ಪ್ರಧಾನಿ ನರೇಂದ್ರ ಮೋದಿ ಬಾಲ್ಯದ ಸಮಯದಲ್ಲಿ ‘ಭಾರಿ ಧೈರ್ಯವಂತರಾಗಿದ್ದರು’ ಎಂದು ನಿರೂಪಿಸಲು ತಮಿಳುನಾಡಿನ ಖಾಸಗಿ ಶಾಲೆಯೊಂದು ಅವರ ‘ಮೊಸಳೆ ಕತೆ’ಯನ್ನು ತನ್ನ ಪಠ್ಯಪುಸ್ತಕದಲ್ಲಿ ಸೇರಿಸಿಕೊಂಡಿದೆ ಎಂದು ‘ಈಟಿವಿ ಭಾರತ್’ ವರದಿ ಮಾಡಿದೆ. ಪ್ರಧಾನಿಯ ‘ಮೊಸಳೆ ಕತೆ’ಯು 1ನೇ ತರಗತಿಯ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿದ್ದು, ಅದರ ಚಿತ್ರವೂ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
2019 ರಲ್ಲಿ ಡಿಸ್ಕವರಿ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮ ‘ಮ್ಯಾನ್ ವರ್ಸಸ್ ವೈಲ್ಡ್’ ನಲ್ಲಿ ಪ್ರಧಾನಿ ಕಾಣಿಸಿಕೊಂಡಿದ್ದರು. ಈ ವೇಳೆ ಕಾರ್ಯಕ್ರಮ ನಡೆಸಿಕೊಡುವ ಬೇರ್ ಗ್ರಿಲ್ಸ್ ಜೊತೆಗೆ ಮಾತನಾಡುತ್ತಾ, ತಾನು ಚಿಕ್ಕ ಹುಡುಗನಾಗಿದ್ದಾಗ ಮೊಸಳೆ ಮರಿಯೊಂದನ್ನು ಮನೆಗೆ ತಂದಿದ್ದಾಗಿ ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆ ಮರಿಯೊಂದನ್ನು ನೋಡಿ ಅದನ್ನು ಮನೆಗೆ ತಂದಿದ್ದೆ. ಆದರೆ ತಾಯಿ, “ಪಾಪ, ಅದನ್ನು ಮತ್ತೆ ಕೆರೆಗೆ ಹಾಕಬೇಕು” ಎಂದು ತನಗೆ ಬೈದಿದ್ದರು ಎಂದು ಪ್ರಧಾನಿ ಮೋದಿ ಅವರು ಬೇರ್ ಗ್ರಿಲ್ಸ್‌ಗೆ ಹೇಳಿದ್ದರು.
ಇದನ್ನೂ ಓದಿ: ‘ಮುಗ್ಧ ಜನರ ರಕ್ತವನ್ನು ಮೊಸಳೆ ಕಣ್ಣೀರಿನಿಂದ ಅಳಿಸಲಾಗುವುದಿಲ್ಲ’ – #CrocodileTears ಟ್ರೆಂಡ್!
ಪ್ರಧಾನಿ ಮೋದಿ ಅವರು ಹೇಳಿರುವ ಈ ಘಟನೆಯನ್ನು ತಮಿಳುನಾಡಿನ ಶಾಲೆಯು ಪಠ್ಯವನ್ನಾಗಿಸಿದೆ. ‘ಬಾರ್‍ರಿ ಓಬ್ರಿಯನ್’ ಮತ್ತು ‘ಫೈರ್‌ಫ್ಲೈ ಪ್ರಕಾಶನ’ಗಳ ‘ಮೌಲ್ಯ ಶಿಕ್ಷಣ’ದ 1 ನೇ ತರಗತಿಯ ಪುಸ್ತಕವು ಮೊಸಳೆಯ ಕತೆಯ ಭಾಗವನ್ನು ಅಳವಡಿಸಿ, ಪ್ರಧಾನಿ ಮೋದಿ ತನ್ನ ಬಾಲ್ಯದಲ್ಲಿ ಭಾರಿ ‘ಧೈರ್ಯ’ವಂತಾಗಿದ್ದರು ಎಂಬ ಬಗ್ಗೆ ಹೇಳಿದೆ.
ಶಾಲೆಯ ಪಠ್ಯಪುಸ್ತಕದಲ್ಲಿ,“ನರೇಂದ್ರ ದಾಮೋದರದಾಸ್ ಮೋದಿ ಅವರು ಭಾರತದ 14 ನೇ ಮತ್ತು ಈಗಿನ ಪ್ರಧಾನಿಯಾಗಿದ್ದಾರೆ. ಅವರು ತಮ್ಮ ಬಾಲ್ಯದಲ್ಲಿ ಎಷ್ಟು ಧೈರ್ಯಶಾಲಿಯಾಗಿದ್ದರು ಎಂದರೆ, ಒಮ್ಮೆ ಅವರು ಮೊಸಳೆಯನ್ನು ಹಿಡಿದು ಮನೆಗೆ ತಂದರು” ಎಂದು ಘಟನೆಯನ್ನು ಉಲ್ಲೇಖಿಸಿ ಬರೆಯಲಾಗಿದೆ. ಇಷ್ಟೆ ಅಲ್ಲದೆ, ಪುಸ್ತಕವು ‘ಮಾನಿಟರ್’ ಪದದ ಬಳಕೆಯನ್ನು ಕಲಿಸುತ್ತಾ, “ಪ್ರಧಾನಿ ಇಡೀ ದೇಶದ ‘ಮಾನಿಟರ್’ ಇದ್ದಂತೆ” ಎಂದು ಬರೆಯಲಾಗಿದೆ.

ಪ್ರಧಾನಿ ಮೋದಿಯ ಬಾಲ್ಯದ ಘಟನೆಗಳ ಕತೆಗಳನ್ನು ಹೇಳುವ ಹಲವು ಪುಸ್ತಕಗಳು ಈಗಾಗಲೇ ಪ್ರಕಟಗೊಂಡಿದೆ. ರಾನಡೆ ಪ್ರಕಾಶನ ಮತ್ತು ಬ್ಲೂ ಸ್ನೇಲ್ ಅನಿಮೇಷನ್‌ನ ‘ಬಾಲ್ ನರೇಂದ್ರ – ಚೈಲ್ಡ್‌ಹುಡ್ ಸ್ಟೋರೀಸ್ ಆಫ್ ನರೇಂದ್ರ ಮೋದಿ’ ಎಂಬ ಕಾಮಿಕ್ ಪುಸ್ತಕವು ಪ್ರಧಾನಿ ಮೋದಿ ಭಾರಿ ‘ಧೈರ್ಯವಂತ’ ಆಗಿದ್ದರು ಎಂಬುವುದನ್ನು ವಿವರಿಸುವ ಹಲವು ಕಥೆಗಳನ್ನು ಹೇಳುತ್ತದೆ.
ಇದನ್ನೂ ಓದಿ: ಅಗ್ನಿಪಥ ಯೋಜನೆ: ’ಮೋದಿ ಹಿಟ್ಲರ್ ಮಾರ್ಗವನ್ನು ಅನುಸರಿಸಿದರೆ ಹಿಟ್ಲರ್‌ನಂತೆ ಸಾಯುತ್ತಾರೆ’- ಕಾಂಗ್ರೆಸ್ ನಾಯಕ
ಇದೇ ಸರಣಿಯ ಒಂದು ಕಥೆಯು, “ಗುಜರಾತ್‌ನ ಮೊಸಳೆಗಳಿಂದ ತುಂಬಿರುವ ಸರೋವರದಲ್ಲಿ ಈಜುತ್ತಿದ್ದಾಗ ಮೊಸಳೆಯೊಂದು ಮೋದಿಯ ಮೇಲೆ ದಾಳಿ ಮಾಡಿತು. ಆಗ ಅವರು 8 ನೇ ತರಗತಿಯಲ್ಲಿದ್ದರು. ಈ ದಾಳಿಯಿಂದಾಗಿ ಅವರ ಕಾಲಿಗೆ ಒಂಬತ್ತು ಹೊಲಿಗೆಗಳನ್ನು ಹಾಕಲಾಗಿತ್ತು” ಎಂದು ಉಲ್ಲೇಖಿಸುತ್ತದೆ.



😂😂😂😂😂😂😂😂😂😂😂 ನನಗೆ ಯಾರಾದ್ರೂ ದಯವಿಟ್ಟು ಹೇಳುವಿರಾ ದೇಶದ ಯಾವ ಕೆರೆಯಲ್ಲಿ ಮೊಸಳೆಗಳು ಇರುತ್ತವೆ ಅಥವಾ ಇದ್ದವು ಅಂತ 🤦♂️🤦♂️🤦♂️ ಕರ್ಮ ಕರ್ಮ. ಇತ್ತೀಚಿನ ದಿನಗಳಲ್ಲಿ ಹಳ್ಳಿಯ ಕೆರೆಗಳಲ್ಲಿ ಮೀನು ಸಾಕಾಣಿಕೆ ನೋಡತಿದೀವಿ,ಇದೆ 20.,30 ವರ್ಷದ ಹಿಂದಿನ ದಿನಗಳಲ್ಲಿ ಕೆರೆಗಳಲ್ಲಿ ಬರಿ ದನಕರುಗಳಿಗೆ, ಮನುಷ್ಯನಿಗೆ ಸ್ನಾನ, ಬಟ್ಟೆ ತೊಳಿಯೋಕೆ ಅಷ್ಟೇ ಸೀಮಿತ ಕೆಲವು ಕಡೆ ಕುಡಿಯೋಕು ಉಪಯೋಗಿಸುತ್ತಿದ್ದು ಉದಾಹರಣೆ ಇದೆ… ಆದ್ರೆ ಇಲ್ಲಿ ಕೆರೆಯಲ್ಲಿ ಮೊಸಳೆ ಇತ್ತು ಅಂದ್ರೆ ಈ ಅಪ್ರತಿಮ ಎದೆಗಾರಿಕೆ ಮೆಚ್ಚುಲೇಬೇಕು ಅಲ್ವಾ ಸುಳ್ಳು (ಅ)ಸೂರರೇ 🤣🤣🤣🤣ದಯವಿಟ್ಟು ಕ್ಷಮಿಸಿ ನಂಗೆ ಬೇರೆ ಜಾಗದಿಂದ ನಗಬೇಕು ಅನಸ್ತಿದೆ 🙏🙏🙏
Ayyo…e sullu Mori maatu nambide