Homeಕರ್ನಾಟಕಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ದಲಿತ ಯುವಕನ ಕೊಲೆ: ಕಲಬುರಗಿಯಲ್ಲಿ ಮರ್ಯಾದೆಗೇಡು ಹತ್ಯೆ

ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ದಲಿತ ಯುವಕನ ಕೊಲೆ: ಕಲಬುರಗಿಯಲ್ಲಿ ಮರ್ಯಾದೆಗೇಡು ಹತ್ಯೆ

ಈ ಜಾತಿಶ್ರೇ‍ಷ್ಠತೆಯ ವ್ಯಸನ ಮುಸ್ಲಿಂ ಧರ್ಮದಲ್ಲಿಯೂ ಹಬ್ಬುತ್ತಿರುವುದಕ್ಕೆ ತೀವ್ರ ಟೀಕೆ, ಖಂಡನೆಗಳು ವ್ಯಕ್ತವಾಗಿವೆ.

- Advertisement -
- Advertisement -

ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ದಲಿತ ಯುವಕನನ್ನು ಮರ್ಯಾದೆಗೇಡು ಹತ್ಯೆ ಮಾಡಿರುವ ಅಮಾನುಷ ಘಟನೆ ಕಲಬರುಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ಜರುಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ವಾಡಿ ಪಟ್ಟಣದ ಭೀಮ್ ನಗರದ ನಿವಾಸಿ ವಿಜಯ ಕಾಂಬಳೆ (25) ಮತ್ತು ಮುಸ್ಲಿಂ ಯುವತಿಯು ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಮನೆಯವರು ಪರಸ್ಪರ ಪರಿಚಯವಿದ್ದ ಕಾರಣಕ್ಕೆ ಇವರಿಬ್ಬರ ನಡುವೆ ಪರಿಚಯ ಮತ್ತು ಪ್ರೀತಿ ಉಂಟಾಗಿತ್ತು. ಆದರೆ ಈ ಪ್ರೀತಿ ವಿಚಾರ ಹುಡುಗಿ ಮನೆಯವರಿಗೆ ತಿಳಿದ ನಂತರ ಗಲಾಟೆಯಾಗಿತ್ತು. ಊರಿನವರ ಸಮ್ಮುಖದಲ್ಲಿ ಪಂಚಾಯ್ತಿ ನಡೆಸಿ ಇಬ್ಬರೂ ಬೇರೆ ಬೇರೆಯಾಗಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಹುಡುಗ ಮತ್ತು ಹುಡುಗಿ ಪರಸ್ಪರ ಫೋನ್‌ನಲ್ಲಿ ಮಾತಾಡುತ್ತಿದ್ದರು. ಇದನ್ನು ಸಹಿಸದ ಹುಡುಗಿಯ ಕುಟುಂಬದವರನ್ನು ವಿಜಯ ಕಾಂಬಳೆಯನ್ನು ಹತ್ಯೆ ಮಾಡಿದ್ದಾರೆ ಎಂದು ಅವರ ಸಂಬಂಧಿ ರಾಜಶೇಖರ್ ದೂರಿದ್ದಾರೆ.

ವಿಜಯ್ ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದರು. ಆದರೆ ಹುಡುಗಿಯ ಕಡೆಯವರು ಫೋನ್ ಮಾಡಿ ಕರೆಸಿಕೊಂಡು ರೈಲ್ವೆ ನಿಲ್ದಾಣದ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಕಲಬುರಗಿ ಎಸ್‌ಪಿ ಇಶಾ ಪಂತ್, “ದಲಿತ ಯುವಕನ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ 302, 34 ಹಾಗೂ ಎಸ್‌ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಇದೇ ರೀತಿಯ ಎರಡು ಮಾರ್ಯಾದೆಹೀನ ಹತ್ಯೆಗಳು ಇತ್ತೀಚೆಗೆ ಹೈದರಾಬಾದ್‌ನಲ್ಲಿ ವರದಿಯಾಗಿದ್ದವರು. ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ದಲಿತ ಯುವಕನ ಕೊಲೆ ನಡೆದಿತ್ತು. ಅವುಗಳು ಮಾಸುವ ಮುನ್ನವೇ ಅದೇ ರೀತಿಯ ಹತ್ಯೆ ಕಲಬುರಗಿಯಲ್ಲಿಯೂ ನಡೆದಿದೆ.

ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ ಬಿಲ್ಲಿಪುರಂ ನಾಗರಾಜು ಎಂಬ 26 ವರ್ಷದ ದಲಿತ ಯುವಕನನ್ನು ಹೈದರಾಬಾದ್‌ನ ಸರೂರ್‌ನಗರ ಪ್ರದೇಶದಲ್ಲಿ ಮೇ 04 ರಂದು ನಡುರಸ್ತೆಯಲ್ಲಿಯೇ ಹತ್ಯೆಗೈಯಲಾಗಿತ್ತು. ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಮೇ 20ರಂದು ಇರಿದು ಕೊಂದಿದ್ದರು.

ಇದನ್ನೂ ಓದಿ: ಆಂಧ್ರಪ್ರದೇಶ: ಸಹೋದರರಿಂದ ಅಳಿಯನ ಕೊಲೆ – ಮರ್ಯಾದೆಗೇಡು ಹತ್ಯೆ ಶಂಕೆ

ಈ ಜಾತಿಶ್ರೇ‍ಷ್ಠತೆಯ ವ್ಯಸನ ಮುಸ್ಲಿಂ ಧರ್ಮದಲ್ಲಿಯೂ ಹಬ್ಬುತ್ತಿರುವುದಕ್ಕೆ ತೀವ್ರ ಟೀಕೆ, ಖಂಡನೆಗಳು ವ್ಯಕ್ತವಾಗಿವೆ. ಯಾವುದೇ ಧರ್ಮ ಇರಲಿ ಜಾತಿ ಕಾರಣಕ್ಕೆ ಕೊಲ್ಲುವುದು ಅಮಾನುಷ ಮತ್ತು ಜೀವವಿರೋಧಿ ಕೃತ್ಯ ಎಂದು ಖಂಡನೆ ವ್ಯಕ್ತವಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಮಾರ್ಯಾದೆ ಹತ್ಯೆ, ಗುಂಪು ಹಲ್ಲೆಗಳನ್ನು ತಡೆಯುವ ಉದ್ದೇಶದಿಂದ ರಾಜಸ್ಥಾನದಲ್ಲಿ ಕಾನೂನು ರೂಪಿಸಲಾಗಿದೆ. ಮರ್ಯಾದೆ ಹೆಸರಿನಲ್ಲಿ ನಡೆಯುವ ಘಟನೆಗಳಿಗೆ ಜಾಮೀನು ರಹಿತ, 5 ಲಕ್ಷದವರೆಗಿನ ದಂಡ ವಿಧಿಸುವ ಮಸೂದೆಯನ್ನು ಇಂದು ಪಾಸ್ ಮಾಡಲಾಗಿದೆ. ಮಸೂದೆಯಲ್ಲಿ ಆರೋಪಿಗಳಿಗೆ ಮರಣದಂಡನೆ ವಿಧಿಸುವ ಅವಕಾಶವಿದೆ. ಮರ್ಯಾದೆ ಹೆಸರಿನ ಹಿಂಸಾಚಾರ ಮತ್ತು ಕ್ರಿಮಿನಲ್ ಬೆದರಿಕೆಗಳನ್ನು ಕಠಿಣವಾಗಿ ಶಿಕ್ಷಿಸುವುದು ಇದರ ಉದ್ದೇಶ ಎಂದು ಅಲ್ಲಿನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದೇ ರೀತಿಯ ಕಾನೂನುಗಳನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸುವ ತುರ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

0
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ 'ದಿ ವಾಷಿಂಗ್ಟನ್ ಪೋಸ್ಟ್ ವರದಿ' ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ...