Homeರಂಜನೆಕ್ರೀಡೆ16 ಲಕ್ಷ ರೂ ಪಾವತಿಸಿ ತಂಡಕ್ಕೆ ಜ್ಯೋತಿಷಿಯನ್ನು ನೇಮಿಸಿದ ಭಾರತೀಯ ಫುಟ್ಬಾಲ್‌‌ ಫೆಡೆರೇಷನ್‌!

16 ಲಕ್ಷ ರೂ ಪಾವತಿಸಿ ತಂಡಕ್ಕೆ ಜ್ಯೋತಿಷಿಯನ್ನು ನೇಮಿಸಿದ ಭಾರತೀಯ ಫುಟ್ಬಾಲ್‌‌ ಫೆಡೆರೇಷನ್‌!

- Advertisement -
- Advertisement -

ಎಎಫ್‌ಸಿ ಏಷ್ಯನ್ ಕಪ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದ ಭಾರತೀಯ ಫುಟ್ಬಾಲ್‌‌ ತಂಡವನ್ನು ‘ಪ್ರೇರಿಸಲು’ ಭಾರತ ಫುಟ್ಬಾಲ್ ಫೆಡರೇಶನ್ (AIFF) 16 ಲಕ್ಷ ರೂ. ಪಾವತಿಸಿ ಜ್ಯೋತಿಷಿಯನ್ನು ನೇಮಿಸಿತ್ತು ಎಂದು ಇಂಡಿಯನ್ ಎಕ್ಸ್‌‌ಪ್ರೆಸ್‌ ವರದಿ ಮಾಡಿದೆ. ಎಎಫ್‌ಸಿ ಏಷ್ಯನ್ ಕಪ್ ಕ್ವಾಲಿಫೈಯರ್‌ನಲ್ಲಿ ಭಾರತೀಯ ಫುಟ್ಬಾಲ್‌‌ ತಂಡ ಇತ್ತೀಚೆಗೆ ಸ್ಥಾನ ಪಡೆದಿತ್ತು. ಸುನಿಲ್ ಛೇತ್ರಿ ನೇತೃತ್ವದ ತಂಡವು ಕ್ವಾಲಿಫೈಯರ್‌ನ ಗುಂಪಿನಲ್ಲೇ ಅಗ್ರಸ್ಥಾನದಲ್ಲಿದೆ.

“ಏಷ್ಯನ್ ಕಪ್‌ಗೆ ಮುಂಚಿತವಾಗಿ ರಾಷ್ಟ್ರೀಯ ತಂಡಕ್ಕೆ ಪ್ರೇರಕರನ್ನು ನೇಮಿಸಲಾಯಿತು. ಆದರೆ ಪ್ರೇರೇಪಣೆಗೆ ತೊಡಗಿಸಿಕೊಂಡಿದ್ದ ಕಂಪನಿಯು ಜ್ಯೋತಿಷ್ಯ ಸಂಸ್ಥೆ ಎಂಬುದು ನಂತರ ಬೆಳಕಿಗೆ ಬಂದಿದೆ” ಎಂದು ತಂಡದ ಮೂಲಗಳು ತಿಳಿಸಿದೆ ಎಂದು ಪಿಟಿಐ ಸುದ್ದಿಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಿಜವಾಗಿ ಹೇಳುವುದಾದರೆ, ತಂಡವನ್ನು ಪ್ರೇರೇಪಿಸಲು ಜ್ಯೋತಿಷಿಯನ್ನು ನೇಮಿಸಲಾಗಿದೆ. ಅವರಿಗೆ 16 ಲಕ್ಷದಷ್ಟು ಬೃಹತ್ ಮೊತ್ತವನ್ನು ಪಾವತಿಸಲಾಗಿದೆ” ಎಂದು ಮೂಲಗಳು ಹೇಳಿವೆ. ಜ್ಯೋತಿಷ್ಯ ಸಂಸ್ಥೆಯು ಭಾರತೀಯ ಫುಟ್ಬಾಲ್‌‌ ಆಟಗಾರರ ಜೊತೆಗೆ ಮೂರು ಸಭೆಗಳನ್ನು ನಡೆಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.

ಇದನ್ನೂ ಓದಿ: ಮಿನಿ ಫುಟ್‌ಬಾಲ್ ಮಹಿಳಾ ವಿಶ್ವಕಪ್: ಭಾರತ ತಂಡದಲ್ಲಿ ರಾಜ್ಯದ ಐವರು ಯುವತಿಯರು

ಈ ಬಗ್ಗೆ ಕೊಲ್ಕತ್ತಾದ ಮೂಲದ ಆಟಗಾರರೊಬ್ಬರು ಪ್ರತಿಕ್ರಿಯಿಸಿ, “ನಾನು ತಡವಾಗಿ ತಂಡವನ್ನು ಸೇರಿಕೊಂಡಿದ್ದರಿಂದ, ಕನಿಷ್ಠ ಈ ಬಗ್ಗೆ ನಾನು ಕೇಳೂ ಇಲ್ಲ” ಎಂದು ತಿಳಿಸಿದ್ದಾರೆ. ಭಾರತ ಫುಟ್ಬಾಲ್ ಫೆಡರೇಶನ್‌ನ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿರುವ ಸುನಂದೋ ಧರ್ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ಪತ್ರಿಕೆ ಹೇಳಿದೆ.

ಭಾರತದ ಮಾಜಿ ಗೋಲ್‌ಕೀಪರ್ ತನ್ಮಯ್‌ ಬೋಸ್ ಈ ವಿಚಾರವನ್ನು ಲೇವಡಿ ಮಾಡಿದ್ದು, ಭಾರತ ಫುಟ್ಬಾಲ್ ಫೆಡರೇಶನ್‌ ನಗೆಪಾಟಲೀಗೀಡಾಗಿದ್ದಕ್ಕೆ ತರಾಟೆಗೆ ಪಡೆದಿದ್ದಾರೆ.

“ಭಾರತ ಫುಟ್ಬಾಲ್ ಫೆಡರೇಶನ್‌ ಸರಿಯಾದ ಯೂತ್ ಲೀಗ್‌ಗಳನ್ನು ನಡೆಸಲು ಪದೇ ಪದೇ ವಿಫಲವಾಗಿದೆ. ಇದೇ ಸಮಯದಲ್ಲಿ ಅನೇಕ ಪ್ರತಿಷ್ಠಿತ ಪಂದ್ಯಾವಳಿಗಳನ್ನು ಮುಚ್ಚುವಂತಾಯಿತು. ಈ ರೀತಿಯ ಘಟನೆಗಳು ಭಾರತೀಯ ಫುಟ್ಬಾಲ್‌‌ನ ಪ್ರತಿಷ್ಠೆಯನ್ನು ಇನ್ನಷ್ಟು ಕೆಡಿಸುತ್ತದೆ” ಎಂದು ಬೋಸ್ ತಿಳಿಸಿದ್ದಾರೆ.

“ಈ ಭಯಾನಕ ಘಟನೆಯ ಆಳಕ್ಕೆ ಹೋಗಬೇಕು ಮತ್ತು ಇದರ ಹಿಂದೆ ಯಾರಿದ್ದಾರೆ ಮತ್ತು ಇದಕ್ಕೆ ಹೊಣೆಗಾರರು ಯಾರು ಎಂಬುದನ್ನು ಕಂಡುಹಿಡಿಯಬೇಕು. ಇಂತಹ ಅನೇಕ ಹಗರಣಗಳು ಹೊರಗೆ ಬರಲು ಕಾಯುತ್ತಿವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಫುಟ್‌ಬಾಲ್, ನೃತ್ಯ ಈಗ ಕ್ರಿಕೆಟ್ ಆಡಿದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್

ಸುನಿಲ್ ಛೇತ್ರಿ ನೇತೃತ್ವದ ತಂಡವು ತನ್ನ ಅತ್ಯುತ್ತಮ ಏಷ್ಯನ್ ಕಪ್ ಅಭಿಯಾನವನ್ನು ದಾಖಲಿಸಿದೆ. 2023 ರ AFC ಏಷ್ಯನ್ ಕಪ್ ಅರ್ಹತಾ ಪಂದ್ಯಗಳಲ್ಲಿ ಭಾರತವೂ ತನ್ನ ಸ್ಥಾನವನ್ನು ಖಚಿತ ಪಡಿಸಿದೆ. ಈ ಸ್ಪರ್ಧೆಯ ಫೈನಲ್‌ಗಳು ಸುಮಾರು ಒಂದು ವರ್ಷದ ನಂತರ ಜೂನ್ 16, 2023 ರಂದು ಪ್ರಾರಂಭವಾಗಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...