Homeರಾಷ್ಟ್ರೀಯಪುಲಿಟ್ಜರ್‌ ವಿಜೇತ ಕಾಶ್ಮೀರಿ ಫೋಟೋ ಜರ್ನಲಿಸ್ಟ್ ‘ಸನ್ನಾ ಇರ್ಷಾದ್ ಮಟ್ಟೂ’ ವಿದೇಶ ಪ್ರಯಾಣಕ್ಕೆ ತಡೆ

ಪುಲಿಟ್ಜರ್‌ ವಿಜೇತ ಕಾಶ್ಮೀರಿ ಫೋಟೋ ಜರ್ನಲಿಸ್ಟ್ ‘ಸನ್ನಾ ಇರ್ಷಾದ್ ಮಟ್ಟೂ’ ವಿದೇಶ ಪ್ರಯಾಣಕ್ಕೆ ತಡೆ

ವಿದೇಶಕ್ಕೆ ತೆರಳಲು ಅನುಮತಿ ನೀಡದೇ ಇರುವುದಕ್ಕೆ ಕಾರಣವೇನು ಎಂಬುದನ್ನು ಅಧಿಕಾರಿಗಳು ಹೇಳಲಿಲ್ಲ ಎಂದು ಅವರು ಹೇಳಿದ್ದಾರೆ

- Advertisement -
- Advertisement -

ತನ್ನ ಫೋಟೊಗಳಿಗಾಗಿ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ ವಿಜೇತರಾಗಿರುವ ಖ್ಯಾತ ಕಾಶ್ಮೀರಿ ಫೋಟೋ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂ ಅವರನ್ನು ದೆಹಲಿಯ ವಿಮಾನ ನಿಲ್ದಾಣದ ಅಧಿಕಾರಿಗಳು ವಿದೇಶಕ್ಕೆ ತೆರಳದಂತೆ ತಡೆದಿದ್ದಾರೆ ಎಂದು ಶನಿವಾರ ಆರೋಪಿಸಿದ್ದಾರೆ. ಮಾನ್ಯ ಮಾಡಲಾಗಿರುವ ಫ್ರೆಂಚ್ ವೀಸಾವನ್ನು ಹೊಂದಿದ್ದರೂ ದೆಹಲಿಯಿಂದ ಪ್ಯಾರಿಸ್‌ಗೆ ತೆರಳಲು ಪ್ರಯತ್ನಿಸುತ್ತಿರುವಾಗ ಅಧಿಕಾರಿಗಳು ತನ್ನನ್ನು ತಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಸೆರೆಂಡಿಪಿಟಿ ಆರ್ಲೆಸ್ ಅನುದಾನ-2020’ ರ 10 ಪ್ರಶಸ್ತಿ ವಿಜೇತರಲ್ಲಿ ಒಬ್ಬರಾಗಿ ಪುಸ್ತಕ ಬಿಡುಗಡೆ ಮತ್ತು ಛಾಯಾಗ್ರಹಣ ಪ್ರದರ್ಶನಕ್ಕಾಗಿ ಪ್ಯಾರಿಸ್‌ಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ ಎಂದು ಸನ್ನಾ ಅವರು ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿದೇಶಕ್ಕೆ ತೆರಳಲು ಅನುಮತಿ ನೀಡದೇ ಇರುವುದಕ್ಕೆ ಕಾರಣವೇನು ಎಂಬುದನ್ನು ಅಧಿಕಾರಿಗಳು ಹೇಳಲಿಲ್ಲ, ಆದರೆ ಸರಳವಾಗಿ ಅಂತಾರಾಷ್ಟ್ರೀಯವಾಗಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಹೇಳಿದರು ಎಂದು ಸನ್ನಾ ಹೇಳಿದ್ದಾರೆ.

ಸ್ವತಂತ್ರ ಛಾಯಾಗ್ರಾಹಕಿಯಾಗಿರುವ ಸನ್ನಾ ಅವರು 2022ರ ಮೇ ತಿಂಗಳಲ್ಲಿ ರಾಯಿಟರ್ಸ್ ಪ್ರಕಟಿಸಿದ ಅವರ ಚಿತ್ರಕ್ಕಾಗಿ ‘ವೈಶಿಷ್ಟ್ಯ ಛಾಯಾಗ್ರಹಣ ವಿಭಾಗ’ದಲ್ಲಿ ಪುಲಿಟ್ಜೆರ್ ಪ್ರಶಸ್ತಿಯನ್ನು ಗೆದ್ದಿದ್ದರು. ಭಾರತದಲ್ಲಿನ ಕೊರೊನಾ ಬಿಕ್ಕಟ್ಟಿನ ಚಿತ್ರಗಳನ್ನು ಹಿಡಿದಿದ್ದಕ್ಕಾಗಿ ಸನ್ನಾ ಅವರೊಂದಿಗೆ ದಿವಂಗತ ಡ್ಯಾನಿಶ್ ಸಿದ್ದಿಕಿ, ಅಮಿತ್ ದವೆ ಮತ್ತು ಅದ್ನಾನ್ ಅಬಿದಿ ಸೇರಿದ ರಾಯಿಟರ್ಸ್ ತಂಡ ಪ್ರಶಸ್ತಿ ವಿಜೇತರಾಗಿದ್ದಾರೆ.

ಇದನ್ನೂ ಓದಿ: ಫೀಚರ್‌ ಫೋಟೊಗ್ರಫಿಗಾಗಿ ಪ್ರತಿಷ್ಠಿತ ‘ಪುಲಿಟ್ಜರ್‌‌-2022’ ಪ್ರಶಸ್ತಿ ಗೆದ್ದ ಭಾರತೀಯ ಪತ್ರಕರ್ತರ ಪರಿಚಯ ಮತ್ತು ಫೊಟೊಗಳು ಹೀಗಿವೆ

ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾನಿಲಯದಿಂದ ಕನ್ವರ್ಜೆಂಟ್ ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸನ್ನಾ, ಪ್ರಪಂಚದಾದ್ಯಂತದ ಹಲವಾರು ಮಳಿಗೆಗಳಲ್ಲಿ ತಮ್ಮ ಕೃತಿಗಳನ್ನು ಪ್ರಕಟಿಸಿದ್ದಾರೆ. 2021 ರಲ್ಲಿ, ಅವರಿಗೆ ಪ್ರತಿಷ್ಠಿತ ಮ್ಯಾಗ್ನಮ್ ಫೌಂಡೇಶನ್‌ನಲ್ಲಿ ಫೆಲೋಶಿಪ್ ನೀಡಲಾಯಿತು.

ಯಾವುದೇ ಮುನ್ಸೂಚನೆ ನೀಡದೆ ಕಾಶ್ಮೀರಿ ಪತ್ರಕರ್ತರನ್ನು ದೇಶ ತೊರೆಯದಂತೆ ತಡೆದಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 2019 ರಲ್ಲಿ, ಕೇಂದ್ರ ಸರ್ಕಾರವು ಆರ್ಟಿಕಲ್ 370 ಅನ್ನು ವಾಪಾಸು ಪಡೆದ ಕೂಡಲೇ, ಪತ್ರಕರ್ತ-ಲೇಖಕ ಗೌಹರ್ ಗಿಲಾನಿ ಅವರನ್ನು ಕೂಡಾ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾನ್‌ಗೆ ಪ್ರಯಾಣಿಸುವುದನ್ನು ತಡೆಯಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...