22 ಜನರೊಂದಿಗೆ ನೇಪಾಳದ ಖಾಸಗಿ ವಿಮಾನಯಾನ ಸಂಸ್ಥೆ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನ ಭಾನುವಾರ ಪತನಗೊಂಡಿದೆ. ಪತನಗೊಂಡ ವಿಮಾನವು ನಂತರ ಕೊವಾಂಗ್ ಗ್ರಾಮದಲ್ಲಿ ಪತ್ತೆಯಾಗಿದೆ. ನಾಪತ್ತೆಯಾದ ವಿಮಾನದಲ್ಲಿ ನಾಲ್ವರು ಭಾರತೀಯರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಣ್ಣ ವಿಮಾನವು ಪ್ರವಾಸಿ ಪಟ್ಟಣವಾದ ಪೋಖರಾದಿಂದ ರಾಜಧಾನಿ ಕಠ್ಮಂಡುವಿನಿಂದ ಸುಮಾರು 200 ಕಿಮೀ ದೂರದ ವಾಯುವ್ಯದ ಜೋಮ್ಸೋಮ್‌ಗೆ ಹಾರುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಮಾನವು ಪೊಖರಾದಿಂದ ಬೆಳಿಗ್ಗೆ 9.55 ಕ್ಕೆ ಹೊರಟಿತು ಮತ್ತು 15 ನಿಮಿಷಗಳ ನಂತರ ನಿಯಂತ್ರಣ ಗೋಪುರದ ಸಂಪರ್ಕವನ್ನು ಕಳೆದುಕೊಂಡಿತು ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿಮಾನವನ್ನು ತಾರಾ ಏರ್ ಎಂಬ ಕಂಪೆನಿ ನಿರ್ವಹಿಸುತ್ತದೆ, ಇದು ಮುಖ್ಯವಾಗಿ ಕೆನಡಿಯನ್-ನಿರ್ಮಿತ ಟ್ವಿನ್ ಓಟರ್ ವಿಮಾನಗಳನ್ನು ಹಾರಾಟಗಳನ್ನು ನಡೆಸುತ್ತದೆ. “ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ತಾರಾ ಏರ್ ವಿಮಾನವು ಮಾನಪತಿ ಹಿಮಾಲ್ ಪ್ರದೇಶದ ಲಾಮ್ಚೆ ನದಿಯ ಬಳಿ ಪತನಗೊಂಡಿದೆ. ನೇಪಾಳ ಸೇನೆಯು ನೆಲ ಮತ್ತು ವಾಯು ಮಾರ್ಗದಿಂದ ಪ್ರದೇಶದ ಕಡೆಗೆ ತೆರಳುತ್ತಿದೆ” ಎಂದು ಸೇನಾ ವಕ್ತಾರ ನಾರಾಯಣ ಸಿಲ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ: ವಿಮಾನಗಳಲ್ಲಿ ಮಾಂಸಾಹಾರ ನಿಷೇಧಿಸುವಂತೆ ಒಕ್ಕೂಟ ಸರ್ಕಾರಕ್ಕೆ ಪತ್ರ
ವಿಮಾನದಲ್ಲಿ ಮುಂಬೈ ಮೂಲದ ನಾಲ್ವರು ಭಾರತೀಯ ಪ್ರಜೆಗಳು, ಇಬ್ಬರು ಜರ್ಮನ್ನರು ಮತ್ತು 13 ನೇಪಾಳಿ ಪ್ರಯಾಣಿಕರು ಇದ್ದರು ಎಂದು ಏರ್‌ಲೈನ್ಸ್ ವಕ್ತಾರರು ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಾಲ್ಕು ಭಾರತೀಯರನ್ನು ಅಶೋಕ್ ಕುಮಾರ್ ತ್ರಿಪಾಠಿ, ಧನುಷ್ ತ್ರಿಪಾಠಿ, ರಿತಿಕಾ ತ್ರಿಪಾಠಿ ಮತ್ತು ವೈಭವಿ ತ್ರಿಪಾಠಿ ಎಂದು ಗುರುತಿಸಲಾಗಿದೆ.
Tara Air flight 9NAET that took off from Pokhara at 9.55 AM today with 22 people onboard, including 4 Indians, has gone missing. Search and rescue operation is on. The embassy is in touch with their family.
Our emergency hotline number :+977-9851107021. https://t.co/2aVhUrB82b
— IndiaInNepal (@IndiaInNepal) May 29, 2022
ವಿಮಾನವು ಪಶ್ಚಿಮ ಪರ್ವತ ಪ್ರದೇಶದ ಜೋಮ್ಸಮ್ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10:15 ಕ್ಕೆ ಇಳಿಯಬೇಕಿತ್ತು. ನಾಪತ್ತೆಯಾಗಿದ್ದ ವಿಮಾನಗಳ ಹುಡುಕಾಟಕ್ಕಾಗಿ ನೇಪಾಳ ಸರ್ಕಾರವು ಮುಸ್ತಾಂಗ್ ಮತ್ತು ಪೊಖರಾದಿಂದ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ಭೂ ಮಾರ್ಗದ ಮೂಲಕ ಹುಡುಕಾಟ ನಡೆಸಲು ನೇಪಾಳ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣ: ಶಂಕಿತ ಭಯೋತ್ಪಾದಕ ಆದಿತ್ಯ ರಾವ್ ಅಪರಾಧ ಸಾಬೀತು
2016 ರಲ್ಲಿ, ತಾರಾ ಏರ್ ನಿರ್ವಹಿಸುತ್ತಿದ್ದ ಟ್ವಿನ್ ಓಟರ್ ಟರ್ಬೊಪ್ರಾಪ್ ವಿಮಾನವು ಪಶ್ಚಿಮ ಜಿಲ್ಲೆಯ ಮಯಾಗಡಿಯಲ್ಲಿ ಪತನಗೊಂಡು 23 ಜನರು ಸಾವನ್ನಪ್ಪಿದ್ದರು. ಅಂದು ಮೂವರು ಸಿಬ್ಬಂದಿಯನ್ನು ಹೊರತುಪಡಿಸಿ, ಒಬ್ಬ ಚೈನೀಸ್ ಮತ್ತು ಒಬ್ಬ ಕುವೈತ್ ಪ್ರಜೆ ಸೇರಿದಂತೆ 20 ಪ್ರಯಾಣಿಕರು ವಿಮಾನದಲ್ಲಿದ್ದರು. ವಿಶ್ವದ ಅತಿ ಎತ್ತರದ ಪರ್ವತದ ನೆಲೆಯಾಗಿರುವ ನೇಪಾಳವು ತನ್ನ ದೇಶೀಯ ವಾಯು ಜಾಲದಲ್ಲಿ ಹಲವಾರು ವಿಮಾನ ಅಪಘಾತಗಳ ವ್ಯಾಪಕ ದಾಖಲೆಯನ್ನು ಹೊಂದಿದೆ.


