Homeಮುಖಪುಟ’ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ’: ಬಿಜೆಪಿ ನಾಯಕ ವಿಜಯವರ್ಗಿಯ ವಿವಾದಿತ ಹೇಳಿಕೆಗೆ ಖಂಡನೆ

’ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ’: ಬಿಜೆಪಿ ನಾಯಕ ವಿಜಯವರ್ಗಿಯ ವಿವಾದಿತ ಹೇಳಿಕೆಗೆ ಖಂಡನೆ

’ಈ ಹೇಳಿಕೆಗಳು ಕೂಡ ‘ಫ್ರಿಂಜ್’ ಅಂಶಗಳ ಹೇಳಿಕೆಗಳೇ ಎಂಬುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕು’ ಟಿಎಂಸಿ ಆಗ್ರಹ

- Advertisement -
- Advertisement -

ಒಕ್ಕೂಟ ಸರ್ಕಾರ ಘೋಷಿಸಿರುವ ಅಗ್ನಿಪಥ ಯೋಜನೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು ಬಿಜೆಪಿ ಕಚೇರಿಗಳಿಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

“ಶಿಸ್ತು ಮತ್ತು ಆಜ್ಞೆಗಳು ಪಾಲಿಸುವುದು ಮಿಲಿಟರಿ ತರಬೇತಿಯ ಅವಿಭಾಜ್ಯ ಅಂಗವಾಗಿದೆ. ಅಗ್ನಿವೀರರು 25 ವರ್ಷ ವಯಸ್ಸಿನಲ್ಲಿ ನಾಲ್ಕು ವರ್ಷಗಳ ಕಾಲ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಹೊರಬಂದಾಗ, ಅವರ ಬಳಿ 11 ಲಕ್ಷ ರೂಪಾಯಿ ಇರುತ್ತದೆ. ಅವರು ಹೆಮ್ಮೆಯಿಂದ ಪ್ರದರ್ಶಿಸಬಹುದಾದ ಅಗ್ನಿವೀರರ ಟ್ಯಾಗ್ ಹೊಂದಿರುತ್ತಾರೆ. ನಾನು ಬಿಜೆಪಿ ಕಚೇರಿಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಲು ಬಯಸಿದರೆ, ನಾನು ಅಗ್ನಿವೀರರಿಗೆ ಆದ್ಯತೆ ನೀಡುತ್ತೇನೆ” ಎಂದು ಬಿಜೆಪಿಯ ಹಿರಿಯ ನಾಯಕ ವಿಜಯವರ್ಗಿಯವರು ಇಂದೋರ್‌ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದನ್ನೂ ಓದಿ: ಸಾಯಿ ಪಲ್ಲವಿಯವರಿಂದ ಮಾಧ್ಯಮಗಳು ಕಲಿಯುವುದು ಬಹಳಷ್ಟಿದೆ: ಬೆಂಬಲಕ್ಕೆ ನಿಂತ ನಟ ಕಿಶೋರ್

ವಿಜಯವರ್ಗಿಯ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಹೇಳಿಕೆಗೆ ವಿವಿಧ ವಲಯಗಳಿಂದ ಖಂಡನೆ ವ್ಯಕ್ತವಾಗಿದೆ. ಬಿಜೆಪಿ ಸಂಸದ ವರುಣ್ ಗಾಂಧಿ ಟ್ವಿಟ್ಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ರಾಜಕೀಯ ಪಕ್ಷದ ಕಚೇರಿಗಳನ್ನು ಕಾವಲು ಕಾಯಲು ಭಾರತೀಯ ಸೈನಿಕರನ್ನು ಆಹ್ವಾನಿಸಿರುವುದನ್ನು ಟೀಕಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಕೂಡ ಖಂಡನೆ ವ್ಯಕ್ತಪಡಿಸಿದೆ. “ಭಾರತದ ಯುವಕರು ಬಿಜೆಪಿ ಕಚೇರಿಯ ಬಾಗಿಲ ಕಾಯುವ ದ್ವಾರಪಾಲಕರಾಗಬಾರದು, ಯುವ ಶಕ್ತಿ ಮೋದಿ ಸರ್ಕಾರಕ್ಕಿಂತ ಭಿನ್ನವಾಗಿ ಈ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತದೆ. ಇವೂ ಕೂಡ ‘ಫ್ರಿಂಜ್’ ಅಂಶಗಳ ಹೇಳಿಕೆಗಳೇ ಎಂಬುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದೆ.

ಇದನ್ನೂ ಓದಿ: 60 ಲಕ್ಷ ಹುದ್ದೆಗಳು ಖಾಲಿಯಿದ್ದರೂ ವಿದ್ಯಾವಂತ ಯುವಕರು ಇ-ರಿಕ್ಷಾ ಓಡಿಸುತ್ತಿದ್ದಾರೆ: BJP ಸಂಸದ ವರುಣ್ ಗಾಂಧಿ ಆಕ್ರೋಶ

 

ಮಧ್ಯಪ್ರದೇಶ ಕಾಂಗ್ರೆಸ್ ಕೂಡ ವಿಜಯವರ್ಗಿಯವರ ಹೇಳಿಕೆಯನ್ನು ಟೀಕಿಸಿದೆ. ಇದರ ರಾಜ್ಯ ಘಟಕದ ಅಧ್ಯಕ್ಷ ಕೆ.ಕೆ.ಮಿಶ್ರಾ ಮಾತನಾಡಿ, ’ಈ ಹೇಳಿಕೆಯು ಕೇವಲ ದೇಶದ ಯುವಕರಲ್ಲದೇ ಭಾರತೀಯ ಸೇನೆಯ ಶೌರ್ಯಕ್ಕೆ ಮಾಡಿದ ಘೋರ ಅವಮಾನವಾಗಿದ್ದು, ಪ್ರತಿಭಟನೆ ನಡೆಸುತ್ತಿರುವ ಯುವಕರ ಗಾಯದ ಮೇಲೆ ಉಪ್ಪು ಸವರುವ ಅವಿವೇಕದ ಪ್ರಯತ್ನವಾಗಿದೆ’ ಎಂದಿದ್ದಾರೆ.

ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. “ತರಬೇತಿ ಪಡೆದ ಗುತ್ತಿಗೆ ಸೈನಿಕರನ್ನು ಅವರ ಕಚೇರಿಗಳಿಗೆ ಚೌಕಿದಾರರನ್ನಾಗಿ ನೇಮಿಸಿಕೊಳ್ಳುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಇದು ಗೌರವದ ವೃತ್ತಿಯಾಗಿರುವ ಸೈನ್ಯಕ್ಕೆ ಮತ್ತು ಸೈನಿಕರಿಗೆ ಮೋದಿಯವರ ಪಕ್ಷ ನೀಡುವ ಗೌರವವೇ? ದೇಶದಲ್ಲಿ ಈ ರೀತಿಯ ಆಡಳಿತ ಪಕ್ಷವಿರುವುದು ವಿಷಾದನೀಯ” ಎಂದಿದ್ದಾರೆ.


ಇದನ್ನೂ ಓದಿ: ಅಗ್ನಿಪಥ್ ವಿರೋಧಿಸಿ ಇಂದು ಭಾರತ್ ಬಂದ್: ಬಿಹಾರದಲ್ಲಿ 350 ರೈಲುಗಳ ಸಂಚಾರ ರದ್ದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಒಬ್ಬ ಮೂರ್ಖನಿಗೂ ಗೊತ್ತಿಲ್ಲ ಅಗ್ನಿಪಥ ಯೋಜನೆ ಬಗ್ಗೆ ಆದ್ರೂ ಬಾಯಿಗೆ ಬಂದಂಗೆ ಬೊಗಳೋದು ನಿಲ್ಲಸಲ್ಲ,, ಓ ಮೂರ್ಖರೆ ಮೊದಲು ಅಗ್ನಿಪಥ ಅಂದ್ರೆ ಏನು ಅದರ ಒಳ ಷಡ್ಯಂತ್ರಗಳು ಏನು ಅಂತ ನೀವು ತಿಳ್ಕೊಳಿ ಜನರಿಗೆ ಎಲ್ಲ ಅರ್ಥ ಆಗಿದೆ,, ಯಾರೋ ಊದಿದ ಪುಂಗಿಗೆ ಸ್ಕ್ರಿಪ್ಟ್ ಬರೆಯೋಕೆ ಬರೋಕು ಮುಂಚೆ ಮನೇಲಿ ಸ್ವಲ್ಪ ನಿಮಗಿಂತ ಹೆಚ್ಚು ಓದಿರುವ ನಿಮ್ಮ ಆಪ್ತ ಸಲಹೆಗಾರರ ಹತ್ತಿರ ಸಲಹೆ ಪಡೆಯೋದು ಉತ್ತಮ ಅನ್ಸುತ್ತೆ ಅಲ್ವಾ ಅವಿವೇಕಿಗಳೆ..?
    ಕೆಲವು ನಾಯಿಗಳು ಯಾವಾಗ್ಲೂ ಬೊಗಳ್ತಾವೆ ಬರಿ ಸಾಬರ್ ಬಗ್ಗೆ ಮಾತ್ರ,, ದೇಶದ ಒಳಿತಿಗಾಗಿ ಒಂದು ಮಾತು ಬರಲ್ಲ ಎಂಜಲು ಅಲ್ಲ ಕ್ಷಮಿಸಿ ಹೇಸಿಗೆ ತಿನ್ನೋ ನಾಯಿಗಳು.. ಈಗ ಬೊಗಳರೋ ಹೇಸಿಗೆ ನಾಯಿಗಳ ದೇಶದ ಮಾನ ಹೋಯ್ತು ಈಗ ದೇಶದ ಯುವಕರು ಏನ್ ಮಾಡಬೇಕು ಬೊಗಳರೋ 2 ರೂಪಾಯಿ ಬಿಖಾರಿಗಳೇ….

  2. ಹೀಗೊಂದು ಪಕ್ಷದ ಒಬ್ಬ ಮೂರ್ಖನಿಗೂ ಗೊತ್ತಿಲ್ಲ ಅಗ್ನಿಪಥ ಯೋಜನೆ ಬಗ್ಗೆ ಆದ್ರೂ ಬಾಯಿಗೆ ಬಂದಂಗೆ ಬೊಗಳೋದು ನಿಲ್ಲಸಲ್ಲ,, ಓ ಮೂರ್ಖರೆ ಮೊದಲು ಅಗ್ನಿಪಥ ಅಂದ್ರೆ ಏನು ಅದರ ಒಳ ಷಡ್ಯಂತ್ರಗಳು ಏನು ಅಂತ ನೀವು ತಿಳ್ಕೊಳಿ ಜನರಿಗೆ ಎಲ್ಲ ಅರ್ಥ ಆಗಿದೆ,, ಯಾರೋ ಊದಿದ ಪುಂಗಿಗೆ ಸ್ಕ್ರಿಪ್ಟ್ ಬರೆಯೋಕೆ ಬರೋಕು ಮುಂಚೆ ಮನೇಲಿ ಸ್ವಲ್ಪ ನಿಮಗಿಂತ ಹೆಚ್ಚು ಓದಿರುವ ನಿಮ್ಮ ಆಪ್ತ ಸಲಹೆಗಾರರ ಹತ್ತಿರ ಸಲಹೆ ಪಡೆಯೋದು ಉತ್ತಮ ಅನ್ಸುತ್ತೆ ಅಲ್ವಾ ಅವಿವೇಕಿಗಳೆ..?
    ಕೆಲವು ನಾಯಿಗಳು ಯಾವಾಗ್ಲೂ ಬೊಗಳ್ತಾವೆ ಬರಿ ಸಾಬರ್ ಬಗ್ಗೆ ಮಾತ್ರ,, ದೇಶದ ಒಳಿತಿಗಾಗಿ ಒಂದು ಮಾತು ಬರಲ್ಲ ಎಂಜಲು ಅಲ್ಲ ಕ್ಷಮಿಸಿ ಹೇಸಿಗೆ ತಿನ್ನೋ ನಾಯಿಗಳು.. ಈಗ ಬೊಗಳರೋ ಹೇಸಿಗೆ ನಾಯಿಗಳ ದೇಶದ ಮಾನ ಹೋಯ್ತು ಈಗ ದೇಶದ ಯುವಕರು ಏನ್ ಮಾಡಬೇಕು ಬೊಗಳರೋ 2 ರೂಪಾಯಿ ಬಿಖಾರಿಗಳೇ….

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...