ದನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮುಸ್ಲಿಂ ಎಂಬ ಕಾರಣಕ್ಕೆ ಹೊಡೆದು ಕೊಂದಿದ್ದು ಮತ್ತು ಕಾಶ್ಮೀರ ಪಂಡಿತರ ನರಮೇಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ, ಇವೆರೆಡೂ ಒಂದೇ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರು ಪ್ರತಿಪಾದಿಸಿದ್ದಾರೆ.
ಅವರು ತನ್ನ ಮುಂಬರುವ ‘ವಿರಾಟ ಪರ್ವಂ’ ಚಿತ್ರದ ಬಗ್ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡುತ್ತಾ, ಮುಸ್ಲಿಂ ಎಂಬ ಕಾರಣಕ್ಕೆ ನಡೆದ ಗುಂಪು ಹತ್ಯೆಯ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಯಿ ಪಲ್ಲವಿ ಅವರು ರಾಣಾ ದಗ್ಗುಬಾಟಿ ಅವರೊಂದಿಗೆ ತೆರೆ ಹಂಚಿಕೊಂಡಿರುವ ‘ವಿರಾಟ ಪರ್ವಂ’ ಚಿತ್ರವು ಜೂನ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮುಂಬರುವ ಚಿತ್ರದ ಬಗ್ಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಸಾಯಿ ಪಲ್ಲವಿ ಅವರಿಗೆ ರಾಜಕೀಯ ಒಲವಿನ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸುತ್ತಾ ಅವರು, “ತಾನು ಸೈದ್ಧಾಂತಿಕವಾಗಿ ತಟಸ್ಥೆಯಾಗಿದ್ದು, ನಾನು ಬೆಳೆದ ವಾತಾವರಣ ಅದೇ ರೀತಿ ಇತ್ತು” ಎಂದು ಹೇಳಿದ್ದಾರೆ. ಎಡಪಂಥೀಯ ಅಥವಾ ಬಪಂಥೀಯರಲ್ಲಿ, ಯಾರು ಸರಿ ಯಾರು ತಪ್ಪು ಎಂದು ಹೇಳಲಾರೆ, ನಾವು ಒಳ್ಳೆಯವರಾಗಬೇಕು ಎಂದು ಅವರು ಹೇಳಿದ್ದಾರೆ.
“For me violence is wrong form of communication. Mine is a neutral family where they only taught to be a good human being. The oppress, however, should be protected. I don’t know who’s right & who’s wrong. If you are a good human being, you don’t feel one is right.”
– #SaiPallavi pic.twitter.com/o6eOuKvd2G— Hate Detector 🔍 (@HateDetectors) June 14, 2022
“ನಾನು ತಟಸ್ಥ ವಾತಾವರಣದಲ್ಲಿ ಬೆಳೆದಿದ್ದೇನೆ. ನಾನು ಎಡಪಂಥೀಯ ಮತ್ತು ಬಲಪಂಥೀಯರ ಬಗ್ಗೆ ಕೇಳಿದ್ದೇನೆ. ಆದರೆ, ಯಾರು ಸರಿ, ಯಾರು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ದಿ ಕಾಶ್ಮೀರಿ ಫೈಲ್ಸ್ ಚಿತ್ರವನ್ನೇ ನೋಡಿ, ಪಂಡಿತರನ್ನು ಹೇಗೆ ಕೊಂದರು ಎನ್ನುವುದನ್ನು ಅದು ತೋರಿಸುತ್ತದೆ. ಇತ್ತೀಚೆಗೆ ಕೊರೊನಾ ಸಮಯದಲ್ಲಿ ದನ ಸಾಗಿಸುತ್ತಿದ್ದರು. ಅದರ ಡ್ರೈವರ್ ಮುಸ್ಲಿಂ ಆಗಿದ್ದರು ಎಂಬ ಕಾರಣಕ್ಕೆ ಕೊಂದ ಘಟನೆ ನಡೆದಿತ್ತು. ಆ ವ್ಯಕ್ತಿಯನ್ನು ಕೊಂದ ಬಳಿಕ ದಾಳಿಕೋರರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಕಾಶ್ಮೀರದಲ್ಲಿ ನಡೆದದ್ದಕ್ಕೂ ಇತ್ತೀಚೆಗೆ ನಡೆದದ್ದಕ್ಕೂ ವ್ಯತ್ಯಾಸವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀಟ್ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಉಂಟಾಗುವ ಮಾನಸಿಕ ನೋವು ನನಗೆ ತಿಳಿದಿದೆ – ನಟಿ ಸಾಯಿ ಪಲ್ಲವಿ
“ತನ್ನ ಕುಟುಂಬವು ತನಗೆ ಒಳ್ಳೆಯ ವ್ಯಕ್ತಿಯಾಗಲು ಕಲಿಸಿದೆ. ನಾವು ತುಳಿತಕ್ಕೊಳಗಾದವರನ್ನು ರಕ್ಷಿಸಬೇಕು. ಅವರ ನಿಲುವು ಮುಖ್ಯವಲ್ಲ, ನೀವು ಒಳ್ಳೆಯ ಮನುಷ್ಯನಾಗಿದ್ದರೆ ಸಾಕು” ಎಂದು ಸಾಯಿ ಪಲ್ಲವಿ ಅವರು ಹೇಳಿದ್ದಾರೆ.
In Kashmir files They showed how Kashmir pandits were killed but during lockdown we saw how Muslims were lynched and people who killed them shouting jai shri ram . Sai pallavi pic.twitter.com/UVuo0kh1hC
— Muzaffar (@El_Mozaffer) June 14, 2022
ಸಾಯಿ ಪಲ್ಲವಿ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಕಾಶ್ಮೀರ ಪಂಡಿತರ ಹತ್ಯೆ ಮತ್ತು ಗೋವು ಕಾರಣಕ್ಕೆ ಮುಸ್ಲಿಮರ ಮೇಲೆ ನಡೆಯುತ್ತಿರುವ ಗುಂಪುಹತ್ಯೆಯನ್ನು ಒಂದೇ ಎಂದು ಹೇಳಿದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಅವರ ಮೇಲೆ ದಾಳಿಯನ್ನೂ ಮಾಡುತ್ತಿದ್ದಾರೆ. ಜೊತೆಗೆ ಅವರು ‘ದನಕಳ್ಳಸಾಗಾಣಿಕೆ’ ಮಾಡುವವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರ ಹೇಳಿಕೆಯನ್ನು ತಿರುಚಿ ಅವರ ಮೇಲೆ ದಾಳಿ ಮಾಡಲಾಗುತ್ತಿದೆ.
ಇಂಗ್ಲಿಷ್ ಸುದ್ದಿ ವಾಹಿನಿ ಇಂಡಿಯಾ ಟುಡೇ ಕೂಡಾ, ಅವರ ಹೇಳಿಕೆಯನ್ನು ತಿರುಚಿ, “ಕಾಶ್ಮೀರ ಹತ್ಯಾಕಾಂಡ ಮತ್ತು ‘ದನ ಕಳ್ಳ ಸಾಗಾಣಿಕೆ’ ಮಾಡಿದ್ದಕ್ಕೆ ಮಾಡಿದ ಹತ್ಯೆ, ಈ ಎರಡೂ ಅಪರಾಧಗಳು ಒಂದೇ ಎಂದು ನಟಿ ಸಾಯಿ ಪಲ್ಲವಿ ಹೇಳಿದ್ದಾರೆ” ಎಂಬ ಹೆಡ್‌ಲೈನ್‌ನಲ್ಲಿ ಸುದ್ದಿ ಮಾಡಿದೆ.

ವಾಸ್ತವದಲ್ಲಿ ಸಾಯಿ ಪಲ್ಲವಿ ಅವರು ‘ದನ ಸಾಗಾಣಿಕೆ’ ಎಂಬ ಪದವನ್ನಷ್ಟೆ ಬಳಸಿದ್ದಾರೆ. ‘ದನ ಕಳ್ಳಸಾಗಾಣಿಕೆ’ ಎಂದು ಅವರು ಹೇಳಿಯೆ ಇಲ್ಲ. ಆದರೆ ಬಲಪಂಥೀಯರು ಅವರ ಹೇಳಿಕೆಯನ್ನು ತಿರುಚಿ ಮುಸ್ಲಿಮರ ಮೇಲೆ ನಡೆಯುತ್ತಿರುವ ‘ಗುಂಪು ಹತ್ಯೆಯನ್ನು’ ಸಮರ್ಥಿಸಿಕೊಳ್ಳುತ್ತಿದ್ದಾರೆ.



Correct comment.
Daring Lady. We all appreciate you Sayi.
ಸತ್ಯ ಮೇವ ಜಾಯತೆ