'ಜವಹರಲಾಲ್ ನೆಹರೂ ವಿವಿ'ಯ ಪ್ರತಿಯೊಬ್ಬರೂ ಅಭಿನಂದನಾರ್ಹರು - ರಾಮನಾಥ್ ಕೋವಿಂದ್

ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ಹೊಗಳಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, “ಇಲ್ಲಿನ ಬೋಧನೆ ಮತ್ತು ಸಂಶೋಧನೆ ಶಿಕ್ಷಣ ತಜ್ಞರ ಜಗತ್ತಿನಲ್ಲಿ ಅಗಾಧ ಪರಿಣಾಮ ಬೀರಿದೆ” ಎಂದು ಹೇಳಿದ್ದಾರೆ. ಜೆಎನ್‌ಯು ವಿವಿಯ 2020ರ ಘಟಿಕೋತ್ಸವದಲ್ಲಿ ಮಾತನಾಡಿದ ರಾಷ್ಟ್ರಪತಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿಗಳ ಹೇಳಿಕೆಯ ಕುರಿತು ಟ್ವೀಟ್ ಮಾಡಿರುವ ಎಎನ್‌ಐ, “ಸಮಾಜ ವಿಜ್ಞಾನದಿಂದ ತಂತ್ರಜ್ಞಾನದವರೆಗಿನ ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟವನ್ನು ಹೊಂದಿರುವುದಕ್ಕಾಗಿ ಜೆಎನ್‌ಯುಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ಪ್ರಶಂಸಿಸುತ್ತೇನೆ. ಇಲ್ಲಿನ ಬೋಧನೆ ಮತ್ತು ಸಂಶೋಧನೆ ಎರಡೂ ಶಿಕ್ಷಣ ತಜ್ಞರ ಜಗತ್ತಿನ ಮೇಲೆ ಅಗಾಧ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ” ಎಂಬುದಾಗಿ ವರದಿ ಮಾಡಿದೆ.

ಇದನ್ನೂ ಓದಿ: ಜೆಎನ್‌ಯು ಮರುನಾಮಕರಣವಾಗಲಿ ಎಂದ ಸಿ.ಟಿ. ರವಿಯನ್ನು ತರಾಟೆಗೆ ಪಡೆದ ನೆಟ್ಟಿಗರು!

“ಸಮಗ್ರ ಶಿಕ್ಷಣದ ಪರಿದೃಷ್ಟಿಯಲ್ಲಿ, ಯುವಜನರ ಕೌಶಲ್ಯ, ಅಭಿವೃದ್ಧಿ ಮತ್ತು ಉದ್ಯೋಗವನ್ನು ಒದಗಿಸುವ ಉದ್ದೇಶದಿಂದ ಹೊಸ ಅಧ್ಯಯನ ಕ್ಷೇತ್ರಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಜೆಎನ್‌ಯು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದು ಜ್ಞಾನ ಆಧಾರಿತ ಉದ್ಯಮಗಳನ್ನು ರಚಿಸಲು ಮತ್ತು ನಮ್ಮ ಆರ್ಥಿಕತೆಗೆ ಕೊಡುಗೆ ನೀಡಲು ಸಹಕಾರಿಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಜೆಎನ್‍ಯು, ಜಾಮಿಯಾ ಮತ್ತು ಬೀದರ್‌ ಪ್ರಕರಣ: ನಮ್ಮ ಪೊಲಿಸರು ಹಿಂಗ ಯಾಕ ಅದಾರ?

ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕುರಿತು ಕೆಲವು ಮುಂಚೂಣಿಯ ನಾಯಕರು ತಪ್ಪಾಗಿ ಮಾತನಾಡುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಪತಿಗಳ ಈ ಅಭಿಪ್ರಾಯವು ಅತ್ಯಂತ ಮಹತ್ವದ್ದೆನಿಸಿದೆ.

ಇದನ್ನೂ ಓದಿ: ಜೆಎನ್‍ಯು ಘಟನೆ: ಸಂಪೂರ್ಣ ಹಿನ್ನೆಲೆ ಮತ್ತು ಉತ್ತರವಿಲ್ಲದ ಪ್ರಶ್ನೆಗಳು – ಪ್ರೊ. ಪುರುಷೋತ್ತಮ ಬಿಳಿಮಲೆ

ಕೇವಲ ಪುಸ್ತಕದ ಜ್ಞಾನ ಮಾತ್ರವಲ್ಲದೇ ಸಾಮಾಜಿಕ ಜ್ಞಾನವನ್ನೂ ಆಧರಿಸಿ ಶಿಕ್ಷಣ ನೀಡುತ್ತಿರುವ ಜೆಎನ್‌ಯು ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಈ ವಿವಿಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಜಗತ್ತಿನಾದ್ಯಂತ ದೊಡ್ಡ ವಿದ್ವಾಂಸರಾಗಿ ಹೊರಹೊಮ್ಮಿದ್ದಾರೆ.

ಆದರೆ ಇತ್ತೀಚೆಗೆ ಈ ವಿವಿಯ ವರ್ಚಸ್ಸನ್ನು ಕುಂದಿಸುವ ಕೆಲಸಗಳು ಪ್ರಭುತ್ವದಿಂದಲೇ ನಡೆಯುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಿಸುತ್ತಿದೆ. ಸಾಂವಿಧಾನಿಕ ಮೌಲ್ಯಗಳು, ಪ್ರಶ್ನಿಸುವ ಹಕ್ಕನ್ನು ಧಮನಿಸುವ ಭಾಗವಾಗಿ ಜೆಎನ್‌ಯು ವಿದ್ಯಾರ್ಥಿ ಮತ್ತು ವಿದ್ವಾಂಸರ ಮೇಲೆ ಪ್ರಭುತ್ವ ಹಗೆ ಸಾಧಿಸುತ್ತಿದೆ.


ಇದನ್ನೂ ಓದಿ: ಸಂಘಪರಿವಾರ, ಸರ್ಕಾರದ ದಾಳಿಗೆ ಹೆದರುವುದಿಲ್ಲ: ಮತ್ತಷ್ಟು ಪ್ರಶ್ನಿಸುತ್ತೇವೆ – ಜೆಎನ್‌ಯು ವಿದ್ಯಾರ್ಥಿಗಳ ಗುಡುಗು…

LEAVE A REPLY

Please enter your comment!
Please enter your name here