ರೈತ ಚಳವಳಿಯ ಸಂದರ್ಭದಲ್ಲಿ ರಚಿತವಾದ, ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ‘ಕಿಸಾನ್ ಏಕ್ತಾ ಮೋರ್ಚಾ’ (@Kisanektamorcha), ‘ಟ್ರಾಕ್ಟರ್2ಟ್ವಿಟರ್’ (@Tractor2twitr) ಖಾತೆಗಳನ್ನು ಭಾರತದಲ್ಲಿ ಟ್ವಿಟರ್ ಸಂಸ್ಥೆ ತಡೆಹಿಡಿದಿದೆ.
“ಭಾರತದ ಸ್ಥಳೀಯ ಕಾನೂನುಗಳ ಅಡಿಯಲ್ಲಿ ಟ್ವಿಟರ್‌ನ ಹೊಣೆಗಾರಿಕೆಯನ್ನು ಪಾಲಿಸಲು, ನಾವು ಭಾರತದ ಮಾಹಿತಿ ತಂತ್ರಜ್ಞಾನ ಕಾಯಿದೆ- 2000ರ ಅಡಿಯಲ್ಲಿ ಭಾರತದಲ್ಲಿ ಈ ಖಾತೆಯನ್ನು ತಡೆಹಿಡಿದಿದ್ದೇವೆ” ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ.
ಈ ಕುರಿತು ರೈತ ನಾಯಕ ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದು, ಟ್ವಿಟರ್ ನಡೆಯನ್ನು ಖಂಡಿಸಿದ್ದಾರೆ. “ಮೋದಿ ಸರ್ಕಾರ ಅಧಿಕೃತವಾಗಿ ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವ ಆಚರಿಸುತ್ತಿದೆ” ಎಂದು ಆರೋಪಿಸಿದ್ದಾರೆ. “ರೈತ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಖಾತೆಗಳನ್ನು ತಡೆ ಹಿಡಿಯಲಾಗುತ್ತಿದೆ. ಏನಾಗುತ್ತಿದೆ?” ಎಂದು ಪ್ರಶ್ನಿಸಿರುವ ಅವರು ಟ್ವಿಟರ್ ಇಂಡಿಯಾ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.
It seems Modi govt chose the official anniversary of Emergency to carry out a major purge of @Twitter accounts.
Two leading accounts supporting farmers movement @Tractor2twitr and @Kisanektamorcha have also been stopped.
What's happening @TwitterIndia ? https://t.co/XH8gFCH2Xu pic.twitter.com/u0xgPZVv01— Yogendra Yadav (@_YogendraYadav) June 27, 2022
ಇಷ್ಟೇ ಅಲ್ಲದೆ ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ ಅವರಿಗೂ ಟ್ವಿಟರ್ ಸಂಸ್ಥೆ ಈ ರೀತಿಯ ನೋಟಿಸ್ ಕಳುಹಿಸಿದೆ. ತಮಗೆ ಬಂದಿರುವ ನೋಟಿಸ್ ಪ್ರತಿಯನ್ನು ರಾಣಾ ಅಯೂಬ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಕಿಸಾನ್‌ಏಕ್ತಾಮೋರ್ಚಾ’ ಹಾಗೂ ‘ಟ್ರಾಕ್ಟರ್2ಟ್ವಿಟರ್’ ಖಾತೆಗಳಿಗೆ ನೀಡಿರುವ ಕಾರಣಗಳನ್ನೇ ಇಲ್ಲಿಯೂ ನೀಡಲಾಗಿದೆ.
“ಹಲೋ ಟ್ವಿಟರ್, ನಿಜವಾಗಿಯೂ ಏನಿದು?” ಎಂದು ರಾಣಾ ಅಯೂಬ್ ಪ್ರಶ್ನಿಸಿದ್ದಾರೆ.
Hello @Twitter ,what exactly is this ? pic.twitter.com/26rRzp0eYu
— Rana Ayyub (@RanaAyyub) June 26, 2022
“ನಮ್ಮ ಸೇವೆಯನ್ನು ಬಳಸುವ ಜನರ ದನಿಯನ್ನು ರಕ್ಷಿಸುವುದು, ಗೌರವಿಸುವುದು ಟ್ವಿಟರ್‌ನ ನಂಬಿಕೆ. ಯಾವುದಾದರೂ ವಿಷಯವನ್ನು ತೆಗೆದುಹಾಕಬೇಕೆಂದು ಅಧಿಕೃತ ಘಟಕದಿಂದ (ಕಾನೂನು ಜಾರಿ ಅಥವಾ ಸರ್ಕಾರಿ ಸಂಸ್ಥೆ) ನಾವು ಕಾನೂನು ವಿನಂತಿಯನ್ನು ಸ್ವೀಕರಿಸಿದರೆ ಖಾತೆದಾರರಿಗೆ ತಿಳಿಸುವುದು ನಮ್ಮ ಪಾಲಿಸಿಯಾಗಿದೆ. ಕೋರಿಕೆ ಕಳುಹಿಸಿರುವ ದೇಶದಲ್ಲಿ ಸದರಿ ಬಳಕೆದಾರರು ವಾಸಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಸೂಚಿಸುತ್ತೇವೆ” ಎಂದು ರಾಣಾ ಅಯೂಬ್ ಅವರಿಗೆ ಬಂದಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ರಾಣಾ ಅಯೂಬ್ ಅವರ ಟ್ವೀಟ್‌ಗೆ ಹಲವು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಟೆನ್ನಿಸ್ ದಂತಕಥೆ ಮಾರ್ಟಿನಾ ನವರಟೋಲಿನಾ ಪ್ರತಿಕ್ರಿಯಿಸಿದ್ದು, “ಹಾಗಾದರೆ ಮುಂದಿನವರು ಯಾರು? ಇದು ಭೀಕರವಾದದ್ದಷ್ಟೇ” ಎಂದು ಪೋಸ್ಟ್ ಮಾಡಿ ರಾಣಾ ಅಯೂಬ್ ಮತ್ತು ಟ್ವಿಟ್ಟರ್ ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ.
So who is next?!?
Just awful…— Martina Navratilova (@Martina) June 26, 2022