Homeಅಂತರಾಷ್ಟ್ರೀಯಭೀಕರ ಆರ್ಥಿಕ ಬಿಕ್ಕಟ್ಟಿನ ನಡುವೆ ಲಂಕಾ ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ

ಭೀಕರ ಆರ್ಥಿಕ ಬಿಕ್ಕಟ್ಟಿನ ನಡುವೆ ಲಂಕಾ ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ

- Advertisement -
- Advertisement -

ಭೀಕರ ಆರ್ಥಿಕ ಹಿನ್ನಡೆಯಿಂದ ಭಾರಿ ಪ್ರತಿಭಟನೆ ಎದುರಿಸುತ್ತಿರುವ ನಡುವೆ ಶ್ರೀಲಂಕಾ ನೂತನ ಪ್ರಧಾನ ಮಂತ್ರಿಯಾಗಿ ದೇಶದ ಹಿರಿಯ ರಾಜಕಾರಣಿ ರನಿಲ್‌‌‌‌ ವಿಕ್ರಮಸಿಂಘೆ ಅವರು ರಾಷ್ಟ್ರಪತಿ ಗೋಟಾಬಯ ರಾಜಪಕ್ಸೆ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ದೇಶದ ಆರ್ಥಿಕತೆ ಹದಗೆಡುತ್ತಿರುವುದರಿಂದ ರಾಷ್ಟ್ರಪತಿ ಕೂಡಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ವ್ಯಾಪಕ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಈ ಮಧ್ಯೆ ಗೋಟಾಬಯ ರಾಜಪಕ್ಸೆ ಅವರಿಂದ ವಿಕ್ರಮಸಿಂಘೆ ಹೊಸ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ನಡುವೆ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ, ರಾಜಕೀಯ ನಾಯಕರಾಗಿರುವ ಅವರ ಪುತ್ರ ನಮಲ್ ಮತ್ತು ಅವರ 15 ಮಿತ್ರರಿಗೆ ದೇಶ ಬಿಟ್ಟು ತೆರಳದಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ವಿರುದ್ಧದ ಹಿಂಸಾಚಾರದ ಕೃತ್ಯಗಳನ್ನು ನ್ಯಾಯಾಲಯವು ಅವರ ಮೇಲೆ ಹೊರಿಸಿದೆ.

ಇದನ್ನೂ ಓದಿ: ರಾಜೀನಾಮೆ ನಂತರವೂ ಮುಂದುವರೆದ ಪ್ರತಿಭಟನೆ: ನೌಕಾನೆಲೆಯಲ್ಲಿ ಅವಿತುಕೂತ ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೋಮವಾರ ನಡೆದ ಗುಂಪು ದಾಳಿಯ ಬಗ್ಗೆ ತನಿಖೆ ನಡೆಸುವಂತೆ ರಾಜಧಾನಿ ಕೊಲಂಬೊದಲ್ಲಿನ ಮ್ಯಾಜಿಸ್ಟ್ರೇಟ್ ಪೊಲೀಸರನ್ನು ಕೇಳಿದ್ದಾರೆ. ಈ ದಾಳಿಯಿಂದಾಗಿ ಹಿಂಸಾಚಾರ ಭುಗಿಲೆದ್ದು, ಒಂಬತ್ತು ಜನರು ಬಲಿಯಾಗಿದ್ದಾರೆ.

ರಾಜಪಕ್ಸೆ ಮತ್ತು ಅವರ ಸಹಚರರ ವಿರುದ್ಧ ಬಂಧನ ವಾರಂಟ್‌ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ, ಆದರೆ ಮ್ಯಾಜಿಸ್ಟ್ರೇಟ್ ಅದನ್ನು ತಿರಸ್ಕರಿಸಿದರು ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ.

ಸೋಮವಾರದ ಹಿಂಸಾಚಾರದ ಸಂತ್ರಸ್ತ್ರರು ರಾಜಪಕ್ಸೆ ಮತ್ತು ಅವರ ಪ್ರಮುಖ ಸಹಾಯಕರು ತಮ್ಮ ಸುಮಾರು 3,000 ಬೆಂಬಲಿಗರನ್ನು ರಾಜಧಾನಿಗೆ ಕರೆತಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಲು ಪ್ರೇರೇಪಿಸಿದರು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಓದುಗರ ಪತ್ರ: ಅಯೋಧ್ಯೆಯಲ್ಲಿ ಶ್ರೀರಾಮನಿದ್ದ ಎಂಬುದಕ್ಕೆ ಕೆಲವು ಪ್ರಶ್ನೆಗಳು

ರಾಜಪಕ್ಸೆ ಅವರ ಬೆಂಬಲಿಗರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಈ ದಾಳಿಯ ನಂತರ ಆಸ್ಪತ್ರೆಗೆ ದಾಖಲಾಗಿರುವ ಕನಿಷ್ಠ 225 ಜನರಲ್ಲಿ ಬೌದ್ಧ ಸನ್ಯಾಸಿಗಳು ಮತ್ತು ಕ್ಯಾಥೋಲಿಕ್ ಪಾದ್ರಿಗಳು ಸೇರಿದ್ದಾರೆ.

ಈ ಹಿಂಸಾಚಾರಗಳು ಶೀಘ್ರದಲ್ಲೇ ದೇಶಾದ್ಯಂತ ಹರಡಿದ್ದು, ರಾಜಪಕ್ಸೆ ಬೆಂಬಲಿಗರ ಹಲವಾರು ಮನೆಗಳನ್ನು ಸುಟ್ಟುಹಾಕಲಾಗಿದೆ. ಇದರ ನಂತರ ಪ್ರಧಾನ ಮಂತ್ರಿ ರಾಜೀನಾಮೆ ನೀಡಿದ್ದು, ಅವರನ್ನು ಭಾರೀ ಶಸ್ತ್ರಸಜ್ಜಿತ ಪಡೆಗಳು ಅವರ ಮನೆಯಿಂದ ಸ್ಥಳಾಂತರಿಸಿದ್ದಾರೆ. ಪ್ರಸ್ತುತ ಅವರು ದೇಶದ ಪೂರ್ವದಲ್ಲಿರುವ ನೌಕಾ ನೆಲೆಯಲ್ಲಿ ನೆಲೆಸಿದ್ದಾರೆ ಎಂದು ವರದಿಗಳಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...