ಇಂದು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ. ಲಕ್ಷಾಂತರ ಜನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದಿದ್ದಾರೆ. ಅದವರಲ್ಲಿ ಸುಭಾಷ್ ಚಂದ್ರಬೋಸ್‌ರವರು ಅಗ್ರಗಣ್ಯರು. ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಯುವಜನರಿಗೆ ಕರೆನೀಡಿದ್ದ ಆ ಮಹಾನ್ ಚೇತನವನ್ನು ಭಾರತೀಯರ್ಯಾರು ಮರೆಯುವುದಿಲ್ಲ. ಇದೀಗ ಅವರ ಅವಶೇಷಗಳನ್ನು ಭಾರತಕ್ಕೆ ತರುವಂತೆ ಅವರ ಮಗಳು ಅನಿತಾ ಬೋಸ್ ಫಾಫ್ ಆಗ್ರಹಿಸಿದ್ದಾರೆ.
ನೇತಾಜಿಯವರು 1945ರ ಆಗಸ್ಟ್ 18 ರಂದು ತೈಪೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ವ್ಯಾಪಕವಾಗಿ ನಂಬಲಾಗಿದೆ. ಆದರೆ ಅವರ ಸಾವಿನ ಬಗ್ಗೆ ಇಂದಿಗೂ ಚರ್ಚೆಗಳು ನಡೆಯುತ್ತಲೆ ಇವೆ. ಭಾರತೀಯ ಸರ್ಕಾರದ ಎರಡು ತನಿಖಾ ಆಯೋಗಗಳು ಅವರು ಸಾವನಪ್ಪಿದ್ದಾರೆ ಎಂದು ವರದಿ ನೀಡಿದರೆ ಅವುಗಳಿಗೆ ವಿರುದ್ಧವಾಗಿ ಎಂ. ಕೆ. ಮುಖರ್ಜಿ ನೇತೃತ್ವದ ಮೂರನೇ ಆಯೋಗವು ಬೋಸ್ ಜೀವಂತವಾಗಿದ್ದಾರೆಂಬ ಸಂಶಯಾಸ್ಪದ ಹೇಳಿಕೆಯನ್ನು ನೀಡಿತು. ಹಾಗಾಗಿ ನೇತಾಜಿಯವರ ಸಾವು ನಿಗೂಢವಾಗಿಯೇ ಉಳಿದಿದೆ.
ಈ ಕುರಿತು ಹೇಳಿಕೆ ನೀಡಿದ ನೇತಾಜಿಯವರ ಪುತ್ರಿ ಅನಿತಾ ಫಾಫ್ “ನನ್ನ ತಂದೆಯ ಅವಶೇಷಗಳನ್ನು ಭಾರತಕ್ಕೆ ತರುವ ಸಮಯ ಬಂದಿದೆ. ಜಪಾನ್‌ನ ರೆಂಕೋಜಿ ದೇವಸ್ಥಾನದಲ್ಲಿ ಅವಶೇಷಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸುವುದು ಅವರ ಸಾವಿನ ಕುರಿತು ಅನುಮಾನಿಸುವವರಿಗೆ ಉತ್ತರವಾಗಲಿದೆ. ಇದಕ್ಕೆ ಜಪಾನ್ ಸರ್ಕಾರ ಒಪ್ಪಿಗೆ ನೀಡಿದೆ” ಎಂದು ತಿಳಿಸಿದ್ದಾರೆ.
ಆಸ್ಟ್ರೀಯಾದಲ್ಲಿ ಜನಿಸಿರುವ, ಸದ್ಯ ಜರ್ಮನಿಯಲ್ಲಿ ಅರ್ಥಶಾಸ್ತ್ರಜ್ಞೆಯಾಗಿರುವ ನೇತಾಜಿಯವರ ಏಕೈಕ ಪುತ್ರಿಯಾದ ಅನಿತಾ ಬೋಸ್, “ನೇತಾಜಿಯವರ ಜೀವನದಲ್ಲಿ ಸ್ವಾತಂತ್ರ್ಯಕ್ಕಿಂತ ಮುಖ್ಯವಾದದ್ದು ಬೇರಾವುದು ಇರಲಿಲ್ಲ. ಅವರಿಗೆ ಬ್ರಿಟೀಷ್ ಆಳ್ವಿಕೆಯಿಂದ ಮುಕ್ತವಾದ ಭಾರತದಲ್ಲಿ ಬದುಕುವ ಹಂಬಲವಿತ್ತು. ಸ್ವಾತಂತ್ರ್ಯದ ಸಂಭ್ರಮವನ್ನು ಅನುಭವಿಸಲು ಅವರಿಲ್ಲದ ಈ ಸಂದರ್ಭದಲ್ಲಿ ಅವರ ಅವಶೇಷಗಳಾದರೂ ಭಾರತೀಯ ನೆಲಕ್ಕೆ ಮರಳುವ ಸಮಯ ಇದಾಗಿದೆ” ಎಂದಿದ್ದಾರೆ.
ಆಧುನಿಕ ತಂತ್ರಜ್ಞಾನ ಸತ್ಯವನ್ನು ತಿಳಿಸಲು ಶಸಕ್ತವಾಗಿದೆ. ಅವಶೇಷಗಳಿಂದ ಡಿಎನ್‌ಎ ತೆಗೆಯುವುದು ಸಾಧ್ಯವಿದೆ. ರೆಂಕೋಜಿ ದೇವಸ್ಥಾನದ ಅರ್ಚಕರು ಮತ್ತು ಜಪಾನ್ ಸರ್ಕಾರ ಡಿಎನ್‌ಎ ಪರೀಕ್ಷೆಗೆ ಒಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹಳತು ವಿವೇಕ; ನೆಹರೂ ಆತ್ಮಕತೆಯಿಂದ ಆಯ್ದ ಭಾಗ



It will be a useless exercise.