿ.ಟಿ.ರವಿ; ನಡೆದದ್ದು ಯೋಗ ತರಬೇತಿ ಎಂದ ಹಿಂಜಾವೇ ಮುಖಂಡ
“ಮಹಿಳೆಯ ಮೇಲೆ ತ್ರಿವರ್ಣ ಧ್ವಜವನ್ನು ತೋರಿಸುವ ಅಶ್ಲೀಲ ಚಿತ್ರವನ್ನು ಮಾರ್ಚ್ 17 ರಂದು ಅವಿನಾಶ್ ದಾಸ್ ಎಂಬ ವ್ಯಕ್ತಿ ಹಂಚಿಕೊಂಡಿದ್ದಾರೆ ಎಂದು ಡಿಸಿಬಿಯ ತಾಂತ್ರಿಕ ಪಿಎಸ್ಐ ಕೆ ಪಿ ಪಟೇಲ್ ಅವರ ಗಮನಕ್ಕೆ ತರಲಾಯಿತು. ಹೆಚ್ಚುವರಿಯಾಗಿ, ಮೇ 8 ರಂದು ದಾಸ್ ಅವರ ಟ್ವಿಟ್ಟರ್ ಖಾತೆಯಲ್ಲಿ ಜನರನ್ನು ದಾರಿತಪ್ಪಿಸುವ ಉದ್ದೇಶದಿಂದ, ಶಾ ಅವರ ಪ್ರತಿಷ್ಠೆಗೆ ಹಾನಿ ಮಾಡುವ ಸಲುವಾಗಿ ಮತ್ತೊಂದು ಪೋಸ್ಟ್ ಮಾಡಲಾಯಿತು. ಐಎಎಸ್ ಪೂಜಾ ಸಿಂಘಾಲ್ ಅವರೊಂದಿಗೆ ಅಮಿತ್ ಶಾ ಅವರಿರುವ ಸುಮಾರು ಐದು ವರ್ಷಗಳ ಹಳೆಯ ಚಿತ್ರವನ್ನು ಹಂಚಿಕೊಳ್ಳಲಾಯಿತು. ಆ ನಿಟ್ಟಿನಲ್ಲಿ ದಾಸ್ ವಿರುದ್ಧ ಐಪಿಸಿ ಸೆಕ್ಷನ್ 469, ಐಟಿ ಕಾಯ್ದೆಯ ಸೆಕ್ಷನ್ 67, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಅಹಮದಾಬಾದ್ ಡಿಸಿಬಿ ಘಟಕ ತಿಳಿಸಿದೆ.


