Homeಮುಖಪುಟಆಲ್ಟ್‌ ನ್ಯೂಸ್‌ ವಿದೇಶಿ ದೇಣಿಗೆ ಸ್ವೀಕರಿಸಿಲ್ಲ: ರೋಜರ್‌ಪೇ ಸ್ಪಷ್ಟನೆ

ಆಲ್ಟ್‌ ನ್ಯೂಸ್‌ ವಿದೇಶಿ ದೇಣಿಗೆ ಸ್ವೀಕರಿಸಿಲ್ಲ: ರೋಜರ್‌ಪೇ ಸ್ಪಷ್ಟನೆ

- Advertisement -
- Advertisement -

ದೇಣಿಗೆಗಳನ್ನು ಸ್ವೀಕರಿಸಲು ಆಲ್ಟ್ ನ್ಯೂಸ್ ಬಳಸುವ ಪೇಮೆಂಟ್‌ ಗೇಟ್‌ವೇ ಆಗಿರುವ ರೇಜರ್‌ಪೇ ಸಂಸ್ಥೆಯು ಶುಕ್ರವಾರ ಪ್ರತಿಕ್ರಿಯೆ ನೀಡಿದ್ದು, “ಕೇವಲ ದೇಶೀಯ ಪಾವತಿಗಳನ್ನು ಫ್ಯಾಕ್ಟ್-ಚೆಕಿಂಗ್ ವೆಬ್‌ಸೈಟ್‌ಗೆ ಸಕ್ರಿಯಗೊಳಿಸಲಾಗಿದೆ. ಎಫ್‌ಸಿಆರ್‌ಎ ಅನುಮೋದನೆಯಿಲ್ಲದೆ ವಿದೇಶಿ ವಹಿವಾಟುಗಳನ್ನು ಅನುಮತಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಆಲ್ಟ್ ನ್ಯೂಸ್‌ನಿಂದ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘನೆಯಾಗಿದ್ದು, ಈ ಸಂಬಂಧ ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಅವರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ದೆಹಲಿ ಪೊಲೀಸರು ಕಳೆದ ವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ರೇಜರ್‌ಪೇ ಸಹ-ಸಂಸ್ಥಾಪಕ ಮತ್ತು ಸಿಇಒ ಹರ್ಷಿಲ್ ಮಾಥುರ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, “ತನಿಖೆಯ ವ್ಯಾಪ್ತಿಯಲ್ಲಿ ನಿರ್ದಿಷ್ಟ ಡೇಟಾವನ್ನು ಮಾತ್ರ ತನಿಖಾ ಅಧಿಕಾರಿಗಳೊಂದಿಗೆ ರೋಜರ್‌ ಪೇ ಹಂಚಿಕೊಂಡಿದೆ” ಎಂದಿದ್ದಾರೆ.

“ದೇಣಿಗೆಗಳಿಗೆ ಎಸ್‌ಸಿಆರ್‌ಎ ಅನುಮೋದನೆಯಿಲ್ಲದೆ ಅಂತರರಾಷ್ಟ್ರೀಯ ವಹಿವಾಟುಗಳನ್ನು ಅನುಮತಿಸುವುದಿಲ್ಲ. ನಮ್ಮ ನೀತಿಗೆ ಅನುಗುಣವಾಗಿ ದೇಶೀಯ ಪಾವತಿಗಳನ್ನು ಸ್ವೀಕರಿಸಲು ಸಂಬಂಧಿಸಿದ ವ್ಯವಹಾರವನ್ನು ಮಾತ್ರ ಸಕ್ರಿಯಗೊಳಿಸಲಾಗಿದೆ” ಎಂದು ಆಲ್‌ನ್ಯೂಸ್ ಹೆಸರು ಪ್ರಸ್ತಾಪಿಸದೆ ಅವರು ಹೇಳಿದ್ದಾರೆ.

“ತನಿಖಾ ಸಂಸ್ಥೆಗಳ ವಿನಂತಿಯ ನಿರ್ದಿಷ್ಟ ವ್ಯಾಪ್ತಿಯು ಯಾವುದೇ ವಿದೇಶಿ ದೇಣಿಗೆಳಿವೆಯೇ ಎಂದು ನಿರ್ಧರಿಸಲು ಮಾತ್ರ ಸೀಮಿತವಾಗಿದೆ” ಎಂದು ರೋಜರ್‌ ಪೇ ತಿಳಿಸಿದೆ.

“ಹಾಗಾಗಿ ದಾನಿಗಳ ಪ್ಯಾನ್, ವಿಳಾಸ, ಪಿನ್ ಕೋಡ್ ಇತ್ಯಾದಿಗಳನ್ನು ಹಂಚಿಕೊಳ್ಳಲಾಗಿಲ್ಲ. ಇದು ತನಿಖೆಯ ವ್ಯಾಪ್ತಿಯಿಂದ ಹೊರಗಿದೆ ಎಂದು ನಾವು ನಂಬಿದ್ದೇವೆ” ಎಂದು ಅವರು ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಸಿನಿಮಾ ದೃಶ್ಯವೊಂದನ್ನು ಹಂಚಿಕೊಂಡ ಕಾರಣ ಜುಬೈರ್‌ ಅವರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆಂದು ಟ್ವಿಟರ್‌ ಖಾತೆಯೊಂದು ಆರೋಪಿಸಿತ್ತು. ಈಗ ಅಸ್ತಿತ್ವದಲ್ಲೇ ಇರದ ಖಾತೆಯ ಆರೋಪದ ಮೇರೆಗೆ ಜುಬೈರ್‌ ಅವರನ್ನು ಬಂಧಿಸಲಾಯಿತು. ಇದರ ಜೊತೆಗೆ ಜುಬೇರ್‌ ಮೇಲೆ ಇತರ ಆರೋಪಗಳನ್ನು ಹೊರಿಸಲಾಗಿದೆ.

ಒಂದು ಪ್ರಕರಣದಲ್ಲಿ ಜಾಮೀನು

ಜುಬೇರ್‌ ಮೇಲೆ ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾಗಿದ್ದ ದ್ವೇಷ ಭಾಷಣದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

ಜುಬೇರ್ ತನ್ನ ಟ್ವೀಟ್‌ನಲ್ಲಿ ಯತಿ ನರಸಿಂಗಾನಂದ ಸರಸ್ವತಿ, ಭಜರಂಗ ಮುನಿ ಮತ್ತು ಆನಂದ್ ಸ್ವರೂಪ್ ಎಂಬ 3 ಹಿಂದೂ ಧರ್ಮೀಯರನ್ನು ‘ದ್ವೇಷ ಪ್ರಚೋದಕರು’ ಎಂದು ಕರೆದ ಆರೋಪದ ಮೇಲೆ ಅವರ ವಿರುದ್ಧ FIR ದಾಖಲಾಗಿತ್ತು. ಐಪಿಸಿ ಸೆಕ್ಷನ್ 295-ಎ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 67 ರ ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಜೂನ್ 1 ರಂದು ಜುಬೈರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿರಿ: ಜುಬೇರ್‌ ಪ್ರಕರಣ: ಜಾಮೀನು ನೀಡಲು ನ್ಯಾಯಾಧೀಶರು ಹೆದರುತ್ತಿದ್ದಾರೆ- ಜಸ್ಟೀಸ್‌ ದೀಪಕ್‌ ಗುಪ್ತಾ

‘ತಮ್ಮ ಟ್ವೀಟ್‌ನಲ್ಲಿ ಒಂದು ವರ್ಗದ ಧಾರ್ಮಿಕ ನಂಬಿಕೆಯನ್ನು ಅವಮಾನಿಸಿಲ್ಲ ಅಥವಾ ಅವಮಾನಿಸುವ ಪ್ರಯತ್ನ ಮಾಡಿಲ್ಲ. ದುಷ್ಟ ಉದ್ದೇಶದಿಂದ ಕಿರುಕುಳ ನೀಡುವುದಕ್ಕಾಗಿಯೇ ನನ್ನ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ. ಹಾಗಾಗಿ ಅದನ್ನು ರದ್ದುಗೊಳಿಸಬೇಕೆಂದು’ ಜುಬೇರ್ ಅಹಲಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ತನಿಖೆಯು ಪ್ರಾಥಮಿಕ ಹಂತದಲ್ಲಿರುವುದರಿಂದ ಹಾಗೆ ಮಾಡಲು ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಅಜಯ್ ಕುಮಾರ್ ಶ್ರೀವಾಸ್ತವ ಅವರ ಪೀಠವು ಜೂನ್ 10ರಂದು ಜುಬೇರ್ ಮನವಿಯನ್ನು ವಜಾಗೊಳಿಸಿತ್ತು.

ತಮ್ಮ ಮೇಲೆ ಕೊಲೆ ಬೆದರಿಕೆಯನ್ನು ಉಲ್ಲೇಖಿಸಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಸುಪ್ರೀಂ ಪುರಸ್ಕರಿಸಿ ಮಧ್ಯಂತರ ಜಾಮೀನು ನೀಡಿದೆ. ಆದರೆ ದೆಹಲಿ ಪೊಲೀಸರು 2018ರ ಟ್ವೀಟ್ ಗೆ ಸಂಬಂಧಿಸಿ ಪ್ರಕರಣ ದಾಖಲಿಸಿರುವುದರಿಂದ ಅವರಿನ್ನು ಬಂಧನದಲ್ಲಿಯೇ ಮುಂದುವರಿಯಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ದುಷ್ಟರು ಒಳ್ಳೆತನವನ್ನು, ಸತ್ಯವನ್ನು ಸ್ವಲ್ಪ ಸಮಯ ತಡೀಬಹುದೇ ಹೊರತು ಅದನ್ನು ನಾಶಪಡಿಸಲು ಅವರ ಅಪ್ಪಂದಿr8ನಂದಾನು ಸಾಧ್ಯವಿಲ್ಲ.. ಯಾಕೋ ಒಂದು ನಾಯಿ ಬೊಗಳಬೇಕಿತ್ತು…!

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...