Homeರಾಜಕೀಯಫಲಿತಾಂಶ 2018: ಒಂದು ಪೊಲಿಟಿಕಲ್ ಪೋಸ್ಟ್ ಮಾರ್ಟಂ

ಫಲಿತಾಂಶ 2018: ಒಂದು ಪೊಲಿಟಿಕಲ್ ಪೋಸ್ಟ್ ಮಾರ್ಟಂ

- Advertisement -
- Advertisement -

ಸು-NIL |

2018 ರ ಚುನಾವಣೆ ಫಲಿತಾಂಶ ಅತಂತ್ರವಾಗುತ್ತಿದ್ದಂತೆಯೇ ತಂತ್ರ-ಕುತಂತ್ರಗಳು ಆರಂಭವಾಗಿವೆ. ಬಿಜೆಪಿ ಡೆಮಾಕ್ರಸಿಯನ್ನು ಹರಿದು ಮುಕ್ಕುವ ರಭಸಕ್ಕೆ ಬೆದರಿದ ಕಾಂಗ್ರೆಸ್, ಜೆಡಿಎಸ್ ಪಾರ್ಟಿಗಳು ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ರೆಸಾರ್ಟ್ ರಾಜಕಾರಣದ ಮೊರೆ ಹೋಗಬೇಕಾಗಿ ಬಂದಿದೆ. ಇತ್ತ ಕುದುರೆ ವ್ಯಾಪಾರಕ್ಕೆ ಬೇಕಾದ ವೇದಿಕೆಯನ್ನು ಬಿಜೆಪಿ ಸಜ್ಜುಗೊಳಿಸಿಕೊಳ್ಳುತ್ತಿದೆ. ಕೇಸರಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಅಖಾಡಕ್ಕೆ ಇಳಿದಾಗಿದೆ. ಪ್ರಧಾನ ಮಂತ್ರಿ ಸ್ಥಾನವನ್ನೇ ಕೆಳ ಮಟ್ಟಕ್ಕೆ ಇಳಿಸಿಕೊಂಡಿರುವ, ಸುಳ್ಳುಗಳನ್ನೇ ಸತ್ಯವೆಂದು ನಂಬಿಸುವ ಜಾದುಗಾರ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ತೊಡೆ ತಟ್ಟಿದ್ದಾರೆ.

ಜನರಿಂದ ಜನರಿಗೋಸ್ಕರ ಜನರೇ ಸೇರಿ ಕೊಳ್ಳೆ ಹೊಡೆಯುವ ಪ್ರಜಾಪ್ರಭುತ್ವದಲ್ಲಿ ನಡೆಯುವುದು ನಂಬರ್ ಗೇಮ್ ಆದ್ರೂ ಸಹ ಸಾಂವಿಧಾನಿಕ ಸ್ಥಾನಗಳಾದ ರಾಜಭವನದ ಮೂಲಕ ಅಧಿಕಾರ ಪಡೆಯುವ ಹುನ್ನಾರ ಭಾರತೀಯ ಜನತಾ ಪಕ್ಷದ್ದಾಗಿದೆ. ತಳ ಸಮುದಾಯದ, ಬಹುಜನರ ಹಿತ ಕಾಯಲು ಹೊರಟ ಸಿದ್ದರಾಮಯ್ಯ ಇನ್ನಿಲ್ಲದಂತೆ ನೆಲಕಚ್ಚಿದ್ದಾರೆ. ಅಹಿಂದದ ತಳ ಸಮುದಾಯದ ಮತ್ತು ಅಲ್ಪಸಂಖ್ಯಾತರನ್ನು ಉದ್ಧಾರ ಮಾಡುತ್ತೇನೆಂಬ ಧಾವಂತದಲ್ಲಿ ವಾಸ್ತವಿಕ ಸಂತುಲನೆಯನ್ನು ಕಳೆದುಕೊಂಡು ಚುನಾವಣೆ ಗೆಲ್ಲಲಾಗುವುದಿಲ್ಲ ಎಂಬ ಕಟು ಸತ್ಯ ಮತ್ತೊಮ್ಮೆ ಸಾಬೀತಾಗಿದೆ. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದ ಸಿದ್ದರಾಮಯ್ಯ ಜಾರಿಗೆ ತಂದ ಅನ್ನಭಾಗ್ಯ ಅವರ ಕೈ ಹಿಡಿಯಲಿಲ್ಲ, ಜನಪ್ರಿಯ ಇಂದಿರಾ ಕ್ಯಾಂಟೀನ್, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಮತ್ತು ಕನ್ನಡದ ಅಸ್ಮಿತೆ ಯಾವುದೂ ಕೂಡ ಅಹಿಂದ ನಾಯಕನನ್ನು ಕೈ ಹಿಡಿಯಲಿಲ್ಲ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಅಧಿಕಾರ ತಂದುಕೊಡಲಿಲ್ಲ. ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದ್ದು 2018ರ ಚುನಾವಣೆಯಲ್ಲಿ ಕೋಮು ಶಕ್ತಿಗಳನ್ನು ಹಿಂದಿಕ್ಕುವಲ್ಲಿ ಕನ್ನಡ ನಾಡು ಸಂಪೂರ್ಣ ವಿಫಲವಾಗಿದೆ. `ಭಾಗ್ಯ’ಗಳನ್ನು ನಂಬಿಕೊಂಡು ಅತಿ ಆತ್ಮವಿಶ್ವಾಸದಲ್ಲಿ ಹೊರಟಿದ್ದ ಕಾಂಗ್ರೆಸ್ ಗಾಡಿ ಹಳಿ ತಪ್ಪಿದ್ದೆಲ್ಲಿ ಅಂತ ನೋಡಲು ಹೊರಟರೆ ಕಾಣುವ ಸಂಗತಿಗಳು ಇಲ್ಲಿವೆ.

ಕರಾವಳಿ ಕರ್ನಾಟಕ

ಅಭಯ್ ಚಂದ್ರ ಜೈನ್

2013ರಲ್ಲಿ ಬಲಪಂಥೀಯ ಕೋಮುವಾದದ ಪ್ರಯೋಗ ಶಾಲೆಯಾದ ಕರಾವಳಿಯಲ್ಲಿ, ಹದಿಮೂರು ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಈಗ ಕೇವಲ ಮೂರು ಸ್ಥಾನಗಳಿಗೆ ಕುಸಿದಿದೆ. ಎಲ್ಲಾ ಸಮೀಕ್ಷೆಗಳಲ್ಲಿ ಮುಂದಿದ್ದ ಹಲವು ನಾಯಕರು ಹೇಳಹೆಸರಿಲ್ಲದೇ ಕೊಚ್ಚಿಹೋಗಿದ್ದಾರೆ. ದುರ್ಬಲ ಅಭ್ಯರ್ಥಿಗಳ ಎದುರು ಖಾದರ್ ಬಿಟ್ಟರೆ ಉಳಿದ ಘಟಾನುಘಟಿ ಮಂತ್ರಿಗಳು ಮಂಡಿಯೂರಿದ್ದಾರೆ. ಮೇಲ್ವರ್ಗದ ಜನರ ಪೋಲರೈಜೇಶನ್, ಇದನ್ನು ಅರಿಯದ ತಳಸಮುದಾಯ ಅವರ ಸಂಚಿಗೆ ಬಲಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಶಕ್ತಿಶಾಲಿ ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಮೊಗವೀರ ಮತ್ತು ಪೂಜಾರ್ ಸಮುದಾಯದ ಸಂಪೂರ್ಣ ಬೆಂಬಲ ಮತ್ತು ಆರೆಸ್ಸೆಸ್‍ನ ಕಾರ್ಯತಂತ್ರ ಜನಪರವಾಗಿರುವ ಅಭಯಚಂದ್ರ ಜೈನ್ ಮೋಹಿನುದ್ದಿನ ಭಾವಾ, ಲೋಬೋ ಮತ್ತು ರಮಾನಾಥ ರೈರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಎಸ್.ಎಸ್.ಮಲ್ಲಿಕಾರ್ಜುನ್

ಮಧ್ಯ ಕರ್ನಾಟಕ
ಈ ಬಾರಿ ಭಾರತೀಯ ಜನತಾ ಪಕ್ಷ ನೂರರ ಗಡಿ ದಾಟಲು ಮಹತ್ವದ ಕೊಡುಗೆ ನೀಡಿದ ಭಾಗವೆಂದರೆ ಅದು ಮಧ್ಯ ಕರ್ನಾಟಕ. 2013ರಲ್ಲಿ ಎರಡು ಸ್ಥಾನಕ್ಕೆ ಕುಸಿದಿದ್ದ ಕೇಸರಿ ಪಕ್ಷ 2018ಕ್ಕೆ 21ಕ್ಕೆ ಲಾಂಗ್‍ಜಂಪ್ ಮಾಡಿದೆ. ಕಾಂಗ್ರೆಸ್ 18ರಿಂದ 7ಕ್ಕೆ ಕುಸಿದರೆ ಜೆಡಿಎಸ್ ಹತ್ತರಿಂದ 4ಕ್ಕೆ ಇಳಿದಿದೆ. ಆಂಜನೇಯ, ಎಸ್.ಎಸ್.ಮಲ್ಲಿಕಾರ್ಜುನ್‍ನಂತಹ ಸಚಿವರುಗಳೇ ಇಲ್ಲಿ ನೆಲ ಕಚ್ಚಿದ್ದಾರೆ. ಕೈ ನಾಯಕರ ದರ್ಪ, ಲಿಂಗಾಯತರ ಪೋಲರೈಜೇಶನ್ ಮತ್ತು ಕೇಸರಿ ಪಕ್ಷಗಳ ಪರ ಮಠಗಳ ವಕಾಲತ್ತು ಜನ ಕೈ ಪಾಳಯದಿಂದ ಕಮಲ ಕಡೆ ಜಾರುವಂತೆ ಮಾಡಿದೆ.

ಹಳೇ ಮೈಸೂರು
ಮುಖ್ಯಮಂತ್ರಿಯವರ ತವರು ಭಾಗದಲ್ಲಿ ಕಾಂಗ್ರೆಸ್‍ಗೆ 2013ಕ್ಕಿಂತ ಹೆಚ್ಚಿನ ಬಲ ಬರಬೇಕಾಗಿತ್ತು. ಆದರೆ ಅದು 24ರಿಂದ 17ಕ್ಕೆ ಕುಸಿತ ಕಂಡಿದೆ. ಇಲ್ಲಿ ಉಪ ಚುನಾವಣೆಯಲ್ಲಿ ಗೆದ್ದ ಎರಡು ಕ್ಷೇತ್ರಗಳು ಸೇರಿದಂತೆ ಮಹದೇವಪ್ಪ, ಜಯಚಂದ್ರ, ಮಂಜುರಂತಹ ಸಚಿವರು ಮಾತ್ರವಲ್ಲದೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನೇ ಸೋತಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರ ಪುತ್ರ ವ್ಯಾಮೋಹ ಒಂದು ಕಾರಣವಾದರೆ, ಕೆಳಜಾತಿಯ ನಾಯಕತ್ವದ ವಿರುದ್ಧ ಕುದಿಯುತ್ತಿರುವ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಗಳು ಒಂದಾದ ಸಮೀಕರಣವೂ ಇನ್ನೊಂದು ಕಾರಣ,

ಮಂಬೈ ಕರ್ನಾಟಕ
ಕರಾವಳಿ ಕೋಮುವಾದದ ಪ್ರಯೋಗಶಾಲೆ, ಆದರೆ ಮುಂಬೈ ಕರ್ನಾಟಕ ಪ್ರಾಂತ್ಯ ಕೇಸರಿ ಪಕ್ಷದ ಭದ್ರಕೋಟೆ. ಲಿಂಗಾಯತರ ಪ್ರಾಬಲ್ಯವಿರುವ ಇಲ್ಲಿ ಕಳೆದ ಬಾರಿ ಕಾಂಗ್ರೆಸ್ 31 ಸ್ಥಾನ ಗೆದ್ದು ಹೊಸ ಅಲೆ ಹುಟ್ಟು ಹಾಕಿತ್ತು. ಈ ಬಾರಿ ಅದು ಕೇವಲ ಹದಿನೇಳಕ್ಕೆ ಕುಸಿತ ಕಂಡಿದೆ. ಬಿಜೆಪಿ ಹದಿಮೂರರಿಂದ ಮೂವತ್ತಕ್ಕೆ ಏರಿಕೆ ಕಂಡಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೊಡೆತ ಕೈ ಪಕ್ಷಕ್ಕೆ ಬಿದ್ದಿದೆ. ಮಹಾದಾಯಿ ವಿಚಾರವನ್ನು ಬಳಸಿಕೊಳ್ಳುವಲ್ಲಿ ಕೈ ನಾಯಕರು ವಿಫಲರಾಗಿದ್ದಾರೆ. ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಠಗಳ ತಟಸ್ಥ ನಿಲುವು ಕೈ ಪಕ್ಷಕ್ಕೆ ಭಾರೀ ಹೊಡೆತ ನೀಡಿದೆ. ಪಂಚಪೀಠಗಳ ಬಹಿರಂಗ ಕಾರ್ಯಾಚರಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.

ಹೈದ್ರಾಬಾದ್ ಕರ್ನಾಟಕ
ಕಾಂಗ್ರೆಸ್‍ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಿಂದಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕೈ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿಲ್ಲ. ಕೇವಲ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಆದರೆ ಕೆಜೆಪಿ ಮತ್ತು ಬಿಅಸ್ ಆರ್ ಪಕ್ಷಗಳಿಂದ ಹರಿದು ಹಂಚಿ ಹೋಗಿದ್ದ ಸ್ಥಾನಗಳನ್ನು ಮರಳಿ ಪಡೆದ ಬಿಜೆಪಿ ಪಕ್ಷ ಐದು ಸ್ಥಾನಗಳಿಂದ ಹದಿನೈದಕ್ಕೆ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಇಲ್ಲಿಯೂ ಸಹ ಮೇಲ್ಜಾತಿಗಳ ಒಂದುಗೂಡುವಿಕೆ ಕೆಲಸ ಮಾಡಿದೆ.

ಬೆಂಗಳೂರು ಮಹಾನಗರ
ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಹೆಚ್ಚಿನ ಬಲ ಬಂದಿದ್ದರೆ ಅದು ಮಹಾನಗರದಲ್ಲಿ ಮಾತ್ರ.. ಕಳೆದ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಹದಿಮೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಕೇವಲ ಇಪ್ಪತ್ತಾರು ಸ್ಥಾನಗಳಲ್ಲಿ ಚುನಾವಣೆ ನಡೆದರೂ ಅದರಲ್ಲಿ ಹದಿಮೂರು ಸ್ಥಾನವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಡಿಮೆ ಪ್ರಮಾಣದ ವೋಟಿಂಗ್ ಸಹ ಕಾಂಗ್ರೆಸ್ ಗೆಲುವನ್ನು ತಡೆಯುವಲ್ಲಿ ವಿಫಲವಾಗಿದೆ. ನಗರದ ಜನರು, ಮಧ್ಯಮ ವರ್ಗದವರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಕೊಡುತ್ತಾರೆ ಎಂಬ ಈವರೆಗಿನ ನಂಬಿಕೆಯನ್ನು ಈ ಇಲೆಕ್ಷನ್ ಸುಳ್ಳು ಮಾಡಿದೆ. ಇಲ್ಲಿ ಭಾರತೀಯ ಜನತಾ ಪಕ್ಷ ಕೇವಲ ಹನ್ನೊಂದು ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ ಕೇವಲ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಒಟ್ಟಾರೆ ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಹೀಗೆ ವಿಶ್ಲೇಷಿಸಬಹುದು. 1. ಕರ್ನಾಟಕ ಸರಕಾರದ ಕಳೆದ ಐದು ವರ್ಷಗಳ ಸಫಲತೆ ಮತ್ತು ವೈಫಲ್ಯಗಳು ಜನರ ಆದ್ಯತೆಯೇ ಆಗಿಲ್ಲ. ಕಾಂಗ್ರೆಸ್ ನೇತೃತ್ವದ ಸರಕಾರ ಹಗರಣಗಳಿಲ್ಲದೆ, ಭ್ರಷ್ಟಾಚಾರದ ಪ್ರಕರಣಗಳಿಲ್ಲದೆ, ಜಾರಿ ಮಾಡಿದ ಹಲವು ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನ ಪರಾಮರ್ಶೆ ಮಾಡಲು ಹೋಗಿಲ್ಲ. 2. ದೇಶದ ವರ್ತಮಾನದ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಸನ್ನಿವೇಶಗಳು ಜನರ ಮೇಲೆ ಯಾವ ಪರಿಣಾಮ ಬೀರಿಲ್ಲ. 3. ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಮನುಷ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ್ದು ಮತ್ತು ಆತ ಜನಪ್ರಿಯನಾಗಿದ್ದು ಹಲವು ಪಾಳೇಗಾರಿ ಮನಸ್ಥಿತಿಯ ಜನಸಮುದಾಯಗಳಿಗೆ ಇರಸುಮುರುಸು ಉಂಟು ಮಾಡಿತ್ತು. 4. ಲಿಂಗಾಯ್ತ ಪ್ರತ್ಯೇಕ ಧರ್ಮ ಮತ್ತು ಒಳಮೀಸಲಾತಿ ವಿಷಯಗಳು ಭೂತಾಕಾರ ತಾಳಿ ಜನರ ಮನಸ್ಸಿನಾಳಕ್ಕಿಳಿದವು. ದಲಿತರನ್ನು, ಶೂದ್ರರನ್ನು ನಾಯಿ ನರಿಗಳಿಗೆ ಹೋಲಿಸದ್ದು, ಮುಸ್ಲಿಮರ ಓಟನ್ನೇ ನಿರಾಕರಿಸಿದ್ದು, ಬೆಂಕಿ ಹಚ್ಚುವ, ದಾಂದಲೆ ಮಾಡುತ್ತೇವೆಂದ ಪಕ್ಷಗಳ ಗುಂಡಾ ವರ್ತನೆಗಳು ಜನರನ್ನು ಒಂದಿಂಚೂ ಕದಲಿಸಲಿಲ್ಲ. 5. ರಾಜ್ಯದ ಎರಡು ಪ್ರಬಲ ಜಾತಿಗಳು, ಮುಖ್ಯಮಂತ್ರಿಯಾದರೆ ಅದು `ನಮ್ಮ’ ಸಮುದಾಯದವರೇ ಆಗಬೇಕು ಎಂದು ಹಠ ಹಿಡಿದವರಂತೆ ಹಳೆಮೈಸೂರು ಮತ್ತು ಉತ್ತರ ಕರ್ನಾಕಟದಲ್ಲಿ ಓಟು ಮಾಡಿದವು. ಈ ಪ್ರಬಲ ಸಮುದಾಯಗಳ ಕುರುಡು ನಡೆಯು ಚುನಾವಣೆಯನ್ನು ಮತ್ತೆಲ್ಲಿಗೋ ನಡೆಸಿಕೊಂಡು ಹೋಯಿತು. 6. ಅತಂತ್ರ ಫಲಿತಾಂಶ ಬಂದಿದೆ. ಮತ್ತೆ ರಾಜ್ಯದ ಪ್ರಬಲ ಜಾತಿಗಳ ರಾಜಕಾರಣಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಗಳನ್ನು ಹಂಚಿಕೊಳ್ಳುವ ಲೆಕ್ಕಾಚಾರದಲ್ಲಿ ತೊಡಗಿವೆ. ಈ ಚುನಾವಣೆ ಮತ್ತೆ ಪ್ರಬಲ ಜಾತಿಗಳ ದೃವೀಕರಣಕ್ಕೆ ದಾರಿ ಮಾಡಿಕೊಟ್ಟಿಡಿದ್ದನ್ನು ಬಿಟ್ಟರೆ, ಜಾತ್ಯಾತೀತ ಪ್ರಜಾಪ್ರಭುತ್ವದ ಸಾಧ್ಯತೆಯನ್ನು ನಾಶ ಮಾಡಿದೆ. ಮರೆತಿದ್ದೆ, ಈ ಚುನಾವಣಾ ಫಲಿತಾಂಶ 24/7 ಟಿವಿ ನ್ಯೂಸ್ ಚಾನಲ್ ಗಳಿಗೆ ಯಥೇಚ್ಚ ಆಹಾರವನ್ನು ತಿಂಗಳುಗಟ್ಟಲೆ ತಿನ್ನಲು ಮತ್ತು ಮೆಲುಕು ಹಾಕಲು ಉತ್ಪಾದನೆ ಮಾಡಿಕೊಟ್ಟಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...