Homeಕರ್ನಾಟಕ‘ಕನ್ನಡ ರಾಜ್ಯೋತ್ಸವ’ ಕುರಿತ ಪಾಠವನ್ನೇ ಕಿತ್ತುಬಿಸಾಡಿದ ಚಕ್ರತೀರ್ಥ ಸಮಿತಿ!

‘ಕನ್ನಡ ರಾಜ್ಯೋತ್ಸವ’ ಕುರಿತ ಪಾಠವನ್ನೇ ಕಿತ್ತುಬಿಸಾಡಿದ ಚಕ್ರತೀರ್ಥ ಸಮಿತಿ!

ಕನ್ನಡ ಭಾವುಟದ ಬದಲು ಕೇಸರಿ ಭಾವುಟ ಹಾರಾಡುತ್ತಿರುವ ಚಿತ್ರವನ್ನು ಬದಲಿ ಪಠ್ಯದಲ್ಲಿ ಕಾಣಬಹುದು. ಭಾಷೆ v/s ಧರ್ಮ ಸಂಘರ್ಷವನ್ನು ಹುಟ್ಟುಹಾಕಲು ಹೊರಟಿದೆಯೇ ಸರ್ಕಾರ?

- Advertisement -
- Advertisement -

ಕನ್ನಡ ರಾಜ್ಯೋತ್ಸವದ ಕುರಿತು ಆರನೇ ತರಗತಿಯಲ್ಲಿ ಅಳವಡಿಸಲಾಗಿದ್ದ ಪಾಠವನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈಬಿಟ್ಟುರುವುದು ಬೆಳಕಿಗೆ ಬಂದಿದೆ. ತಾಯಿ ಭುವನೇಶ್ವರಿಯ ‘ಮೆರವಣಿಗೆ’ ಕುರಿತ ಈ ಪಾಠವನ್ನು ತೆಗೆದದ್ದು ಏತಕ್ಕೆ ಎಂಬ ಪ್ರಶ್ನೆ ಎದ್ದಿದೆ.

ಆರನೇ ತರಗತಿಯ ‘ಸಿರಿಗನ್ನಡ’ ಪ್ರಥಮಭಾಷಾ ಪಠ್ಯಪುಸ್ತಕದಲ್ಲಿ ಆರನೇ ಗದ್ಯವಾಗಿ ‘ಮೆರವಣಿಗೆ’ ಇತ್ತು. ಈ ಪಠ್ಯವನ್ನು ಸಮಿತಿಯೇ ರೂಪಿಸಿತ್ತು. ಕನ್ನಡ ರಾಜ್ಯೋತ್ಸವಕ್ಕಾಗಿ ಶಾಲೆಯೊಂದರಲ್ಲಿ ನಡೆದ ಸಿದ್ಧತೆ ಕುರಿತು ಮಾತನಾಡುವ ಈ ಪಾಠ, ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ತಿಳಿಸುತ್ತದೆ. ವಿವಿಧ ಧರ್ಮಗಳ ಹಿನ್ನೆಲೆಯ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಉದ್ದೀಪಿಸುವ ಕೆಲಸವನ್ನು ಈ ಗದ್ಯಭಾಗ ಮಾಡುತ್ತದೆ. ಇಲ್ಲಿನ ಪಾಠದ ಉದ್ದೇಶ ಮುಖ್ಯವಾಗಿ ತಾಯಿ ಭುವನೇಶ್ವರಿಯ ಆರಾಧನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಲ್ಲ ಸಿದ್ಧತೆಗಳು ನಡೆದು ನವೆಂಬರ್‌ 1ರಂದು ಹೇಗೆ ಸಂಭ್ರಮಾಚರಣೆ ಮಾಡಲಾಯಿತು, ಮೆರವಣಿಗೆಯನ್ನು ಹೇಗೆ ನಡೆಸಲಾಯಿತು ಎಂಬುದನ್ನು ಪಾಠದ ಕೊನೆಯ ಪ್ಯಾರಾಗಳಲ್ಲಿ ಕಾಣಬಹುದು.

ಯೋಜನೆಯಂತೆ ಎಲ್ಲವೂ ನಡೆಯಿತು. ನವೆಂಬರ್‌ -೧ ಬಂದೇ ಬಿಟ್ಟಿತು! ಶಿಕ್ಷಕರ ಸೂಚನೆಯಂತೆ ಎಲ್ಲ ತಂಡದವರೂ ಮೆರವಣಿಗೆಗೆ ಸಿದ್ಧರಾಗಿ ಬಂದರು. ಆದರೆ “ಭುವನೇಶ್ವರಿ ಎಲ್ಲಿ?” ಕರ್ನಾಟಕ ಮಾತೆ ಭುವನೇಶ್ವರಿ ಎಲ್ಲಿ”- ಎಲ್ಲರೂ ಪರಸ್ಪರ ಮಾತನಾಡಿಕೊಂಡರು. ನೋಡುನೋಡುತ್ತಿದಂತೆಯೇ ಮುಚ್ಚಿದ್ದ ಅಧ್ಯಾಪಕರ ಕೊಠಡಿಯ ಬಾಗಿಲು ತೆರೆಯಿತು. ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಮೆಚ್ಚಿನ ಹಸೀನಾ ಕರ್ನಾಟಕ ಮಾತೆ ಭುವನೇಶ್ವರಿಯಾಗಿ ಕೊಠಡಿಯಿಂದ ಹೊರಬಂದು ರಥವೇರಿ ನಿಂತಳು! ಮೆರವಣಿಗೆ ಹೊರಟಿತು. ಎಲ್ಲರೂ “ಕರ್ನಾಟಕ ಮಾತೆ ಭುವನೇಶ್ವರಿಗೆ ಜಯವಾಗಲಿ” ಎಂದರು. “ಎಂಥ ಅಪೂರ್ವ ದೃಶ್ಯ! ನೋಡಲು ಎರಡು ಕಣ್ಣುಗಳು ಸಾಲವು. ಯಾವ ದಸೆರೆಗೂ ಕಡಿಮೆ ಇಲ್ಲ” ಎಂದು ಜನರು ಮಾತನಾಡುತ್ತಿದ್ದರು. ಕೆಲವರಿಗೆ ಮಾತೇ ಹೊರಡಲಿಲ್ಲ. ಇನ್ನು ಕೆಲವರಿಗೆ ಅಬ್ಬಾಬ್ಬಾ! ಎಂದು ಬೆರಗಾದರು. ಹಂಪಣ್ಣನಿಗೆ ಎಲ್ಲರೂ ತನ್ನನ್ನು ನೋಡಬೇಕೆಂಬ ಆಸೆ. ವಿವಿಧ ಭಂಗಿಯಲ್ಲಿ ಬ್ಯಾಂಡ್ ಬಾರಿಸಿದ. ಬೀಗುತ್ತಾ ಹೆಜ್ಜೆ ಹಾಕಿದ.

ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಸಾಗಿದೆ. ತಾಯಿ ಭುವನೇಶ್ವರಿಯ ಭವ್ಯತೆಗೆ ಜನರೆಲ್ಲ ಕೈ ಮುಗಿಯುತ್ತಿದ್ದಾರೆ. ಮನಸಾರೆ ನಮಿಸುತ್ತಿದ್ದಾರೆ. ತಾಯಿ ನಗುತ್ತ ಎಲ್ಲರನ್ನೂ ಹರಸುತ್ತಿದ್ದಾಳೆ… ಮೆರವಣಿಗೆ ಸಾಗಿದೆ… ಸಾಗಿದೆ… ಸಾಗುತ್ತಲೇ ಇದೆ…

ಇದನ್ನೂ ಓದಿರಿ: ಬಾಬಾ ಸಾಹೇಬರಿಗೆ ಅಗೌರವ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌’ ಎಂಬ ಸಾಲನ್ನೇ ಕತ್ತರಿಸಿದ ಚಕ್ರತೀರ್ಥ ಸಮಿತಿ!

ಹೀಗೆ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬಿತ್ತುವ ಕೆಲಸವನ್ನು ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಡಿತ್ತು. ಆದರೆ ಈ ಪಾಠವನ್ನು ಕೈಬಿಟ್ಟು `ಕನ್ನಡ v/s ಧರ್ಮ’ ಎಂಬ ವಿವಾದವನ್ನು ಸೃಷ್ಟಿಸುವ ಕೆಲಸಕ್ಕೆ ರೋಹಿತ್‌ ಚಕ್ರತೀರ್ಥ ಸಮಿತಿ ಮಾಡಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು.

‘ಮೆರವಣಿಗೆ’ ಬದಲಿಗೆ ‘ಸಿದ್ಧಾರೂಢರ ಜಾತ್ರೆ’

ಸಿರಿಗನ್ನಡ ಆರನೇ ತರಗತಿ ಪಠ್ಯದಲ್ಲಿದ್ದ ಕನ್ನಡ ರಾಜ್ಯೋತ್ಸವ ಕುರಿತ ಪಠ್ಯದ ಬದಲಿಗೆ ‘ಸಿದ್ಧಾರೂಢರ ಜಾತ್ರೆ’ ಪಾಠವನ್ನು ಇಟ್ಟಿರುವುದಾಗಿ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಹೇಳಿದೆ. ‘ಸಿದ್ಧಾರೂಢರ ಜಾತ್ರೆ’ ಪಾಠವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಮಠಮಾನ್ಯಗಳ ಪರಿಚಯವನ್ನು ಮಾಡಿಕೊಡುವುದನ್ನು ಇಲ್ಲಿ ಕಾಣಬಹುದು.

ಹುಬ್ಬಳ್ಳಿಯ ಸಿದ್ಧಾರೂಢಸ್ವಾಮಿ ಮಠದಿಂದ ನಡೆಯುವ ಪ್ರತಿವರ್ಷದ ಜಾತ್ರೆಯ ಕುರಿತು ಮಕ್ಕಳಿಗೆ ಪರಿಚಯ ಮಾಡಿಕೊಡಲಾಗಿದೆ. ರುಸ್ತುಮ್‌ ಎಂಬ ಹುಡುಗ, ಸಿದ್ಧಾರೂಢರ ಕುರಿತು ಕೇಳುತ್ತಾನೆ. ಗುರುಗಳು ಪರಿಚಯ ಮಾಡಿಕೊಡುತ್ತಾರೆ. ನಂತರ ಹಸೀನಾ ಎಂಬ ವಿದ್ಯಾರ್ಥಿನಿ ಮಠದ ಬಗ್ಗೆ ಕೇಳುತ್ತಾಳೆ. ಯಾವ ವಿದ್ಯಾರ್ಥಿ, ಯಾವುದರ ಕುರಿತು ಕೇಳುತ್ತಿದ್ದಾಳೆಂಬುದನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಹಸೀನಾಳಿಗೆ ಗುರುಗಳು ಕೊಡುವ ಉತ್ತರವನ್ನು ಸೂಕ್ಷ್ಮವಾಗಿ ನೋಡಿದರೆ, ಮಕ್ಕಳಲ್ಲಿ ಹಿಂದೂ ಮುಸ್ಲಿಂ ಬೇಧವನ್ನು ಶಿಕ್ಷಕರೇ ಬೋಧಿಸಲು ಅವಕಾಶ ಮಾಡಿಕೊಟ್ಟಂತೆ ಕಾಣುತ್ತಿದೆ.

ಗುರುಗಳು ಹೀಗೆ ಹೇಳುತ್ತಾರೆ: “ಹಸೀನಾ, ಮಠ ಎಂಬುದು ಹಿಂದೂ ಧರ್ಮದಲ್ಲಿರುವ ಒಂದು ಸಾಮಾಜಿಕ ವ್ಯವಸ್ಥೆ. ಸಮಾಜದ ಮಂದಿಗೆ ಕಷ್ಟಕಾಲದಲ್ಲಿ ಒಂದು ಭರವಸೆ ಬೇಕಾಗುತ್ತದೆ. ತಮ್ಮ ಗೊಂದಲಗಳಿಗೆ ಪರಿಹಾರ ಕೊಡುವ ಒಬ್ಬರು ಹಿರಿಯ ವ್ಯಕ್ತಿ ಬೇಕಾಗುತ್ತಾರೆ. ಅಥವಾ ಕಷ್ಟಕಾರ್ಪಣ್ಯಗಳು ಏನೂ ಇಲ್ಲದಿದ್ದರೂ ಒಟ್ಟಾರೆಯಾಗಿ ಮಾನಸಿಕ ನೆಮ್ಮದಿಗಾಗಿ ಮನುಷ್ಯ ಒಂದಿಲ್ಲೊಂದು ವ್ಯವಸ್ಥೆಯನ್ನು ಹುಡುಕುತ್ತಲೇ ಇರುತ್ತಾನೆ ಅಲ್ಲವೇ? ಜನರಿಗೆ ಅಂಥದೊಂದು ಭದ್ರತೆ, ಭರವಸೆ ಮೂಡಿಸುವ ಕೆಲಸ ಮಾಡುವುದೇ ಮಠಗಳು. ಸಮಾಜದಲ್ಲಿರುವ ಮಠಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜಮುಖಿ ಕೆಲಸವನ್ನು ಮಾಡುತ್ತವೆ. ಅವು ಬಡಬಗ್ಗರಿಗೆ ಧನಸಹಾಯ ಮಾಡಬಹುದು, ವಿದ್ಯಾರ್ಥಿಗಳಿಗೆ ಊಟ ವಸತಿ ನೀಡಬಹುದು. ದಿಕ್ಕು ತೋಚದವರಿಗೆ ಮಾನಸಿಕ ನೆಮ್ಮದಿ ನೀಡುವ ಉಪದೇಶ ಮಾಡಬಹುದು, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಹುದು, ಧರ್ಮದೊಳಗಿನ ಅನೇಕ ತತ್ತ್ವಶಾಸ್ತ್ರದ ವಿಚಾರಗಳನ್ನು ಪಂಡಿತರ ಪ್ರಚನಗಳ ಮೂಲಕ ಜನರಿಗೆ ತಲುಪಿಸಬಹುದು. ಒಟ್ಟಾರೆಯಾಗಿ ಮಠವೆಂದರೆ ಸಮಾಜವೆಂಬ ಸಮುದ್ರದ ಕಿನಾರೆಯಲ್ಲಿ ನಿಂತ ದೀಪಸ್ತಂಭ” ಉತ್ತರಿಸಿದರು ಗುರುಗಳು.

ಪಾಠದ ಕೊನೆಯಲ್ಲಿ ಹೀಗೆ ಹೇಳಲಾಗುತ್ತದೆ:

“ಸಿದ್ಧಾರೂಢರ ಮಹಿಮೆ ಎಂಥದು! ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಕ್ರಿಯವಾಗಿದ್ದ ಮಠವಿದು. ಗಾಂಧೀಜಿ, ತಿಲಕರಂಥ ರಾಷ್ಟ್ರನಾಯಕರಿಗೆ ಸ್ಪೂರ್ತಿ ಕೊಟ್ಟ ಮಠವಿದು” ಎನ್ನುತ್ತ ಗುರುಗಳು ಮಠದ ಪ್ರಸಾದವನ್ನು ಕಣ್ಣಿಗೊತ್ತಿಕೊಂಡರು. “ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ…”, “ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ…” ಮುಂತಾದ ಜಯಘೋಷಗಳು ಜನಸ್ತೋಮದಿಂದ ಕೇಳಿಬರುತ್ತಿದ್ದವು…

ಧರ್ಮರಾಜಕಾರಣಕ್ಕೆ ಪಠ್ಯವನ್ನು ಬಳಸಿರುವುದನ್ನು ಇಲ್ಲಿ ಕಾಣಬಹುದು. ಕನ್ನಡ ಮಾತೆಯ ಕುರಿತ ಪಾಠವನ್ನು ಯಾಕೆ ತೆಗೆದಿದ್ದೀರಿ ಎಂದು ಯಾರಾದರೂ ಕೇಳಿದರೆ, “ಸಿದ್ಧಾರೂಢ ಮಠದ ವಿರೋಧಿಗಳು ನೀವು, ಹಿಂದೂ ವಿರೋಧಿಗಳು ನೀವು” ಎಂದು ವಿವಾದವನ್ನೂ ಸೃಷ್ಟಿಸಲು ಇಲ್ಲಿ ಅವಕಾಶವಿದೆ.

ಕೇಸರಿ ಭಾವುಟ v/s ಕನ್ನಡ ಭಾವುಟ

ಕನ್ನಡ ಬಾವುಟವನ್ನು ಹೊತ್ತ ತಾಯಿ ಭುವನೇಶ್ವರಿ ಚಿತ್ರವನ್ನು ಹಳೆಯ ಪಠ್ಯದಲ್ಲಿ ಕಾಣಹುದಿತ್ತು. ಆದರೆ ಹೊಸ ಪಠ್ಯದಲ್ಲಿ ತೇರಿನ ಮುಂದೆ ಕೇಸರಿ ಭಾವುಟಗಳು ಹಾರಾಡುತ್ತಿರುವ ಚಿತ್ರವನ್ನು ಕಾಣಬಹುದು. ‘ಕನ್ನಡ ಭಾವುಟ v/s ಕೇಸರಿ ಬಾವುಟ’ ಎಂಬ ವಾದವನ್ನು ಸಮಿತಿ ಮಂಡಿಸುತ್ತಿದೆಯೇ? ರೋಹಿತ್ ಚಕ್ರತೀರ್ಥ ಅವರು ಹಿಂದೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಬಾವುಟದ ಕುರಿತು ಅಶ್ಲೀಲವಾಗಿ ಬರೆದದ್ದು ಇಲ್ಲಿಯೂ ಅನಾವರಣವಾಗಿದೆಯೇ?

‘ಮೆರವಣಿಗೆ’ ಪಾಠ ಉಳಿಸಿಕೊಳ್ಳಬಹುದಿತ್ತು!

ಪಠ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವ ಸಮಿತಿಯು, ‘ಮೆರವಣಿಗೆ’ ಪಾಠವನ್ನು ಉಳಿಸಿಕೊಂಡು, ಬೇರೆ ಯಾವುದಾದರೂ ಪಠ್ಯದಲ್ಲಿ ‘ಸಿದ್ಧಾರೂಢರ ಜಾತ್ರೆ’ಯ ಪಾಠವನ್ನು ಇಡಬಹುದಿತ್ತು ಎಂಬುದು ಎಂಥವರಿಗೂ ಅರ್ಥವಾಗುವ ಸರಳ ಸಂಗತಿ. ಆದರೆ ಕನ್ನಡ ತಾಯಿಯ ಪಾಠವನ್ನು ಕಿತ್ತು ಹಾಕಿ, ಜಾತ್ರೆಯ ಪಾಠವನ್ನು ಇಟ್ಟುದ್ದು ಏತಕ್ಕೆ? ಭಾಷೆ v/s ಧರ್ಮ ಎಂಬ ಬೆಂಕಿ ಹಚ್ಚಲು ಸಮಿತಿ ಬಯಸಿದೆಯೇ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಈಗ ದೊಡ್ಡ ರಾಷ್ಟ್ರಪ್ರೇಮಿಗಳಂತೆ ಬಿಂಬಿಸಿಕೊಳ್ಳುತ್ತಿರುವ ಸಂಘಟನೆಗಳ ಕೂಗಾಟ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ಸಿದ್ಧಾರೂಢರ ಮಠದ ಕುರಿತು ವಿಶೇಷ ಪಾಠವನ್ನೇ ಬೇರೆಡೆ ಇಡಬಹುದಿತ್ತಲ್ಲ. ಗಾಂಧೀಜಿ ಹಾಗೂ ತಿಲಕರಿಗೆ ಸಿದ್ಧಾರೂಢ ಮಠ ಹೇಗೆ ಸ್ಫೂರ್ತಿಯಾಯಿತು ಎಂದೂ, ಉಳಿದ ನಕಲಿ ದೇಶಭಕ್ತ ಸಂಘಟನೆಗಳು ಕಲಿಯಬೇಕಾದದ್ದು ಏನೆಂಬುದನ್ನೂ ವಿಸ್ತೃತವಾಗಿ ಬೇರೊಂದು ಪಾಠವಾಗಿಯೇ ಮಕ್ಕಳಿಗೆ ಕಲಿಸಬಹುದಿತ್ತಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...