Homeಕರ್ನಾಟಕವಕ್ರಬುದ್ಧಿಯ ಚಕ್ರತೀರ್ಥ ಪರಿಷ್ಕರಿಸಿರುವ ಪಠ್ಯವನ್ನು ಸರ್ಕಾರ ಹಿಂಪಡೆಯುವವರೆಗೂ ಹೋರಾಟ: ಹೊಳಲಕೆರೆ ತಿಪ್ಪೆರುದ್ರ ಸ್ವಾಮಿಜಿ

ವಕ್ರಬುದ್ಧಿಯ ಚಕ್ರತೀರ್ಥ ಪರಿಷ್ಕರಿಸಿರುವ ಪಠ್ಯವನ್ನು ಸರ್ಕಾರ ಹಿಂಪಡೆಯುವವರೆಗೂ ಹೋರಾಟ: ಹೊಳಲಕೆರೆ ತಿಪ್ಪೆರುದ್ರ ಸ್ವಾಮಿಜಿ

ಪಠ್ಯಪುಸ್ತಕ ಹಗರಣ ವಿರೋಧಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನಾ ಪಾದಯಾತ್ರೆ

- Advertisement -
- Advertisement -

ಬಿಜೆಪಿಯ ಪಠ್ಯ ಪುಸ್ತಕ ಹಗರಣ ವಿರೋಧಿಸಿ ಚಿಕ್ಕಮಗಳೂರಿನ ದೇವನೂರುನಿಂದ ಪ್ರಾರಂಭವಾದ ಜನ ಜಾಗೃತಿ ಪಾದಯಾತ್ರೆ ನಿಡಘಟ್ಟ ಗ್ರಾಮದ ಗಾಂಧಿ ಗುಡಿಯಲ್ಲಿ ಶುಕ್ರವಾರ ಸಮಾರೋಪಗೊಂಡಿತು. ವಿವಿಧ ಸಂಘಟನೆಗಳು ಆಯೋಜಿಸಿದ್ದ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಳಲಕೆರೆ ತಿಪ್ಪೆರುದ್ರ ಸ್ವಾಮಿಜಿ, “ಶಿಕ್ಷಣ ಜ್ಞಾನೆವೇ ಇಲ್ಲದವನಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಜವಾಬ್ದಾರಿ ನೀಡಿರುವುದು ದೊಡ್ಡ ದುರಂತ. ವಕ್ರಬುದ್ಧಿಯ ರೋಹಿತ್ ಚಕ್ರತೀರ್ಥ ಪರಿಷ್ಕರಿಸಿರುವ ಪಠ್ಯವನ್ನು ಸರ್ಕಾರ ಹಿಂಪಡೆಯುವವರೆಗೂ ಹೋರಾಟ ಮುಂದುವರೆಸಬೇಕು” ಎಂದು ಕರೆ ನೀಡಿದ್ದಾರೆ.

“ಬಡತನ, ಅಸೂಯೆ ನಿವಾರಣೆಗೆ ಹೋರಾಡಿದಂತಹ ಬಸವಣ್ಣ, ಬುದ್ಧ, ಅಂಬೇಡ್ಕರ್‌ ಅಂತಹ ಮಹನೀಯರ ಸಾಧನೆಯನ್ನು ಪಠ್ಯದಿಂದ ತೆಗೆದು ಅವರಿಗೆ ಅವಮಾನ ಮಾಡುವಂತಹ ಕೆಲಸ ಪ್ರಸ್ತುತ ನಡೆಯುತ್ತಿದೆ. ಇದರ ವಿರುದ್ಧ ಸಮಾಜದ ಎಲ್ಲಾ ನಾಗರೀಕರು ಒಗ್ಗಟ್ಟಾಗಿ ಹೋರಾಟ ನಡೆಬೇಕು. ಅಂಹತ ಮಹನೀಯರಿಂದಲೇ ಪ್ರಸ್ತುತ ಹಿಂದೂ ಧರ್ಮ ಉಳಿದಿರುವುದಕ್ಕೆ ಸಾಕ್ಷಿ. ಇಲ್ಲದಿದ್ದರೆ ನಮ್ಮನ್ನು ಗರ್‌ ವಾಪಸ್ಸಿ ಎಂದು ಕರೆದುಕೊಂಡು ಬರಬೇಕಿತ್ತು. ಇದನ್ನು ಅರಿಯದ ಸರ್ಕಾರ, ಶಿಕ್ಷಣ ಜ್ಞಾನೆವೇ ಇಲ್ಲದವನಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಜವಾಬ್ದಾರಿ ನೀಡಿದರುವುದು ದೊಡ್ಡ ದುರಂತ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಸರ್ಕಾರ ಮಕ್ಕಳ ಪಠ್ಯದಲ್ಲಿ ಹಸಿ ಸಳ್ಳನ್ನು ಸೇರಿಸುವ ಕೆಲಸ ಮಾಡುತ್ತಿದೆ. ಇದರಿಂದ ನಾಡಿನ ಮಹಾನೀಯರ ಇತಿಹಾಸಗಳು ಕಣ್ಮರೆಯಾಗುವ ಸಂಭವವಿರುವುದರಿಂದ ಅದನ್ನು ಪ್ರತಿಯೊಬ್ಬರು ವಿರೋಧಿಸುವ ಮೂಲಕ ಹೋರಾಟಗಳಲ್ಲಿ ಭಾಗವಹಿಸಬೇಕು. ವಕ್ರಬುದ್ಧಿಯ ರೋಹಿತ್ ಚಕ್ರತೀರ್ಥ ಪರಿಷ್ಕರಿಸುವ ಪಠ್ಯವನ್ನು ಸರ್ಕಾರ ಹಿಂಪಡೆಯುವವರೆಗೂ ಹೋರಾಟ ಮುಂದುವರೆಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಠ್ಯ ಪುಸ್ತಕ ಹಗರಣ – ಸಚಿವ ಬಿಸಿ ನಾಗೇಶ್‌ ‘ಮೂರ್ಖ’: ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ

ಹಿರಿಯ ಲೇಖಕ ಎಸ್‌.ಜಿ. ಸಿದ್ದರಾಮಯ್ಯ ಅವರು ಮಾತನಾಡಿ,“ಯಾವುದೇ ಶಿಕ್ಷಣ ಹಿನ್ನೆಲೆ ಹೊಂದಿರದೇ ಟ್ಯುಟೋರಿಯಲ್ ನಡೆಸಿಕೊಂಡು ಜೀವನ ಮಾಡುತ್ತಿದ್ದ ರೋಹಿತ್ ಚಕ್ರತೀರ್ಥನಿಗೆ ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆಯ ದೊಡ್ಡ ಜವಾಬ್ದಾರಿ ನೀಡಿರುವುದು ವಿಪರ್ಯಾಸ. ಮುಂದಿನ ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ಅವರ ಕಲಿಕೆಯ ಜೀವನ ಎಂದಿಗೂ ವ್ಯರ್ಥವಾಗಬಾರದೆಂಬುದರಿಂದ ಈ ಪರಿಷ್ಕರಣೆ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ” ಎಂದು ಹೇಳಿದ್ದಾರೆ.

“ರಾಜ್ಯದ ಯಾವ ಪಕ್ಷವು ಮಕ್ಕಳ ಪಠ್ಯ ವಿಷಯದಲ್ಲಿ ಈ ರೀತಿಯ ದ್ವಂದ್ವ ನಿಲುವುಗಳನ್ನು ಮಾಡಿರಲಿಲ್ಲ. ಪ್ರಜಾಪ್ರಭುತ್ವವಾಗಿ ಪಠ್ಯ ರಚನೆ ಮಾಡಿದ್ದರು. ಅದರೆ ಇಂದಿನ ಸರ್ಕಾರ ಬಂದಾಗಿನಿಂದ ಹಿಂದುತ್ವದ ಹೆಸರನ್ನು ಹೇಳಿಕೊಂಡು ಮಕ್ಕಳ ಪಠ್ಯದಲ್ಲೂ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿರುವುದು ದುರ್ದೈವ” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕಡೂರು ತಾಲೂಕಿನ ಎಸ್. ಕೊಪ್ಪಲಿನಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ, “ಮನುಷ್ಯರ ನಡುವೆ ಬೇಲಿ ಕಟ್ಟಲಾಗುತ್ತಿದೆ. ಸಮಾಜದಲ್ಲಿ ವಿಷಬೀಜ ಬಿತ್ತುವವರ ಎದುರು ಜಾಗೃತಿ ಅವಶ್ಯಕವಾಗಿದೆ. ಪಠ್ಯ ಪುಸ್ತಕದಲ್ಲಿ ಸಾಕಷ್ಟು ಗೊಂದಲ ನಿರ್ಮಾಣವಾಗಿದೆ”

“ನಾಡಿನ ಅನೇಕ ಪ್ರಜ್ಞಾವಂತರು ಧ್ವನಿ ಎತ್ತಿದ ಬಳಿಕ ಮತ್ತೆ ಪರಿಷ್ಕರಣೆ ಮಾಡುತ್ತೇವೆ ಎಂದಿದ್ದರೂ, ಇನ್ನೂ ಅನೇಕ ಅವಾಂತಾರಗಳಿವೆ. ಮಕ್ಕಳಿಗೆ ಸರಿಯಾದ ಇತಿಹಾಸ, ಚಾರಿತ್ಯ್ರ ಕೊಡದಿದ್ದರೆ ಅವರ ಭವಿಷ್ಯವೇನು ಎಂಬುವುದರ ಬಗ್ಗೆ ಶಿಕ್ಷಣ ತಜ್ಞರು, ರಾಜಕೀಯ ನೇತಾರರು ಗಂಭೀರವಾಗಿ ಯೋಚಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಠ್ಯ ಪುಸ್ತಕ ಹಗರಣ ವಿರೋಧಿಸಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಕ್ಷೇತ್ರ ತಿಪಟೂರಿನಲ್ಲಿ ಪಾದಯಾತ್ರೆ

ಬೆಂಗಳೂರಿನ ಶ್ರೀ ಬಸವಕುಮಾರ ಸ್ವಾಮೀಜಿ, ಕ್ಯಾತನಬೀಡು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ರವೀಶ್ ಕ್ಯಾತನಬೀಡು, ನಟರಾಜ್ ಎಸ್. ಕೊಪ್ಪಲು, ಸಾಹಿತಿ ಶ್ರೀಪಾದ ಭಟ್, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ನಿವೃತ್ತ ಅಧಿಕಾರಿ ರುದ್ರಪ್ಪ, ಸಾಹಿತಿ ಬಿ. ಚಂದ್ರೇಗೌಡ, ರೇಣುಕಾ ಆರಾಧ್ಯ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನ್ಯೂಸ್‌ಕ್ಲಿಕ್ ಸಂಪಾದಕರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಪೊಲೀಸ್; ‘ಅನಾವಶ್ಯಕ ಆತುರ’ ಏಕೆ ಎಂದ ಸುಪ್ರೀಂ...

0
ಬಂಧಿತ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥನನ್ನು ತನ್ನ ವಕೀಲರಿಗೂ ತಿಳಿಸದೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿರುವ "ಅನಾವಶ್ಯಕ ಆತುರ"ವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. "ನೀವು ಅವರ ವಕೀಲರು ಅಥವಾ ಕಾನೂನು ತಂಡಕ್ಕೆ ಏಕೆ ತಿಳಿಸಲಿಲ್ಲ?...