ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಮೇಲೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 8ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಮೇ 27 ರಂದು ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ ಹಿಂದುತ್ವ ನಾಯಕರಾದ ಯತಿ ನರಸಿಂಗಾನಂದ, ಮಹಂತ್ ಬಜರಂಗ ಮುನಿ ಮತ್ತು ಆನಂದ್ ಸ್ವರೂಪ್ ಅವರನ್ನು ‘ಹೇಟ್‌ಮಾಂಗರ್ಸ್’ (ಒಂದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ಹಬ್ಬಿಸುವ ವ್ಯಕ್ತಿಗಳು) ಎಂದು ಕರೆದಿದ್ದಕ್ಕಾಗಿ ಜೂನ್ 1 ರಂದು ಉತ್ತರ ಪ್ರದೇಶ ಪೊಲೀಸರು ಖೈರಾಬಾದ್ ಪೊಲೀಸ್ ಠಾಣೆಯಲ್ಲಿ ಜುಬೈರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಜುಬೇರ್ ಬಂಧನಕ್ಕೆ ಸಂಬಂಧಿಸಿದಂತೆ ಜುಲೈ 8ರಂದು ನಡೆದ ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ, ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್.ವಿ.ರಾಜು ಅವರು ಸರ್ಕಾರ ಪರವಾಗಿ ಹಾಜರಾಗಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಬಜರಂಗ ಮುನಿಯು ಸೀತಾಪುರದಲ್ಲಿ ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ‘ಗೌರವಾನ್ವಿತ’ ಧಾರ್ಮಿಕ ನಾಯಕ” ಎಂದು ಎಎಸ್‌ಜಿ ವಾದ ಮಾಡಿದ್ದಾರೆ.
“ನೀವು ಧಾರ್ಮಿಕ ಮುಖಂಡರನ್ನು ಹೇಟ್‌ಮಾಂಗರ್ ಎಂದು ಕರೆದರೆ, ಅದು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ” ಎಂದಿದ್ದಾರೆ.
ಎಎಸ್‌ಜಿ ರಾಜು ಅವರು ಯಾರನ್ನು ಗೌರವಾನ್ವಿತ ವ್ಯಕ್ತಿ ಎಂದು ಕರೆದಿದ್ದಾರೋ, ಆ ವ್ಯಕ್ತಿ ಮುಸ್ಲಿಂ ಸಮುದಾಯದ ವಿರುದ್ಧ ಸರಣಿ ದ್ವೇಷ ಭಾಷಣ ಮಾಡಿರುವ ಸುದೀರ್ಘ ಇತಿಹಾಸ ಹೊಂದಿದ್ದಾರೆ. ಬಲಪಂಥೀಯ ಗುಂಪುಗಳು ನಂಬಿರುವ ಪಿತೂರಿ ಸಿದ್ಧಾಂತವಾದ ‘ಲವ್ ಜಿಹಾದ್’ಗೆ ಪ್ರತೀಕಾರವಾಗಿ ಮುಸ್ಲಿಂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವುದಾಗಿ ಪದೇ ಪದೇ ಬೆದರಿಕೆ ಹಾಕಿದ ಕುಖ್ಯಾತಿಯನ್ನು ಭಜರಂಗ ಮುನಿ ಉದಾಸಿನ್ ಪಡೆದಿದ್ದಾರೆ.
"If any mulla troubles our women, then I will openly abduct his sister/daughter, take her to Sangat and will ensure she is raped", says Bajrang Muni in an earlier video addressing to a crowd. His viral video is not first time he called for rape of Muslim women.#ArrestBajrangMuni pic.twitter.com/mhtJxPa3K9
— Kaushik Raj (@kaushikrj6) April 8, 2022
ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದಾಗಿ ಬಜರಂಗ ಮುನಿ ಬೆದರಿಕೆ ಹಾಕಿರುವ ವೈರಲ್ ವಿಡಿಯೋವನ್ನು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಮತ್ತೊಂದೆಡೆ ಬೆಂಬಲಿಗರ ದೊಡ್ಡ ಗುಂಪನ್ನು ಉದ್ದೇಶಿಸಿ ಮಾತನಾಡುವಾಗ ಬಜರಂಗಮುನಿ, ಮುಸ್ಲಿಂ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯದ ಬೆದರಿಕೆ ಹಾಕುವುದು ವಿಡಿಯೊದಲ್ಲಿ ದಾಖಲಾಗಿದೆ. ಮುಸ್ಲಿಮರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾ, “ನಾನು ಸತ್ತರೂ ಇಲ್ಲಿನ ಹಿಂದೂಗಳಿಗೆ ಸಾಕಷ್ಟು ತಾಪವನ್ನು ಬಿಟ್ಟು ಹೋಗುತ್ತೇನೆ. ಹಿಂದೂಗಳು ಖೈರಾಬಾದ್ ಅನ್ನು ಶ್ರೀರಾಮನಗರವನ್ನಾಗಿ ಮಾಡುತ್ತಾರೆ. ನಾನು ಇದನ್ನು ಬಹಿರಂಗವಾಗಿ ಹೇಳುತ್ತೇನೆ- ನೀವು ಒಬ್ಬ ಹಿಂದೂವನ್ನು ಕೊಂದರೆ, ನಾನು 10 ಮುಸ್ಲಿಮರನ್ನು ಕೊಲ್ಲುತ್ತೇನೆ” ಎನ್ನುತ್ತಾರೆ.
Here is another video of 'Mahant' Bajrang Muni abusing and threatening Muslims. @sitapurpolice@Uppolice https://t.co/BndaJh4QdG pic.twitter.com/FlsM5HBerZ
— Mohammed Zubair (@zoo_bear) April 8, 2022
ಮುಸ್ಲಿಂ ಮಹಿಳೆಯರನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ ಬಜರಂಗಮುನಿ, “ಒಬ್ಬ ಹಿಂದೂ ಹುಡುಗಿಯನ್ನು ಲವ್ ಜಿಹಾದ್‌ಗೆ ಸಿಲುಕಿಸಿ ದೌರ್ಜನ್ಯ ಎಸಗಿದರೆ, ನಾನು 10 ಮುಸ್ಲಿಂ ಹುಡುಗಿಯರನ್ನು ‘ಲವ್ ಸನಾತನ’ಕ್ಕೆ ಸಿಲುಕಿಸಿ ಕಿರುಕುಳ ನೀಡುತ್ತೇನೆ” ಎಂದು ಹೇಳಿಕೆ ನೀಡಿದ್ದಾರೆ.
ಬಜರಂಗ ಮುನಿಯನ್ನು ಏಪ್ರಿಲ್ 13 ರಂದು ಬಂಧಿಸಿ, ಏಪ್ರಿಲ್ 24 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ನಂತರ ಬಜರಂಗಮುನಿ, “ನಾನು ನೀಡಿದ ಹೇಳಿಕೆಗಳಿಗೆ ಯಾವುದೇ ಪಶ್ಚಾತ್ತಾಪವಿಲ್ಲ. ನನ್ನ ಧರ್ಮಕ್ಕಾಗಿ ನಾನು 1,000 ಬಾರಿ ಜೈಲಿಗೆ ಹೋಗುತ್ತೇನೆ. ನಾನು ನನ್ನ ಧರ್ಮಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ, ನನ್ನನ್ನೇ ತ್ಯಾಗ ಕೂಡ ಮಾಡುತ್ತೇನೆ” ಎನ್ನುತ್ತಾರೆ.
ಇದನ್ನೂ ಓದಿರಿ: ಆಲ್ಟ್ ನ್ಯೂಸ್ ವಿದೇಶಿ ದೇಣಿಗೆ ಸ್ವೀಕರಿಸಿಲ್ಲ: ರೋಜರ್‌ಪೇ ಸ್ಪಷ್ಟನೆ
ಆ ಸಮಯದಲ್ಲಿ ವೀಡಿಯೊವನ್ನು ಟ್ವೀಟ್ ಮಾಡಿದ ಜುಬೈರ್ ಅವರನ್ನು “ಹಿಂದೂ ವಿರೋಧಿ” ಎಂದು ಆರೋಪಿಸುತ್ತಾರೆ. “ನೀವು ಅವರ ಪ್ರೊಫೈಲ್ ಅನ್ನು ಪರಿಶೀಲಿಸಿದರೆ, ಹಿಂದೂ ವಿರೋಧಿಯಲ್ಲದ ಒಂದೇ ಒಂದು ಪೋಸ್ಟ್ ಇಲ್ಲ. ಅವರು ಮಾನವತಾವಾದಿ ಅಥವಾ ಜಾತ್ಯತೀತ ವ್ಯಕ್ತಿಯಾಗಿದ್ದರೆ, ಹಿಂದೂಗಳ ಮೇಲೆ ಮುಸ್ಲಿಮರು ನಡೆಸಿದ ದೌರ್ಜನ್ಯ ಅಥವಾ ಅವರ ದ್ವೇಷದ ಭಾಷಣಗಳ ಬಗ್ಗೆ ಪೋಸ್ಟ್ ಮಾಡುತ್ತಿದ್ದರು. ಆದರೆ ಅವರು ಹಿಂದೂಗಳನ್ನು ಆಕ್ರಮಣಕಾರಿ ಎಂದು ತೋರಿಸುವ ಟ್ವೀಟ್‌ಗಳನ್ನು ಮಾತ್ರ ಪೋಸ್ಟ್ ಮಾಡಿದ್ದಾರೆ” ಎಂದು ದೂರುತ್ತಾರೆ.
Thread on Bajrang Muni, who was arrested for rape threats to Muslim women: 3 Muslim brothers Laiq, Ateeq, Salman allege that Bajrang Muni & his men thrashed them on 16 Feb 2021 to grab their land. Here, Ateeq lying in hospital on that day telling Muni attacked them with weapons. pic.twitter.com/ZeQMm0U6xo
— Kaushik Raj (@kaushikrj6) May 17, 2022
ದ್ವೇಷ ಭಾಷಣ ಪ್ರಕರಣಗಳ ಹೊರತಾಗಿ ಭಜರಂಗ ಮುನಿ 2021ರಲ್ಲಿ ಮೂವರು ಮುಸ್ಲಿಂ ಸಹೋದರರಿಂದ ಹಿಂಸಾತ್ಮಕವಾಗಿ ಭೂಕಬಳಿಕೆ ಮಾಡಿದ ಆರೋಪ ಹೊಂದಿದ್ದಾರೆ. ಭಜರಂಗ ಮುನಿಯು ಮುಸ್ಲಿಂ ಸಹೋದರರ ವಿರುದ್ಧ ಪ್ರತಿ ಪ್ರಕರಣವನ್ನು ದಾಖಲಿಸಿದ ನಂತರ ಮೂವರು ಸಹೋದರರು ಐದು ತಿಂಗಳು ಜೈಲಿನಲ್ಲಿ ಕಳೆಯುತ್ತಾರೆ. ಆದರೆ ಈ ಪ್ರಕರಣದಲ್ಲಿ ಮಹಂತ್ ಅವರನ್ನು ಇಂದಿಗೂ ಬಂಧಿಸಲಾಗಿಲ್ಲ.



ಪ್ರಪಂಚದ ಎಲ್ಲ ಪ್ರಜಾಪ್ರಭುತ್ವ, ಸಾಂವಿಧಾನಿಕ ದೇಶಗಳು ನಮ್ಮ ದೇಶಕ್ಕೆ ಛಿಮಾರಿ ಹಾಕಿದ್ರು ಇನ್ನು ಇವರ ಕೋಮು ಭಾವನೆ ಕುಗ್ಗಲೇ ಇಲ್ಲ ಇಲ್ಲಿ ಬೇಲಿ ಹೊಲ ಮೆಯುತ್ತಿಲ್ಲ ಇಡೀ ಹೊಲವನ್ನೇ ಅಕ್ರಮಿಸಿಕೊಂಡಿದೆ ಇದೆ ನಮ್ಮ ನಿಜವಾದ ಭಾರತೀಯರ ವಿಪರ್ಯಾಸ