Homeಕರ್ನಾಟಕಬೆಂಗಳೂರು: ಪತ್ರಕರ್ತ ಜುಬೇರ್‌ ಬಂಧನ ಖಂಡಿಸಿ ವಿವಿಧೆಡೆ ಮೋಂಬತ್ತಿ ಹಿಡಿದು ಪ್ರತಿಭಟನೆ

ಬೆಂಗಳೂರು: ಪತ್ರಕರ್ತ ಜುಬೇರ್‌ ಬಂಧನ ಖಂಡಿಸಿ ವಿವಿಧೆಡೆ ಮೋಂಬತ್ತಿ ಹಿಡಿದು ಪ್ರತಿಭಟನೆ

- Advertisement -
- Advertisement -

ಖ್ಯಾತ ಪತ್ರಕರ್ತ, ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್‌‌ ಅವರನ್ನು ಕ್ಷುಲ್ಲಕ ಪ್ರಕರಣವೊಂದರಲ್ಲಿ ಸಿಲುಕಿಸಿ, ಬಂಧಿಸಿರುವುದನ್ನು ಖಂಡಿಸಿ ಬೆಂಗಳೂರಿನ ವಿವಿಧೆಡೆ ಮಂಗಳವಾರ ಸಂಜೆ ಶಾಂತಿಯುತ ಪ್ರತಿಭಟನೆಗಳು ನಡೆದವು.

ಬೆಂಗಳೂರಿನ ಸೆಂಟ್‌ ಜಾನ್ಸ್‌ ರೋಡ್‌, ಇನ್‌ಫ್ಯಾಂಟ್ರಿ ರೋಡ್‌, ಆರ್‌.ಟಿ.ನಗರ, ಸೆಂಟ್ರಲ್‌ ಸ್ಟ್ರೀಟ್‌ ಸೇರಿದಂತೆ ವಿವಿಧೆಡೆ ಮೋಂಬತ್ತಿ ಹಿಡಿದು ಪ್ರತಿಭಟಿಸಲಾಗಿದೆ. ರಾಜ್ಯದ ಕೆಲವೆಡೆ ಪ್ರತಿಭಟನೆಗಳಾಗಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೊಹಮ್ಮದ್ ಜುಬೇರ್ ಅವರ ಬಂಧನ ಭಾರತದ ಪ್ರಜಾಪ್ರಭುತ್ವ ಮೇಲೆ ಆಗುತ್ತಿರುವ ಮತ್ತೊಂದು ದಾಳಿಯಾಗಿದೆ. ದ್ವೇಷ ಸೃಷ್ಟಿ ಹಾಗೂ ಫೇಕ್ ನ್ಯೂಸ್‌ಗಳ ವಿರುದ್ಧ ಆಲ್ಟ್ ನ್ಯೂಸ್ ಸಂಸ್ಥೆಯ ಮೂಲಕ ಜುಬೇರ್ ಅವರು ಹಲವು ವರ್ಷಗಳಿಂದ  ಹೋರಾಡುತ್ತಿದ್ದಾರೆ. ಅವರ ಬಂಧನ ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಮೌನ ಪ್ರತಿಭಟನೆ

ನಾಲ್ಕು ವರ್ಷಗಳ ಹಿಂದೆ ಹಳೆಯ ಹಿಂದಿ ಚಲನಚಿತ್ರದಲ್ಲಿನ ದೃಶ್ಯವನ್ನು ಜುಬೈರ್‌‌ ಟ್ವೀಟ್ ಮಾಡಿದ್ದರು. ಇದರ ಬಗ್ಗೆ ನಾಲ್ಕು ವರ್ಷದ ನಂತರ ವ್ಯಕ್ತಿಯೊಬ್ಬರು ದಿಲ್ಲಿ ಪೊಲೀಸರಿಗೆ ದೂರು ನೀಡುತ್ತಾರೆ. ಈ ವಿಷಯವಾಗಿ ಜುಬೇರ್ ಅವರಿಗೆ ನೋಟಿಸ್ ಸಹ ನೀಡದೆ ಪೊಲೀಸರು ಬಂಧಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಂಧನ ಮಾಡುವಾಗ ಪೊಲೀಸರು ತಮ್ಮ ಬ್ಯಾಡ್ಜ್ ಸಹ ಹಾಕಿರಲಿಲ್ಲ. ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್‌‌) ಪ್ರತಿ ಸಹ ನೀಡಲಿಲ್ಲ. ಇದೆಲ್ಲ ಕಾನೂನಿನ ಉಲ್ಲಂಘನೆ. ಜುಬೇರ್ ಅವನ್ನು ಕ್ಷುಲ್ಲಕ ಕಾರಣಕ್ಕೆ ಅಕ್ರಮವಾಗಿ ಬಂಧಿಸಿ, ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ಅಪಾಯದಲ್ಲಿ ತಂದಿಟ್ಟಿರುವ ದಿಲ್ಲಿ ಪೊಲೀಸರ ಕ್ರಮ ಖಂಡನೀಯ ಎಂದು ತಿಳಿಸಿದ್ದಾರೆ.

ಜುಬೇರ್‌ ಅವರ ಬಂಧನದ ಮೂಲಕ ನಮ್ಮ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ. ನಾವೆಲ್ಲರೂ ಜುಬೇರ್ ಅವರ ಬಂಧನದ ವಿರುದ್ಧ ಮಾತನಾಡುವುದಲ್ಲದೆ, ದ್ವೇಷ ಸೃಷ್ಟಿಯ ವಿರುದ್ಧ ಹಾಗೂ ಫೇಕ್ ನ್ಯೂಸ್ ವಿರುದ್ಧ ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.

ಜುಬೇರ್‌‌ ಅವರನ್ನು ನ್ಯಾಯಾಲಯವು ಮತ್ತೇ ನಾಲ್ಕು ದಿನಗಳ ಪೊಲೀಸರ ವಶಕ್ಕೆ ನೀಡಿದೆ. ಸೆನ್ಸಾರ್ ಮಂಡಳಿಯಿಂದ ‘ಯು’ (ಎಲ್ಲರೂ ನೋಡಬಹುದು) ಪ್ರಮಾಣಪತ್ರ ಪಡೆದಿರುವ 1983ರ ಚಲನಚಿತ್ರದ ಸ್ಕ್ರೀನ್‌ಶಾಟ್ ಅನ್ನು ಹಂಚಿದ್ದಕ್ಕಾಗಿ ದೆಹಲಿ ಪೊಲೀಸರು ಅವರನ್ನು ಸೋಮವಾರ ಬಂಧಿಸಿದ್ದರು. ಅದರ ನಂತರ ಡ್ಯೂಟಿ ಮ್ಯಾಜಿಸ್ಟ್ರೇಟ್ ರಾತ್ರಿ ಅವರನ್ನು ಪೊಲೀಸರಿಗೆ ಒಂದು ದಿನದ ಕಸ್ಟಡಿ ನೀಡಿದ್ದರು.

ಇದನ್ನೂ ಓದಿರಿ: ಸಾಮಾಜಿಕ ಮಾಧ್ಯಮಗಳಲ್ಲಿ ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಭೀಕರ ಹತ್ಯೆ; ಆರೋಪಿಗಳ ಬಂಧನ

ಜುಬೇರ್‌‌ ಅವರು ಈ ಟ್ವೀಟ್ ಅನ್ನು 2018ರಲ್ಲಿ ಟ್ವೀಟ್ ಮಾಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅನಾಮಧೇಯ ಟ್ವಿಟರ್‌ ಖಾತೆಯೊಂದು ದೆಹಲಿ ಪೊಲೀಸರಿಗೆ ದೂರಿಕೊಂಡಿತ್ತು. ಇದರ ನಂತರ ಪ್ರಕರಣ ದಾಖಲಿಸಿರುವ ದೆಹಲಿ ಪೊಲೀಸರು ಅವರನ್ನು ಸೋಮವಾರ ಬಂಧಿಸಿದ್ದಾರೆ.

“ಇದೇ ರೀತಿಯ ಟ್ವೀಟ್‌ಅನ್ನು ಅನೇಕರು ಮಾಡಿದ್ದಾರೆ. ಆದರೆ ಆ ಖಾತೆ ಮತ್ತು ನನ್ನ ನಡುವಿನ ಏಕೈಕ ವ್ಯತ್ಯಾಸವೆಂದರೆ ನನ್ನ ಧರ್ಮ, ನನ್ನ ಹೆಸರು ಮತ್ತು ನನ್ನ ವೃತ್ತಿ” ಎಂದು ಜುಬೇರ್ ಹೇಳಿರುವುದಾಗಿ ವರದಿಯಾಗಿದೆ.

ಜುಬೈರ್ ಅವರು ಟ್ವೀಟ್ ಮಾಡಿದ್ದ ಚಿತ್ರ, 1983ರ ಹೃಷಿಕೇಶ್ ಮುಖರ್ಜಿ ಅವರ ‘ಕಿಸಿ ಸೆ ನಾ ಕೆಹನಾ’ ಚಲನಚಿತ್ರದ ಸ್ಕ್ರೀನ್‌ ಶಾರ್ಟ್ ಆಗಿದೆ. ಅವರು ಮಾಡಿದ್ದ ಟ್ವೀಟ್‌ನಲ್ಲಿ, ‘ಹನಿಮೂನ್ ಹೋಟೆಲ್’ ಎಂಬ ಬೋರ್ಡಿಗೆ ಬಣ್ಣ ಬಳಿದು, ‘ಹನುಮಾನ್ ಹೋಟೆಲ್’ ಎಂದು ಹಿಂದಿಯಲ್ಲಿ ಬರೆದಂತೆ ತೋರಿಸುವ ಚಿತ್ರಣವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಇಂತ ಕಳ್ಳನಿಗೆ ,ಅಯೋಗ್ಯನಿಗೆ ,ಸುಳ್ಳನಿಗೆ ದೇಶ ದ್ರೋಹಿಗೆ ನಿಮ್ಮಂತ ಅವನ ಬಳಗವೇ ಬೆಂಬಲಿಸಲು ಸಾಧ್ಯ ಅಯೋಗ್ಯರ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...