ನಾನು ಗಾಂಧಿ ಕಟುಂಬದ ವಿರುದ್ಧ ಮಾತನಾಡುತ್ತೇನೆ ಎಂಬ ಕಾರಣಕ್ಕೆ ಕಾಂಗ್ರೆಸ್ ನನ್ನ ಮಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಒಕ್ಕೂಟ ಸರ್ಕಾರದ ಸಚಿವೆ ಸ್ಮೃತಿ ಇರಾನಿ ಶನಿವಾರ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದ್ದಾರೆ. ತನ್ನ ಮಗಳ ಮೇಲೆ ಇರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೋವಾದಲ್ಲಿ ತನ್ನ ಮಗಳು ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ.
“18ರ ಹರೆಯದ ಬಾಲಕಿಯೊಬ್ಬಳ ಚಾರಿತ್ರ್ಯಹತ್ಯೆಗೆ ಇಬ್ಬರು ಮಧ್ಯವಯಸ್ಕ ಕಾಂಗ್ರೆಸ್ಸಿಗರೇ ಕಾರಣ. ಬಾಲಕಿಯ ತಾಯಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಬಗ್ಗೆ ಮಾತನಾಡಿದ್ದು ಮಾತ್ರ ಅವರು ಮಾಡಿರುವ ತಪ್ಪು” ಎಂದು ತನ್ನ ಮಗಳ ಮೇಲಿನ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಬ್ಲಿಕ್ ಫ್ಲಾಟ್‌ಫಾರ್ಮ್ ಅಲ್ಲಿರುವ ಮಾಹಿತಿಯ ಪ್ರಕಾರ ಸ್ಮೃತಿ ಇರಾನಿ ಅವರ ಮಗಳ ಹುಟ್ಟಿದ ದಿನ, ‘23 ಸೆಪ್ಟೆಂಬರ್ 2003’ ಎಂದಿದೆ. ಅದರಂತೆ ಅವರಿಗೆ 18 ವರ್ಷ ಕಳೆದಿದ್ದು ಸೆಪ್ಟೆಂಬರ್ 2022ಕ್ಕೆ ಅವರ ವಯಸ್ಸು 19 ಆಗಲಿದೆ. ಭಾರತದ ಪ್ರಜೆಯೊಬ್ಬರಿಗೆ 18 ವರ್ಷ ತುಂಬಿದ ನಂತರ ಅವರನ್ನು ವಯಸ್ಕ ಎಂದು ಗುರುತಿಸಲಾಗುತ್ತದೆ.
Smriti Irani targets Gandhis, Congress, says "My daughter doesn't run a bar… will take the matter to court".#SmritiIrani #SoniaGandhi #Congress pic.twitter.com/ZDyISAhkZL
— IndiaToday (@IndiaToday) July 23, 2022
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮಾಡಿರುವ 5,000 ರೂಪಾಯಿ ಲೂಟಿಯ ಬಗ್ಗೆ ಬಾಲಕಿಯ ತಾಯಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು ಬಾಲಕಿ ಮಾಡಿರುವ ತಪ್ಪು ಎಂದು ಸಚಿವೆ ಹೇಳಿದ್ದಾರೆ.
ಇದನ್ನೂ ಓದಿ: ಗೋವಾ: ನಿಧನ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿ ಲೈಸನ್ಸ್ ಪಡೆದು ಅಕ್ರಮ ಬಾರ್ ನಡೆಸುತ್ತಿರುವ ಸಚಿವೆ ಸ್ಮೃತಿ ಇರಾನಿ ಪುತ್ರಿ
“ನನ್ನ ಮಗಳು ಕಾಲೇಜಿನಲ್ಲಿ ಓದುತ್ತಾಳೆ, ಅವಳು ಬಾರ್ ನಡೆಸುತ್ತಿಲ್ಲ, ದಯವಿಟ್ಟು ದಾಖಲೆಗಳನ್ನು ಪರಿಶೀಲಿಸಿ. ಅದರಲ್ಲಿ ನನ್ನ ಮಗಳ ಹೆಸರು ಎಲ್ಲಿದೆ? ಅವರು ಮಾಹಿತಿ ಹಕ್ಕು (ಆರ್‌ಟಿಐ) ಆಧಾರದ ಮೇಲೆ ನನ್ನ ಮಗಳ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಇಬ್ಬರು ಗಾಂಧಿಗಳ ವಿರುದ್ಧ ಬಾಲಕಿಯ ಆಕೆಯ ತಾಯಿ ಪತ್ರಿಕಾಗೋಷ್ಠಿ ನಡೆಸಿದ್ದು ಬಾಲಕಿ ಮಾಡಿರುವ ತಪ್ಪು. ನನ್ನ ಮಗಳು ರಾಜಕಾರಣಿಯಲ್ಲ ಬದಲಾಗಿ ವಿದ್ಯಾರ್ಥಿಯಾಗಿ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ” ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
“ನಾನು ಕಾನೂನಿನ ನ್ಯಾಯಾಲಯದಲ್ಲಿ ಮತ್ತು ಜನರ ನ್ಯಾಯಾಲಯದಲ್ಲಿ ಉತ್ತರವನ್ನು ಕಂಡುಕೊಳ್ಳುತ್ತೇನೆ. ಈ ದಾಖಲೆಗಳಲ್ಲಿ ನನ್ನ ಮಗಳ ಹೆಸರು ಎಲ್ಲಿದೆ ಎಂದು ನಾನು ಕೇಳಲು ಬಯಸುತ್ತೇನೆ. 2024 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಅಮೇಥಿಗೆ ಕಳುಹಿಸಿ. ನಾವು ಮತ್ತೊಮ್ಮೆ ರಾಹುಲ್ ಗಾಂಧಿಯನ್ನು ಸೋಲಿಸುತ್ತೇವೆ” ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಇಂದು ಸಂಜೆಯೊಳಗೆ ಹಿರಿಯ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರಿಗೆ ತಮ್ಮ ತಂಡ ಲೀಗಲ್ ನೋಟಿಸ್ ಕಳುಹಿಸಲಿದೆ ಎಂದು ಸಚಿವೆ ತಿಳಿಸಿದ್ದಾರೆ.
ಇದನ್ನೂ ಓದಿ: ಜನರು ಏನು ತೊಡುತ್ತಾರೆ ಎಂಬುದರಲ್ಲಿ ರಾಜಕಾರಣಿಗಳು ಮೂಗು ತೂರಿಸಬೇಕಿಲ್ಲ: ಸ್ಮೃತಿ ಇರಾನಿ
ಒಂದು ದಿನದ ಹಿಂದೆಯಷ್ಟೆ ಸ್ಮೃತಿ ಇರಾನಿ ಅವರ ಪುತ್ರಿ ಜೊಯಿಶ್ ಇರಾನಿ ಗೋವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಾರ್ ಅನ್ನು ‘ನಕಲಿ ಪರವಾನಗಿ’ ಪಡೆದು ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ನರೇಂದ್ರ ಮೋದಿ ಸರ್ಕಾರವು ಸಚಿವೆ ಸ್ಮೃತಿ ಇರಾನಿ ಅವರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆಗ್ರಹಿಸಿದ್ದಾರೆ.
ಸ್ಮೃತಿ ಇರಾನಿ ಅವರ ವಕೀಲರ ಸಮಸ್ಯಾತ್ಮಕ ಹೇಳಿಕೆ
ಜೋಯಿಶ್ ಇರಾನಿ ಅವರ ವಕೀಲ ಕಿರಾತ್ ನಾಗ್ರಾ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅವರ ಕಕ್ಷಿದಾರರ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.
ಸ್ಮೃತಿ ಇರಾನಿ ಅವರ ರಾಜಕೀಯ ವಿರೋಧಿಗಳು ರಾಜಕೀಯ ನಾಯಕರ ಮಗಳು ಎಂಬ ಕಾರಣಕ್ಕಾಗಿ ಅವರನ್ನು ಮಾನಹಾನಿ ಮಾಡುವ ಪೂರ್ವನಿರ್ಧರಿತ ಉದ್ದೇಶದಿಂದ ಅವರ ವಿರುದ್ಧ ಹಲವಾರು ‘ಸೃಷ್ಟಿಸಲಾದ’ ಆರೋಪಗಳನ್ನು ಮಾಡಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ. ಅಷ್ಟೆ ಅಲ್ಲದೆ, ಜೊಯಿಶ್ ಅವರ ವಕೀಲರು, ಆಕೆಗೆ ಯಾವುದೇ ಪ್ರಾಧಿಕಾರದಿಂದ ಯಾವುದೇ ಶೋಕಾಸ್ ನೋಟಿಸ್ ಬಂದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ಹಿಂಸೆಗೆ ಕರೆ ನೀಡಿದ್ದಾರೆ: ಸ್ಮೃತಿ ಇರಾನಿ
ದೆಹಲಿಯ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಆರೋಪವನ್ನು ನಿರಾಕರಿಸಿದ್ದು, ಸ್ಮೃತಿ ಇರಾನಿ ಅವರ ಮಗಳು ಅಮೆರಿಕಾದಲ್ಲಿ ಓದುತ್ತಿದ್ದಾರೆ. ಜೊಯಿಶ್ ಅವರಿಗೂ ಬಾರ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.


