Homeಮುಖಪುಟಅಗ್ನಿಪಥ ಯೋಜನೆ: ’ಮೋದಿ ಹಿಟ್ಲರ್‌ ಮಾರ್ಗವನ್ನು ಅನುಸರಿಸಿದರೆ ಹಿಟ್ಲರ್‌ನಂತೆ ಸಾಯುತ್ತಾರೆ’- ಕಾಂಗ್ರೆಸ್ ನಾಯಕ

ಅಗ್ನಿಪಥ ಯೋಜನೆ: ’ಮೋದಿ ಹಿಟ್ಲರ್‌ ಮಾರ್ಗವನ್ನು ಅನುಸರಿಸಿದರೆ ಹಿಟ್ಲರ್‌ನಂತೆ ಸಾಯುತ್ತಾರೆ’- ಕಾಂಗ್ರೆಸ್ ನಾಯಕ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಅಡೋಲ್ಫ್ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಅವರು ಜರ್ಮನ್ ಸರ್ವಾಧಿಕಾರಿ ಹಿಟ್ಲರ್‌ ಮಾರ್ಗವನ್ನು ಅನುಸರಿಸಿದರೆ “ಹಿಟ್ಲರ್‌ನಂತೆ ಸಾಯುತ್ತಾರೆ” ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುಬೋಧ್ ಕಾಂತ್ ಸಹಾಯ್ ವಿವಾದಿತ ಹೇಳಿಕೆ ಹೇಳಿದ್ದಾರೆ.

ಒಕ್ಕೂಟ ಸರ್ಕಾರ ಘೋಷಿಸಿರುವ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪಕ್ಷದ ಸತ್ಯಾಗ್ರಹ ಪ್ರತಿಭಟನೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಿಂದ ದೂರ ಉಳಿದಿರುವ ಕಾಂಗ್ರೆಸ್, ಪ್ರಧಾನಿ ವಿರುದ್ಧ ಯಾವುದೇ ಅಸಭ್ಯ ಟೀಕೆಗಳನ್ನು ಒಪ್ಪುವುದಿಲ್ಲ ಎಂದು ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದನ್ನೂ ಓದಿ:  ’ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ’: ಬಿಜೆಪಿ ನಾಯಕ ವಿಜಯವರ್ಗಿಯ ವಿವಾದಿತ ಹೇಳಿಕೆಗೆ ಖಂಡನೆ

 

‘ಸತ್ಯಾಗ್ರಹ’ದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸುಬೋಧ್ ಕಾಂತ್ ಸಹಾಯ್, ಬಿಜೆಪಿ ಆಡಳಿತವನ್ನು “ಲೂಟಿಕೋರರ” ಸರ್ಕಾರ ಎಂದು ಕರೆದಿದ್ದಾರೆ.’ ಇದು ಲೂಟಿಕೋರರ ಸರ್ಕಾರವಾಗಿದ್ದು, ಮೋದಿ ರಿಂಗ್ ಮಾಸ್ಟರ್ ನಂತೆ ವರ್ತಿಸುತ್ತಿದ್ದು, ಸರ್ವಾಧಿಕಾರಿಯ ಪಾತ್ರವನ್ನು ವಹಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

“ಪ್ರಧಾನಿ ಹಿಟ್ಲರ್‌ನನ್ನೂ ಮೀರಿಸಿದ್ದಾರೆ ಅನ್ನಿಸುತ್ತಿದೆ ಹಿಟ್ಲರ್ ಸೇನೆಯೊಳಗೇ ‘ಖಾಕಿ’ ಎಂಬ ಸಂಘಟನೆಯನ್ನೂ ಹುಟ್ಟು ಹಾಕಿದ್ದ. ಮೋದಿ ಹಿಟ್ಲರ್‌ ಹಾದಿ ಹಿಡಿದರೆ ಹಿಟ್ಲರ್‌ನಂತೆ ಸಾಯುತ್ತಾರೆ, ಇದನ್ನು ನೆನಪಿಟ್ಟುಕೊಳ್ಳಿ’ ಎಂದಿದ್ದಾರೆ.

ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, “ಮೋದಿ ಸರ್ಕಾರದ ಸರ್ವಾಧಿಕಾರಿ ಮನಸ್ಥಿತಿ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಹೋರಾಡಲಿದೆ. ಆದರೆ ಕಾಂಗ್ರೆಸ್ ಪ್ರಧಾನಿ ವಿರುದ್ಧ ಯಾವುದೇ ಅಸಭ್ಯ ಟೀಕೆಗಳನ್ನು ಒಪ್ಪುವುದಿಲ್ಲ. ಗಾಂಧಿಯವರ ತತ್ವಗಳ ಪ್ರಕಾರ ಪಕ್ಷದ ಹೋರಾಟ ಮುಂದುವರಿಯುತ್ತದೆ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ಅಗ್ನಿಪಥ’ ಸೇನಾ ನೇಮಕಾತಿ ಯೋಜನೆಯ ವಿಚಾರದಲ್ಲಿ ಒಕ್ಕೂಟ ಸರ್ಕಾರ ತನ್ನ ಪಟ್ಟು ಬಿಗಿ ಹಿಡಿದು ನಿಂತಿದೆ. ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಂಡಿದ್ದು, ಕೆಲವು ಸಂಘಟನೆಗಳು ಸೋಮವಾರದಂದು ‘ಭಾರತ ಬಂದ್’‌ಗೆ ಕರೆ ನೀಡಿವೆ. ಈ ಹಿನ್ನಲೆಯಲ್ಲಿ ದೇಶದಾದ್ಯಂತ 500 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

 


ಇದನ್ನೂ ಓದಿ: ಅಗ್ನಿವೀರರಿಗೆ ‘ಬಟ್ಟೆ ಒಗೆಯುವ & ಕ್ಷೌರ ತರಬೇತಿ’ ನೀಡುತ್ತೇವೆ: ಒಕ್ಕೂಟ ಸರ್ಕಾರದ ಸಚಿವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...