Homeಮುಖಪುಟಆರೋಗ್ಯ ಕೇಂದ್ರಗಳ ಹೆಸರು ಬದಲಿಸಲು ನಿರಾಕರಿಸಿದ ಕೇರಳ ಸರ್ಕಾರ: ಅನುದಾನ ತಡೆ ಹಿಡಿದ ಕೇಂದ್ರ

ಆರೋಗ್ಯ ಕೇಂದ್ರಗಳ ಹೆಸರು ಬದಲಿಸಲು ನಿರಾಕರಿಸಿದ ಕೇರಳ ಸರ್ಕಾರ: ಅನುದಾನ ತಡೆ ಹಿಡಿದ ಕೇಂದ್ರ

- Advertisement -
- Advertisement -

ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಹೆಚ್‌ಎಂ) ಕೇಂದ್ರಗಳಿಗೆ ‘ಆಯುಷ್ಮಾನ್ ಆರೋಗ್ಯ ಮಂದಿರಗಳು’ ಎಂದು ಮರುನಾಮಕರಣ ಮಾಡಬೇಕೆಂಬ ಕೇಂದ್ರದ ಆದೇಶವನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಕೇರಳ ಸರ್ಕಾರ ಮಂಗಳವಾರ ಹೇಳಿದೆ.

ಆಯುಷ್ಮಾನ್ ಆರೋಗ್ಯ ಮಂದಿರಗಳು ಎಂಬ ಹೆಸರು ರಾಜ್ಯದ ಗ್ರಾಮೀಣ ಜನರ ಭಾಷೆ ಮತ್ತು ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ. ಇದು ಅವರಿಗೆ ವಿದೇಶಿ ಹೆಸರಿನಂತೆ ತೋರುತ್ತದೆ. ಕೇಂದ್ರದ ಹಿಂದಿ ಹೇರಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಬುಧವಾರ ತಿರುವನಂತಪುರಂನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಆರೋಗ್ಯ ಕೇಂದ್ರಗಳಿಗೆ ಮರುನಾಮಕರಣ ಮಾಡದ ಹೊರತು ಅನುದಾನ ನೀಡಲು ಕೇಂದ್ರ ನಿರಾಕರಿಸಿದೆ. ಕೇಂದ್ರ ಮೊದಲು ಕೋ-ಬ್ರಾಂಡಿಂಗ್‌ಗೆ ಒತ್ತಡ ಹೇರಿತ್ತು. ಅದರಂತೆ ನಾವು ಆರೋಗ್ಯ ಕೇಂದ್ರಗಳ ನಾಮಫಲಕಗಳಲ್ಲಿ ಕೇಂದ್ರ ಸರ್ಕಾರ ನೀಡಿದ ಆರು ಚಿಹ್ನೆಗಳನ್ನು ಸೇರಿಸಿದೆವು. ಕೇಂದ್ರ ನಿರ್ದೇಶನ ನೀಡುವುದಕ್ಕಿಂತ ಒಂದೆರಡು ವರ್ಷಗಳ ಮೊದಲು ನಿರ್ಮಿಸಿದ್ದ ಆರೋಗ್ಯ ಕೇಂದ್ರಗಳ ನಾಮಫಲಕಗಳಲ್ಲಿ ನಾವು ಈ ಬದಲಾವಣೆ ಮಾಡಿದ್ದೆವು. ಆದರೆ, ಈಗ ಅವರು ಸಂಪೂರ್ಣ ಮರುನಾಮಕರಣಕ್ಕೆ ಒತ್ತಾಯಿಸುತ್ತಿದ್ದಾರೆ. ಮರುನಾಮಕರಣದ ಬಳಿಕವಷ್ಟೇ ಅನುದಾನ ನೀಡುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಅನುದಾನ ನೀಡಿದ ಕಾರಣ ಆರೋಗ್ಯ ಕೇಂದ್ರಗಳ ನಿರ್ವಹಣೆ ಕಷ್ಟವಾಗುತ್ತಿದೆ. ಪ್ರಸ್ತುತ, ರಾಜ್ಯ ಸರ್ಕಾರ ಮೀಸಲಿಟ್ಟ ಹಣದಲ್ಲಿ ಆರೋಗ್ಯ ಕೇಂದ್ರಗಳನ್ನು ನಿರ್ವಹಣೆ ಮಾಡಲಾಗ್ತಿದೆ. ಆಶಾ ಕಾರ್ಯಕರ್ತೆಯಿರಿಗೆ ವೇತನ ನೀಡಲು ಸಮಸ್ಯೆಯಾಗಿದೆ. ರೋಗಿಗಳಿಗೆ ಪೆರಿಟೋನಿಯಲ್ ಡಯಾಲಿಸಿಸ್‌ಗೆ ಕೊಡು ಹಣವನ್ನು ಕೇಂದ್ರದಿಂದ ನೀಡಲಾಗಿಲ್ಲ. ಇದಕ್ಕಾಗಿ ಕೇಂದ್ರದಿಂದ ರಾಜ್ಯಕ್ಕೆ ಸುಮಾರು 7 ಕೋಟಿ ರೂ. ಬರಲು ಬಾಕಿಯಿದೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಅನುದಾನ ಬಾರದ ಹಿನ್ನೆಲೆ ಬಡ ರೋಗಿಗಳಿಗೆ ಸಮಸ್ಯೆಯಾಗ್ತಿದೆ. ಡಯಾಲಿಸಿಸ್ ವ್ಯವಸ್ಥೆಗಾಗಿ ರಾಜ್ಯ ಸರ್ಕಾರ ವೆಚ್ಚ ಭರಿಸುತ್ತಿದೆ. ಹಣಕಾಸು ವರ್ಷ ನಾಲ್ಕನೇ ಮತ್ತು ಅಂತಿಮ ತ್ರೈಮಾಸಿಕಕ್ಕೆ ತಲುಪಿದರೂ, ಕೇಂದ್ರ ಸರ್ಕಾರದ ಹಂಚಿಕೆಯ ಭಾಗವಾಗಿ ರಾಜ್ಯಕ್ಕೆ ಬರಬೇಕಾದ 826.02 ಕೋಟಿ ರೂ.ಗಳಲ್ಲಿ ಒಂದು ಕಂತನ್ನೂ ಕೇಂದ್ರ ಬಿಡುಗಡೆ ಮಾಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಎನ್‌ಹೆಚ್‌ಎಂನ ಭಾಗವಾಗಿ ನೇಮಕಗೊಂಡಿರುವ ವೈದ್ಯರಿಗೆ ವೇತನ ಪಾವತಿಸಲು ರಾಜ್ಯ ಭಾರೀ ಸಮಸ್ಯೆ ಎದುರಿಸುತ್ತಿದೆ. ಈ ಕುರಿತು ಹಲವು ಬಾರಿ ಕೇಂದ್ರ ಆರೋಗ್ಯ ಸಚಿವರ ಗಮನಕ್ಕೆ ತಂದರೂ, ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಇದು ನಮ್ಮ ಸಂವಿಧಾನದ ಫೆಡರಲ್ ಸ್ವರೂಪಕ್ಕೆ ವಿರುದ್ಧವಾಗಿ. ನಾವು ಅನುದಾನ ಬಿಡುಗಡೆಗೆ ಕೋರಿ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಸಚಿವೆ ದೂರಿದ್ದಾರೆ.

ಇದನ್ನೂ ಓದಿ : ‘ಭಾರತ್ ಜೋಡೋ ನ್ಯಾಯ್‌ ಯಾತ್ರೆ’ಗೆ ಶರತ್ತುಬದ್ಧ ಅನುಮತಿ ನೀಡಿದ ಮಣಿಪುರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...