Homeರಾಷ್ಟ್ರೀಯತಮಿಳುನಾಡು: ತಂದೆಯಿಂದಲೆ ನವವಿವಾಹಿತ ಮಗಳು, ಅಳಿಯನ ಕೊಲೆ

ತಮಿಳುನಾಡು: ತಂದೆಯಿಂದಲೆ ನವವಿವಾಹಿತ ಮಗಳು, ಅಳಿಯನ ಕೊಲೆ

- Advertisement -
- Advertisement -

ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ನವವಿವಾಹಿತ ದಂಪತಿಯನ್ನು ಹುಡುಗಿಯ ತಂದೆ ಕಡಿದು ಕೊಂದಿರುವ ಮಾರ್ಯಾದೆಗೇಡು ಘಟನೆ ತಮಿಳುನಾಡಿನ ತೂತುಕುಡಿಯ ಟುಟಿಕಾರಿನ್‌ನಲ್ಲಿ ನಡೆದಿದೆ. ಹುಡುಗಿಯ ತಂದೆ ನವ ದಂಪತಿಯ ಬಗ್ಗೆ ಅಸಮಾಧಾನ ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಂಪತಿಗಳು ವಿವಾಹವಾದ ನಂತರ ಹುಡುಗಿಯ ಕುಟುಂಬವು ತಮ್ಮ ಹುಡುಗಿ ಕಾಣೆಯಾಗಿರುವುದಾಗಿ ದೂರನ್ನು ದಾಖಲಿಸಿತ್ತು. ಇದರ ನಂತರ ದಂಪತಿಗಳು ಮಧುರೈನಲ್ಲಿ ಪೊಲೀಸರ ಮುಂದೆ ಹಾಜರಾಗಿ, “ಇಬ್ಬರೂ ವಯಸ್ಕರಾಗಿದ್ದು, ತಾವು ಒಪ್ಪಿಗೆಯಿಂದಲೇ ಮದುವೆಯಾಗಿದ್ದೇವೆ” ಎಂದು ಹೇಳಿದ್ದಾರೆ.€
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ದಂಪತಿಗಳು ಹುಡುಗಿಯ ಪೋಷಕರೊಂದಿಗೆ ನಿಲ್ದಾಣದಿಂದ ವೀಡಿಯೊ ಕರೆಯಲ್ಲಿ ಮಾತನಾಡಿದ್ದಾರೆ. ಆದರೆ ಅವರು ಪೊಲೀಸ್ ರಕ್ಷಣೆಯನ್ನು ಕೋರಿರಲಿಲ್ಲ” ಎಂದು ಟುಟಿಕಾರಿನ್‌ನ ಹಿರಿಯ ಪೊಲೀಸ್‌ ಅಧಿಕಾರಿ ಬಾಲಾಜಿ ಸರವಣನ್ ಎನ್‌ಡಿಟಿವಿಗೆ ತಿಳಿಸಿದ್ದಾಗಿ ವರದಿಯಾಗಿದೆ.

ಗ್ರಾಮದ ಹಿರಿಯರೂ ಮಧ್ಯಪ್ರವೇಶಿಸಿ ದಂಪತಿಗಳಿಗೆ ತೊಂದರೆ ನೀಡದಂತೆ ಮನೆಯವರಿಗೆ ಮನವಿ ಮಾಡಿದ್ದರು ಎಂದು ಎನ್‌ಡಿಟಿವಿ ಹೇಳಿದೆ. ದಂಪತಿಯನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದರ ನಂತರ ಹುಡುಗಿಯ ತಂದೆ ಪೊಲೀಸರ ಮುಂದೆ ಶರಣಾದ್ದಾರೆ.

ಇದನ್ನೂ ಓದಿ:ತಮಿಳುನಾಡಿನಲ್ಲಿ ಮರ್ಯಾದೆಗೇಡು ಹತ್ಯೆ: ತಂಗಿ-ಬಾವನನ್ನು ಊಟಕ್ಕೆ ಕರೆದು ಕೊಲೆ ಮಾಡಿದ ಅಣ್ಣ 

“ದಂಪತಿಗಳು ಒಂದೇ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಹುಡುಗಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಹುಡುಗ ಶಾಲೆಯಿಂದಲೇ ಕಲಿಕೆ ಬಿಟ್ಟಿದ್ದರು. ಈ ಕಾರಣಕ್ಕೆ ಹುಡುಗಿಯ ಕುಟುಂಬ ಮದುವೆಯನ್ನು ವಿರೋಧಿಸಿತ್ತು” ಎಂದು ಪೊಲೀಸ್ ಅಧಿಕಾರಿಗಳು NDTV ಗೆ ತಿಳಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...