Homeಮುಖಪುಟ370ನೇ ವಿಧಿ ರದ್ದತಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಅಪ್ರಜಾಸತ್ತಾತ್ಮಕ ಆಡಳಿತಕ್ಕೆ ಅಧಿಕೃತ ಮುದ್ರೆ

370ನೇ ವಿಧಿ ರದ್ದತಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಅಪ್ರಜಾಸತ್ತಾತ್ಮಕ ಆಡಳಿತಕ್ಕೆ ಅಧಿಕೃತ ಮುದ್ರೆ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತದ ಅಡಿಯಲ್ಲಿ ಮಾಡಲಾದ ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಡಿಸೆಂಬರ್ 11ರಂದು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ವಿಧಿ 370ರ ಅನ್ವಯ ಹೊರಡಿಸಲಾಗಿದ್ದ ಸಾಂವಿಧಾನಿಕ ಆದೇಶಗಳಾದ 272 ಮತ್ತು 273ನ್ನೂ ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಈ ಸಾಂವಿಧಾನಿಕ ಆದೇಶಗಳು- 370ನೇ ವಿಧಿಯನ್ನು ಕೂಡಲೇ ಕಿತ್ತುಹಾಕದೆಯೇ, ನಿಷ್ಕ್ರಿಯಗೊಳಿಸಿದ್ದವು. ಅಂತಿಮವಾಗಿ ಮತ್ತು ಅತ್ಯಂತ ಗಮನಾರ್ಹವಾಗಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿರುವುದನ್ನೂ ನ್ಯಾಯಾಲಯವು ಎತ್ತಿಹಿಡಿದಿದೆ. ಲಡಾಕ್ ಒಂದು ವಿಧಾನಸಭೆ ಇಲ್ಲದೆಯೇ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಹೊಂದಿರುವಂತೆ ಇದನ್ನು ಮಾಡಲಾಗಿದೆ.

ಇದು ಭಾರತದಲ್ಲಿ ಒಕ್ಕೂಟ ತತ್ವದ ಮೇಲೆ ಗಂಭೀರ ಪರಿಣಾಮ ಉಂಟುಮಾಡುವ ತೀರಾ ನಿರಾಶಾದಾಯಕ ತೀರ್ಪಾಗಿದೆ. ಈ ತೀರ್ಪು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿದುದರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಡಿಯುವುದರ ಮೂಲಕ ಆರಂಭವಾಗುತ್ತದೆ. ಬಿಜೆಪಿ-ಪಿಡಿಪಿ ಸರಕಾರವು ಕುಸಿದುಬಿದ್ದಾಗ, ಅಲ್ಲಿ ಒಂದು ಕಾರ್ಯಸಾಧ್ಯ ಸರಕಾರವು ವಿಧಾನಸಭೆಯಲ್ಲಿ ಬಹುಮತದ ಬೆಂಬಲ ಪಡೆಯಲು ಸಾಧ್ಯವೇ ಎಂಬುದನ್ನು ರಾಜ್ಯಪಾಲರು ಪರಿಗಣಿಸದೆಯೇ, 356ನೇ ವಿಧಿಯನ್ನು ಘೋಷಿಸಿ, ರಾಜ್ಯ ವಿಧಾನಸಭೆಯನ್ನು ಬರಖಾಸ್ತು ಮಾಡಿದ್ದರು.

ರಾಷ್ಟ್ರಪತಿ ಆಡಳಿತದ ಈ ಅವಧಿಯಲ್ಲಿಯೇ ಬಿಜೆಪಿಯು ರಾಷ್ಟ್ರಪತಿ ಆದೇಶಗಳಾದ 272 ಮತ್ತು 273ರ ಮೂಲಕ ವಿಧಿ 370ನ್ನು ನಿಷ್ಕ್ರಿಯಗೊಳಿಸಿತ್ತು ಮತ್ತು ಭಾರತೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯ ಒಂದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳದರ್ಜೆಗೆ ಇಳಿಸಿತು. 370ನೇ ವಿಧಿಯ ಕುರಿತು ಸುಪ್ರೀಂಕೋರ್ಟ್ ಈ ತೀರ್ಪು ನೀಡಿದ್ದು ಈ ಮಟ್ಟದ ಕಾನೂನುಬಾಹಿರತೆಯ ಬಗ್ಗೆಯೇ.

ಈ ವಿಷಯವನ್ನು ಮತ್ತಷ್ಟು ಜಟಿಲಗೊಳಿಸಿದ್ದು, ಜಮ್ಮು ಮತ್ತು ಕಾಶ್ಮೀರದ ವಿಲಕ್ಷಣ ಇತಿಹಾಸ ಮತ್ತು ಭಾರತೀಯ ಒಕ್ಕೂಟಕ್ಕೆ ಅದರ ಸೇರ್ಪಡೆಯ ಚರಿತ್ರೆ. ಭಾರತದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದಾಗ, ಈ ಇತಿಹಾಸವೇ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಗೆ ಕಾರಣವಾದ್ದು. ಸುಪ್ರೀಂಕೋರ್ಟ್ ಈ ಇತಿಹಾಸವನ್ನು ಪರಿಶೀಲಿಸಿ, ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಭಾಗವಾಗಿದ್ದು, ಭಾರತೀಯ ಸಂವಿಧಾನವು ಅದಕ್ಕೆ ಪೂರ್ಣಪ್ರಮಾಣದಲ್ಲಿ ಅನ್ವಯಿಸುತ್ತದೆ ಎಂದು ತೀರ್ಮಾನಿಸುತ್ತದೆ. ಹೀಗೆ ಮಾಡುವುದರ ಮೂಲಕ ನ್ಯಾಯಾಲಯವು ಆ ಕಾಶ್ಮೀರವು ಭಾರತಕ್ಕೆ ಸೇರ್ಪಡೆಯಾದ ಐತಿಹಾಸಿಕ ಕಾರಣಗಳನ್ನು ಮತ್ತು ಸೇರ್ಪಡೆಯ ಸಮಯದಲ್ಲಿ ಒಪ್ಪಿಕೊಳ್ಳಲಾಗಿದ್ದ ಐತಿಹಾಸಿಕ ಬದ್ಧತೆಗಳನ್ನು ಗೌರವಿಸುವ ಭಾರತದ ಕರ್ತವ್ಯವನ್ನು ಅವಗಣಿಸುತ್ತದೆ.

ತೀರಾ ಕಳವಳಕಾರಿಯಾದ ಈ ತೀರ್ಪಿನ ಅತ್ಯಂತ ಆತಂಕಕಾರಿ ಭಾಗವೆಂದರೆ, ಸಂವಿಧಾನದ ವಿಧಿ 3ನ್ನು ನಡೆಸಿಕೊಂಡ ರೀತಿ. ವಿಧಿ 3ರ ಅನ್ವಯ ಕೇಂದ್ರ ಸರಕಾರಕ್ಕೆ ಈಗ ಅಸ್ತಿತ್ವದಲ್ಲಿರುವ ರಾಜ್ಯ ಒಂದರ ಪ್ರದೇಶಗಳನ್ನು ವಿಭಜಿಸಿ ಹೊಸ ರಾಜ್ಯ ಒಂದನ್ನು ರಚಿಸುವ ಅಧಿಕಾರವೇನೋ ಇದೆ. ಹೀಗಿದ್ದರೂ, ಹೊಸರಾಜ್ಯ ಒಂದನ್ನು ಸ್ಥಾಪಿಸುವ ಮಸೂದೆಯನ್ನು ರಾಜ್ಯ ವಿಧಾನಭೆಯು ಬಹುಮತದಿಂದ ಅಂಗೀಕರಿಸಿದರೆ ಮಾತ್ರವೇ ಇದು ಸಾಧ್ಯ. ಆದುದರಿಂದ, ಉದಾಹರಣೆಗಾಗಿ- ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣದ ರಚನೆಯಾದದ್ದು, ಆಂಧ್ರಪ್ರದೇಶದ ವಿಧಾನಸಭೆಯು ತೆಲಂಗಾಣ ರಾಜ್ಯ ರಚನೆಯ ಮಸೂದೆಯನ್ನು ಬಹುಮತದಿಂದ ಅಂಗೀಕರಿಸಿದ ನಂತರ ಮಾತ್ರವೇ ಎಂಬುದನ್ನು ಗಮನಿಸಬಹುದು. ಸಂವಿಧಾನದ ವಿಧಿ 3ರ ಅನ್ವಯ ಅಧಿಕಾರವನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡದಂತೆ ಒಂದು ಪ್ರಮುಖ ರಕ್ಷಣೆಯಾಗಿ ಇದು ಉಳಿದಿದೆ.

ಒಕ್ಕೂಟ ಸರಕಾರವು ಮುಂದುವರಿದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ರಾಷ್ಟ್ರಪತಿ ಆಡಳಿತದ ಅವಧಿಯಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಈ ರೀತಿಯಲ್ಲಿ- ಹೇಗಿದ್ದರೂ ಕೇಂದ್ರ ಸರಕಾರದ ಪ್ರತಿನಿಧಿಯಾಗಿರುವ ರಾಜ್ಯಪಾಲರಿಗೆ ಒಪ್ಪಿಗೆ ನೀಡುವ ಅರ್ಹತೆ ಇದೆ ಎಂಬ ಊಹೆಯ ಮೇರೆಗೆ ರಾಜ್ಯ ಜನತೆಯ ವಿಧಾನಸಭೆಯ ಒಪ್ಪಿಗೆಯನ್ನು ಸಂಪೂರ್ಣವಾಗಿ ಬದಿಗೆ ಸರಿಸಲಾಯಿತು. ರಾಷ್ಟ್ರಪತಿ ಆಡಳಿತದ ಅವಧಿಯಲ್ಲಿ ರಾಜ್ಯವನ್ನು ಎರಡಾಗಿ ವಿಭಜಿಸಿದ್ದು ಮಾತ್ರವಲ್ಲದೇ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳದರ್ಜೆಗೆ ಇಳಿಸಲಾಯಿತು ಎಂಬ ವಾಸ್ತವವೇ ಸಂವಿಧಾನಕ್ಕೆ ಮಾಡಲಾದ ಮೋಸವಲ್ಲದೇ ಬೇರೇನೂ ಅಲ್ಲ. ದುರದೃಷ್ಟವಶಾತ್ ಸುಪ್ರೀಂಕೋರ್ಟ್, ಕೇಂದ್ರ ಸರಕಾರದಿಂದ ನಡೆದ ಈ ಅಧಿಕಾರ ಕಬಳಿಕೆಯನ್ನು ಕಡೆಗಣಿಸಲು ನಿರ್ಧರಿಸಿತು.

ರಾಜ್ಯವೊಂದಕ್ಕೆ ಕೇಂದ್ರಾಡಳಿತ ಪ್ರದೇಶವಾಗಿ ಹಿಂಬಡ್ತಿ ನೀಡಿರುವುದಕ್ಕೆ ಭಾರತೀಯ ಸಾಂವಿಧಾನಿಕ ಇತಿಹಾಸದಲ್ಲಿಯೇ ಪೂರ್ವ ಉದಾಹರಣೆಯೊಂದಿಲ್ಲ. ಕೆಲವು ನಿರ್ದಿಷ್ಟ ಪ್ರದೇಶಗಳು- “ಕಾರ್ಯಸಾಧ್ಯ ಆಡಳಿತ ಘಟಕಗಳು” ಆಗಿಲ್ಲದೇ ಇರುವಾಗ ಅಥವಾ ತಮ್ಮನ್ನು ತಾವು ಸುಸ್ಥಿರವಾಗಿ ಉಳಿಸಿಕೊಳ್ಳಲು ಬೇಕಾದ ಸಂಪನ್ಮೂಲಗಳು ಇಲ್ಲದೇ ಇದ್ದಾಗ ಮಾತ್ರವೇ ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಗಿತ್ತು. ಸ್ವತಃ ಸುಪ್ರೀಂಕೋರ್ಟೇ ಗಮನಿಸಿರುವಂತೆ, ಭಾರತದಲ್ಲಿ ಒಕ್ಕೂಟ ತತ್ವದ ಇತಿಹಾಸವೇ- ಹೇಗೆ ಕೇಂದ್ರಾಡಳಿತ ಪ್ರದೇಶಗಳು ಪೂರ್ಣ ರಾಜ್ಯಗಳಾಗುವತ್ತ ಮುನ್ನಡೆಯುತ್ತವೆ ಎಂಬುದರ ಇತಿಹಾಸವೇ ಆಗಿದೆ. ದಿಲ್ಲಿ ಮತ್ತು ಗೋವಾ ಇದಕ್ಕೆ ಎರಡು ಉದಾಹರಣೆಗಳು. ಇದಕ್ಕೆ ತದ್ವಿರುದ್ಧವಾದ ದಿಕ್ಕಿನಲ್ಲಿ ಸಾಗುವುದೆಂದರೆ, ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕೃತ್ಯವೇ ಆಗುತ್ತದೆ. ಭಾರತದ ಒಕ್ಕೂಟ ತತ್ವಕ್ಕೆ ಈ ಹೊಡೆತದ ಪರಿಣಾಮವನ್ನು ಸುಪ್ರೀಂ ಕೋರ್ಟ್ ಅರ್ಥಮಾಡಿಕೊಂಡಿರುವಂತೆ ಕಾಣುತ್ತಿದೆಯಾದರೂ, ಆ ಕುರಿತು ಏನನ್ನೂ ಮಾಡಲು ಬಯಸದಿರುವಂತೆಯೂ ಕಾಣುತ್ತಿದೆ.

ಇದನ್ನೂ ಓದಿ: Explained : 370ನೇ ವಿಧಿ ರದ್ದು; 1947ರಿಂದ ಇದುವರೆಗೆ…

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮುಂದೆ ನೀಡಲಾಗುವುದು ಮತ್ತು ಕೇಂದ್ರಾಡಳಿತ ಪ್ರದೇಶವಾಗಿ ಅದರ ಈಗಿನ ಸ್ಥಾನಮಾನ ಕೇವಲ ತಾತ್ಕಾಲಿಕ ಎಂಬ ಸಾಲಿಸಿಟರ್ ಜನರಲ್ ಅವರ ವಾದದಿಂದ ಸುಪ್ರೀಂಕೋರ್ಟ್ ತೃಪ್ತಿ ಹೊಂದಿರುವಂತಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಸೆಪ್ಟೆಂಬರ್ 2024ರ ಒಳಗೆ ಚುನಾವಣೆ ನಡೆಸಬೇಕು ಮತ್ತು ಅದಕ್ಕೆ ಆದಷ್ಟು ಬೇಗ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಹೇಳುವುದರಿಂದಲೇ ಸುಪ್ರೀಂಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ತೃಪ್ತಿಪಡೆದಿರುವಂತಿದೆ.

ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಹಿಂಬಡ್ತಿಗೊಳಿಸುವುದರ ಹಿಂದಿರುವ ತಪ್ಪು ಉದ್ದೇಶದ ಪ್ರಶ್ನೆಯ ಕುರಿತು ಸುಪ್ರೀಂ ಕೋರ್ಟ್ ಗಮನಹರಿಸುವುದಿಲ್ಲ. ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿಸುವ ಕೇಂದ್ರ ಸರಕಾರದ ಕೃತ್ಯಕ್ಕೆ ಸಾಂವಿಧಾನಿಕ ಸಮರ್ಥನೆಗಳು ಏನಾಗಿದ್ದವು? ಒಟ್ಟು 476 ಪುಟಗಳ ಇಡೀ ತೀರ್ಪಿನಲ್ಲಿ ಹಕ್ಕು ಕಸಿದಿರುವ ಗಂಭೀರ ಕೃತ್ಯಕ್ಕೆ ಸುಪ್ರೀಂಕೋರ್ಟ್ ನೀಡಿರಬಹುದಾದ ಒಂದೇಒಂದು ಸಮರ್ಥನೆಯನ್ನು ಹುಡುಕಲು ಸಾಧ್ಯವಿಲ್ಲ. ಇದು ತಪ್ಪೆಂದು ಸುಪ್ರೀಂಕೋರ್ಟಿಗೆ ಗೊತ್ತಿರುವಂತಿದೆ; ಕೇಂದ್ರಾಡಳಿತ ಸ್ಥಾನಮಾನ ಕೇವಲ ತಾತ್ಕಾಲಿಕವಾದದ್ದು ಮತ್ತು ಸರಕಾರಕ್ಕೆ ಅನುಗುಣವಾಗಿ ಈ ಆದೇಶವನ್ನು ತಿರುವು ಮುರುವು ಮಾಡಲಾಗುವುದು ಎಂದು ದಾಖಲಿಸುವ ಮೂಲಕ ಅದು ತನ್ನ ಆತ್ಮಸಾಕ್ಷಿಗೆ ಮುಲಾಮು ಹಚ್ಚಿದೆ.

ಜಮ್ಮು ಮತ್ತು ಕಾಶ್ಮೀರ ಪ್ರದೇಶಕ್ಕೆ ಸೆಪ್ಟೆಂಬರ್ 2024ರ ಒಳಗೆ ಚುನಾವಣೆ ನಡೆಸಬೇಕು ಎಂದು, ಆದಷ್ಟು ಬೇಗನೇ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಬದಲಿಸಿ

ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳುತ್ತಿರುವಾಗಲೇ, ಅದಕ್ಕೆ ಯಾವುದೇ ಸಮಯಸೂಚಿಯನ್ನು ನಿಗದಿಪಡಿಸುವುದಿಲ್ಲ.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿ ಪ್ರಾತಿನಿಧ್ಯ ಅನುಭವಿಸುತ್ತಿದ್ದ ಲಡಾಕ್ ಈಗ ಯಾವುದೇ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿದೆ ಎಂಬುದನ್ನು ಗುರುತಿಸುವುದು ಕೂಡಾ ಅತ್ಯಗತ್ಯ. ಸುಪ್ರೀಂಕೋರ್ಟಿನ ಪ್ರಕಾರ ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿರುವುದು ಸಾಂವಿಧಾನಿಕವಾಗಿ ಸಿಂಧು ಮತ್ತು ಲಡಾಕಿನ ಜನರಿಗೆ ಒಂದು ಕೇಂದ್ರಾಡಳಿತವಾಗಿ ಅಥವಾ ರಾಜ್ಯದ ಸ್ಥಾನಮಾನದ ಮೂಲಕ ಒಂದು ವಿಧಾನಸಭೆಯನ್ನು ಕೊಡಬೇಕಾದ ಅಗತ್ಯವಿಲ್ಲ. ರಾಷ್ಟ್ರೀಯ ಭದ್ರತಾ ಆತಂಕಗಳನ್ನು ಮುಂದಿಟ್ಟುಕೊಂಡು ನ್ಯಾಯಾಲಯವು ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ನಿರ್ಧಾರವನ್ನು ಸಮರ್ಥಿಸಲು ಬಯಸುತ್ತಿದೆ. ಸುಪ್ರೀಂಕೋರ್ಟಿನ ನಿರ್ಧಾರಗಳ ಪ್ರಕಾರವೇ ರಾಷ್ಟ್ರೀಯ ಭದ್ರತೆಯು ಕೇವಲ ಹೇಳಿಕೆ ಮಾತ್ರವೇ ಆಗದೆ, ದತ್ತಾಂಶಗಳ ಮೂಲಕ ಅದನ್ನು ಸಮರ್ಥಿಸಬೇಕು. ಸರಕಾರವು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದೇ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ದಾರಿಯನ್ನಾಗಿ ಏಕೆ ಕಾಣಬೇಕು ಮತ್ತು ಲಡಾಕಿ ಜನರ ಪ್ರಾತಿನಿಧಿಕ ಪ್ರಜಾಪ್ರಭುತ್ವದ ಹಕ್ಕುಗಳನ್ನು ಬಲಿಕೊಡದೆಯೇ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಬೇರೆ ದಾರಿಗಳಿದ್ದವೇ ಎಂಬ ಕುರಿತು ಕೆಲವು ಕಠಿಣ ಪ್ರಶ್ನೆಗಳಿಗೆ ಕೇಂದ್ರ ಸರಕಾರವು ಉತ್ತರ ನೀಡುವಂತೆ ಕನಿಷ್ಟ ಪಕ್ಷ ಆಗ್ರಹಿಸಬೇಕು. ಇಂತಹ ಯಾವುದೇ ವಿಶ್ಲೇಷಣೆಯನ್ನು ನ್ಯಾಯಾಲಯವು ಪರಿಶೀಲಿಸಿರುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಈ ತೀರ್ಪು ಭಾರತೀಯ ಸಂವಿಧಾನದ ಅಡಿಯಲ್ಲಿ ಪ್ರಾತಿನಿಧಿಕ ಆಡಳಿತದ ಲಡಾಕಿಗಳ ಸಾಂವಿಧಾನಿಕ ಹಕ್ಕುಗಳಿಗೆ ತೀವ್ರವಾದ ಹೊಡೆತವನ್ನು ನೀಡಿದೆ. ಯಾವುದೇ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯ ಇಲ್ಲದೇ ಕೇಂದ್ರ ಸರಕಾರ ನಡೆಸುತ್ತಿರುವ ಆಡಳಿತ ವಿರುದ್ಧ ಲಡಾಕಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು- ಲಡಾಕಿ ಜನರು ಅನುಭವಿಸುತ್ತಿರುವ ಒಂದು ರೀತಿಯ ದ್ರೋಹದ ಭಾವನೆಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತವೆ. ನ್ಯಾಯಾಲಯವು ದುರದೃಷ್ಟವಶಾತ್ ಈ ಅಪ್ರಜಾಸತ್ತಾತ್ಮಕ ಆಡಳಿತವನ್ನು ಅಧಿಕೃತಗೊಳಿಸಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...