Homeರಾಷ್ಟ್ರೀಯಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಜಾಮೀನು ನಿರಾಕರಣೆ; ಹೊಸ ಆರೋಪಗಳನ್ನು ಸೇರಿಸಿದ ಪೊಲೀಸರು!

ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಜಾಮೀನು ನಿರಾಕರಣೆ; ಹೊಸ ಆರೋಪಗಳನ್ನು ಸೇರಿಸಿದ ಪೊಲೀಸರು!

- Advertisement -
- Advertisement -

2018 ರಲ್ಲಿ ಮಾಡಿದ್ದ ಟ್ವೀಟ್ ವಿಚಾರವಾಗಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್‌, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರಿಗೆ ನ್ಯಾಯಾಲಯವು ಶನಿವಾರ ಜಾಮೀನು ನಿರಾಕರಿಸಿದ್ದು, ಅವರನ್ನು ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಸೋಮವಾರದಂದು ಬಂಧನಕ್ಕೆ ಒಳಗಾಗಿದ್ದ ಅವರನ್ನು ಐದು ದಿನಗಳ ಕಸ್ಟಡಿಯಲ್ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡಲಾಗಿತ್ತು. ಕಸ್ಟಡಿಯಲ್ ವಿಚಾರಣೆ ಅವಧಿಯ ನಂತರ ದೆಹಲಿ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಕ್ಕೆ ಕಸ್ಟಡಿಯಲ್ ವಿಚಾರಣೆಯ ಅಗತ್ಯವಿಲ್ಲ, ಆದರೆ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಚಾರಣೆಯ ಸಂದರ್ಭದಲ್ಲಿ, ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶದ ಹೊಸ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ ಅದರ ಜೊತೆಗೆ ಎಫ್‌ಸಿಆರ್‌ಎ ಅಥವಾ ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆಯ ಸೆಕ್ಷನ್ 35 ರ ಹೊಸ ಪ್ರಕರಣಗಳನ್ನು ಕೂಡ ಜುಬೇರ್‌ ವಿರುದ್ಧ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

“ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶದ ಆರೋಪಗಳ ಜೊತೆಗೆ ಎಫ್‌ಐಆರ್‌‌ನಲ್ಲಿ ಎಫ್‌ಸಿಆರ್‌ಎ ಸೆಕ್ಷನ್ 35 ಅನ್ನೂ ಸೇರಿಸಲಾಗಿದೆ” ಎಂದು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. ಎಫ್‌ಐಆರ್‌ಗೆ ಕ್ರಿಮಿನಲ್ ಪಿತೂರಿಯನ್ನು ಸೇರಿಸಿದರೆ, ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತನಿಖೆಗೆ ಮುಂದಾಗುವ ಸಾಧ್ಯತೆಯಿದೆ.

ಪಾಕಿಸ್ತಾನ, ಸಿರಿಯಾ ಮತ್ತು ಇತರ ದೇಶಗಳಿಂದ ರೋಜರ್‌ಪೇ ಪಾವತಿ ಮೂಲಕ ಜುಬೇರ್ ಹಣವನ್ನು ಸ್ವೀಕರಿಸಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿಕೊಂಡಿದ್ದು, ಇದಕ್ಕೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜುಬೇರ್‌‌‌ ಬಂಧನದ ಐದು ದಿನದ ನಂತರ ದೂರುದಾರನನ್ನು ಹುಡುಕುತ್ತಿರುವ ದೆಹಲಿ ಪೊಲೀಸರು!

“ಅವರು ತಮ್ಮ ಫೋನ್‌ನೊಂದಿಗೆ ವಿಶೇಷ ಸೆಲ್‌ನ ಕಚೇರಿಗೆ ಬಂದರು. ಅದನ್ನು ವಿಶ್ಲೇಷಿಸಿದಾಗ, ಅವರು ಆ ದಿನಕ್ಕೂ ಮೊದಲು ಬೇರೆ ಸಿಮ್ ಬಳಸುತ್ತಿರುವುದು ಕಂಡುಬಂದಿದೆ. ಪೊಲೀಸರ ನೋಟಿಸ್ ಪಡೆದ ದಿನ ಅವರು ಅದನ್ನು ತೆಗೆದು ಹೊಸ ಮೊಬೈಲ್‌ಗೆ ಹಾಕಿದ್ದಾರೆ. ದಯವಿಟ್ಟು ಈ ವ್ಯಕ್ತಿ ಎಷ್ಟು ಬುದ್ಧಿವಂತ ಎಂದು ನೋಡಿ” ಎಂದು ಹೇಳಿದ ಅವರು ಜುಬೇರ್‌ ಅವರನ್ನು ಮತ್ತಷ್ಟು ಕಸ್ಟಡಿಗೆ ಕೋರಿದ್ದಾರೆ.

ಜುಬೇರ್ ಅವರ ವಕೀಲರು ತಮ್ಮ ಕಕ್ಷಿದಾರು ಪೊಲೀಸರ ತನಿಖೆಗೆ ಅಗತ್ಯವಿಲ್ಲ ಎಂದು ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯನ್ನು ಸಲ್ಲಿಸಿ, “ಅವರು ನನ್ನ(ಜುಬೇರ್‌) ಉಪಸ್ಥಿತಿಯನ್ನು ಭದ್ರಪಡಿಸಿಕೊಳ್ಳಲು ಬಯಸುತ್ತಿದ್ದಾರೆ, ಆದರೆ ನಾನು ಯಾವುದೇ ಭಯೋತ್ಪಾದಕನಲ್ಲ” ಎಂದು ವಕೀಲರು ಹೇಳಿದ್ದಾರೆ.

ಮೊಹಮ್ಮದ್ ಜುಬೇರ್ ಅವರನ್ನು ಜೂನ್ 27 ರಂದು ದೆಹಲಿ ಪೊಲೀಸರು ತಮ್ಮ ಟ್ವೀಟ್‌ಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಿದ್ದರು. ಅದೇ ದಿನ ವಿಚಾರಣಾ ನ್ಯಾಯಾಲಯವು ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು.

ಇದನ್ನೂ ಓದಿ: ಜುಬೇರ್‌ ಬಂಧನ: ಬರವಣಿಗೆ, ಟ್ವೀಟ್ ಆಧಾರದಲ್ಲಿ ಪತ್ರಕರ್ತರನ್ನು ಜೈಲಿಗೆ ಹಾಕಬಾರದು- ವಿಶ್ವಸಂಸ್ಥೆ

ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿದ್ದ ಬಿಜೆಪಿಯ ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಹೇಳಿಕೆಗಳ ವೀಡಿಯೊವನ್ನು ಎತ್ತಿತೋರಿಸಿದ ಕೆಲವೇ ದಿನಗಳಲ್ಲಿ ಜುಬೇರ್ ಅವರನ್ನು ಬಂಧಿಸಲಾಗಿದೆ. ಆದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಟ್ವಿಟರ್ ಬಳಕೆದಾರರು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸ್ನೇಹಿತರ’ ಮೇಲಿನ ದಾಳಿಯು ಮೋದಿಯ ಕುರ್ಚಿ ಅಲುಗಾಡುತ್ತಿರುವುದನ್ನು ತೋರಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

0
ತೆಲಂಗಾಣದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಚುನಾವಣೆ ಘೋಷಣೆಯಾದ ಬಳಿಕ ರಾಹುಲ್ ಗಾಂಧಿಯೇಕೆ ಅದಾನಿ–ಅಂಬಾನಿ ಬಗ್ಗೆ ಮಾತನಾಡುತ್ತಿಲ್ಲ. ಏನಾದರೂ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರಾ? ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ...