ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಮಾಡಿರುವ ಎಡವಟ್ಟುಗಳು ಒಂದೊಂದಾಗಿ ಹೊರಬೀಳತೊಡಗಿವೆ. ಅಗೆದಷ್ಟು ಬ್ರಾಹ್ಮಣೀಕರಣ, ಮೊಗೆದಷ್ಟು ಎಡವಟ್ಟುಗಳು ಬಿಚ್ಚಿಕೊಳ್ಳತೊಡಗಿವೆ. ಹಳೆಯ ಪಠ್ಯದಲ್ಲಿದ್ದ ಹಲವಾರು ಮೌಲ್ಯಯುತ ವಿಚಾರಗಳಿಗೆ ಕತ್ತರಿ ಪ್ರಯೋಗ ಮಾಡಿರುವ ಸಮಿತಿಯು, ‘ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್’ ಕುರಿತ ವಿಚಾರಗಳನ್ನೂ ತಿರುಚುವ ಕೆಲಸ ಮಾಡಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮರಳಿದ್ದು ಏಕೆಂಬ ವಿಷಯವನ್ನು ಹೊಸ ಪಠ್ಯದಲ್ಲಿ ಮರೆಮಾಚಿರುವುದು ಬೆಳಕಿಗೆ ಬಂದಿತ್ತು. ಇತಿಹಾಸವಷ್ಟೇ ಅಲ್ಲದೇ ರಾಜಶಾಸ್ತ್ರ ವಿಭಾಗದಲ್ಲೂ ಬಾಬಾ ಸಾಹೇಬರ ವಿಚಾರಗಳಲ್ಲಿ ಕತ್ತರಿ ಪ್ರಯೋಗ ಮಾಡಿದ್ದಾರೆ.
9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿನ ‘ರಾಜ್ಯಶಾಸ್ತ್ರ’ ವಿಭಾಗದಲ್ಲಿನ ‘ನಮ್ಮ ಸಂವಿಧಾನ’ ಪಾಠದಲ್ಲಿ ಬದಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ಕರಡು ರಚನಾ ಸಮಿತಿ’ ಉಪಶೀರ್ಷಿಕೆಯಲ್ಲಿ ನೀಡಲಾಗಿದ್ದ ಹಳೆಯ ಪಠ್ಯದಲ್ಲಿ ಹೀಗಿತ್ತು: “ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು, 5 ಉಪಸಮಿತಿಗಳನ್ನು ಹೊಂದಿತ್ತು. ಇವುಗಳಲ್ಲಿ ಪ್ರಮುಖವಾದುದು ಕರಡು ಸಮಿತಿ. ಡಾ.ಬಿ.ಆರ್.ಅಂಬೇಡ್ಕರ್‌ರವರು ಇದರ ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗಿದೆ. ಈ ಕರಡು ಸಮಿತಿಯಲ್ಲಿ ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ.ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮಹಮ್ಮದ್ ಸಾದುಲ್ಲಾ, ಸಿ.ಮಾಧವರಾವ್ ಅವರು ಸದಸ್ಯರಾಗಿದ್ದರು.”

ಇದನ್ನೂ ಓದಿರಿ: ಚೀನಾವೂ ಭಾರತಕ್ಕೆ ಸೇರಿತ್ತು; ಪಠ್ಯಕ್ಕೆ ನುಸುಳಿದೆ ‘ಆರ್‌ಎಸ್‌ಎಸ್ ಅಖಂಡ ಭಾರತ!’
ಹೊಸಪಠ್ಯದಲ್ಲಿ ‘ಸಂವಿಧಾನದ ಶಿಲ್ಪಿ’ ಬಿರುದು ತೆರವು
ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿಯು ‘ಕರಡು ಸಮಿತಿ’ ಉಪಶೀರ್ಷಿಕೆಯಲ್ಲಿದ ವಿಷಯಗಳನ್ನು ಹೀಗೆ ಪರಿಷ್ಕರಣೆ ಮಾಡಿದೆ: “ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ಅನೇಕ ಸಮಿತಿಗಳನ್ನು ರಚಿಸಿತು. ಅವುಗಳಲ್ಲಿ ಮುಖ್ಯವಾದುದು ಕರಡು ಸಮಿತಿ. ಡಾ.ಬಿ.ಆರ್.ಅಂಬೇಡ್ಕರ್ ಅದರ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾದಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ.ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ ಮುಂತಾದ ಮುಸ್ಸದ್ಧಿಗಳು ಸದಸ್ಯರುಗಳಾಗಿದ್ದರು”- ಇಷ್ಟು ಮಾತ್ರ ಉಳಿಸಿಕೊಂಡು “ಇವರು (ಅಂಬೇಡ್ಕರ್) ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗಿದೆ” ಎಂಬ ಸಾಲನ್ನು ಕಿತ್ತುಹಾಕಲಾಗಿದೆ.




ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿರುವ ವಕ್ರತೀರ್ತನ ವಿರುದ್ಧ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು.
ಸಂವಿಧಾನ ಶಿಲ್ಪಿ ಗೆ ಈ ರೀತಿಯ ಅಪಮಾನ ಅಕ್ಷಮ್ಯ ಅಪರಾಧ. ಚಕ್ರ ತೀರ್ಥ ರವರಿಗೆ ಶಿಕ್ಷೆಯಾಗಲೇಬೇಕು