Homeದಲಿತ್ ಫೈಲ್ಸ್ತುಮಕೂರು: ಮುಚ್ಚಿ ಹೋಗುತ್ತಿದೆಯೇ ಮತ್ತೊಬ್ಬ ದಲಿತನ ಕೊಲೆ ಪ್ರಕರಣ?

ತುಮಕೂರು: ಮುಚ್ಚಿ ಹೋಗುತ್ತಿದೆಯೇ ಮತ್ತೊಬ್ಬ ದಲಿತನ ಕೊಲೆ ಪ್ರಕರಣ?

- Advertisement -
- Advertisement -

ತುಮಕೂರು ತಾಲ್ಲೂಕು ಕೋರಾ ಹೋಬಳಿ ಜಕ್ಕೇನಹಳ್ಳಿ ಗ್ರಾಮದಲ್ಲಿ ಏಪ್ರಿಲ್‌ 29ನೇ ತಾರೀಕಿನಿಂದ ಈ ಪ್ರಕರಣ ತೆರೆದುಕೊಳ್ಳುತ್ತದೆ. ಊರಿನ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಯ ಚಾನೆಲ್‌ನಲ್ಲಿ ಮಾದಿಗ ಸಮುದಾಯದ ಮುತ್ತುರಾಜ (26) ಎಂಬ ಯುವಕನ ಶವ ಪತ್ತೆಯಾಗುತ್ತದೆ. ಅಂದು ಮುತ್ತುರಾಜನ ತಂದೆ ಮುತ್ತುರಾಯಪ್ಪ (65) ನೀಡಿದ ದೂರು ದಾಖಲಾಗುತ್ತದೆ. ಆದರೆ ದೂರಿನಲ್ಲಿ ಏನು ಬರೆದಿದೆ ಎಂಬುದೇ ಗೊತ್ತಾಗದ, ಕೇವಲ ಸಹಿ ಮಾಡಲು ಬರುವ ಮುತ್ತುರಾಯಪ್ಪ ಮತ್ತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಮೆಟ್ಟಿಲೇರುತ್ತಾರೆ.

ಶವವಾಗಿ ಪತ್ತೆಯಾದ ಮುತ್ತುರಾಜನನ್ನು ಸವರ್ಣೀಯ ಜಾತಿಯವರು ಕೊಂದಿದ್ದಾರೆ ಎಂಬುದು ಮುತ್ತುರಾಯಪ್ಪನವರ ಕುಟುಂಬದ ಆರೋಪ. ಜಕ್ಕೇನಹಳ್ಳಿಯ ಜಿಲ್ಲಾ ಪೊಲೀಸ್ ಕಚೇರಿಗೆ ಜೂನ್‌ 7ರಂದು ತೆರಳಿದ ಮುತ್ತುರಾಯಪ್ಪ ಹೀಗೆ ದೂರು ನೀಡುತ್ತಾರೆ:

“ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿಗಳು ನಾನು ನೀಡಿದ್ದ ಕೈ ಬರವಣಿಗೆಯ ದೂರನ್ನು ಮರೆಮಾಚಿ ಪೊಲೀಸ್‌ನವರೇ ಒಂದು ದೂರನ್ನು ಸೃಷ್ಟಿ ಮಾಡಿಕೊಂಡು ಅನಕ್ಷರಸ್ಥನಾದ ನನ್ನ ಸಹಿಯನ್ನು ಪಡೆದುಕೊಂಡು ನನಗೆ ಅನ್ಯಾಯ ಮಾಡಿದ್ದಾರೆ. ಇದರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಜಕ್ಕೇನಹಳ್ಳಿ  ಗ್ರಾಮದ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಚಾನಲ್‌ನಲ್ಲಿ ನನ್ನ ಮಗನಾದ ಮುತ್ತುರಾಜನ ಮೃತದೇಹವು ತೇಲುತ್ತಿತ್ತು. ಸಾರ್ವಜನಿಕರು ಗಮನಿಸಿ ವಿಚಾರ ತಿಳಿಸಿದರು. ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಬಂದರು. ಪೊಲೀಸ್‌ನವರ ಸಮಕ್ಷಮ ಮೃತ ದೇಹವನ್ನು ಹೊರತೆಗೆದು ತುಮಕೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಮೃತದೇಹವನ್ನು ನಮ್ಮ ವಶಕ್ಕೆ ಕೇಳಿದಾಗ ಪೊಲೀಸರ ಕಂಪ್ಲೇಟ್ ಅಗತ್ಯವೆಂದರು. ಆ ದಿನ ನಾನು ತುಂಬ ದುಃಖಿತನಾಗಿದ್ದೆ. ಏನನ್ನೂ ಸರಿಯಾಗಿ ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ನಾನು ನನಗೆ ಗೊತ್ತಿರುವ ಒಬ್ಬರಿಂದ ಒಂದು ದೂರನ್ನು ಕೈಯಲ್ಲಿ ಬರೆಯಿಸಿ ಆ ದೂರಿಗೆ ನಾನು ಸಹಿ ಮಾಡಿರುತ್ತೇನೆ. ನಾನು ಸಹಿ ಮಾಡುವುದನ್ನು ಮಾತ್ರ ಕಲಿತಿರುತ್ತೇನೆ. ಓದಲು, ಬರೆಯಲು ಬರುವುದಿಲ್ಲ. ಆದರೆ ಪೊಲೀಸ್‌ನವರು ನಾನು ನೀಡಿದ್ದ ದೂರನ್ನು ಮರೆಮಾಚಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನಾಸ್ಪದ ವ್ಯಕ್ತಿಗಳನ್ನು ಕಾಪಾಡುವ ಸಲುವಾಗಿ ಅಮಾಯಕನಾದ ನನಗೆ ಮೋಸ ಮಾಡಿರುತ್ತಾರೆ” ಎಂದು ಮುತ್ತುರಾಯಪ್ಪ ಆರೋಪಿಸುತ್ತಾರೆ.

ಇದನ್ನೂ ಓದಿರಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ಕುಟುಂಬ ಏನು ಹೇಳುತ್ತದೆ? ಆರೋಪಿಗಳು ಯಾರು?

ಮಹಾಲಕ್ಷ್ಮಮ್ಮ- ಮುತ್ತುರಾಯಪ್ಪ ಜಕ್ಕೇನಹಳ್ಳಿ ಗ್ರಾಮದ ದಂಪತಿ. ಇವರಿಗೆ ಮೂರು ಜನ ಹೆಣ್ಣು ಮಕ್ಕಳು. ಒಬ್ಬ ಗಂಡು ಮಗ. ಮೂವರು ಹೆಣ್ಣುಮಕ್ಕಳಲ್ಲಿ ನಡುಮಧ್ಯೆಯವರಾದ ಮುತ್ತಮ್ಮ ಅವರು ಜಕ್ಕೇನಹಳ್ಳಿಯ ಗ್ರಾಮದ ಒಕ್ಕಲಿಗ ಜಾತಿಯ ನಾಗರಾಜ್‌ (ಕೆಎಸ್‌ಆರ್‌ಟಿಸಿ ಡ್ರೈವರ್‌) ಎಂಬವರನ್ನು ಸುಮಾರು ಆರೇಳು ವರ್ಷಗಳ ಹಿಂದೆ ಮದುವೆಯಾಗುತ್ತಾರೆ. ನಾಗರಾಜ್‌- ಮುತ್ತಮ್ಮ ಕುಟುಂಬ ತುಮಕೂರಿನಲ್ಲೇ ವಾಸವಿತ್ತು.

ನಾಗರಾಜ್‌ ಅವರ ಬಾಮೈದ ಬಸವರಾಜನು ಮುತ್ತುರಾಜನ ಜೊತೆ ಆಗಾಗ್ಗೆ ಜಗಳವಾಡುತ್ತಿದ್ದನು. “ನಿಮ್ಮಕ್ಕ ನಮ್ಮ ಭಾವನನ್ನು ಮದುವೆಯಾದ ಕಾರಣ ನನಗೆ ಯಾರೂ ಹೆಣ್ಣು ಕೊಡುತ್ತಿಲ್ಲ” ಎಂದು ತಕರಾರು ತೆಗೆಯುತ್ತಿದ್ದನು. ಮುತ್ತರಾಜ ತನ್ನ ಅಕ್ಕನಲ್ಲಿ ಹೋಗಿ, “ಆಗಿದ್ದು ಆಗಿಹೋಯಿತು. ನಾನು ನಿನ್ನನ್ನು ಸಾಕಿಕೊಳ್ಳುತ್ತೇನೆ. ನಮ್ಮ ಮನೆಗೆ ಬಂದು ಬಿಡು” ಎಂದು ಕೇಳಿಕೊಂಡಿದ್ದ. ಅವರು ಬಂದಿರಲಿಲ್ಲ.

ಕೊಲೆಯಾಗುವ ಸಮಯದಲ್ಲಿ ಜಕ್ಕೇನಹಳ್ಳಿಯಲ್ಲಿ ಜಾತ್ರೆ ಇತ್ತು. ಅದಕ್ಕೂ ಐದಾರು ದಿನಗಳ ಮುಂಚೆ ಬಸವರಾಜನು ಮುತ್ತುರಾಜನೊಂದಿಗೆ ಚೆನ್ನಾಗಿ ಹೊಂದಾಣಿಕೆಯಿಂದ ಇದ್ದನು. ಏಪ್ರಿಲ್‌ 28ರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಮನೆಯ ಬಳಿ ಬಂದ ಬಸವರಾಜ, ಮುತ್ತುರಾಜರನ್ನು ಕರೆದುಕೊಂಡು ಹೋಗುತ್ತಾನೆ. ಮುತ್ತುರಾಜ ಟವೆಲ್‌ ಧರಿಸಿದ್ದರು. ಸಂಜೆ ವೇಳೆಗೆ ಮತ್ತೆ ಒಬ್ಬನೇ ಮರಳಿದ ಬಸವರಾಜನು ಮುತ್ತುರಾಜನ ಟವೆಲ್ ವಾಪಸ್‌ ತಂದಿರುತ್ತಾನೆ. “ಟವಲ್‌ ಮಾತ್ರ ತಂದಿದ್ದೀಯ. ನಮ್ಮ ಹುಡುಗ ಎಲ್ಲೋ” ಎಂದು ಮಹಾಲಕ್ಷ್ಮಮ್ಮ  ಕೇಳುತ್ತಾರೆ. ಆದರೆ ಆತ, “ನನಗೆ ಮಾಹಿತಿ ಇಲ್ಲ” ಎಂದು ಹೇಳುತ್ತಾನೆ.

ಮುತ್ತುರಾಯಪ್ಪನವರ ಹೆಂಡತಿ ಮಹಾಲಕ್ಷ್ಮಮ್ಮ ತುಮಕೂರಿನ ನರಸಿಂಹಯ್ಯ ಆಸ್ಪತ್ರೆಯಲ್ಲಿ ಸ್ಲೀಪರ್‌ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿಗೆಂದು ಅಂದು ಸಂಜೆ ಹೋಗಿರುತ್ತಾರೆ. ಬೆಳಿಗ್ಗೆ ವಾಪಸ್‌ ಮನೆಗೆ ಮರಳಿದಾಗ ಅವರಿಗೆ ಕೆಟ್ಟ ಸುದ್ದಿ ಕಾದಿರುತ್ತದೆ.

ಪೊಲೀಸರು ಬಂದು ಹೆಣವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಣವನ್ನು ಕುಟುಂಬಕ್ಕೆ ಹಸ್ತಾಂತರಿಸುತ್ತಾರೆ. ರಾತ್ರಿ ಅಂತ್ಯಸಂಸ್ಕಾರ ನಡೆಯುತ್ತದೆ. ಅಂದು ಹತ್ತು ಗಂಟೆಯ ಸಮಯದಲ್ಲಿ ನಾಗರಾಜ್‌ (ಮುತ್ತಮ್ಮನ ಗಂಡ) ಕುಡಿದ ಮತ್ತಲ್ಲಿ- “ನಾವೇ ಕೊಲೆ ಮಾಡಿದ್ದೀವಿ” ಎಂದು ಹೇಳಿದ್ದರು ಎಂದು ಕುಟುಂಬ ಆರೋಪಿಸುತ್ತದೆ.

ಎಸ್‌ಪಿಗೆ ದೂರು

ನ್ಯಾಚುರಲ್‌ ಡೆತ್‌ ಎಂದು ಹೇಳಲಾಗುತ್ತಿತ್ತು. ಆದರೆ ಕುಟುಂಬ ಇದನ್ನು ಒಪ್ಪಲಿಲ್ಲ. ವಿಷಯ ಅರಿತ ದಲಿತ ಸಂಘರ್ಷ ಸಮಿತಿ ಮುಖಂಡರು ಪ್ರಕರಣವನ್ನು ಮುಚ್ಚಿ ಹಾಕಲು ಬಿಡಲಿಲ್ಲ. ಮೇ 7ರಂದು ಎಸ್‌ಪಿಗೆ ವಿಷಯ ತಿಳಿಸಿದರು. ಬಳಿಕ ಮೇ 18ರಂದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮರು ದೂರು ನೀಡಿದ ಬಳಿಕ ಪ್ರಕರಣದ ದಾಖಲಾಗುತ್ತದೆ.

ಇದನ್ನೂ ಓದಿರಿ: ಪೆದ್ದನಹಳ್ಳಿ ಪ್ರಕರಣ: ಇಬ್ಬರು ದಲಿತ ಯುವಕರ ಹತ್ಯೆಯ ಸುತ್ತ ಎಷ್ಟೊಂದು ಸಂಕಟ!

“ನನ್ನ ಮಗನಿಗೆ ಈಜಲು ಬರುತ್ತಿತ್ತು. ಒಕ್ಕಲಿಗ ಜನಾಂಗಕ್ಕೆ ಸೇರಿದ ಬಸವರಾಜು ಮತ್ತು ಆತನ ಸ್ನೇಹಿತರು ಸೇರಿ ನನ್ನ ಮಗನಾದ ಮುತ್ತುರಾಜನನ್ನು ಕೊಲೆ ಮಾಡಿ ನಾಲೆಗೆ ಹಾಕಿರುತ್ತಾರೆ” ಎಂದು ಮುತ್ತುರಾಯಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಐಪಿಸಿ ಹಾಗೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟ ಡಿವೈಎಸ್‌ಪಿಯವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. ಮಾಹಿತಿ ನೀಡಲು ನಿರಾಕರಿಸಿದ ಅವರು, ಎಸ್‌ಪಿಯವರನ್ನು ಸಂಪರ್ಕಿಸಿ ಎಂದು ಪ್ರತಿಕ್ರಿಯಿಸಿದರು.

“ಇಷ್ಟೆಲ್ಲ ಆದ ಮೇಲೆ, ಪ್ರಕರಣ ಏನಾಯಿತೆಂಬ ಮಾಹಿತಿ ದೊರಕುತ್ತಿಲ್ಲ. ಅವರಿವರಲ್ಲಿಗೆ ಓಡಾಡಲು ನಮ್ಮ ಬಳಿ ದುಡ್ಡು-ಕಾಸು ಇಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ. ತಪ್ಪಿತಸ್ಥರ ಬಂಧನವಾಗಿದೆಯೋ ಇಲ್ಲವೋ ಗೊತ್ತಿಲ್ಲ” ಎಂದು ಕುಟುಂಬ ಸದಸ್ಯರು ದುಃಖಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....