Homeಕರ್ನಾಟಕಸಮಾಜ ವಿಜ್ಞಾನ: ‘ಅಂಬೇಡ್ಕರ್‌’ ಪಠ್ಯದಲ್ಲಿ ಕತ್ತರಿ ಪ್ರಯೋಗ ಮಾಡಿದ ‘ಚಕ್ರತೀರ್ಥ’ ಸಮಿತಿ

ಸಮಾಜ ವಿಜ್ಞಾನ: ‘ಅಂಬೇಡ್ಕರ್‌’ ಪಠ್ಯದಲ್ಲಿ ಕತ್ತರಿ ಪ್ರಯೋಗ ಮಾಡಿದ ‘ಚಕ್ರತೀರ್ಥ’ ಸಮಿತಿ

- Advertisement -
- Advertisement -

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧಧರ್ಮವನ್ನು ಯಾಕೆ ಸ್ವೀಕರಿಸಿದರು ಎಂಬುದು ವಿಚಾರವಂತರೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಹತ್ತನೇ ತರಗತಿಯ ನೂತನ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬೌದ್ಧಧರ್ಮವನ್ನು ಸ್ವೀಕರಿಸಿದ್ದು ಏಕೆಂಬುದೇ ನಾಪತ್ತೆಯಾಗಿದೆ.

ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರೂಪಿತವಾದ ಸಮಾಜ ವಿಜ್ಞಾನ ಭಾಗ 2ರ ಪಠ್ಯಪುಸ್ತಕದಲ್ಲಿನ ‘ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ’ ಪಾಠದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ‌ಉಪಶೀರ್ಷಿಕೆಯಲ್ಲಿ ಪಠ್ಯವನ್ನು ನೀಡಲಾಗಿತ್ತು. ಈ ಭಾಗವನ್ನು ನೂತನ ಸಮಿತಿ ಉಳಿಸಿಕೊಳ್ಳಲಾಗಿದ್ದರೂ, ಕೆಲವು ಕಹಿಸತ್ಯಗಳು ಮಕ್ಕಳಿಗೆ ತಿಳಿಯದಂತೆ ಮರೆಮಾಚಿರುವುದು ಸ್ಪಷ್ಟವಾಗುತ್ತಿದೆ. ‘ಸ್ವಾತಂತ್ರ್ಯ ಹೋರಾಟ’ ಎಂದು ಪರಿಷ್ಕರಿಸಲಾಗಿರುವ ಪಾಠದಲ್ಲಿ ಅಂಬೇಡ್ಕರ್‌ ಅವರ ಕುರಿತು ವಿವರಣೆಗಳನ್ನು ಉಳಿಸಿಕೊಂಡಿದ್ದರೂ ಕೆಲವೆಡೆ ಕತ್ತರಿ ಪ್ರಯೋಗ ಮಾಡಿರುವುದು ನೂತನ ಪಠ್ಯದ ಹಾಳೆಗಳಿಂದ ಸ್ಪಷ್ಟವಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಹಿಂದಿನ ಪಠ್ಯದಲ್ಲಿನ ಸಾಲುಗಳು

“ಆಧುನಿಕತೆ, ವೈಚಾರಿಕತೆ ಮತ್ತು ಪಾಶ್ಚಾತ್ಯ ವಿದ್ವಾಂಸರಿಂದ ಪ್ರೇರಣೆ ಪಡೆದರೂ ದೇಶೀಯ ಬೇರುಗಳ ಕಡೆಗೆ ಒಲವನ್ನು ತೋರಿದರು. ಜಾತಿ ವ್ಯವಸ್ಥೆಯಿಂದ ಬೇಸತ್ತ ಇವರು (ಅಂಬೇಡ್ಕರ್‌) ಹಿಂದೂ ಧರ್ಮವನ್ನು ತೊರೆದು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ವಿರೋಧಿಸಿದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಾರ್ಕ್ಸ್‌ವಾದವು ಯಾವ ಬದಲಾವಣೆಯನ್ನು ರಕ್ತ ಮತ್ತು ಹಿಂಸೆಯಿಂದ ತರಬಹುದೋ ಅದನ್ನು ಬೌದ್ಧ ಧರ್ಮವು ಶಾಂತಿ ಮತ್ತು ಅಹಿಂಸಾತ್ಮಕವಾಗಿ ತರಬಲ್ಲದು ಎಂದು ಅವರು ನಂಬಿದ್ದರು. ಅವರ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ಇವರಿಗೆ ಮರಣೋತ್ತರವಾಗಿ ‘ಭಾರತರತ್ನ’ವನ್ನು ನೀಡಿ ಗೌರವಿಸಿದೆ.”- ಹೀಗೆ ಹಿಂದಿನ ಪಠ್ಯದಲ್ಲಿ ಸಾಲುಗಳಿವೆ.

ರೋಹಿತ್‌ ಚಕ್ರತೀರ್ಥ ಸಮಿತಿಯ ಪಠ್ಯದಲ್ಲಿನ ಸಾಲುಗಳು

“ಆಧುನಿಕತೆ, ವೈಚಾರಿಕತೆ ಮತ್ತು ಪಾಶ್ಚಾತ್ಯ ವಿದ್ವಾಂಸರಿಂದ ಪ್ರೇರಣೆ ಪಡೆದರೂ ದೇಶೀಯ ಬೇರುಗಳ ಕಡೆಗೆ ಒಲವನ್ನು ತೋರಿದರು. ತಮ್ಮ ಇಳಿ ವಯಸ್ಸಿನಲ್ಲಿ ಇವರು ಹಿಂದೂ ಧರ್ಮವನ್ನು ತೊರೆದು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಬೌದ್ಧಧರ್ಮವನ್ನು ಸ್ವೀಕರಿಸಿದರು. ಮಾರ್ಕ್ಸ್‌ವಾದವು ಯಾವ ಬದಲಾವಣೆಯನ್ನು ರಕ್ತ ಮತ್ತು ಹಿಂಸೆಯಿಂದ ತರಬಹುದೋ ಅದನ್ನು ಬೌದ್ಧ ಧರ್ಮವು ಶಾಂತಿ ಮತ್ತು ಅಹಿಂಸಾತ್ಮಕವಾಗಿ ತರಬಲ್ಲದು ಎಂದು ಅವರು ನಂಬಿದ್ದರು. ಅವರ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ಇವರಿಗೆ ಮರಣೋತ್ತರವಾಗಿ ‘ಭಾರತರತ್ನ’ವನ್ನು ನೀಡಿ ಗೌರವಿಸಿದೆ.”

ಹೀಗೆ ಪಠ್ಯವನ್ನು ಪರಿಷ್ಕರಣೆ ಮಾಡಲಾಗಿದ್ದು, “ಅಂಬೇಡ್ಕರ್‌ ಅವರು ಜಾತಿ ವ್ಯವಸ್ಥೆಯಿಂದ ಬೇಸತ್ತಿದ್ದು, ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ವಿರೋಧಿಸಿದ್ದ ಬೌದ್ಧಧರ್ಮವನ್ನು ಸ್ವೀಕರಿಸಿದ್ದು” ಎಂಬ ಅಂಶಗಳಿಗೆ ಚಕ್ರತೀರ್ಥ ಸಮಿತಿ ಕತ್ತರಿ ಹಾಕಿದೆ.

ಇದನ್ನೂ ಓದಿರಿ: ಜಿ.ರಾಮಕೃಷ್ಣ, ಲಂಕೇಶ್‌ರವರ ಜಾತಿ ಗೊತ್ತಿಲ್ಲ: ರೋಹಿತ್ ಚಕ್ರತೀರ್ಥ ಸಂದರ್ಶನ

“ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯುವುದಿಲ್ಲ” ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧಧರ್ಮಕ್ಕೆ ಮರಳಿ ಸೇರುವ ಮುನ್ನ ದಶಕದ ಮುಂಚೆಯೇ ಘೋಷಣೆ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

5 COMMENTS

  1. ಕನ್ನಡಿಗರೇ ಆಗ್ಲಿ, ಕರ್ನಾಟಕ ಸರ್ಕಾರವೇ ಆಗ್ಲಿ ಈಗಲೇ ಇಚ್ಛೆತ್ತು ಕೊಳ್ಳದಿದ್ದರೆ ಇನ್ನು ಸಾವಿರಾರು ಸತ್ಯಗಳು ಸುಳ್ಳಾಗಿ, ಸುಳ್ಳುಗಲ್ಲೆಲ್ಲ ಸತ್ಯವಾಗುತ್ತವೆ

  2. ಸತ್ಯವನ್ನು ಎಂದು ಮರೆಮಾಚಲಗದು… ಚಕ್ರತೀರ್ಥ ಎಂಬ ವೆಕ್ತಿಯನ್ನು ಕೂಡಲೇ ಸಮಿತಿಯಿಂದ ತೆಗೆದು ಹಾಕಿ..

  3. ಅತೀ ಬುದ್ಧಿವಂತಿಕೆ ಧೂರ್ತ ಲಕ್ಷಣಂ

    ಎನ್ನುವ ಮಾತು ಅಕ್ಷರಶಃ ನಿಜ ಎನ್ನುವುದನ್ನು ಈಚಿನ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ವೈಖರಿ ನಿಜವಾಗಿಸಿದೆ.

    ರಾಜ್ಯ ಸರಕಾರವು ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದು ಕೊಳ್ಳಬಾರದು ಮತ್ತು ಈ ನಿಟ್ಟಿನಲ್ಲಿ ಶೀಘ್ರ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು

  4. ಚಕ್ರತೀರ್ಥರ ಈ ಪರಿ ಪಠ್ಯ ವಿರೋಧಿ ದೋರಣೆ ಸಲ್ಲದು.ಮೂಲ ಪಠ್ಯ ಕಾಯ್ದು ಕೊಳ್ಳಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಲೊಕೇಶನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆ ಹಕ್ಕಿಗೆ ಧಕ್ಕೆ ತರುತ್ತದೆ: ಸುಪ್ರೀಂ...

0
ಆರೋಪಿ ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಮೌಖಿಕವಾಗಿ  ಹೇಳಿದೆ. ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಲು...