ಪಬ್‌ಗೆ ತೆರಳಿದ್ದ ಬಾಲಕಿಗೆ ಡ್ರಾಪ್ ಕೊಡುವ ನೆಪದಲ್ಲಿ ಐವರು ಅಪ್ರಾಪ್ತ ಶಾಲಾ ಬಾಲಕರು ಕಾರಿನೊಳಗೆ ಕೂಡಿಹಾಕಿ ಸಾಮೂಹಿಕ ಅತ್ಯಾಚಾರಗೈದಿರುವ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿಟಿವಿ ಫೂಟೆಜ್‌ಗಳ ಆಧಾರದಲ್ಲಿ ಐವರು ಆರೋಪಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಮೂವರು ಅಪ್ರಾಪ್ತ ಬಾಲಕರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ ಈ ಅಮಾನವೀಯ ಕೃತ್ಯ ಜರುಗಿದ್ದು, ಆರೋಪಿಗಳೆಲ್ಲರು ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿದ್ದು, ರಾಜಕೀಯ ಪ್ರಭಾವಿಗಳ ಕುಟುಂಬಕ್ಕೆ ಸೇರಿದ್ದಾರೆ. ಗೃಹ ಸಚಿವರ ಮೊಮ್ಮಗ ಭಾಗಿಯಾಗಿಲ್ಲ ಎಂದಿರುವ ಪೊಲೀಸರು, ಬಾಲಕಿಯ ಹೇಳಿಕೆ ಆಧರಿಸಿ IPC ಸೆಕ್ಷನ್ 354 ಮತ್ತು 323 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
“ಆರೋಪಿ ಸಾದುದ್ದೀನ್ ಮಲಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗುರುತಿಸಲಾದ ಐದು ಜನರಲ್ಲಿ ಮೂವರು ಅಪ್ರಾಪ್ತರು” ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ ವಲಯ) ಜೋಯಲ್ ಡೇವಿಸ್ ತಿಳಿಸಿದ್ದಾರೆ.
ಶನಿವಾರ ಸಂಜೆ 17 ವರ್ಷದ ಬಾಲಕಿಯೊಬ್ಬಳು ತನ್ನ ಸ್ನೇಹಿತನ ಜೊತೆ ಪಬ್ ಒಂದಕ್ಕೆ ತೆರಳಿದ್ದಾಳೆ. ಆದರೆ ಆತ ಬೇಗನೇ ಪಬ್‌ನಿಂದ ತೆರಳಿದ್ದಾನೆ. ಅಲ್ಲಿಂದ ಆರೋಪಿ ಬಾಲಕರು ಡ್ರಾಪ್ ಕೊಡುವುದಾಗಿ ಹೇಳಿ ಬಾಲಕಿಯೊಂದಿಗೆ ಸ್ನೇಹ ಸಾಧಿಸಿದ್ದು ಕಾರ್‌ನಲ್ಲಿ ತೆರಳಿದ್ದಾರೆ. ದಾರಿ ಮಧ್ಯೆ ಬೇಕರಿಗೂ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಆ ಐದು ಬಾಲಕರು ಕಾರನ್ನು ಪ್ರತಿಷ್ಟಿತ ಜ್ಯುಬಿಲಿ ಹಿಲ್ಸ್ ಎಂಬಲ್ಲಿ ನಿಲ್ಲಿಸಿ, ಕಾರಿನೊಳಗೆ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ. ಈ ಸಂದರ್ಭದಲ್ಲಿ ಕೆಲವರು ಹೊರಗೆ ನಿಂತು ಕಾವಲು ಕಾದಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಶಾಸಕನ ಮಗನೂ ಸಹ ಭಾಗಿಯಾಗಿದ್ದು, ಆದರೆ ಅತ್ಯಾಚಾರ ನಡೆಯುವ ಮುನ್ನವೇ ಕಾರಿನಿಂದ ಇಳಿದು ಹೋಗಿದ್ದಾನೆ ಎನ್ನಲಾಗಿದೆ. ಸಂಪೂರ್ಣ ವಿಚಾರಣೆಯ ಬಳಿಕವಷ್ಟೇ ಸತ್ಯ ಹೊರಬೀಳಲಿದೆ.
ಬಾಲಕಿ ಸದ್ಯ ಶಾಕ್‌ನಲ್ಲಿದ್ದಾಳೆ. ಪೂರ್ತಿ ವಿವರ ನೀಡುವ ಪರಿಸ್ಥಿತಿಯಲ್ಲಿಲ್ಲ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಆಧಾರದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳು ಸೇರಿ ಇನ್ನಿತರ ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆ. ಅಪ್ರಾಪ್ತರಿಗೆ ಕ್ಲಬ್‌ನಲ್ಲಿ ಹೇಗೆ ಪ್ರವೇಶ ನೀಡಲಾಯಿತು ಎನ್ನುವುದರ ಕುರಿತೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಜೋಲ್ ಡೇವಿಸ್ ತಿಳಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ತೆಲಂಗಾಣ ಐಟಿ ಸಚಿವ ಕೆಟಿ ರಾಮರಾವ್ ಅವರು ರಾಜ್ಯ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ, ಡಿಜಿಪಿ ಮತ್ತು ಹೈದರಾಬಾದ್ ನಗರ ಪೊಲೀಸ್ ಕಮಿಷನರ್‌ರವರಲ್ಲಿ ಮನವಿ ಮಾಡಿದ್ದಾರೆ. “ಆರೋಪಿಗಳ ಸ್ಥಾನಮಾನಗಳು ಅಥವಾ ಸಂಬಂಧಗಳನ್ನು ಲೆಕ್ಕಿಸದೆ ಯಾರನ್ನೂ ಬಿಡಬೇಡಿ” ಎಂದು ವಿನಂತಿಸಿದ್ದಾರೆ.
“ಅಪ್ರಾಪ್ತ ಬಾಲಕಿಯ ಅತ್ಯಾಚಾರದ ದುಃಖ ಮತ್ತು ನಾಚಿಕೆಗೇಡಿನ ಘಟನೆಯಲ್ಲಿ ನಾವು ಆ ಕುಟುಂಬದ ಬೆಂಬಲಕ್ಕೆ ನಿಂತಿದ್ದೇವೆ. ತೆಲಂಗಾಣ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಮಹಿಳಾ ಸುರಕ್ಷತೆಯ ವಿಷಯದಲ್ಲಿ ನಾವು ಜೀರೋ ಸಹಿಷ್ಣುತೆಯ ದಾಖಲೆಯನ್ನು ಹೊಂದಿದ್ದೇವೆ” ಎಂದು ತೆಲಂಗಾಣ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಹೇಳಿದ್ದಾರೆ.
ಇದನ್ನೂ ಓದಿ: 8 ವರ್ಷಗಳ ನರೇಂದ್ರ ಮೋದಿ ಸರ್ಕಾರದ ವಿಚ್ಛಿದ್ರಕಾರಿ ಸಾಧನೆಗಳು
ಅತ್ಯಾಚಾರವೆಂಬದು ಹೀನ ಕುಕೃತ್ಯ. ವಿಕೃತ ಮನಸ್ಸಗಳು ಮಾಡುವ ಘೋರ ಅಪರಾಧ. ಇಂತಹ ಹೀನ ಕೃತ್ಯಕ್ಕೆ ಹೈದರಾಬಾದ್‌ನಲ್ಲಿ ಶಾಲಾ ಬಾಲಕರೂ ಇಳಿದಿರುವುದು ದುರಂತವಾಗಿದೆ. ಈ ಕುರಿತು ಸರ್ಕಾರಗಳು ಗಂಭೀರವಾಗಿ ಚಿಂತಿಸಿ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಅರಿವು ಮೂಡಿಸಬೇಕಿದೆ. ಅತ್ಯಾಚಾರಗಳನ್ನು ತಡೆಯಲು ಗಂಭೀರ ಪ್ರಯತ್ನ ಹಾಕಬೇಕಿದೆ. ಅದು ಘೋರ ಅಪರಾಧ ಎಂದು ಎಲ್ಲರ ಮನಸ್ಸಿನಲ್ಲಿ ಮೂಡುವಂತೆ ಒತ್ತಡ ಹಾಕಬೇಕಿದೆ.



Biggest achievement is India become poorest country raking 194th position. Only 9 countries are below India’s position.