2018 ರಲ್ಲಿ ಮಾಡಿದ್ದ ಟ್ವೀಟ್‌ನ ವಿರುದ್ಧ ದಾಖಲಿಸಲಾದ ಪ್ರಕರಣದ ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಲಯ ಪ್ರಕಟಿಸುವ ಮೊದಲೇ ಸೋರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರ ವಕೀಲರು ಅಘಾತ ವ್ಯಕ್ತಪಡಿಸಿದ್ದಾರೆ. ನ್ಯಾಯಾಧೀಶರು ತೀರ್ಪು ಪ್ರಕಟಿಸುವ ಸುಮಾರು 4:30 ಗಂಟೆಗಳಿಗಿಂತಲೂ ಮೊದಲೇ ಮಾಧ್ಯಮ ಸಂಸ್ಥೆಗಳು ವರದಿಗಳನ್ನು ಪ್ರಕಟಿಸಿವೆ ಎಂದು ಅವರು ಶನಿವಾರ ಆರೋಪಿಸಿದ್ದಾರೆ.
ನ್ಯಾಯಾಧೀಶರು ಶನಿವಾರ ಸಂಜೆ 7 ಗಂಟೆಗೆ ಆದೇಶವನ್ನು ಪ್ರಕಟಿಸಿದ್ದಾರಾದರೂ, ಕೆಲವು ಸುದ್ದಿ ವಾಹಿನಿಗಳು ಮತ್ತು ಏಜೆನ್ಸಿಗಳು ಮಧ್ಯಾಹ್ನ 2.30 ರ ಸುಮಾರಿಗೆ ಜುಬೈರ್‌ಗೆ ಜಾಮೀನು ನಿರಾಕರಿಸಲಾಗಿದೆ ಮತ್ತು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿ ಮಾಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜಾಮೀನು ಆದೇಶದ ಕುರಿತ ಮಾಧ್ಯಮ ವರದಿಗಳನ್ನು ನಿರಾಕರಿಸಿದ ಜುಬೇರ್ ಅವರ ವಕೀಲ ಸೌತಿಕ್ ಬ್ಯಾನರ್ಜಿ, ಉಪ ಪೊಲೀಸ್ ಆಯುಕ್ತ ಕೆಪಿಎಸ್ ಮಲ್ಹೋತ್ರಾ ಜಾಮೀನು ಆದೇಶವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಜಾಮೀನು ನಿರಾಕರಣೆ; ಹೊಸ ಆರೋಪಗಳನ್ನು ಸೇರಿಸಿದ ಪೊಲೀಸರು!
“ಊಟದ ವಿರಾಮದ ನಂತರ ನ್ಯಾಯಾಧೀಶರು ಇನ್ನೂ ನ್ಯಾಯಾಲಯಕ್ಕೆ ಬರುವ ಮೊದಲೇ ನಮ್ಮ ಜಾಮೀನು ತಿರಸ್ಕರಿಸಲಾಗಿದೆ ಮತ್ತು 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿದೆ ಎಂದು ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಮಾಧ್ಯಮಗಳಲ್ಲಿ ಸೋರಿಕೆ ಮಾಡಿರುವುದನ್ನು ನೋಡಿ ನನಗೆ ಆಘಾತವಾಗಿದೆ” ಎಂದು ಅವರು ಹೇಳಿದ್ದಾರೆ.
“ಈ ಸುದ್ದಿಗಳನ್ನು ಟ್ವಿಟರ್ ಪೋಸ್ಟ್‌ಗಳನ್ನು ನೋಡಿ ನಾನು ತಿಳಿದುಕೊಂಡೆ. ಈ ಸುದ್ದಿ ಮಾಡಿರುವ ಸುದ್ದಿ ವಾಹಿನಿಗಳ… ಕೆಲವು ಕಾನೂನು ವರದಿಗಾರರು ಈ ಸುದ್ದಿಯನ್ನು ಮಾಡಿದ್ದಾರೆ. ಅವರು ಕೆಪಿಎಸ್ ಮಲ್ಹೋತ್ರಾ ಅವರನ್ನು ಈ ಮಾಹಿತಿಯ ಮೂಲವೆಂದು ಉಲ್ಲೇಖಿಸುತ್ತಿದ್ದಾರೆ” ಎಂದು ಸೌತಿಕ್ ಬ್ಯಾನರ್ಜಿ ಹೇಳಿದ್ದಾರೆ.
“ಇದು ಅತ್ಯಂತ ದೊಡ್ಡ ಹಗರಣವಾಗಿದ್ದು, ನ್ಯಾಯಾಧೀಶರು ಕೋರ್ಟ್‌ಗೆ ಬಂದು ಆದೇಶವನ್ನು ಪ್ರಕಟಿಸುವ ಮೊದಲೇ, ಪೊಲೀಸರು ಆದೇಶವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಇದು ದೇಶದ ಕಾನೂನಿನ ಆಡಳಿತದ ಸ್ಥಿತಿಯನ್ನು ಹೇಳುತ್ತದೆ. ನಮಗೆ ಬಂದಿರುವ ಆದೇಶ ಏನೆಂದು ಕೆಪಿಎಸ್ ಮಲ್ಹೋತ್ರಾ ಅವರಿಗೆ ಹೇಗೆ ತಿಳಿಯುತ್ತದೆ. ಈ ಬಗ್ಗೆ ಗಂಭೀರ ಆತ್ಮಾವಲೋಕನವನ್ನು ಮಾಡಬೇಕು” ಎಂದು ವಕೀಲ ಸೌತಿಕ್ ಹೇಳಿದ್ದಾರೆ.
Advocate Soutik Banerjee, Zubair’s lawyer denies the news of the Court denying bail to him. He says “It is extremely scandalous and speaks volume of rule of law in Country that even before Judge has sat, police has leaked to media.” pic.twitter.com/HMzPstLtsI
— Live Law (@LiveLawIndia) July 2, 2022
ಇದನ್ನೂ ಓದಿ: ಜುಬೇರ್ ಬಂಧನದ ಐದು ದಿನದ ನಂತರ ದೂರುದಾರನನ್ನು ಹುಡುಕುತ್ತಿರುವ ದೆಹಲಿ ಪೊಲೀಸರು!
ಜುಬೈರ್ ಅವರ ವಕೀಲರ ಪತ್ರಿಕಾ ಹೇಳಿಕೆಯ ನಂತರ, ಕೆಲವು ಮಾಧ್ಯಮಗಳು ವರದಿಯನ್ನು ಹಿಂತೆಗೆದುಕೊಂಡವು ಅಥವಾ ತಿದ್ದುಪಡಿ ಮಾಡಿದವು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಪಿ, “ಇದು ನನ್ನ ತನಿಖಾಧಿಕಾರಿ ಹೇಳಿರುವ ಮಾತಾಗಿದ್ದು, ಗದ್ದಲದಿಂದಾಗಿ ನನಗೆ ಅದು ತಪ್ಪಾಗಿ ಕೇಳಿದೆ. ಈ ಅಜಾಗರೂಕತೆಯಿಂದ ಸಂದೇಶ ತಪ್ಪಾಗಿ ಪ್ರಸಾರ ಮಾಡಲಾಗಿದೆ” ಎಂದು ಹೇಳಿದ್ದಾರೆ.
“ಆಲ್ಟ್‌ನ್ಯೂಸ್‌ನ ಮೊಹಮ್ಮದ್ ಜುಬೇರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಮಾಧ್ಯಮಗಳಿಗೆ ತಪ್ಪಾಗಿ ತಿಳಿಸಿದ್ದೇನೆ ಎಂದು ದೆಹಲಿ ಪೊಲೀಸ್ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ” ಎಂದು ಪಿಟಿಐ ಟ್ವೀಟ್ ಮಾಡಿದೆ.
Delhi Police DCP KPS Malhotra says he informed media incorrectly that AltNews' Mohammed Zubair has been sent to 14-day judicial custody
— Press Trust of India (@PTI_News) July 2, 2022
ಇದನ್ನೂ ಓದಿ: ಬೆಂಗಳೂರು: ಪತ್ರಕರ್ತ ಜುಬೇರ್ ಬಂಧನ ಖಂಡಿಸಿ ವಿವಿಧೆಡೆ ಮೋಂಬತ್ತಿ ಹಿಡಿದು ಪ್ರತಿಭಟನೆ
“ಮಾಹಿತಿಯನ್ನು ದೆಹಲಿ ಪೊಲೀಸರು ಒದಗಿಸಿದ್ದಾರೆ. ಅಧಿಕೃತ ಆದೇಶಕ್ಕಾಗಿ ಕಾಯಲಾಗುತ್ತಿದೆ” ಎಂದು ANI ಸುದ್ದಿಯನ್ನು ಮತ್ತೇ ಅಪ್‌ಡೇಟ್ ಮಾಡಿತ್ತು.
#UPDATE | The information below was provided by Delhi Police. Official order awaited https://t.co/vE46rjYglp
— ANI (@ANI) July 2, 2022



U ppl posting jubair news at least 2 time update in a day but did not find single news news about Jihadies act on Kanayya’s death news…how you ppl become independent news agency and you are one sided agent that’s against India
That killer also Rss activist
ಜುಬೇರ್ ನಂತ ಅಯೋಗ್ಯನ ಪರ ಇರೋ ಅಯೋಗ್ಯರನ್ನಾ ದೇಶದಿಂದ ಒದ್ದು ಓಡಿಸುವ ಕೆಲಸ ಜನ ಮಾಡುವ ಮೊದಲು ಸರಕಾರ ಮಾಡಬೇಕಿದೆ .ಈ ಜುಬೇರ್ ನಂತ ಹಿಂದೂ ವಿರೋಧಿಯನ್ನ ಸಾರ್ವಜನಿಕ ಪ್ರದೇಶದಲ್ಲಿ ಗಲ್ಲಿಗೇರಿಸಬೇಕಿದೆ.
ಹುಚ್ಚು ನಾಯಿಗಳಿಗೇನು ಗೊತ್ತು ಜುಬೈರ್ ಬಗ್ಗೆ. ಅವರ ಬಗ್ಗೆ ಯಾಕೆ ಇಷ್ಟು ಕಿಡಿ ಅಂದ್ರೆ ಈ ಅವಿವೇಕಿಗಳು,2 ಭಿಕ್ಷುಕರು, ಮತ್ತೆ ಒಂದು ದೇಶದ ದೊಡ್ಡ ಸುಳ್ಳಿನ ಪಕ್ಷದ ರಾಜಕಾರಣಿಗಳು, ಅದರ ಪಟಾಲಂಗಳು ಹೇಳುವ ಸುಳ್ಳನ್ನು ಸುಳ್ಳು ಎಂದು ನಿಜವಾದ ಸುದ್ದಿಯನ್ನು ಜನರ ಮುಂದೆ ಇಡುವ ವ್ಯಕ್ತಿ ಅದ್ಕೆ ಜುಬೈರ್ ಅಂದ್ರೆ ಅಂಡಿಗೆ ಮೆಣಸಿನಕಾಯಿ ತುದಿ ಕಟ್ ಮಾಡಿ ಏರಿಸ್ಕೊಳೋದು ಭೋ… ಡಿ ಮ## ಲೆ ಅವಿವೇಕಿ 2 ಬೆಗ್ಗೆರ್ಸ್ ಸತ್ಯ ಹೇಳೋಕು ಆಗಲ್ಲ ಒಪ್ಕೋಳೋಕು ಆಗಲ್ಲ ಅಂದ್ರೆ ನಿಮ್ಮ ಚಡ್ಡಿಯೊಳಗಿನ ಕೂದಲಿಗೆ ನೇಣು ಬಿಗಿದುಕೊಂಡು ಸಾಯಿರೋ ದರ್ಬೇಸಿ ಮುಂಡೇವಾ. ನಿಮ್ಮಿಂದ ದೇಶ ಅದೋ ಗತಿಗೆ ಬಂದಾಯ್ತು 😡😡😡😡ಥೂ… ನಿಮ್ಮ ಹಡಬಿಟ್ಟಿ ಜನ್ಮಕ್ಕೆ ನನ್ನ ಹಳೆ ಎಕ್ಕಡ
ಬಿಜೆಪಿ ವಿರುದ್ದ ಮಾತಾಡಿದ ಎಲ್ಲರನ್ನೂ ಕಳ್ಳ ಕೇಸಿನಲ್ಲಿ ಸಿಕ್ಕಿಸಿ ಜೈಲಿಗಟ್ಟುವ ಬಿಜೆಪಿಯ ಜಾಯಮಾನ ಖಂಡನೀಯ.
ರಾಜಕೀಯ ಮಾಡಬಹುದು ಆದರೆ ನಿರಪರಾಧಿಗಳನ್ನು ಹಿಂಸಿಸುವುದು ಎಷ್ಟು ಸರಿ.
ಈ ನಡವಳಿಕೆ ಬಿಜೆಪಿಗೆ ತಕ್ಕುದಲ್ಲ.
ಎಲ್ಲಕ್ಕೂ ಬೆಲೆ ತೆತ್ತಬೇಕಾದ ಸಂಧರ್ಭ ಒದಗಿ ಬರಲಿದೆ.
ಕಾಲವೇ ಉತ್ತರಿಸಲಿದೆ