Homeಅಂತರಾಷ್ಟ್ರೀಯ‘ಪ್ರಧಾನಿಯ ಸಕಾರಾತ್ಮಕ ಕ್ರಮಗಳನ್ನು ಬೆಂಬಲಿಸುತ್ತೇವೆ, ಆದರೆ...’: ಶ್ರೀಲಂಕಾ ವಿಪಕ್ಷ ನಾಯಕನ ಎಚ್ಚರಿಕೆ

‘ಪ್ರಧಾನಿಯ ಸಕಾರಾತ್ಮಕ ಕ್ರಮಗಳನ್ನು ಬೆಂಬಲಿಸುತ್ತೇವೆ, ಆದರೆ…’: ಶ್ರೀಲಂಕಾ ವಿಪಕ್ಷ ನಾಯಕನ ಎಚ್ಚರಿಕೆ

- Advertisement -
- Advertisement -

ಶ್ರೀಲಂಕಾದ ಪ್ರತಿಪಕ್ಷದ ನಾಯಕ ಮತ್ತು ಸಮಗಿ ಜನ ಬಲವೇಗಯ (ಎಸ್‌ಜೆಬಿ) ಮೈತ್ರಿಕೂಟದ ಮುಖ್ಯಸ್ಥ ಸಜಿತ್ ಪ್ರೇಮದಾಸ ಅವರು ದೇಶದ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಬೇಕಾಗಿ, ಹೊಸ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ತೆಗೆದುಕೊಳ್ಳುವ ಎಲ್ಲಾ ಸಕಾರಾತ್ಮಕ ಕ್ರಮಗಳನ್ನು ಪ್ರತಿಪಕ್ಷಗಳು ಬೆಂಬಲಿಸುತ್ತವೆ ಎಂದು ಹೇಳಿದ್ದಾರೆ.

ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಹೊಸ ಪ್ರಧಾನಿಯನ್ನು ನೇಮಕ ಮಾಡುವ ಮೊದಲು ಪ್ರಮುಖ ವಿರೋಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದಿದ್ದಕ್ಕಾಗಿ ವಿರೋಧ ಪಕ್ಷದ ನಾಯಕ ನಿರಾಶೆಗೊಂಡಿದ್ದರು. ಆದರೆ ಇದೀಗ ಸಕಾರಾತ್ಮಕ ಕ್ರಮಗಳನ್ನು ಬೆಂಬಲಿಸಲಿದ್ದೇವೆ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಆರ್ಥಿಕ ಬಿಕ್ಕಟ್ಟು ಬಗೆಹರಿಯುತ್ತದೆಯೇ ಎಂಬುದು ಸರ್ಕಾರದ ಮುಂದೆ ಉಳಿದಿರುವ ಪ್ರಶ್ನೆಯಾಗಿದೆ. ರಚನಾತ್ಮಕ ಮತ್ತು ಪ್ರಗತಿಪರ ಪ್ರತಿಪಕ್ಷವಾಗಿ, ಜನ ಸಾಮಾನ್ಯರ ದುಃಖವನ್ನು ನಿವಾರಿಸುವ ಗುರಿಯನ್ನು ಹೊಂದಿರುವ ಯಾವುದೇ ಸಕಾರಾತ್ಮಕ ಪ್ರಸ್ತಾಪಗಳಿಗೆ ರಚನಾತ್ಮಕ ಬೆಂಬಲವನ್ನು ನೀಡಲು ನಿರ್ಧರಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡದೆ.

ಇದನ್ನೂ ಓದಿ: ಭೀಕರ ಆರ್ಥಿಕ ಬಿಕ್ಕಟ್ಟಿನ ನಡುವೆ ಲಂಕಾ ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ

“ಶ್ರೀಲಂಕಾದ ಜನಸಾಮಾನ್ಯರ ಕೂಗು ಮತ್ತು ನಾವು ತೆಗೆದುಕೊಂಡ ತತ್ವದ ನಿಲುವಿನಿಂದ ನಾವು ಹಿಂತಿರುಗಲು ಸಾಧ್ಯವಿಲ್ಲ. ನಾವು ವಿಶ್ವಾಸಾರ್ಹತೆ ಮತ್ತು ಸಮಗ್ರತೆಯ ರಾಜಕಾರಣಿಗಳಾಗಿದ್ದು, ನಿಷ್ಠಾವಂತ ಪ್ರತಿಪಕ್ಷವಾಗಿ ಜನರು ನಮ್ಮನ್ನು ನಂಬಿದ್ದಾರೆ. ಹೀಗಾಗಿ ಜನರ ಆಶಯಗಳನ್ನು ನಾವು ಈಡೇರಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.

“ವಿರೋಧ ಪಕ್ಷದ ನಾಯಕರು ಅಧ್ಯಕ್ಷೀಯ ವ್ಯವಸ್ಥೆಯನ್ನು ತೊಡೆದುಹಾಕಲು ಮತ್ತು ಅಧ್ಯಕ್ಷರ ರಾಜೀನಾಮೆಗೆ ಸಾಂವಿಧಾನಿಕ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ಜನಸಾಮಾನ್ಯರ ನೋವನ್ನು ನಿವಾರಿಸಲು ಬೇಕಾಗಿ, ಮಂಡಿಸಲಾಗಿರುವ ಪ್ರಸ್ತಾಪಗಳನ್ನು ‘ರಚನಾತ್ಮಕವಾಗಿ ಮತ್ತು ಪ್ರಗತಿಪರವಾಗಿ’ ಬೆಂಬಲಿಸಲಿದ್ದೇವೆ” ಎಂದು ಅವರು ಹೇಳಿದ್ದಾರೆ.

“ನಾವು ವಿರೋಧ ಪಕ್ಷವಾಗಿ ಜನಾದೇಶವನ್ನು ಪಡೆದಿದ್ದೇವೆಯೆ ಹೊರತು ಸರ್ಕಾರವಾಗಿ ಅಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಭಟನೆಯನ್ನು ಹತ್ತಿಕ್ಕಲು ಭಾರತೀಯ ಸೈನಿಕರ ಆಗಮನದ ವರದಿಯನ್ನು ನಿರಾಕರಿಸಿದ ಶ್ರೀಲಂಕಾ ಸೇನೆ

ಆಹಾರ ಭದ್ರತೆಯನ್ನು ಹೆಚ್ಚಿಸುವ ಮತ್ತು ಇಂಧನ, ವಿದ್ಯುತ್, ಅನಿಲ, ರಸಗೊಬ್ಬರ ಮತ್ತು ಇತರ ಅಗತ್ಯ ವಸ್ತುಗಳು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಯಾವುದೇ ನೀತಿಗಳನ್ನು ಪ್ರತಿಪಕ್ಷಗಳು ವಿರೋಧಿಸುವುದಿಲ್ಲ ಎಂದು ಪ್ರೇಮದಾಸ ಒತ್ತಿ ಹೇಳಿದ್ದಾರೆ. “ಅಂತಹ ಉತ್ಪಾದಕ ಚಟುವಟಿಕೆಗಳಿಗೆ ಕಾರಣವಾಗುವ ಎಲ್ಲಾ ಪ್ರಸ್ತಾಪಗಳನ್ನು ನಾವು ಬೆಂಬಲಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಆಡಳಿತ ಪಕ್ಷ ಮತ್ತು ‘ಆಡಳಿತದ ಗಣ್ಯರು’ ಎಂದು ಕರೆಯಲ್ಪಡುವವರು ವಿರೋಧ ಪಕ್ಷಗಳ ಜನರನ್ನು ಸವಲತ್ತುಗಳು ಮತ್ತು ಆಡಳಿತಾತ್ಮಕ ಸ್ಥಾನಗಳನ್ನು ಒದಗಿಸುವ ಮೂಲಕ ಬೇಟೆಯಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಇದನ್ನು ನಾವು ಸಹಿಸುವುದಿಲ್ಲ. ಹಾಗೆ ನೋಡಿದರೆ ಪ್ರತಿಪಕ್ಷಗಳು ಸರ್ಕಾರವನ್ನು ಬೆಂಬಲಿಸುವುದಿಲ್ಲ. ಆದ್ದರಿಂದ, ಈ ಬಿಕ್ಕಟ್ಟಿನ ನಡುವೆ ರಾಜಕೀಯ ಪಿತೂರಿ ಅಥವಾ ರಾಜಕೀಯ ಸಂಗೀತ ಕುರ್ಚಿಗಳ ಆಟದಲ್ಲಿ ತೊಡಗಬಾರದು. ಬದಲಾಗಿ ರಾಷ್ಟ್ರೀಯ ಸವಾಲುಗಳು ಮತ್ತು ರಾಷ್ಟ್ರೀಯ ಉದ್ದೇಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಏಕೆಂದರೆ ಆ ಉದ್ದೇಶಗಳನ್ನು ಸಾಧಿಸಲು ನಾವು ಬೆಂಬಲ ನೀಡುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು: ಕಾಗದದ ಕೊರತೆಯಿಂದಾಗಿ ಶಾಲಾ ಪರೀಕ್ಷೆಗಳನ್ನು ರದ್ದುಗೊಳಿಸಿದ ಶ್ರೀಲಂಕಾ!

ಇಂತಹ ಸಮಯದಲ್ಲಿ ದೇಶಕ್ಕೆ ಪ್ರಚಂಡ ಬೆಂಬಲ ನೀಡಿದ್ದಕ್ಕಾಗಿ ಅವರು ಪ್ರಧಾನಿ ಮೋದಿ ಮತ್ತು ಭಾರತೀಯರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. “ಭಾರತೀಯ ನೆರವು ಅನಿವಾರ್ಯ ಮತ್ತು ಅತ್ಯಮೂಲ್ಯವಾಗಿದೆ. ನಮ್ಮ ತಾಯಿನಾಡಿಗೆ ಹೆಚ್ಚು ಸಹಾಯ ಮಾಡಲು ನಾನು ಭಾರತವನ್ನು ಪ್ರೋತ್ಸಾಹಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿರುವ ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು: ಸುಪ್ರೀಂ

0
ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಇಡೀ ರಾಷ್ಟ್ರದ ಎದುರು ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ...