ನ್ಯಾಟೋ ಮಿಲಿಟರಿ ಮೈತ್ರಿಗೆ ಸೇರುವ ಮೂಲಕ ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ದೇಶಗಳು ಗಂಭೀರ ತಪ್ಪುಗಳನ್ನು ಮಾಡುತ್ತಿದ್ದು, ಇದರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ರಷ್ಯಾ ಸೋಮವಾರ ಎಚ್ಚರಿಸಿದೆ.
“ಇದು ದೂರಗಾಮಿ ಪರಿಣಾಮಗಳಿಂದ ಕೂಡಿರುವ ಮತ್ತೊಂದು ಗಂಭೀರ ತಪ್ಪು” ಎಂದು ಉಪ ವಿದೇಶಾಂಗ ಸಚಿವ ಸೆರ್ಗೆಯ್ ರಿಯಾಬ್ಕೋವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದರಿಂದಾಗಿ “ಸೇನಾ ಉದ್ವಿಗ್ನತೆಯ ಸಾಮಾನ್ಯ ಮಟ್ಟವು ಹೆಚ್ಚಾಗುತ್ತದೆ” ಎಂದು ಅವರು ಹೇಳಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಪ್ರಸ್ತುತ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬ ಕೆಲವು ಫ್ಯಾಂಟಮ್ ಕಲ್ಪನೆಗಳಿಗೆ ಸಾಮಾನ್ಯ ಜ್ಞಾನವನ್ನು ಬಲಿಕೊಡುತ್ತಿರುವುದು ವಿಷಾದನೀಯ. ಈ ಕ್ರಮದಿಂದ ಉಭಯ ದೇಶಗಳ ಭದ್ರತೆಯು ಬಲಗೊಳ್ಳುವುದಿಲ್ಲ ಮತ್ತು ಇದರ ವಿರುದ್ದ ರಷ್ಯಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ರಿಯಾಬ್ಕೋವ್ ಹೇಳಿದ್ದಾರೆ.
ಇದನ್ನೂ ಓದಿ: ಪೊನ್ನಂಪೇಟೆಯಲ್ಲಿ ಕೊಟ್ಟಿದ್ದು ಏರ್‌ಗನ್ ತರಬೇತಿ- ಸಿ.ಟಿ.ರವಿ; ನಡೆದದ್ದು ಯೋಗ ತರಬೇತಿ ಎಂದ ಹಿಂಜಾವೇ ಮುಖಂಡ
ಇದನ್ನು ನಾವು ಸಹಿಸಿಕೊಳ್ಳುತ್ತೇವೆ ಎಂಬ ಭ್ರಮೆ ಅವರಿಗೆ ಇರಬಾರದು ಎಂದು ಅವರು ಹೇಳಿದ್ದಾರೆ.
ದಶಕಗಳ ಕಾಲ ಪಾಲಿಸಿಕೊಂಡು ಬಂದಿದ್ದ ಮಿಲಿಟರಿ ಅಲಿಪ್ತ ನೀತಿಯನ್ನು ತೊಡೆದುಹಾಕಲು ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ದೇಶಗಳು ಸಿದ್ಧವಾಗಿವೆ. ರಶಿಯಾದ ಆಕ್ರಮಣದ ವಿರುದ್ಧ ರಕ್ಷಣೆಯಾಗಿ ಈ ದೇಶಗಳು NATO ಪಡೆಗೆ ಸೇರುತ್ತಿದೆ ಎಂದು ವರದಿಯಾಗಿದೆ.
ತನ್ನ ಜೊತೆಗೆ 1,300 ಕಿಲೋಮೀಟರ್ (800 ಮೈಲಿ) ಗಡಿಯನ್ನು ಹಂಚಿಕೊಂಡಿರುವಗ ಫಿನ್‌ಲ್ಯಾಂಡ್‌ಗೆ ‘ಬದಲಿ ಕ್ರಮಗಳನ್ನು’ ತೆಗೆದುಕೊಳ್ಳಲಾಗುವುದು ಎಂದು ರಷ್ಯಾ ಎಚ್ಚರಿಸಿದೆ.
ನ್ಯಾಟೊ ಸದಸ್ಯತ್ವಕ್ಕಾಗಿ ದೇಶವು ಅರ್ಜಿ ಸಲ್ಲಿಸಿರುವ ಕುರಿತು ಫಿನ್ನಿಷ್ ಅಧ್ಯಕ್ಷ ಸೌಲಿ ನಿನಿಸ್ಟೊ ಶನಿವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದಾರೆ. ಫಿನ್‌ಲ್ಯಾಂಡ್‌ನ ಮಿಲಿಟರಿ ಆಲಿಪ್ತ ನೀತಿಯನ್ನು ಕಿತ್ತೊಗೆಯುವುದನ್ನು ಪುಟಿನ್ ‘ತಪ್ಪು’ ಎಂಬಂತೆ ನೋಡಿದ್ದಾರೆ ಎಂದು ರಷ್ಯಾ ಹೇಳಿದೆ.
ಇದನ್ನೂ ಓದಿ: ಬಜರಂಗದಳದಿಂದ ತ್ರಿಶೂಲ, ಬಂದೂಕು ತರಬೇತಿ; ರಾಜಕಾರಣಿಗಳ ಮಕ್ಕಳೂ ಇದ್ದರೆ?
ಸ್ವೀಡನ್‌ನ ಆಡಳಿತ ಪಕ್ಷವು ಸದಸ್ಯತ್ವವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದರಿಂದ ಫಿನ್‌ಲ್ಯಾಂಡ್ ಭಾನುವಾರ NATO ಗೆ ಸೇರುವ ತನ್ನ ತೀರ್ಮಾನವನ್ನು ಘೋಷಿಸಿದೆ.