ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಕೆಂಪು ಕೋಟೆಯ ಆವರಣದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ನೀಡಿದರು. ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವಿ.ಡಿ.ಸಾವರ್ಕರ್, ಭಗತ್ ಸಿಂಗ್, ಜವಾಹರಲಾಲ್ ನೆಹರೂ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಗ್ಯಾಲಕ್ಸಿಗೆ ಮೋದಿ ನಮನ ಸಲ್ಲಿಸಿದರು.
#WATCH PM Narendra Modi hoists the National Flag at Red Fort on the 76th Independence Day pic.twitter.com/VmOUDyf7Ho
— ANI (@ANI) August 15, 2022
ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣದ ಅಂಶಗಳು
- ನಮ್ಮ ತ್ರಿವರ್ಣ ಧ್ವಜವು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಮೂಲೆ ಮೂಲೆಗಳಲ್ಲಿ ವೈಭವಯುತವಾಗಿ ಹಾರಾಡುತ್ತಿದೆ.
- ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದ್ದು, ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ಸಮಯ ಇದಾಗಿದೆ.
- ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕ್ರೌರ್ಯವನ್ನು ಎದುರಿಸದ ಒಂದು ವರ್ಷವೂ ಇರಲಿಲ್ಲ. ಇಂದು ನಾವು ಅವರಿಗೆ ಗೌರವ ಸಲ್ಲಿಸುವಾಗ, ನಾವು ಅವರ ದೂರದೃಷ್ಟಿ ಮತ್ತು ಭಾರತಕ್ಕಾಗಿ ಅವರು ಕಂಡ ಕನಸನ್ನು ನೆನಪಿಸಿಕೊಳ್ಳಬೇಕಾಗಿದೆ.
- ಮಹಿಳೆಯರಿಗೆ ನೀಡುವ ಗೌರವ ಭಾರತದ ಬೆಳವಣಿಗೆಗೆ ಪ್ರಮುಖ ಆಧಾರಸ್ತಂಭವಾಗಿರುತ್ತದೆ. ನಮ್ಮ “ನಾರಿ ಶಕ್ತಿ”ಗೆ ನಾವು ಬೆಂಬಲ ನೀಡಬೇಕು.
- 25 ವರ್ಷಗಳಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ಮುಂದಿನ 25 ವರ್ಷಗಳನ್ನು ದೇಶದ ಅಭಿವೃದ್ಧಿಗಾಗಿ ಮುಡಿಪಾಗಿಡಬೇಕೆಂದು ದೇಶದ ಯುವಕರನ್ನು ನಾನು ಒತ್ತಾಯಿಸುತ್ತೇನೆ. ನಾವು ಸಂಪೂರ್ಣ ಮಾನವೀಯತೆಯ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ.
- ನಾವು ಇತರರಂತೆ ಆಗಲು ಪ್ರಯತ್ನಿಸಬಾರದು, ನಮ್ಮ ಮನಸ್ಥಿತಿಯಲ್ಲಿ ಗುಲಾಮಗಿರಿಯ ಕುರುಹು ಇರಬಾರದು. ಕೆಲವೊಮ್ಮೆ ಭಾಷೆಯ ಅಡೆತಡೆಗಳಿಂದ ನಮ್ಮ ಪ್ರತಿಭೆಯನ್ನು ನಿರ್ಬಂಧಿಸಲಾಗುತ್ತದೆ. ನಮ್ಮ ದೇಶದ ಪ್ರತಿಯೊಂದು ಭಾಷೆಯ ಬಗ್ಗೆ ನಾವು ಹೆಮ್ಮೆಪಡಬೇಕು. ನಾವು ಹೆಮ್ಮೆಯ ರಾಷ್ಟ್ರವಾಗಿ ನಮ್ಮ ಗುರುತನ್ನು ಉಳಿಸಿಕೊಳ್ಳಬೇಕು.
- ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಬೇರುಗಳೊಂದಿಗೆ ಸಂಪರ್ಕದ್ದಲ್ಲಿದ್ದರೆ ಮಾತ್ರ ಎತ್ತರಕ್ಕೆ ಹಾರಬಹುದು. ನಾವು ಎತ್ತರಕ್ಕೆ ಹಾರಿದಾಗ, ನಾವು ಇಡೀ ಜಗತ್ತಿಗೆ ಪರಿಹಾರಗಳನ್ನು ಒದಗಿಸಬಲ್ಲೆವು.
ಇದನ್ನೂ ಓದಿರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ; ಭಗ್ನ ಭರವಸೆಗಳು ಮತ್ತು ಛಲದ ಹೋರಾಟಗಳು
- ರಾಷ್ಟ್ರದ ಉನ್ನತಿಗೆ ಶ್ರಮಿಸಲು ನಾವೆಲ್ಲ ಒಂದಾಗಿರಬೇಕು. ಭಾರತದ ಪ್ರಗತಿಗೆ ಸಮಾನತೆ ಮೂಲಾಧಾರ. “ಭಾರತ ಮೊದಲು” ಎಂಬ ಮಂತ್ರದ ಮೂಲಕ ನಾವು ಒಂದಾಗಿದ್ದೇವೆ ಎಂದು ಖಚಿತಪಡಿಸಿಕೊಳ್ಳಬೇಕು.
- ವಿದ್ಯುತ್, ನೀರು ಉಳಿಸುವುದು ಜನರ ಕರ್ತವ್ಯ. ನಾವು ಇದನ್ನು ಅನುಸರಿಸಿದರೆ, ನಾವು ಬಯಸಿದ ಫಲಿತಾಂಶಗಳನ್ನು ಸಮಯಕ್ಕೆ ಮುಂಚಿತವಾಗಿ ತಲುಪಬಹುದು. ಈ ಕರ್ತವ್ಯಗಳುಪ್ರ ಧಾನಿ ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಭಾರತದ ಎಲ್ಲಾ ನಾಗರಿಕರಿಗೆ ಅನ್ವಯಿಸುತ್ತವೆ.
ವರ್ಣರಂಜಿತ ಪೇಟ
ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ವರ್ಣರಂಜಿತ ಪೇಟಗಳನ್ನು ಧರಿಸುವ ಸಂಪ್ರದಾಯಕ್ಕೆ ಪ್ರಧಾನಿ ಮೋದಿ ಹೆಸರುವಾಸಿಯಾಗಿದ್ದಾರೆ. 2014ರಿಂದಲೂ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ವರ್ಷ ಕೇಸರಿ, ಬಿಳಿ, ಹಸಿರು ಬಣ್ಣದ ಪಟ್ಟಿಗಳನ್ನು ಹೊಂದಿರುವ ಬಿಳಿ ಪೇಟವನ್ನು ಮೋದಿ ಧರಿಸಿದ್ದರು.



ಮೋದಿ ಮೂವರು ಅಧಿಕಾರಕ್ಕೆ ಬಂದ ದಿನದಿಂದಲೂಇದೀ ಭಾಷಣ ಮಾಡುತ್ತಿದ್ದಾರೆ ,ಯಾವ ಅಭಿವೃದ್ಧಿ ಆಗಿಲ್ಲ