Homeಕರ್ನಾಟಕಜೆಎನ್‌ಯು ಮರುನಾಮಕರಣವಾಗಲಿ ಎಂದ ಸಿ.ಟಿ. ರವಿಯನ್ನು ತರಾಟೆಗೆ ಪಡೆದ ನೆಟ್ಟಿಗರು!

ಜೆಎನ್‌ಯು ಮರುನಾಮಕರಣವಾಗಲಿ ಎಂದ ಸಿ.ಟಿ. ರವಿಯನ್ನು ತರಾಟೆಗೆ ಪಡೆದ ನೆಟ್ಟಿಗರು!

ಅಗಾಗ ಒಳ್ಳೆಯ ಕಾಮಿಡಿ ಮಾಡುತ್ತೀರಿ, ಹೀಗೆ ನಿಮ್ಮ ಕಾಮಿಡಿ ಮುಂದುವರೆಸಿ, ಇನ್ನಷ್ಟು ಮನರಂಜನೆ ಕೊಡಿ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

- Advertisement -
- Advertisement -

ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಹಾಗೂ ಕ್ಯಾಂಪಸ್ ಡೆಮಾಕ್ರಸಿಯನ್ನು ಇನ್ನೂ ಉಳಿಸಿಕೊಂಡಿರುವ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಹೆಸರನ್ನು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾನಿಯಲ ಎಂದು ಬದಲಿಸುವುದೆ ಸರಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದು, ಇದೀಗ ನೆಟ್ಟಿಗರು ಅವರನ್ನು ತರಾಟೆಗೆ ಪಡೆದಿದ್ದಾರೆ.

1966 ರ ವಿಶೇಷ ಕಾಯ್ದೆಯ ಪ್ರಕಾರ ಹಿಂದುಳಿದ ಪ್ರದೇಶದ ಮತ್ತು ವರ್ಗದ ಮಕ್ಕಳು ದೇಶದ ರಾಜಧಾನಿಯಲ್ಲಿದ್ದು ಅಧ್ಯಯನ ಮಾಡಬೇಕು ಎಂಬ ಉದ್ದೇಶದಿಂದ ಜವಾಹರಲಾಲ್ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಲಾಗಿತ್ತು. ಆರಂಭದಿಂದಲೇ ಜೆಎನ್‌‌ಯು ಪ್ರಭುತ್ವವನ್ನು ಪ್ರಶ್ನಿಸುತ್ತಲೆ ಬಂದಿರುವ ವಿಶ್ವವಿದ್ಯಾನಿಯಲವಾಗಿದ್ದು ದೇಶಕ್ಕೆ ಹಲವಾರು ಧೀಮಂತ ನಾಯಕರನ್ನು ನೀಡಿದೆ. ಅದರಂತೆ ಸಹಜವಾಗಿಯೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕೂಡಾ ಈ ಬಾರಿ ಮಗ್ಗುಲ ಮುಳ್ಳಾಗಿ ಕಾಡಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿತರಿಂದ ಅಲ್ಲಿ ಹಲವಾರು ದಾಳಿಗಳಾಗಿದೆ ಎಂದು ಹಲವಾರು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ: ಒಲ್ಲದ ಮನಸ್ಸಿನಿಂದ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಸಿ.ಟಿ.ರವಿ?

ಇದೀಗ ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಜೆಎನ್‌ಯು ಹೆಸರನ್ನು ಬದಲಾಯಿಸಬೇಕು ಎಂದು ವಿವಾದ ಮೈಗೆಳೆದಿದ್ದು ಟ್ವೀಟ್ಟರ್‌ನಲ್ಲಿ, “ಸ್ವಾಮಿ ವಿವೇಕಾನಂದರು ಭಾರತ ಎಂಬ ಪರಿಕಲ್ಷನೆಯ ಪರವಾಗಿ ನಿಂತರು. ಅವರ ತತ್ವಶಾಸ್ತ್ರ ಮತ್ತು ಮೌಲ್ಯಾದರ್ಶಗಳೇ ಭಾರತದ ಬಲ ಮತ್ತು ಶಕ್ತಿಯಾಗಿದೆ. ಜೆಎನ್‌ಯು ಹೆಸರನ್ನು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾನಿಯಲ ಎಂದು ಬದಲಿಸುವುದೆ ಸರಿಯಾಗಿದೆ. ರಾಷ್ಟ್ರಪ್ರೇಮಿ ಸಂತನ ಜೀವನ ತಲೆಮಾರುಗಳ ತನಕ ಪ್ರೇರಣೆ ಆಗಲಿ” ಎಂದು ಬರೆದಿದ್ದಾರೆ.

ಆದರೆ ಅವರ ಟ್ವೀಟ್‌‌ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜಯ್ ಎಂಬವರು, “ನಿಮಗೆ ಸ್ವಂತಿಕೆ ಎನ್ನೋದು ಇಲ್ವಾ. ಇನ್ನೊಬ್ಬರ ಕೆಲಸವನ್ನು ತಿರುಚುವ ಪ್ರಯತ್ನ ಯಾಕೆ, ಈವಾಗ ನೀವು ಬದಲಾಯಿಸಿದರೆ ಮುಂದೆ ಅವರು ಅಧಿಕಾರಕ್ಕೆ ಬಂದಾಗ ಅವರು ಅದೇ ಮಾಡುತ್ತಾರೆ. ಹೊಸದಾಗಿ ಯೂನಿವರ್ಸಿಟಿ ಕಟ್ಟಿ ಅದಕ್ಕೆ ಹೆಸರಿಡಿ, ಸುಮ್ಮನೆ ಯಾವಾಗಲೂ ಬೆಂಕಿ ಹಚ್ಚುವ ಹೇಳಿಕೆ ಹಾಗೂ ಕೆಲಸಗಳು ಯಾಕೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಮರ ವಿರುದ್ಧ ಪೋಸ್ಟ್‌ ಹಾಕಿದ ಸಂಘ ಪರಿವಾರ ಕಾರ್ಯಕರ್ತನ ಬಂಧನ: ಆರೋಪಿ ಪರ ನಿಂತ ಸಚಿವ ಸಿ.ಟಿ ರವಿ

ಸೂರ್ಯ ಎಂಬವರು, “ಸಾರ್ ಹಾಗೆ ನಿಮ್ಮ ಹೆಸರನ್ನು, ನಿಮ್ಮ ಪಾರ್ಟಿ ಹೆಸರನ್ನು ಬದಲಾಯಿಸಿ ಕೊಂಡು ಬಿಡಿ. ನಮಗೆ ಇನ್ನೂ ಖುಷಿ ಆಗುತ್ತದೆ. ಆನಂತರ ಅಗಾಗ ಒಳ್ಳೆ ಕಾಮಿಡಿ ಮಾಡುತ್ತೀರಿ, ಹೀಗೆ ನಿಮ್ಮ ಕಾಮಿಡಿ ಮುಂದುವರೆಸಿ, ಇನ್ನಷ್ಟು ಮನರಂಜನೆ ಕೊಡಿ” ಎಂದು ವ್ಯಂಗ್ಯವಾಡಿದ್ದಾರೆ.

ನವೀನ್ ಎಂಬವರು, “ಜವಾಹರ ಲಾಲ್ ನೆಹರು ಸಹ ದೇಶ ಕಟ್ಟಿದ್ದಾರೆ ದೇಶಕ್ಕಾಗಿ ದುಡಿದಿದ್ದಾರೆ. ಯಾಕೆ ಅವರ ಹೆಸರು ಹೇಳದೆ ನಿಮ್ಮಿಂದ ರಾಜಕಿಯ ಮಾಡಕ್ಕೆ ಯೋಗ್ಯತೆಯಿಲ್ಲ” ಎಂದು ಪ್ರಶ್ನಿಸಿದ್ದಾರೆ.

ಸಂತೋಷ್ ಕುಮಾರ್‌, “ಬರಿ ಹೆಸರು ಬದಲಾಯಿಸುವುದಲ್ಲೇ ನಿಮ್ಮ ಜೀವನ ಕಳೆದು ಹೋಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಭೀಫ್‌ ಖಾದ್ಯದ ಫೋಟೊ ಷೇರ್‌ ಮಾಡಿದ ಸಚಿವ ಸಿ.ಟಿ ರವಿ ; ನೆಟ್ಟಿಗರಿಂದ ಫುಲ್‌ ಟ್ರೋಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...