Homeಕರ್ನಾಟಕಬದುಕು ವತಿಯಿಂದ ‘ಜರ್ನಲಿಸ್ಟ್‌ಗಳಿಗಾಗಿ ಪರ್ಯಾಯ ಜೀವನೋಪಾಯ ಸಾಧ್ಯತೆಗಳು’ ಕಾರ್ಯಗಾರ

ಬದುಕು ವತಿಯಿಂದ ‘ಜರ್ನಲಿಸ್ಟ್‌ಗಳಿಗಾಗಿ ಪರ್ಯಾಯ ಜೀವನೋಪಾಯ ಸಾಧ್ಯತೆಗಳು’ ಕಾರ್ಯಗಾರ

- Advertisement -
- Advertisement -

‘‘ಬದುಕು – ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್’’ ವತಿಯಿಂದ ‘‘ಜರ್ನಲಿಸ್ಟ್‌‌ಗಳಿಗಾಗಿ ಪರ್ಯಾಯ ಜೀವನೋಪಾಯ ಸಾಧ್ಯತೆಗಳು’’ ಎಂಬ ವಿಷಯದ ಬಗ್ಗೆ, ಬೆಂಗಳೂರಿನ ಪ್ರೆಸ್‌ಕ್ಲಬ್‌ ಆವರಣದಲ್ಲಿ ಜುಲೈ 28-29 ರಂದು ಕಾರ್ಯಗಾರವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾರ್ಯಾಗಾರವನ್ನು ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಬೆಂಗಳೂರು ಪ್ರೆಸ್‌ಕ್ಲಬ್‌ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘದ ಸಹಯೋಗದಲ್ಲಿ ನಡೆಸಲಾಗುತ್ತಿದೆ.

ಕಾರ್ಯಗಾರದ ಮೊದಲ ದಿನವಾದ ಜುಲೈ 28ರ ಗುರುವಾರದಂದು ಹಿರಿಯ ಪತ್ರಕರ್ತ, ಸಾಹಿತಿ ನಾಗೇಶ ಹೆಗಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಕೆ. ತೊಗರ್ಸಿ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಬೆಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷ ಆರ್. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೊದಲ ದಿನದ ಕಾರ್ಯಾಗಾರದಲ್ಲಿ ‘ಡಿಜಿಟಲ್ ಜರ್ನಲಿಸಮ್ನ ಸಾಧ್ಯತೆಗಳು’ ವಿಷಯದ ಬಗ್ಗೆ ಕನ್ನಡನ್ಯೂಸ್‌‌ನೌ.ಕಾಮ್ ವೆಬ್‌ಸೈಟ್‌‌ನ ಸಂಪಾದಕ ವಸಂತ್ ಬಿ. ಈಶ್ವರಗೆರೆ ಪ್ರಾಯೋಗಿಕ ತರಗತಿ ನಡೆಸಿಕೊಡಲಿದ್ದಾರೆ.

ಎರಡನೇ ದಿನ ‘ಪರ್ಯಾಯ ಜೀವನೋಪಾಯ ದಾರಿಗಳು’ ವಿಷಯದ ಬಗ್ಗೆ ಸಂವಾದ ಯುವಜನ ಕಾರ್ಯ ಮತ್ತು ಹಕ್ಕುಗಳ ಕೇಂದ್ರದ ತಂಡದ ಮುಖ್ಯಸ್ಥ ಜನಾರ್ದನ ಕೆಸರಗದ್ದೆ ಮಾತನಾಡಲಿದ್ದಾರೆ.

ಎರಡನೇ ದಿನ ಶುಕ್ರವಾರ ಸಂಜೆ 3 ಗಂಟೆಯಿಂದ ನಡೆಯುವ ಕಾರ್ಯಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಬೆಂಗಳೂರು ಪ್ರೆಸ್‌ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಬಿ.ಪಿ. ಮತ್ತು ಹಿರಿಯ ಪರ್ತಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಖಜಾಂಚಿ ಮುಂಜಾನೆ ಸತ್ಯ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಜೂನ್ ’ಸ್ವಾಭಿಮಾನದ ತಿಂಗಳು’: ಎಲ್‌ಜಿಬಿಟಿಕ್ಯೂ ಸಮುದಾಯದ ಬಗ್ಗೆ ತಿಳಿವಳಿಕೆ ಹೆಚ್ಚಿದೆಯೇ?

ಕಾರ್ಯಾಗಾರದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ ಎಂದು ಕಾರ್ಯಾಗಾರದ ಸಂಘಟಕರು ಹೇಳಿದ್ದು, ಆಸಕ್ತರು bit.ly/3aUL2tL ಲಿಂಕ್ ಮೂಲಕ ರಿಜಿಸ್ಟರ್ ಮಾಡಬಹುದು ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ 9972089471, 9945065060, 9964601753 ನಂಬರ್‌ಗಳನ್ನು ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...