ಪಂಜಾಬ್ ಸರ್ಕಾರವು 2021ರ ಡಿಸೆಂಬರ್ 31 ರವರೆಗೆ ಬಾಕಿ ಉಳಿದಿರುವ ಗೃಹಬಳಕೆ ವರ್ಗದ ಎಲ್ಲಾ ಗ್ರಾಹಕರ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಿದೆ ಎಂದು ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (PSPCL) ಶುಕ್ರವಾರ ಅಧಿಸೂಚನೆಯನ್ನು ಹೊರಡಿಸಿದೆ.
ಈ ಘೋಷಣೆಯು ರಾಜ್ಯದ ಜನತೆಯ ಮುಂದೆ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ನೀಡಿದ ಮತ್ತೊಂದು ಭರವಸೆಯ ಈಡೇರಿಕೆಯಾಗಿದೆ ಎಂದು ಐಎಎನ್ಎಸ್ ವರದಿ ಮಾಡಿದೆ. 2021 ರ ಡಿಸೆಂಬರ್ 31 ರ ವರೆಗಿನ ಬಿಲ್‌ಗಳನ್ನು 2022 ರ ಜೂನ್ 30 ರ ವರೆಗೆ ಪಾವತಿಸದವರಿಗೆ ಮನ್ನಾ ಮಾಡಲಾಗುವುದು ಎಂದು ವಿದ್ಯುತ್ ಸಚಿವ ಹರ್ಭಜನ್ ಸಿಂಗ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇಷ್ಟೆ ಅಲ್ಲದೆ ಮರುಸ್ಥಾಪಿಸಲು ಸಾಧ್ಯವಾಗದ ಸಂಪರ್ಕ ಕಡಿತಗೊಂಡ ವಿದ್ಯುತ್ ಸಂಪರ್ಕಗಳನ್ನು ಅರ್ಜಿದಾರರು ವಿನಂತಿಸಿದರೆ ಪಿಎಸ್‌ಪಿಸಿಎಲ್‌ನಿಂದ ಮರುಸಂಪರ್ಕ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಗ್ರಾಹಕರು ಪಾವತಿಸಬೇಕಾಗಿರುವ ಹೊಸ ಗೃಹ ವಿದ್ಯುತ್ ಸಂಪರ್ಕಗಳ ಶುಲ್ಕವನ್ನು ರಾಜ್ಯ ಸರ್ಕಾರವು ಪಿಎಸ್‌ಪಿಸಿಎಲ್‌ಗೆ ಮರುಪಾವತಿ ಮಾಡುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: “ಜಾತಿಗಳ ಪ್ರತ್ಯೇಕ ಅಸ್ತಿತ್ವವೇ ಕೋಮುವಾದಕ್ಕೆ ಪರಿಹಾರ”: ನವೀನ್ ಸೂರಿಂಜೆ ಸಂದರ್ಶನ
ಆದರೆ, ಸರ್ಕಾರಿ ಆಸ್ಪತ್ರೆಗಳು, ಔಷಧಾಲಯಗಳು, ಪ್ರಾರ್ಥನಾ ಸ್ಥಳಗಳು, ಸರ್ಕಾರಿ ಕ್ರೀಡಾ ಸಂಸ್ಥೆಗಳು, ಮಿಲಿಟರಿ ವಿಶ್ರಾಂತಿ ಗೃಹಗಳು ಮತ್ತು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಮುಂತಾದ ಗೃಹಬಳಕೆ ವರ್ಗಕ್ಕೆ ಸೇರದ ಎಲ್ಲಾ ಗ್ರಾಹಕರು ಈ ವ್ಯಾಪ್ತಿಗೆ ಒಳಪಡುವುದಿಲ್ಲ.
ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವು ಪ್ರತಿ ತಿಂಗಳು ಅಲ್ಲಿನ ಎಲ್ಲಾ ಅರ್ಹ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ.


