Homeಮುಖಪುಟತಮಿಳುನಾಡಿನಲ್ಲಿ ಮರ್ಯಾದೆಗೇಡು ಹತ್ಯೆ: ತಂಗಿ-ಬಾವನನ್ನು ಊಟಕ್ಕೆ ಕರೆದು ಕೊಲೆ ಮಾಡಿದ ಅಣ್ಣ

ತಮಿಳುನಾಡಿನಲ್ಲಿ ಮರ್ಯಾದೆಗೇಡು ಹತ್ಯೆ: ತಂಗಿ-ಬಾವನನ್ನು ಊಟಕ್ಕೆ ಕರೆದು ಕೊಲೆ ಮಾಡಿದ ಅಣ್ಣ

- Advertisement -
- Advertisement -

ತಮಿಳುನಾಡಿನಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಇಚ್ಛೆಗೆ ವಿರೋಧವಾಗಿ ಐದು ದಿನಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ತಂಗಿ-ಬಾವನನ್ನು ಮನೆಗೆ ಊಟಕ್ಕೆ ಕರೆದ ಅಣ್ಣ ಇಬ್ಬರನ್ನು ಹತ್ಯೆ ಮಾಡಿರುವ ಪ್ರಕರಣ ಕುಂಭಕೋಣಂ ಬಳಿ ನಡೆದಿದೆ.

ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿ ಸೋಮವಾರ ಸಂಜೆ ಈ ಭೀಕರ ಕೃತ್ಯ ನಡೆದಿದೆ. 24 ವರ್ಷದ ಶರಣ್ಯ ಮತ್ತು 31 ವರ್ಷದ ಆಕೆಯ ಪತಿ ಮೋಹನ್ ಮೃತರು. ತನಗೆ ಇಷ್ಟ ಇಲ್ಲದವರನ್ನು ಮದುವೆಯಾದ ಕಾರಣಕ್ಕೆ ಅಣ್ಣನೇ ಇಬ್ಬರನ್ನು ಕೊಂದಿದ್ದು, ಚೋಳಪುರಂ ಪೊಲೀಸರು ಮೃತಳ ಅಣ್ಣ ಮತ್ತು ಸಂಬಂಧಿಯನ್ನು ಬಂಧಿಸಿದ್ದಾರೆ.

ದಲಿತ ಮಹಿಳೆಯಾಗಿರುವ ಯುವತಿ ಶರಣ್ಯ, ನಾಯ್ಕರ್ ಜಾತಿಗೆ ಸೇರಿದ್ದ ಮೋಹನ್ ಎಂಬಾತನನ್ನು ಐದು ತಿಂಗಳಿಂದ ಪ್ರೀತಿಸಿ ಮದುವೆಯಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ಚೆನ್ನೈನ ಆಸ್ಪತ್ರೆಗೆ ಕರೆ ತಂದಿದ್ದ ಮೋಹನ್, ಅಲ್ಲೇ ನರ್ಸ್‌ ಆಗಿರುವ ಶರಣ್ಯ ಅವರನ್ನು ಭೇಟಿಯಾಗಿದ್ದರು. ಅಲ್ಲಿ ಅವರಿಬ್ಬರಿಗೂ ಪರಿಚಯವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಆದರೆ ಎರಡೂ ಮನೆಯವರು ಇವರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆ ಇಬ್ಬರು ಮದುವೆಯಾಗಿದ್ದರು.

ಇದನ್ನೂ ಓದಿ: ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ದಲಿತ ಯುವಕನ ಕೊಲೆ: ಕಲಬುರಗಿಯಲ್ಲಿ ಮರ್ಯಾದೆಗೇಡು ಹತ್ಯೆ

ಶರಣ್ಯ ಅವರ ಅಣ್ಣ 31 ವರ್ಷದ ಶಕ್ತಿವೇಲ್‌ಗೆ ತನ್ನ ತಂಗಿಯನ್ನು ಸ್ನೇಹಿತ ಮತ್ತು ಸೋದರ ಮಾವ ದೇವನಗಿರಿಯ 28 ವರ್ಷದ ರಂಜಿತ್‌ನೊಂದಿಗೆ ಮದುವೆ ಮಾಡುವ ಆಸೆಯಿತ್ತು. ಇದನ್ನು ಇತ್ತೀಚೆಗೆ ಶರಣ್ಯ ಅವರಿಗೆ ತಿಳಿಸಿದ್ದರು. ಇದರ ಬೆನ್ನಲ್ಲೇ ಶರಣ್ಯ ಮತ್ತು ಮೋಹನ್ ಕಳೆದ ವಾರ ಚೆನ್ನೈನಲ್ಲಿ ಮದುವೆಯಾಗಿದ್ದು, ಮನೆಯವರಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿದ್ದಾರೆ.

ಇದನ್ನು ಕೇಳಿದ ಶಕ್ತಿವೇಲ್, ಮದುವೆಗೆ ತನ್ನ ಒಪ್ಪಿಗೆ ಇದೆ ಎಂದು ಹೇಳಿ ದಂಪತಿಯನ್ನು ಊಟಕ್ಕೆಂದು ಮನೆಗೆ ಆಹ್ವಾನಿಸಿದ್ದಾರೆ. ಸೋಮವಾರ ತುಳುಕ್ಕವೇಲಿಗೆ ಆಗಮಿಸಿ ಊಟ ಮುಗಿಸಿ, ಚೆನ್ನೈಗೆ ಮರಳಲು ತಯಾರಾಗುತ್ತಿದ್ದಂತೆ ಶಕ್ತಿವೇಲ್ ಮತ್ತು ರಂಜಿತ್ ದಂಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಪೊಲೀಸರು ಶವಗಳನ್ನು ಮನೆಯಿಂದ ಹೊರತೆಗೆದಿದ್ದಾರೆ.

ಘಟನೆ ಬಳಿಕ ಶಕ್ತಿವೇಲ್ ಮತ್ತು ರಂಜಿತ್ ಸ್ಥಳದಿಂದ ಓಡಿಹೋಗಿದ್ದರು, ಆದರೆ ಅವರನ್ನು ಕುಂಭಕೋಣಂ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸದ್ಯ ಆರೋಪಿಗಳಾದ ಶಕ್ತಿವೇಲ್ ಮತ್ತು ರಂಜಿತ್ ಇಬ್ಬರೂ ಪೊಲೀಸ್ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರತ್ಯಕ್ಷದರ್ಶಿಗಳು, ಸಂಬಂಧಿಕರು ಮತ್ತು ಸ್ನೇಹಿತರು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದ ನಂತರ ವಿವರವಾದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಂಜಾವೂರು ಪೊಲೀಸ್ ವರಿಷ್ಠಾಧಿಕಾರಿ ಜಿ.ರವಳಿ ಪ್ರಿಯಾ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಮರ್ಯಾದೆಗೇಡು ಹತ್ಯೆ: ಸಾವಿನ ಕುರಿತು ಮೊದಲೇ ಬರೆದಿದ್ದ ಯುವತಿ; ಪತ್ರದಲ್ಲೇನಿದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...