Homeಮುಖಪುಟಅಧಿಕಾರಕ್ಕೆ ಸತ್ಯ ನುಡಿದ ತೀಸ್ತಾ ಬಂಧನ; ಸುಪ್ರೀಂ ಕೋರ್ಟ್ ತನ್ನ ಜವಾಬ್ದಾರಿಯನ್ನು ಮರೆಯಿತೇ?

ಅಧಿಕಾರಕ್ಕೆ ಸತ್ಯ ನುಡಿದ ತೀಸ್ತಾ ಬಂಧನ; ಸುಪ್ರೀಂ ಕೋರ್ಟ್ ತನ್ನ ಜವಾಬ್ದಾರಿಯನ್ನು ಮರೆಯಿತೇ?

- Advertisement -
- Advertisement -

ಭಾರತದ ಅತ್ಯಂತ ಪ್ರಸಿದ್ಧ ವಕೀಲರಲ್ಲಿ ಒಬ್ಬರಾದ ಫಾಲಿ ನಾರಿಮನ್ ಅವರು ತೀಸ್ತಾ ಸೆತಲ್ವಾಡ್ ಅವರನ್ನು ಫುಟ್‌ಸೋಲ್ಜರ್ ಆಫ್ ಇಂಡಿಯನ್ ಕಾನ್‌ಸ್ಟಿಟ್ಯೂಶನ್- ಅಂದರೆ, ಸಂವಿಧಾನದ ಕಾಲಾಳು ಎಂದು ಕರೆದರು. ಇವತ್ತು ಅದೇ ಸಂವಿಧಾನವನ್ನು ರಕ್ಷಿಸಲು, ಅದನ್ನು ಸಮರ್ಥಿಸಲು ಶತಾಯಗತಾಯ ಯತ್ನಿಸಿದ ತೀಸ್ತಾ ಸೆತಲ್ವಾಡ್ ಅವರನ್ನು ಬಂಧಿಸಲಾಗಿದೆ. ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಬೆನ್ನಲ್ಲಿ ನಡೆದ, ಸ್ವಾತಂತ್ರೋತ್ತರ ಭಾರತದ ಹೀನಾಯ ಮತ್ತು ಅನ್ಯಾಯದ ನರಮೇಧಕ್ಕೆ ಸಂಬಂಧಿಸಿದಂತೆ ನ್ಯಾಯದ ಬೆನ್ನು ಹತ್ತಿದ್ದಕ್ಕಾಗಿ ಅವರು ಬಂಧನಕ್ಕೆ ಗುರಿಯಾಗಿಸಲಾಗಿದೆ.

ತೀಸ್ತಾ ಬಂಧನಕ್ಕೆ ಚಿತಾವಣೆ ನೀಡಿದ್ದು ಸುಪ್ರೀಂ ಕೋರ್ಟ್ 24, ಜೂನ್ 2022ರಂದು (ತುರ್ತು ಪರಿಸ್ಥಿತಿ ಘೋಷಣೆಯ 47ನೇ ವರ್ಷದ ಒಂದು ದಿನ ಮೊದಲೆಂಬುದು ವಿಪರ್ಯಾಸ) ಝಾಕಿಯಾ ಜಾಫ್ರಿ ಅವರ ಅರ್ಜಿಯನ್ನು ತಿರಸ್ಕರಿಸುತ್ತಾ ನೀಡಿದ ತೀರ್ಪಿನ ಒಂದು ಪ್ಯಾರ. ಜಾಫ್ರಿ ಅವರು 2002ರಲ್ಲಿ ಗುಜರಾತಿನಲ್ಲಿ ನಡೆದ ನರೆಮೇಧದ ಹಿಂದಿರುವ ಸಂಚಿನ ಕುರಿತು ತನಿಖೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸುತ್ತಾ, ’ಗುಜರಾತ್ ರಾಜ್ಯದ ಅತೃಪ್ತ ಅಧಿಕಾರಿಗಳು ಇತರರ ಜೊತೆ ಸೇರಿ ಸಾಮೂಹಿಕವಾಗಿ ತಮಗೆ ತಿಳಿದಿದ್ದರೂ ಸುಳ್ಳಾಗಿರುವ ಮಾಹಿತಿಗಳನ್ನು ಬಹಿರಂಗಪಡಿಸಿದರು ಭಾವನಾತ್ಮಕವಾಗಿ ಕೆರಳಿಸಿದರು’ ಎಂದು ಹೇಳಿದೆ.

ಅಮಿತ್ ಶಾ

ನಂತರ ಈ ತೀರ್ಪು ಹೇಳಿದ್ದೇನೆಂದರೆ, ಹದಿನಾರು ವರ್ಷಗಳ ದೀರ್ಘಕಾಲ ತಮ್ಮ ಅಲ್ಪಸಂಖ್ಯಾತರ ಸ್ಥಾನಮಾನದ ಕಾರಣದಿಂದ ಗುರಿಪಡಿಸಲಾದ ಜನರ ಪರವಾಗಿ ನಿಂತವರಿಗೆ ’ಪ್ರತಿಯೊಬ್ಬ ಅಧಿಕಾರಿಯ ಪ್ರಾಮಾಣಿಕತೆಯನ್ನು’ ಪ್ರಶ್ನಿಸುವ, ಪ್ರಕ್ರಿಯೆಯನ್ನು ಪ್ರಶ್ನಿಸುವ ’ಉದ್ಧಟತನ’ ಇತ್ತು ಎಂದು ಬಣ್ಣಿಸಿತು. ಅವರ ಉದ್ದೇಶವೇ ’ದುರುದ್ದೇಶ’ದಿಂದ ಕೂಡಿದೆ ಎಂದು ನ್ಯಾಯಾಲಯ ಹೇಳಿತು. ಈ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡ ಪ್ರತಿಯೊಬ್ಬರು ಜೈಲಿನಲ್ಲಿ ಇರಬೇಕಾಗಿದ್ದು, ಕಾನೂನಿನ ಪ್ರಕಾರ ಅವರ ಜೊತೆ ವ್ಯವಹರಿಸಬೇಕು ಎಂದು ಅದು ಹೇಳಿತು.

ಈ ತೀರ್ಪು ಬಂದ ಒಂದು ದಿನ ನಂತರ, ಅಂದರೆ ತುರ್ತು ಪರಿಸ್ಥಿತಿಯ ವರ್ಷಾಚರಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ, ತೀಸ್ತಾ ಸೆತಲ್ವಾಡ್ ಮತ್ತು ಅವರು ನಡೆಸುತ್ತಿರುವ ಎನ್‌ಜಿಒ ಗಲಭೆಗಳ ಬಗ್ಗೆ ಪೊಲೀಸರಿಗೆ ಆಧಾರರಹಿತ ಮಾಹಿತಿಗಳನ್ನು ನೀಡಿದೆ ಎಂದು ತೀರ್ಪ ಹೇಳಿದೆಯೆಂದರು.

ಇದಾದ ಕೆಲವೇ ಗಂಟೆಗಳಲ್ಲಿ ಪೊಲೀಸರು (ಎಟಿಎಸ್) ತೀಸ್ತಾ ಸೆತಲ್ವಾಡ್ ಅವರನ್ನು ಅವರ ಮನೆಯಿಂದಲೇ ಬಂಧಿಸಿದರು. ಅವರ ಮೇಲೆ ಇರುನ ಆರೋಪ ಎಂದರೆ, ಆವರು ಫೋರ್ಜರಿ ಮಾಡಿದ್ದಾರೆ, ಆರೋಪಿ ವಿರುದ್ಧ ತೀರ್ಪು ಪಡೆಯುವ ಸಲುವಾಗಿ ಸುಳ್ಳು ಸಾಕ್ಷ್ಯ ನೀಡಿದ್ದಾರೆ ಎಂದು ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹೇಳುತ್ತದೆ. ಈ ಅಪರಾಧವನ್ನು ಮಾಡುವುದಕ್ಕೆ ಪಿತೂರಿ ಎಸಗಿರುವುದಕ್ಕೆ ಸಹ ಆರೋಪಿಗಳೆಂದು ಬಂಧಿತ ಪೊಲೀಸ್ ಅಧಿಕಾರಿಗಳಾದ ಸಂಜೀವ ಭಟ್ ಮತ್ತು ಆರ್.ಬಿ ಶ್ರೀಕುಮಾರ್ ಅವರನ್ನು ಹೆಸರಿಸಲಾಗಿದೆ.

ಈ ಮೂವರು ಮಾಡಿದ್ದೇನು?

ಶ್ರೀಕುಮಾರ್ ಅವರು ಗುಜರಾತಿನ ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ಧರು (ಎಡಿಜಿಪಿ). ಇವರು ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಗುಜರಾತ್ ಆಡಳಿತ ಎಸಗಿದ ತಪ್ಪುಗಳಿಗೆ ಮತ್ತು ಕೃತ್ಯಗಳಿಗೆ ಸಂಬಂಧಿಸಿ ನಾನಾವತಿ ತನಿಖಾ ಆಯೋಗದ ಮುಂದೆ ಅಫಿಡವಿಟ್ ಸಲ್ಲಿಸಿದ್ದರು.

ತೀರ್ಪಿನಲ್ಲಿ ದಾಖಲಿಸಿರುವ ಪ್ರಕಾರ, ’ಅಂದಿನ ಮುಖ್ಯಮಂತ್ರಿ ಅಧ್ಯಕ್ಷತೆ ವಹಿಸಿ ಡಿಜಿಪಿ, ಅಂದಿನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದಾಗ, ಗೋಧ್ರಾ ಘಟನೆಯ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಮೇಲೆ ಹಿಂದೂಗಳ ಕೋಪ ತೋರಿಸಲು ಬಿಡಬೇಕೆಂದಿದ್ದರು’ ಎಂದು ಸಂಜೀವ್ ಭಟ್ ಹೇಳಿದ್ದರು ಎಂದು ತಿಳಿಸಲಾಗಿತ್ತು.

ತೀರ್ಪು ಮುಂದುವರೆದು, ಆರ್ ಬಿ ಶ್ರೀಕುಮಾರ್ ಅಥವಾ ಸಂಜೀವ್ ಭಟ್ ಅವರ ಹೇಳಿಕೆ ನಿರಾಧಾರವಾದದ್ದು ಅನ್ನುವುದಲ್ಲದೆ, ಆ ಸಭೆಯಲ್ಲಿ ಸಂಜೀವ್ ಭಟ್ ಹಾಜರಿರಲಿಲ್ಲದ ಕಾರಣ ಅಲ್ಲಿ ನಡೆದಿದ್ದದ್ದು ಏನು, ಅಲ್ಲಿ ಏನು ಹೇಳಲಾಗಿದೆ ಎಂಬುದು ಅವರಿಗೆ ಗೊತ್ತಿಲ್ಲದಿರಲು ಸಾಧ್ಯವಿಲ್ಲ ಎಂದು ಹೇಳುವ ಮಟ್ಟಕ್ಕೂ ಈ ಸುಪ್ರೀಂ ಕೋರ್ಟ್ ತೀರ್ಪು ಹೋಗಿದೆ. ’ರಾಜ್ಯದಾದ್ಯಂತ ನಡೆದ ಭಾರೀ ಪ್ರಮಾಣದ ಹಿಂಸಾಚಾರದ ವಿವಿಧ ಪ್ರತ್ಯೇಕ ಘಟನೆಗಳನ್ನು’ ದೊಡ್ಡ ಮಟ್ಟದ ಸಂಚಿಗೆ ಬೆಸೆಯುವ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದೂ ತೀರ್ಪು ಹೇಳಿದೆ. ಈ ತೀರ್ಮಾನಕ್ಕೆ ಬರಲು ಸುಪ್ರೀಂ ಕೋರ್ಟು ವಿಶೇಷ ತನಿಖಾ ದಳದ (ಎಸ್‌ಐಟಿ) ವಿಚಾರಣೆಯನ್ನು ಒಪ್ಪಿದೆ. ಆದರೆ, ಸುಪ್ರೀಂ ಕೋರ್ಟ್ ನೇಮಿಸಿದ್ದ ಸಲಹೆಗಾರರಾದ ರಾಜು ರಾಮಚಂದ್ರನ್ ಅವರು 2002ರ ಗುಜರಾತ್ ಗಲಭೆಗೆ ನ್ಯಾಯ ಒದಗಿಸಿಕೊಡುವ ಬಗೆಗಿದ್ದ ಸಮಸ್ಯೆಗಳನ್ನು ವ್ಯಕ್ತಪಡಿಸಿದ್ದರು. ಅವರು ಹೇಳಿದ್ದು ಏನೆಂದರೆ, 27.02.2002ರಂದು ಸೇರಿದ್ದ ಸಭೆಯಲ್ಲಿ ಮೋದಿಯವರ ವಿರುದ್ಧ ಮಾತಾಡಲು ಯಾರೂ, ವಿಶೇಷವಾಗಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ವಸ್ತುಶಃ ಸಾಧ್ಯವೇ ಇಲ್ಲವೆಂದು.

ಸಂಜೀವ ಭಟ್

ತನ್ನ ಮುಂದೆ ಇರುವ ಸಾಕ್ಷ್ಯಗಳು ಒಂದು ಸಂಚಿನ ಸೂಚನೆ ನೀಡದೇ ಇರಬಹುದು. (ಮೇಲೆ ಹೇಳಿದ ಸಲಹೆಗಾರರು ಸೂಚಿಸಿದ ಕಾರಣಕ್ಕಾಗಿ) ಆದರೆ, ಹಿಂಸಾಚಾರ ಏಕೆ ನಡೆಯಿತು? ಆಗ ಅಧಿಕಾರದ ಎಲ್ಲಾ ನಿಯಂತ್ರಣಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ ವ್ಯಕ್ತಿ ಅದನ್ನು ನಿಯಂತ್ರಿಸಲು ಯಾವ ಪ್ರಯತ್ನವನ್ನೂ ಯಾಕೆ ಮಾಡಲಿಲ್ಲ ಎಂಬುದು ಮೂಲ ಪ್ರಶ್ನೆಯಾಗಿಯೇ ಉಳಿಯುತ್ತದೆ. ಹೀಗಿದ್ದಾಗ್ಯೂ, ಕೋರ್ಟ್ ಅಂದಿನ ಮುಖ್ಯಮಂತ್ರಿ ನೀಡಿದ ’ಮುಲಾಜಿಲ್ಲದೆ ಕೋಮು ಸೌಹಾರ್ದವನ್ನು ಕಾಪಾಡುವುದಕ್ಕೆ ಸ್ಪಷ್ಟ ಮತ್ತು ನಿಖರ ಸೂಚನೆಗಳನ್ನು ನೀಡಿದ್ದೆ’ ಎಂಬ ಹೇಳಿಕೆಯಿಂದ ತೃಪ್ತಿಗೊಂಡಿರುವಂತೆ ಕಾಣುತ್ತದೆ.

ಅಂತಹ ಸೂಚನೆಗಳ ಹೊರತಾಗಿಯೂ ಗುಜರಾತಿನಾದ್ಯಂತ ಹಿಂಸೆ ಹೇಗೆ ಆವರಿಸಿಕೊಂಡಿತು ಏಕೆ ಎಂಬುದನ್ನು ಎಸ್‌ಐಟಿ ತನಿಖೆ ಮಾಡಲಿಲ್ಲ. ಸುಪ್ರೀಂ ಕೋರ್ಟ್ ಅದನ್ನು ಕೇಳಲೂ ಇಲ್ಲ. ಈ ಪ್ರಶ್ನೆಗೆ ಉತ್ತರ ಸಿಗಬೇಕಿದ್ದರೆ, ಸಾಬೀತುಪಡಿಸಲು ಕಷ್ಟವಿರುವ ಪಿತೂರಿಯ ಮುಖ್ಯ ಹಂತದ ಬಗ್ಗೆ ದೃಷ್ಟಿಹರಿಸುವುದರ ಬದಲು ಈ ಹಿಂಸಾಚಾರದ ಅಪರಾಧಗಳು ನಡೆದಾಗ ಅದನ್ನು ತಡೆಯಬೇಕಿದ್ದವರು ಯಾರೆಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು.

2002ರ ನರಮೇಧಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೂ ನ್ಯಾಯ ಒದಗಿಸಲು ಎಲ್ಲಾ ಕಾನೂನು ಮಾರ್ಗಗಳನ್ನು ಬಿಡುವಿಲ್ಲದೆ ಹುಡುಕುತ್ತಿದ್ದ ವ್ಯಕ್ತಿ ತೀಸ್ತಾ ಸೆತಲ್ವಾಡ್. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ವಿಧಿ 28(ಬಿ) ಅಡಿಯಲ್ಲಿ ಏನು ಹೇಳುತ್ತದೆ ಎಂದರೆ, ಅಪರಾಧ ಕೃತ್ಯಗಳು ನಡೆದಾಗ, ಅವುಗಳನ್ನು ತಡೆಯದೆ ಅಥವಾ, ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಇರುವ ಎಲ್ಲವನ್ನೂ ಬಳಸಿ ಅವುಗಳನ್ನು ನಿಯಂತ್ರಿಸದೆ ಅಥವಾ ದಮನಿಸದೆ ಇದ್ದಾಗ- ತನ್ನ ಅಧೀನರು ನಡೆಸಿದ ಯಾವುದೇ ಅಪರಾಧಗಳಿಗೆ ಮೇಲಧಿಕಾರಿಯೇ ಕ್ರಿಮಿನಲ್ ಜವಾಬ್ದಾರಿ ಹೊತ್ತಿಕೊಳ್ಳಬೇಕಾಗುತ್ತದೆಂದು.

ಅಂದಿನ ಮುಖ್ಯಮಂತ್ರಿಯ ಮೇಲಿದ್ದ ಮುಖ್ಯವಾದ ಹೊಣೆಗಾರಿಕೆ ಅಥವಾ ಸಾಂವಿಧಾನಿಕ ಹೊಣೆಗಾರಿಕೆ ಬಗ್ಗೆ ಪ್ರಶ್ನೆ ಮಾಡಿದವರೆಂದರೆ, ನ್ಯಾಯಾಲಯ ನೇಮಿಸಿದ್ದ ಸಲಹೆಗಾರರಾದ ರಾಜು ರಾಮಚಂದ್ರನ್ ಮಾತ್ರ.

ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಲಗತ್ತಾಗಿ ಇರುವ ಅವರ ಸಲ್ಲಿಸಿದ್ದ ಟಿಪ್ಪಣಿಯಲ್ಲಿ ಏನು ಹೇಳಿದೆ ಎಂದರೆ: ’28.02.2002ರಂದು ಗಲಭೆಗಳು ನಡೆಯುತ್ತಿರುವಾಗ ಅದನ್ನು ತಡೆಯಲು ನರೇಂದ್ರ ಮೋದಿ ಯಾವ ಹಸ್ತಕ್ಷೇಪವನ್ನೂ ಮಾಡಿದ ದಾಖಲೆಗಳಿಲ್ಲ. 28.02.2002ರಂದು ಮೋದಿಯ ಚಲನವಲನಗಳು ಮತ್ತು ಅವರು ನೀಡಿದ ಸೂಚನೆಗಳು ಅಲ್ಪಸಂಖ್ಯಾತರ ರಕ್ಷಣೆಗೆ ತೆಗೆದುಕೊಂಡ ನಿರ್ಣಾಯಕ ಕ್ರಮಗಳಾಗುತ್ತಿದ್ದವು…. ಅವರು ಅಂದು ಏನು ಮಾಡಿದರು ಎಂಬ ಬಗ್ಗೆ ಅವರಾಗಲೀ ಅವರ ವೈಯಕ್ತಿಕ ಅಧಿಕಾರಿಗಳಾಗಲೀ ಏನನ್ನೂ ಹೇಳಿಲ್ಲ. ಅಥವಾ ಯಾವುದೇ ಉನ್ನತ ಪೊಲೀಸ್ ಅಥವಾ ಉನ್ನತ ಅಧಿಕಾರಿಗಳಾಗಲೀ ಮುಖ್ಯಮಂತ್ರಿಯವರು ಯಾವುದೇ ನಿರ್ಣಾಯಕ ಕ್ರಮ ಕೈಗೊಂಡ ಬಗ್ಗೆ ಮಾತಾಡಿಲ್ಲ. ಮುಖ್ಯಮಂತ್ರಿಯ ಸಾಂವಿಧಾನಿಕ ಜವಾಬ್ದಾರಿಯ ಪ್ರಶ್ನೆಯನ್ನೇ ತರದೆ, ಮುಖ್ಯಮಂತ್ರಿ ಈ ಅಪರಾಧ ಕೃತ್ಯಗಳನ್ನು ತಡೆಯಲು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಇರುವುದನ್ನೇನಾದರೂ ಮಾಡಿದ್ದಾರೋ ಇಲ್ಲವೋ ಎಂದು ಪರಿಶೀಲಿಸದೆ ನೀಡಿರುವ ಈ ತೀರ್ಪು ಟೊಳ್ಳಾಗಿ ಕಾಣಿಸುತ್ತದೆ. ಪರಿಣಾಮವಾಗಿ ಗೋಧ್ರಾ ನಂತರ ನಡೆದ ಹಿಂಸಾಚಾರವೆಲ್ಲವು ಆ ತಕ್ಷಣಕ್ಕೆ ಗರಿಗೊಂಡು ನಡೆದವುಗಳಾಗಿದ್ದವು; ಹೆಚ್ಚೆಂದರೆ, ಕೆಳದರ್ಜೆಯ ಅಧಿಕಾರಿಗಳೇ ಹಿಂಸಾಚಾರಕ್ಕೆ ಹೊಣೆಗಾರರು ಎಂಬ ಅಪಕ್ವ ವಾದಕ್ಕೆ ಸುಪ್ರೀಂ ಕೋರ್ಟ್ ಮುದ್ರೆ ಒತ್ತಿದಂತಾಗಿದೆ.

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ನಡೆಸಿದ ವಿಚಾರಣೆ ಸೇರಿದಂತೆ ಹಲವಾರು ನಾಗರಿಕ ಸತ್ಯಶೋಧಕ ಸಮಿತಿಗಳ ವರದಿಗಳು ಈ ವಾದವನ್ನು ತಳ್ಳಿಹಾಕಿವೆ.

ಆರ್.ಬಿ ಶ್ರೀಕುಮಾರ್

ವಾಸ್ತವದಲ್ಲಿ ಸುಪ್ರೀಂ ಕೋರ್ಟೇ ಬೆಸ್ಟ್ ಬೇಕರಿ ಪ್ರಕರಣದಲ್ಲಿ ಏನು ಹೇಳಿತ್ತು ಎಂದರೆ: ’ಬೆಸ್ಟ್ ಬೇಕರಿ ಮತ್ತು ಮುಗ್ಧ ಮಹಿಳೆಯರು ಮತ್ತು ಮಕ್ಕಳು ಹೊತ್ತಿ ಉರಿಯುತ್ತಿರುವಾಗ ಆಧುನಿಕ ಕಾಲದ ’ನೀರೋ’ಗಳು ಪಿಟೀಲು ಬಾರಿಸುತ್ತಿದ್ದರು ಅಥವಾ ತಪ್ಪಿತಸ್ಥರನ್ನು ಹೇಗೆ ರಕ್ಷಿಸಬೇಕೆಂದು ಸಮಾಲೋಚನೆ ನಡೆಸುತ್ತಿದ್ದರು’ ಎಂದು.

2002ರ ಗುಜರಾತ್ ದುಷ್ಕೃತ್ಯಗಳಿಗೆ ಉತ್ತರದಾಯಿತ್ವ ನಿರ್ಧರಿಸುವ ಈ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್ ತನ್ನದೇ ತೀರ್ಪನ್ನು ಕಡೆಗಣಿಸಿದೆ. ರಾಜ್ಯ ಸರಕಾರದ ಮೇಲಿನ ಅಪನಂಬಿಕೆಯ ಕಾರಣಕ್ಕೆ ಮುಖ್ಯ ಪ್ರಕರಣಗಳನ್ನು ಗುಜರಾತಿನ ಹೊರಗೆ ವರ್ಗಾಯಿಸಿ, ಪ್ರಾಸಿಕ್ಯೂಶನ್ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿತ್ತು. ತೀಸ್ತಾ, ಸಂತ್ರಸ್ತರ ಕುಟುಂಬದವರು ಮತ್ತು ನಾಗರಿಕ ಸಮಾಜ, ರಾಷ್ಟ್ರೀಯ ಮಾನವ ಹಕ್ಕು ಆಯೋಗ, ಸ್ವತಃ ಸುಪ್ರೀಂ ಕೋರ್ಟ್ ಪ್ರಯತ್ನದಿಂದ 100ಕ್ಕೂ ಹೆಚ್ಚು ಮಂದಿ ಈ ಹೀನಾಯ ಅಪರಾಧದಲ್ಲಿ ತಪ್ಪಿತಸ್ಥರೆಂದು ಜೈಲು ಸೇರಿದ್ದಾರೆ.

ಆಧುನಿಕ ಕಾಲದ ’ನೀರೋ’ಗಳ ವಿಷಯ ಮಾತಾಡಿದ್ದ ಅದೇ ಸುಪ್ರೀಂ ಕೋರ್ಟ್, ’ಪ್ರತಿಯೊಬ್ಬ ಅಧಿಕಾರಿಯನ್ನು ಪ್ರಶ್ನಿಸುವ’ ಅರ್ಜಿದಾರರ ’ಧಾರ್ಷ್ಟ್ಯ’ವನ್ನು ಪ್ರಶ್ನಿಸುವ ಹಂತಕ್ಕೆ ಸಾಕಷ್ಟು ಮುಂದೆ ಬಂದಿದೆ. 2002ರ ಗಲಭೆಗಳಲ್ಲಿ ಸತ್ತವರಿಗೆ ನ್ಯಾಯ ದೊರಕಿಸಿಕೊಡುವ ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ದೂರಸರಿದು, 2002ರಲ್ಲಿ ಗುಜರಾತಿನಲ್ಲಿ ಏನು ನಡೆಯಿತು ಎಂಬ ಸತ್ಯಕತೆ ಹೇಳುವ ಧೈರ್ಯಶಾಲಿ ವ್ಯಕ್ತಿಗಳನ್ನೇ ಬೆಂಬತ್ತುವ ಪ್ರಭುತ್ವಕ್ಕೆ ಕಾನೂನು ರಕ್ಷಣೆ ನೀಡಲು ಮುಂದಾಗಿದೆ.

ಹೀಗಿರುವಾಗ, ಈ ತೀರ್ಪು ಮತ್ತು ಈ ಬಂಧನಗಳು ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಮಾರಕವಾಗಿವೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆನ ರಾಜ್ಯಾಧ್ಯಕ್ಷರು


ಇದನ್ನೂ ಓದಿ: ತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನ; ಭಾರತ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮದತ್ತ ಸಾಗುತ್ತಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಆರಾಜಕತೆಯತ್ತ ಹೊರಟ ದೇಶದ ಕಾನೂನು ಸುವ್ಯವಸ್ಥೆಯನ್ನ ಸರ್ವೋಚ್ಛನ್ಯಾಯಾಲಯದ ತೀರ್ಪು ದೃಡೀಕರಿಸಿದೆ.

  2. ಲೋ ಕಮ್ಯೂನಿಸ್ಟ್ ಹಂದಿಗಳಾ ಸತ್ಯವನ್ನ ಬಿತ್ತರಿಸುವ ಕೆಲಸ ಮಾಡ್ರೋ,1962 ರ ಯುದ್ದದ ನಂತರ ನಿಮ್ಮನ್ನು ದೇಶದ ಪ್ರಧಾನಮಂತ್ರಿ ಗಳೇ ನೀವು ಹಂದಿಗಳು ಅಂತ ದೂರ ಇಟ್ಟದ್ದು ಈ ರೀತಿ ಯ ಸುಳ್ಳಿನ ಹೊಲಸು ವಿಷಯಗಳಿಗಾಗಿನೇ ನೆನಪಿರಲಿ,ಈಗಲೂ ನೀವು ಆ ಬುದ್ಧಿ ಬಿಟ್ಟಿಲ್ಲಲ್ರೋ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...